ಕೇವಲ 500 ರುಪಾಯಿಯೊಂದಿಗೆ ಮುಂಬೈಗೆ ಬಂದ ನಟಿ ದಿಶಾ ಪಟಾನಿ ಈಗ ಹೇಗಿದ್ದಾರೆ ಗೊತ್ತಾ? ಇವತ್ತು ಅವರ ಜನ್ಮದಿನ : 2011 ರ ಅವರ ಅಡಿಷನ್ ವಿಡಿಯೊ ಈಗ ವೈರಲ್ ಆಗಿದೆ, ನೋಡಿ…
ದಿಶಾ ಪಟಾನಿ ಇಂದು ಅಂದರೆ ಜೂನ್ 13 ರಂದು ತಮ್ಮ 29 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೌಂದರ್ಯ ಮತ್ತು ನಟನೆಯಿಂದ ಜನರನ್ನು ಮ್ಯಾಗ್ನೆಟ್ ನಂತೆ ಆಕರ್ಷಿಸುವ ದಿಶಾ ಕುರಿತು ಕೆಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ. ಬಾಲಿವುಡ್ ನಟಿ ದಿಶಾ ಪಟಾನಿ ಸಿನೆಮಾ ಶೂಟಿಂಗ್ ನಲ್ಲಿ ಮಾತ್ರವಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕೂಡ ತುಂಬಾ ಸಕ್ರಿಯರಾಗಿದ್ದಾರೆ.
ಅವರು ಆಗಾಗ್ಗೆ ತಮ್ಮ ಸುಂದರವಾದ ಫೋಟೋಗಳನ್ನು ಅಪ್ ಲೋಡ್ ಮಾಡುವ ಮೂಲಕ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಿರುತ್ತಾರೆ. ಇಂದು ದಿಶಾ ಪಟಾನಿಯವರ ಜನ್ಮದಿನ ಮತ್ತು ಈ ಸಂದರ್ಭದಲ್ಲಿ ನಾವು ನಿಮಗೆ ದಿಶಾಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಹೇಳುತ್ತೇವೆ.
ದಿಶಾ ವೃತ್ತಿಜೀವನ :
ದಿಶಾ ಪಟಾನಿ ‘ಎಂ.ಎಸ್.ಧೋನಿ ದಿ ಅನ್ಟೋಲ್ಡ್ ಸ್ಟೋರಿ’ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅವರ ಪಾತ್ರ ಚಿಕ್ಕದಾಗಿದ್ದರೂ ಅವರು ಜನರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾದರು. ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೊದಲು ದಿಶಾ ತೆಲುಗು ಚಿತ್ರ ‘ಲೋಫರ್’ ನಲ್ಲಿ ಕಾಣಿಸಿಕೊಂಡಿದ್ದರು.

ಇದರ ನಂತರ ಅವರು ಮ್ಯೂಸಿಕ್ ವಿಡಿಯೋ ಮಾಡಿದರು ಮತ್ತು ಅದಾದ ಮೇಲೆ ಅವರು ತಮ್ಮ ಬಾಲಿವುಡ್ ಪ್ರಯಾಣವನ್ನು ಪ್ರಾರಂಭಿಸಿದರು. ಅವರ ‘ಕುಂಗ್ ಫೂ ಪಾಡಾ’ ಚಿತ್ರ ಕೂಡ ಜನಮೆಚ್ಚುಗೆ ಪಡೆಯಿತು. ಇಲ್ಲಿಂದ ದಿಶಾ ಹಿಂತಿರುಗಿ ನೋಡಲೇ ಇಲ್ಲ. ಒಂದೊಂದೇ ಅವಕಾಶ ಬರತೊಡಗಿದವು.
ಅಧ್ಯಯನ ಕೈಬಿಟ್ಟರು :
ಸಂದರ್ಶನವೊಂದರಲ್ಲಿ ದಿಶಾ ಪಟಾನಿ ತಮ್ಮ ನಟನಾ ಕನಸನ್ನು ಈಡೇರಿಸಲು ತನ್ನ ಅಧ್ಯಯನವನ್ನು ಮಧ್ಯದಲ್ಲಿ ತೊರೆದಿದ್ದೇನೆ ಎಂದು ಹೇಳಿದ್ದರು. ತೀರ ಅಚ್ಚರಿಯ ಸಂಗತಿಯೇನೆಂದರೆ, ದಿಶಾ ಮುಂಬೈಗೆ ಬರುವಾಗ ಕೇವಲ 500 ರೂಪಾಯಿ ತಂದಿದ್ದರಂತೆ! ಅದರಿಂದಲೇ ಇಲ್ಲಿಯವರೆಗೆ ಬೆಳೆದಿದ್ದು.
ದಿಶಾ ಹೇಳುವಂತೆ – ನಾನು ಒಬ್ಬಂಟಿಯಾಗಿ ವಾಸಿಸುತ್ತಿದ್ದೆ ಮತ್ತು ಕೆಲಸ ಮಾಡುತ್ತಿದ್ದೆ ಆದರೆ ಎಂದಿಗೂ ಕುಟುಂಬದಿಂದ ಸಹಾಯವನ್ನು ಪಡೆಯಲಿಲ್ಲ. ನನ್ನ ಶ್ರಮದಿಂದಲೇ ಮೇಲೆ ಬಂದೆ. ನನ್ನ ಬೇಕು ಬೇಡಗಳೆಲ್ಲವನ್ನೂ ನನ್ನ ದುಡಿಮೆಯಲ್ಲೇ ಪೊರೈಸಿಕೊಂಡೆ ಎಂದು ದಿಶಾ ಹೇಳುತ್ತಾರೆ. ತಂದ 500 ರುಪಾಯಿ ಹೇಗೆ ಬಳಸಿದೆ ಎಂದು ಅವರು ವಿವರಿಸಲಿಲ್ಲ!

ರಣಬೀರ್ ಕಪೂರ್ ಮೇಲೆ ಮೋಹ :
ದಿಶಾ ಪಟಾನಿ ಉತ್ತಮ ಡ್ಯಾನ್ಸರ್ ಕೂಡ ಹೌದು. ಹಾಗೆಯೇ ಅವರು ರಣಬೀರ್ ಕಪೂರ್ ಅವರ ಅತಿದೊಡ್ಡ ಅಭಿಮಾನಿ. ಪ್ರತಿದಿನ ಶಾಲೆಗೆ ಹೋಗುವಾಗ ದಿಶಾ ತನ್ನ ಸ್ಕೂಟಿಯನ್ನು ರಣಬೀರ್ ಅವರ ಪೋಸ್ಟರ್ ಗಳನ್ನು ಅಂಟಿಸಿದ ರಸ್ತೆಯಲ್ಲಿ ಬಿಡುತ್ತಿದ್ದರು. ಅವಳು ಆ ಪೋಸ್ಟರ್ ಅನ್ನು ಕಾಣುವವರೆಗೂ ನೋಡುತ್ತಿದ್ದಳಂತೆ!
ಬಾಂದ್ರಾದಲ್ಲಿ ಮನೆ!
ಒಂದು ಕಾಲದಲ್ಲಿ 500 ರುಪಾಯಿಯೊಂದಿಗೆ (ಅವರೇ ಹೇಳುವಂತೆ) ಮುಂಬೈಗೆ ಬಂದಿದ್ದ ದಿಶಾ ಪಟಾನಿಗೆ ಈಗ ಮುಂಬೈನ ಬಾಂದ್ರಾದಲ್ಲಿ ಸ್ವಂತ ಮನೆ ಇದೆ! ಅವರು 2017 ರಲ್ಲಿ ಈ ಹೊಸ ಅಪಾರ್ಟ್ಮೆಂಟ್ ಅನ್ನು ತಗೆದುಕೊಂಡರು. ದಿಶಾ ಪಟಾನಿಯ ಈ ಮನೆಯ ಹೆಸರು ‘ಲಿಟಲ್ ಹಟ್’ ಅಂತ, ಅಂದರೆ ಪುಟಾಣಿ ಗುಡಿಸಲು ಅಂದಹಾಗೆ! ಈ ಗುಡಿಸಲಿನ ಅಂದಾಜು ಬೆಲೆ 5 ಕೋಟಿ!!
ಟ್ರೋಲ್ :
ದಿಶಾ ಪಟಾನಿ ಬಾಲಿವುಡ್ ನ ಅತ್ಯಂತ ಹಾಟೆಸ್ಟ್ ಮತ್ತು ಸ್ಟೈಲಿಶ್ ನಟಿಯರಲ್ಲಿ ಒಬ್ಬರು. ಆದರೆ ಒಂದೇ ಥರದ ಬಟ್ಟೆಗಳನ್ನು ಅನೇಕ ಸಲ ಹಾಕಿದಾಗ ಜನ ಟ್ರೋಲ್ ಮಾಡಿದ್ದಿದೆ. ಬೇಸಿಗೆ ಫ್ಯಾಷನ್ಗಾಗಿ ಹುಡುಗಿಯರು ಹಾಕುವ ಉಡುಪುಗಳನ್ನೇ (ತುಂಡುಬಟ್ಟೆ) ದಿಶಾ ಹಲವು ಸಲ ಹಾಕಿದಾಗ ಜನ ಕಾಲೆಳಿದಿದ್ದರು.

19 ನೇ ವಯಸ್ಸಿನಲ್ಲಿಯೇ ಮೊದಲ ಆಡಿಷನ್ :
ಫಿಟ್ನೆಸ್ ಮತ್ತು ಮನಮೋಹಕ ಮೈಮಾಟಕ್ಕೆ ಹೆಸರುವಾಸಿಯಾದ ನಟಿಯರಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ಕೂಡ ಒಬ್ಬರು. ದಿಶಾ ಪಟಾನಿಯ 29 ನೇ ಹುಟ್ಟುಹಬ್ಬದಂದು ಥ್ರೋಬ್ಯಾಕ್ ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಅವಳು ಬೇರೆ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಆಡಿಷನ್ ವಿಡಿಯೋ ಕೇವಲ 19 ವರ್ಷದವಳಿದ್ದಾಗ ಎಂದು ದಿಶಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
ದಿಶಾ ಅವರ ಈ ಆಡಿಷನ್ ವಿಡಿಯೋ 2011 ರಿಂದ ಬಂದಿದೆ. ನಂತರ ಅವಳು ಕಾಲೇಜಿನಲ್ಲಿ ಅಧ್ಯಯನ ಮಾಡಿದಳು ಮತ್ತು ಮಾಡೆಲಿಂಗ್ ಜಗತ್ತಿನಲ್ಲಿ ಹೆಜ್ಜೆ ಹಾಕುತ್ತಿದ್ದಳು. ದೊಡ್ಡ ಪರದೆಯಲ್ಲಿ ಪಾದಾರ್ಪಣೆ ಮಾಡುವ ಮೊದಲು, ದಿಶಾ ಅನೇಕ ಟಿವಿ ಜಾಹೀರಾತು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.
ಆದರೆ ‘ಎಂ.ಎಸ್.ಧೋನಿ’ ಚಿತ್ರದಿಂದ ಅವರಿಗೆ ವಿಶೇಷ ಮನ್ನಣೆ ದೊರಕಿದ್ದು, ಇದರಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸುಶಾಂತ್ ಧೋನಿ ಪಾತ್ರವನ್ನು ನಿರ್ವಹಿಸಿದ್ದಾರೆ. ದಿಶಾ ಪಟಾನಿ ಅವರ ಮುಂಬರುವ ಚಿತ್ರ ‘ಏಕ್ ವಿಲನ್ ರಿಟರ್ನ್ಸ್’, ಇದರಲ್ಲಿ ಅವರು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗೆ ದಿಶಾ ಪಟಾನಿ ಅವರ ‘ರಾಧೆ’ ಚಿತ್ರ ಬಿಡುಗಡೆಯಾಗಿದ್ದು, ಇದರಲ್ಲಿ ಸಲ್ಮಾನ್ ಖಾನ್ ಮುಖ್ಯ ಪಾತ್ರದಲ್ಲಿದ್ದರು. ಈ ಚಿತ್ರದಲ್ಲಿ ದಿಶಾ ಪಾತ್ರವು ಜನರಿಗೆ ತುಂಬಾ ಇಷ್ಟವಾಯಿತು. 2011 ರಲ್ಲಿ ಚಿತ್ರೀಕರಿಸಲಾಗಿರುವ ಅವರ ಅಡಿಶನ್ ವಿಡಿಯೊ ಮೇಲಿದೆ, ನೋಡಿ…
-Team Infotrend