ಕೇಂದ್ರ ಸರಕಾರದ ಸಹಾಯದಿಂದ ಪ್ರಾರಂಭಿಸಿ ಈ ಬಿಜಿನೆಸ್, ಪ್ರತಿ ತಿಂಗಳು ಗಳಿಸಿರಿ ಲಕ್ಷಕ್ಕಿಂತ ಹೆಚ್ಚು ಮೊತ್ತ!!

ಕೇಂದ್ರ ಸರಕಾರದ ದೃಷ್ಟಿ ಲೋಕಲ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಲೋಕಲ್ ಪ್ರೊಡಕ್ಟ್ ಹಾಗೂ ಲಘು ಉದ್ಯೋಗಗಳ ಮೇಲೆ ಇದೆ. ಇದರಿಂದಲೇ ಭಾರತವನ್ನು ಸಶಕ್ತವಾಗಿ ಮುನ್ನಡೆಸುವ ಮತ್ತು ದೇಶವನ್ನು ಸ್ವಾವಲಂಬನದತ್ತ ಕೊಂಡೊಯ್ಯುವ ಕನಸು ನನಸಾಗುವದು. ಸರಕಾರ ಗ್ರಾಮೀಣ ಉದ್ಯೋಗಗಳನ್ನು ಅಭಿವೃದ್ಧಿ ಪಡಿಸಲು
ಖಾದಿ ಜೊತೆಗೆ ಗ್ರಾಮೋದ್ಯೋಗಗಳನ್ನು ಸೃಷ್ಟಿಸಿ ಹಳ್ಳಿಯ ಜನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಜೇನು ಸಾಕಾಣಿಕೆಗೆ ಪ್ರೋತ್ಸಾಹನೆ ಕೊಡುತ್ತಿದೆ.

ಕೇಂದ್ರದ ಸೂಕ್ಷ್ಮ, ಲಘು ಮತ್ತು ಮಧ್ಯಮ ಉಪಕ್ರಮ ವಿಭಾಗ ಇದರ ಸಲುವಾಗಿ ಒಂದು ನೀತಿಯನ್ನು ತಯಾರಿಸಿದೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು(KVIC) ಕಳೆದ ಎರಡು ವರ್ಷಗಳಲ್ಲಿ ದೇಶದ ರೈತರಿಗೆ ಮತ್ತು ನಿರುದ್ಯೋಗಿ ಯುವಕರಿಗೆ ಜೇನು ಸಾಕಾಣಿಕೆಯ ಸಲುವಾಗಿ 1 ಲಕ್ಷಕ್ಕಿಂತಲೂ ಹೆಚ್ಚಿಗೆ ಪೆಟ್ಟಿಗೆಗಳನ್ನು ವಿತರಿಸಿದ್ದಾರೆ. ಈ ಉಪಕ್ರಮವನ್ನು ಆಯೋಗವು ‘ಹನಿ ಮಿಷನ್’ ಅಂತರ್ಗತ ಹಮ್ಮಿಕೊಂಡಿದೆ.
ಒಂದು ವೇಳೆ ನೀವು ಏನಾದರೂ ಬಿಜಿನೆಸ್ ಮಾಡುವ ವಿಚಾರ ಮಾಡುತ್ತಿದ್ದರೆ ‘ಹನಿ ಹೌಸ್’ ಮತ್ತು ‘ಹನಿ ಪ್ರೊಸೆಸಿಂಗ್’ ಪ್ಲಾಂಟ್ ಶುರು ಮಾಡಬಹುದಾಗಿದೆ.

ಏನಿದು ಹನಿ ಮಿಷನ್?
ಈ ಹನಿ ಮಿಷನ್ ಖಾದಿ ಗ್ರಾಮೋದ್ಯೋಗದವರ ಯೋಜನೆಯಾಗಿದೆ. ಈ ಮುಖಾಂತರ ರೈತರು ಮತ್ತು ಯುವಕರು ಹಾಗೂ ಹಣಗಳಿಸುವ ಪ್ರಯತ್ನದಲ್ಲಿರುವವರು ಈ ಉದ್ಯೋಗವನ್ನು ಪ್ರಾರಂಭಿಸಿ ದೊಡ್ಡ ಮಟ್ಟದಲ್ಲಿ ಹಣಗಳಿಸಬಹುದು.
ಇಂಥ ಉಪಾಯಗಳೊಂದಿಗೆ ಜೇನ್ನೊಣಗಳ ಪಾಲನೆ ಮಾಡಿ ಅದರ ಜೇನಿನಿಂದ ಹಣಗಳಿಸಬಹುದು.

ಈ ಉದ್ಯೋಗದಲ್ಲಿ ವಿಶೇಷ ಸ್ಕೀಮ್ ಗಳಲ್ಲಿ ಹನಿ ಪ್ರೊಸೆಸಿಂಗ್ ಪ್ಲಾಂಟ್ ಹಚ್ಚುವವರಿಗೆ ಸರಕಾರ 65 ಪ್ರತಿಶತ ಲೋನ್ ಕೊಡುತ್ತೆ ಮತ್ತು ಖಾದಿ ಗ್ರಾಮೋದ್ಯೋಗದವರು 25 ಪ್ರತಿಶತ ಸಬ್ಸಿಡಿಯನ್ನು ಕೊಡುತ್ತಾರೆ. ಆದ್ದರಿಂದ ನಿಮಗೆ ಬರೀ 10 ಪ್ರತಿಶತ ಮಾತ್ರ ಹಣ ಖರ್ಚು ಮಾಡಬೇಕಾಗುತ್ತದೆ.

KVIC ಪ್ರಕಾರ ನೀವು 20 ಸಾವಿರ ಕಿಲೊಗ್ರಾಮ್ ಜೇನು ವರ್ಷಕ್ಕೆ ತಯಾರಿಸುವದಾದರೆ ಇದಕ್ಕೆ ಸುಮಾರು 24.50 ಲಕ್ಷ ರೂಪಾಯಿಗಳು ತಗಲುವವು. ಇದರಲ್ಲಿ 16 ಲಕ್ಷಗಳವರೆಗೆ ಸಾಲ ದೊರೆಯುವದು, ಮತ್ತು ‘ಮಾರ್ಜಿನ ಮನಿ’ ಸ್ವರೂಪದಲ್ಲಿ 6.15 ಲಕ್ಷ ರೂಪಾಯಿಗಳು ಲಭಿಸುವವು. ಹೀಗಾಗಿ ಈ ಉದ್ಯೋಗದಲ್ಲಿ ನಿಮಗೆ ಬರೀ 2.35 ಲಕ್ಷ ರೂಪಾಯಿಗಳನ್ನು ಮಾತ್ರ ತೊಡಗಿಸಬೇಕಾಗುತ್ತದೆ.

ಒಮ್ಮೆ ಮಾರ್ಕೆಟಿಂಗ್ ಪ್ರಾರಂಭವಾದರೆ ಆಯ್ತು ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿಗಳವರೆಗೆ ಆದಾಯ ಪ್ರಾರಂಭವಾಗುತ್ತದೆ. KVIC ಪ್ರಕಾರ ನೀವು ಪ್ರತಿ ವರ್ಷ 20 ಸಾವಿರ ಕಿಲೊಗ್ರಾಮ್ ಜೇನು ತಯಾರಿಸುತ್ತಿದ್ದರೆ, ಅದರ ಬೆಲೆ 250 ₹ ಪ್ರತಿ ಕಿಲೋದಂತಿದೆ. ಅದರಲ್ಲಿಯ 4 ಪ್ರತಿಶತ ವರ್ಕಿಂಗ್ ಲಾಸ್ ಕೂಡಿಸಲಾಗಿ ವಾರ್ಷಿಕ ಮಾರಾಟ 48 ಲಕ್ಷ ₹ ಗಳಾಗುತ್ತದೆ. ಇದರಲ್ಲಿಯ ಒಟ್ಟು ಖರ್ಚು 34.15 ಲಕ್ಷ ₹ ಗಳನ್ನು ಕಡಿಮೆ ಅಥವಾ ಕಳೆಯಲಾಗಿ ಒಂದು ವರ್ಷದಲ್ಲಿ 13.85 ಲಕ್ಷ ₹ ಆದಾಯವಾಗುತ್ತದೆ. ಅಂದರೆ ಪ್ರತಿ ತಿಂಗಳು 1 ಲಕ್ಷ ₹ ಗಳ ಮೇಲ್ಪಟ್ಟು ಲಾಭಗಳಿಸಬಹುದು.