ಹೀಗೂ ಉಂಟೆ? ಮಾಸ್ಕ್ ಸರಿಯಾಗಿ ಧರಿಸು ಎಂದಿದ್ದಕ್ಕೆ ಸಿಟ್ಟಾಗಿ ಮುಖಕ್ಕೆ ಉಗುಳಿದ ವ್ಯಕ್ತಿಗೆ ಬರೋಬ್ಬರಿ 10 ವರ್ಷ ಜೈ’ಲು ಶಿ’ಕ್ಷೆ!

ಕೊರೊನ ಈಗಾಗಲೇ ಇಡೀ ವಿಶ್ವದಲ್ಲಿ ತಲ್ಲಣವನ್ನು ಸೃಷ್ಟಿಸಿದೆ. ಅಲ್ಲದೇ ಇದರ ನಿಯಂತ್ರಣಕ್ಕಾಗಿ ನೀಡಲಾಗಿರುವ ಮಾರ್ಗಸೂಚಿಗಳಲ್ಲಿ ಮಾಸ್ಕ್ ಧರಿಸುವುದು ಕೂಡಾ ಒಂದು ಪ್ರಮುಖವಾದ ಆಚರಣೆಯಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿರುವಂತೆ ಸಲಹೆ ನೀಡುವ ಜಾಹಿರಾತುಗಳು ಹಾಗೂ ಸಂದೇಶಗಳು ಮಾಧ್ಯಮಗಳಲ್ಲಿ ಸತತವಾಗಿ ಬಿತ್ತರವಾಗುತ್ತಿದೆ.

ಆದರೆ ಇದರ ಹೊರತಾಗಿಯೂ ಕೆಲವರು ಈ ವಿಚಾರವಾಗಿ ತೀವ್ರವಾದ ನಿರ್ಲಕ್ಷವನ್ನು ತೋರುತ್ತಿರುವುದು ಮಾತ್ರವೇ ಅಲ್ಲದೆ ಇತರರು ಸಲಹೆ ನೀಡಲು ಬಂದರೆ, ಮಾಸ್ಕ್ ಧರಿಸಿ ಎಂದು ಸೂಚನೆ ನೀಡಿದರೆ ಅದನ್ನು ಅಲಕ್ಷ್ಯ ಮಾಡುವುದರ ಜೊತೆಗೆ ತಮಗೆ ಸಲಹೆ ನೀಡಿದವರ ಮೇಲೆ ಸಿಟ್ಟ ನ್ನು ವ್ಯಕ್ತಪಡಿಸುತ್ತಿರುವುದೂ ಕಂಡುಬರುತ್ತಿದೆ.

ಇಂತಹದೇ ಒಂದು ಘಟನೆಯಲ್ಲಿ ಅಮೆರಿಕಾದಲ್ಲಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ಹತ್ತು ವರ್ಷಗಳ ಕಾ’ರಾ’ಗೃ’ಹ ಶಿ’ಕ್ಷೆಯನ್ನು ವಿಧಿಸಲಾಗಿದೆ‌! ಹೌದು, ಅಚ್ಚರಿಯಾದರೂ ಸತ್ಯ, ಶೇನ್ ವೆನ್ ಮೈಕಲ್ ಎನ್ನುವ ವ್ಯಕ್ತಿಯ ಮೇಲೆ ಆರೋಪವೊಂದು ಮಾಡಲಾಗಿದ್ದು ಈ ವ್ಯಕ್ತಿಯು ಬೇಕಂತಲೇ ಮತ್ತೊಬ್ಬ ವ್ಯಕ್ತಿಯ ಮು’ಖಕ್ಕೆ ಉ’ಗು’ಳಿದ್ದಾನೆ, ಅದು ಮಾತ್ರವೇ ಅಲ್ಲದೆ ಆ ವ್ಯಕ್ತಿಯ ಜೊತೆ ಹೊ’ಡೆ’ದಾಡಿದ್ದಾನೆ.

ಇದಕ್ಕೆ ಕಾರಣವೇನೆಂದರೆ ಮೈಕಲ್ ಗೆ ಮತ್ತು ಮತ್ತೊಬ್ಬ ವ್ಯಕ್ತಿಯು ಮಾಸ್ಕ್ ಧರಿಸು ಎಂದು ಹೇಳಿದ್ದೇ ಮೈಕಲ್ ಸಿ’ಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ. ಮೈಕಲ್ ಮತ್ತು ಮಾರ್ಕ್ ಡೀನಿಂಗ್ ಎನ್ನುವವರು ಅಮೇರಿಕಾದ ಆಯೋವಾ ನಗರದ ಒಂದು ಕನ್ನಡಕದ ಅಂಗಡಿಯ ಹೊರಗೆ ನಿಂತಿದ್ದರು. ಆಗ ಡೀನಿಂಗ್ ಅವರು ಮೈಕಲ್ ಗೆ ಅವರು ಮಾಸ್ಕ ಸರಿಯಾಗಿ ಧರಿಸಿಲ್ಲ, ಅದು ಮೂಗಿನಿಂದ ಕೆಳಗಿದೆ, ಸರಿಯಾಗಿ ಮಾಸ್ಕ್ ಧರಿಸಿಕೊಳ್ಳುವಂತೆ ಹೇಳಿದ್ದಾರೆ.

ಆ ಮಾತನ್ನು ಕೇಳಿ ಮೈಕಲ್ ಸಿಕ್ಕಾಪಟ್ಟೆ ಕೋ’ಪಗೊಂಡಿದ್ದಾರೆ. ಮಾರ್ಕ್ ಜೊತೆಗೆ ಮೈಕೆಲ್ ಜ’ಗ’ಳಕ್ಕೆ ಇಳಿದಿದ್ದಾರೆ. ಅಲ್ಲದೇ ಮೈಕೆಲ್ ಮಿತಿಮೀರಿದ ವರ್ತನೆಯನ್ನು ತೋರುತ್ತಾ ಮಾರ್ಕ್ ಮುಖಕ್ಕೆ ಉ’ಗು’ಳಿದ್ದಾನೆ. ಅಲ್ಲದೇ ಮೈಕೆಲ್ ನನಗೆ ಕೊರೊನಾ ಇದ್ದರೆ ಅದು ನಿನಗೂ ಖಂಡಿತ ಬರಲಿ ಎಂದು ಹೇಳಿದ್ದಾನೆ.

ಮೈಕೆಲ್ ಮತ್ತು ಮಾರ್ಕ್ ನಡುವೆ ತೀ’ವ್ರವಾದ ಮಾತಿನ ಚಕಮಕಿ ನಡೆದಿದ್ದು ಅದು ಹೊ’ಡೆ’ದಾಟಕ್ಕೆ ತಿರುಗಿತು. ಆಗಲೇ ಮಾರ್ಕ್ ನನ್ನ ಕೈಯನ್ನು ಕಚ್ಚಿದ ಆದ್ದರಿಂದಲೇ ನಾನು ಸ್ವ’ಯಂ ರ’ಕ್ಷ’ಣೆಗಾಗಿ ಆತನನ್ನು ಹೊ’ಡೆ’ದೆ ಎಂದು ಮೈಕೆಲ್ ಹೇಳಿದ್ದಾನೆ. ಈ ಘಟನೆಯ ಸ್ವಲ್ಪ ಹೊತ್ತಿನ ನಂತರ ಪೋಲಿಸರು ಸ್ಥಳಕ್ಕೆ ಧಾವಿಸಿದ್ದರು.

ಇನ್ನು ಮೈಕೆಲ್ ಗೆ ಶಿ’ಕ್ಷೆಯಾದ ವಿಷಯ ತಿಳಿದು ಆತನ ಕುಟುಂಬಕ್ಕೆ ಆ ಘಾತವಾಗಿದೆ. ಮೈಕೆಲ್ ಪತ್ನಿ ಬೆಕಿ ಸ್ಥಳೀಯ ಮಾದ್ಯಮವೊಂದರ ಜೊತೆ ಮಾತನಾಡುತ್ತಾ ಒಂದು ಹೊಡೆದಾಟಕ್ಕೆ ಹತ್ತು ವರ್ಷಗಳ ಶಿ’ಕ್ಷೆಯನ್ನು ವಿಧಿಸಿರುವುದು ನ್ಯಾಯ ಸಮ್ಮತವಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇಂತಹ ಶಿ’ಕ್ಷೆ ಹೇಗೆ ಸಾಧ್ಯ? ಎಂದು ಆಕೆ ಪ್ರಶ್ನೆ ಮಾಡಿದ್ದಾರೆ.

ವರದಿಗಳ ಪ್ರಕಾರ ಮೈಕಲ್ ಗೆ ಆರು ಜನ ಮಕ್ಕಳಿದ್ದಾರೆ. ಬೆಕಿ ತಮ್ಮ ನೋವನ್ನು ಹೊರಹಾಕುತ್ತಾ ತನ್ನ ಗಂಡನ ಜೊತೆ ಅನ್ಯಾಯವಾಗಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಬೆಕಿ ನನ್ನ ಗಂಡನ ನೆರವಿಲ್ಲದೇ ನಾನು ಹತ್ತು ವರ್ಷಗಳ ಕಾಲ ಹೇಗೆ ಮಕ್ಕಳು ಹಾಗೂ ಕುಟುಂಬನ್ನು ಸಂಭಾಳಿಸಲಿ ಅವರೇ ನನಗೆ ಸ್ಟ್ರಾಂಗ್ ಸಪೋರ್ಟ್ ಆಗಿದ್ದರು‌ ಈಗ ಅವರೇ ಇಲ್ಲ ಎಂದರೆ ನಾನೇನು ಮಾಡುವುದು ಎಂದಿದ್ದಾರೆ.

ಮೈಕೆಲ್ ನ ತಂದೆ ಡೇನಿಸ್ ಮೈಕೆಲ್ ಅವರು ನನ್ನ ಮಗ ಕೇವಲ ಸ್ವ’ಯಂ ರ’ಕ್ಷ’ಣೆಗಾಗಿ ಮಾರ್ಕ್ ಮೇಲೆ ಕೈ ಎತ್ತಿದ. ‌ಆದರೆ ಅವನ ಮಾತನ್ನು ಕೋರ್ಟ್ ಕೇಳಲಿಲ್ಲ. ಅಲ್ಲದೇ ನನ್ನ ಮಗ ಈ ಹಿಂದೆ ಯಾವುದೇ ಅ ಪ ರಾಧ ಮಾಡಿಲ್ಲ, ಕೋರ್ಟ್ ಇದ್ಯಾವುದನ್ನೂ ಗಮನಿಸಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಅಲ್ಲದೇ ತಮ್ಮ ಮಗನಿಗೆ ಅಸ್ತಮಾ ಇದ್ದು, ಉಸಿರಾಟದ ತೊಂದರೆಯಿಂದ ಮಾಸ್ಕ್ ಮೂಗಿನಿಂದ ಕೆಳಗೆ ಎಳೆದುಕೊಂಡಿದ್ದ ಎಂದು ಹೇಳಿದ್ದಾರೆ.

ಇದೇ ಘಟನೆ ಭಾರತದಲ್ಲಿ ನಡೆದಿದ್ದರೆ, ಮುಖಕ್ಕೆ ಉಗುಳಿದ ವ್ಯಕ್ತಿಗೆ ಶಿ’ಕ್ಷೆಯಾಗುವುದು ಒತ್ತಟ್ಟಿಗಿರಲಿ, ಕೇ’ಸ್ ಕೂಡ ಆಗುತ್ತಿರಲಿಲ್ಲ. ಇಲ್ಲಿ ಜನರಿಗೆ ಒತ್ತಟ್ಟಿಗಿರಲಿ, ಖುದ್ದು ಪೊಲೀಸರ ಮೇಲೆಯೇ ಕೊರೋನ ಪಾಸಿಟಿವ್ ಬಂದವರು ಉ’ಗು’ಳಿದರೂ ಇಲ್ಲಿನ ವ್ಯವಸ್ಥೆ ಅವರನ್ನು ಏನೂ ಮಾಡಿಕೊಳ್ಳಲಿಲ್ಲ. ಕಾನೂನಿನ ಬಗ್ಗೆ ಜನರಲ್ಲಿ ಭ’ಯ ಹೋಗಿ ಬೇಕಾಬಿಟ್ಟಿ ವರ್ತಿಸುವುದು ಇದೇ ಕಾರಣಕ್ಕೆ.
-Team Infotrend