ರಕ್ತ ದಾನ ಮಾಡುವುದಕ್ಕೂ ಮೊದಲು ಈ 10 ತಪ್ಪುಗಳನ್ನು ಮಾಡಬೇಡಿ

ಪ್ರತಿ ವರ್ಷ ಜೂನ್ 14 ನೆ ತಾರೀಕಿನಂದು ವಿಶ್ವ ರಕ್ತದಾನಿಗಳ ದಿನವೆಂದು ಆಚರಿಸಲಾಗುತ್ತದೆ. ರಕ್ತದಾನ ಮಹಾದಾನ, ಜೀವ ಹೋಗುತ್ತಿರುವ ಒಬ್ಬ ಮನುಷ್ಯನ ಜೀವ ಉಳಿಸುವ ಕೆಲಸವೆಂದರೆ ಸಾಮಾನ್ಯವಲ್ಲ, ಅಂತಹ ವ್ಯಕ್ತಿಗಳಿಗಾಗಿ ವಿಶ್ವವೇ ಒಂದು ದಿನ ಆಚರಿಸುತ್ತದೆ. ಆದರೆ ರಕ್ತ ಪಡೆದು ಜೀವ ಉಳಿಸಿಕೊಂಡಿರುವವರಿಗೆ ಪ್ರತಿ ದಿನವೂ ಆ ದಾನಿಗಳು ವಿಶೇಷ ಹಾಗೂ ದೇವರ ಸಮಾನರಾಗಿಯೇ ಇರುತ್ತಾರೆ.

ಇಂದಿನ ಈ ವಿಶೇಷ ಸಂದರ್ಭದಲ್ಲಿ ರಕ್ತ ನೀಡುವ ಮೊದಲು ದಾನಿಗಳು ಮಾಡಬಾರದ ಆ ಹತ್ತು ತಪ್ಪುಗಳ ಬಗ್ಗೆ ನೋಡೋಣ ಬನ್ನಿ…

1) ಡಾಕ್ಟರ್ ಹೇಳುವ ಪ್ರಕಾರ ರಕ್ತದಾನ ಮಾಡಬಯಸುವ ವ್ಯಕ್ತಿಗಳು ಖಾಲಿ ಹೊಟ್ಟೆಯಲ್ಲಿ ಇರಬಾರದು, ರಕ್ತದಾನಕ್ಕೂ ಮೊದಲು ಅಂದರೆ ಅಟ್ಲಿಸ್ಟ್ ಮೂರು ಘಂಟೆಯ ಒಳಗೆ ಏನಾದರೂ ತಿಂದಿರಲೇಬೇಕು. ರಕ್ತದಾನ ಮಾಡುವ ಹಿಂದಿನ ದಿನ ಕನಿಷ್ಠ ಪಕ್ಷ 6 ರಿಂದ 8 ತಾಸು ನಿದ್ದೆ ಮಾಡಿರಲೇಬೇಕು.

2) ಬ್ಲಡ್ ಡೊನೇಷನ್ ಮಾಡುವ ಸ್ಥಳದಲ್ಲಿ ನೀಡುವ ಫಾರ್ಮ್ ಅನ್ನು ಸರಿಯಾಗಿ ಗಮನಹರಿಸಿ ಓದಿ ತುಂಬಿ, ಎಲ್ಲಾ ಮಾಹಿತಿಗಳನ್ನು ಗುಪ್ತವಾಗಿ ಇಡುವುದರಿಂದ ಅದರಲ್ಲಿ ಯಾವುದನ್ನೂ ತಪ್ಪಾಗಿ ನಮೂಡಿಸಬೇಡಿ, ಏಕೆಂದರೆ ಅದು ನಿಮ್ಮ ಫಿಟ್ನೆಸ್ ಪರೀಕ್ಷೆಯು ಸಹ ಆಗಿರುತ್ತದೆ.

3) ಉಳಿದೆಲ್ಲ ಗುಣಗಳು ಸರಿಯಾಗಿ ಇದ್ದು, ರಕ್ತದೊತ್ತಡ (ಬ್ಲಡ್ ಪ್ರೆಷರ್) ನಿಯಂತ್ರಣದಲ್ಲಿ ಇಲ್ಲವೆಂದರೆ ಅದನ್ನು ಮುಚ್ಚಿ ಇಡದೇ ಡಾಕ್ಟರ್ ಬಳಿ ಹೇಳಿಕೊಳ್ಳಿ, ಅದಕ್ಕೆ ಸರಿಯಾದ ಟ್ರೀಟ್ಮೆಂಟ್ ಕೊಟ್ಟು ಅವರು ಮುಂದಿನ ಪ್ರಕ್ರಿಯೆ ಆರಂಭಿಸುತ್ತಾರೆ.

4) ರಕ್ತದಾನಕ್ಕೂ ಮೊದಲು ಹಿಮೋಗ್ಲೋಬಿನ್ ಪರೀಕ್ಷೆ ಮಾಡಲಾಗುತ್ತದೆ, ಅದರಲ್ಲಿ ಹಿಮೊಗ್ಲೋಬಿನ್ ಕೌಂಟ್ ಕನಿಷ್ಠ 12.5 gm/dL ಅಥವಾ ಅದಕ್ಕಿಂತಲೂ ಹೆಚ್ಚು ಇರಬೇಕಾಗುತ್ತದೆ.

5) ರಕ್ತದಾನದ ಸಮಯದಲ್ಲಿ ಬಳಸುವ ಸಿರಿಂಜ್ ಹಾಗೂ ರಕ್ತ ಸಂಗ್ರಹಿಸುವ ಪೌಚ್ ಹೊಸದು ಹೌದೋ ಅಲ್ಲೋ ಎಂಬುದನ್ನು ಸರಿಯಾಗಿ ಗಮನಿಸಿ, ಇದರಿಂದ ನಿಮ್ಮ ಹಾಗೂ ರಕ್ತ ಪಡೆಯುವವರ ಇಬ್ಬರದೂ ಸುರಕ್ಷತೆ ಅಡಗಿದೆ.

6) ರಕ್ತದಾನದ ಸಮಯದಲ್ಲಿ ನಿಮ್ಮ ಸುರಕ್ಷತೆಯನ್ನು ನೋಡಿಕೊಳ್ಳಿ, ಸ್ನಾಯುಗಳನ್ನು ಸಡಿಲವಾಗಿ ಬಿಟ್ಟಿರಿ. ಕಾಲುಗಳನ್ನು ಕ್ರಾಸ್ ಮಾಡದೇ ನೇರವಾಗಿ ವಿಶ್ರಾಂತವಾಗಿರಿಸಿ. ನಿಮಗೆ ಕೊಟ್ಟಿರುವ ಸ್ಪಾಂಜ್ ಚೆಂಡನ್ನು ಪದೇ ಪದೇ ಪ್ರೆಸ್ ಮಾಡುತ್ತಲೇ ಇರಿ, ಮುಖ್ಯವಾಗಿ ರಕ್ತವನ್ನು ನೋಡಿ ಹೆದರಿಕೊಳ್ಳಬೇಡಿ.

7) ರಕ್ತದಾನದ ನಂತರ ಒಮ್ಮೆಲೇ ಬೆಡ್ ಮೇಲಿಂದ ಏಳದಿರಿ, ಕನಿಷ್ಠ 10 ನಿಮಿಷ ಅಲ್ಲಿಯೇ ಮಲಗಿಕೊಂಡೆ ಇರಿ, ಅಥವಾ ಏಳಲು ಮತ್ತೊಬ್ಬರ ಸಹಾಯ ಪಡೆಯಿರಿ. ಮತ್ತೊಮ್ಮೆ ವೈದ್ಯರಿಂದ ಬ್ಲಡ್ ಪ್ರೆಷರ್ ಸರಿಯಾಗಿ ಇದೆಯಾ ಎಂದು ಪರೀಕ್ಷೆ ಮಾಡಿಸಿಕೊಂಡು ನಂತರ ಅಲ್ಲಿಂದ ಹೊರಡಿ.

8) ರಕ್ತದಾನದ ನಂತರ ಜ್ಯೂಸು, ಲಿಕ್ವಿಡ್ ಆಹಾರ ಹಾಗೂ ಹಣ್ಣುಗಳನ್ನು ತಿನ್ನಬೇಕಾಗುತ್ತದೆ, ಹೆಚ್ಚಿನ ಕಡೆಗಳಲ್ಲಿ ಬ್ಲಡ್ ಡೊನೇಷನ್ ಸೆಂಟರ್ ನಲ್ಲಿ ಈ ಎಲ್ಲಾ ವ್ಯವಸ್ಥೆ ಮಾಡಲಾಗಿರುತ್ತದೆ. ಅಕಸ್ಮಾತ್ ಅಲ್ಲಿ ಇಲ್ಲದೆ ಇದ್ದರೂ ನೀವು ತಿನ್ನಬೇಕು, ಏಕೆಂದರೆ ಶರೀರಕ್ಕೆ ಅವುಗಳ ಅವಶ್ಯಕತೆ ಬಹಳಷ್ಟು ಇರುತ್ತದೆ. ಅಷ್ಟೇ ಅಲ್ಲದೇ ಕೆಲವು ಸಮಯದವರೆಗೂ ಕೆಲಸ ಮಾಡಬಾರದು.

9) ರಕ್ತದಾನಕ್ಕಿಂತ ಕನಿಷ್ಠ 2 ತಾಸಿನ ಹಿಂದಿನವರೆಗೂ ಧೂಮ್ರಪಾನ ಮಾಡಿರಬಾರದು. 24 ಘಂಟೆಯ ಒಳಗಿನ ಆಲ್ಕೋಹಾಲ್ ಇರಕೂಡದು, ಹಾಗೂ 18 ರಿಂದ 65 ವರ್ಷ ವಯಸ್ಸಿನ ರಕ್ತದಾನಿಗಳ ತೂಕ 45 ಕೆಜಿಗೂ ಕಡಿಮೆ ಇರಲೆಬಾರದು.

10) ಬ್ಲಡ್ ಡೊನೇಷನ್ ಕ್ಯಾಂಪ್ ಹಾಗೂ ಬ್ಲಡ್ ಡೊನೇಟ್ ಮಾಡುವುದರ ಬಗ್ಗೆ ಜನರಿಗೆ ಇರುವ ತಪ್ಪು ತಿಳುವವಳಿಕೆಗಳ ಬಗ್ಗೆ ಜನರಿಗೆ ತಿಳಿಸಿ ಹೇಳಿ ಇದರಿಂದ ಇನ್ನೂ ಹೆಚ್ಚು ಜನರು ರಕ್ತದಾನ ಮಾಡಲು ಮುಂದೆ ಬರುತ್ತಾರೆ.
-Team Infotrend