DRDO ಅದ್ಭುತ ಆವಿಷ್ಕಾರ : ಅವರು ತಯಾರಿಸಿದ ಎಕ್ಸೋ ಸ್ಕೆಲಿಟನ್ ನಿಂದ ಸೈನಿಕರಿಗೆ ಏನೆಲ್ಲಾ ಉಪಯೋಗಗಳಿವೆ ಗೊತ್ತಾ?
ಇಲ್ಲಿ ಎರಡು ವಿಡಿಯೊ ಇವೆ : ಮೊದಲನೆಯದರಲ್ಲಿ ಎಕ್ಸೋ ಸ್ಕೆಲಿಟನ್ ಬಗ್ಗೆ ಸಂಪೂರ್ಣ ಮಾಹಿತಿ ಇದೆ, ಎರಡನೇದರಲ್ಲಿ 2018 ರಲ್ಲೇ ಯು.ಎಸ್ ಆರ್ಮಿ ಬಳಸುತ್ತಿರುವ ಎಕ್ಸೋ ಸ್ಕೆಲಿಟನ್ ಬಗ್ಗೆ ವಿವರವಿದೆ. ಆ ವಿಡಿಯೊ ನೋಡುವ ಮೊದಲು ಈ ವಿವರ ಓದಿ… ಚೀನಾ ಜೊತೆ ಕೆಲ ತಿಂಗಳ ಹಿಂದೆ ಆದ ಸಂ’ಘರ್ಷದ ನಂತರ ಭಾರತ ತನ್ನ ಸೈನಿಕರಿಗೆ ತೀರ ಅತ್ಯಗತ್ಯವಾಗಿದ್ದ ಎಕ್ಸೋ ಸ್ಕೆಲಿಟನ್ ಗಳನ್ನು ಆಮದು ಮಾಡಿಕೊಳ್ಳಬಯಸಿತ್ತು, ಅಷ್ಟರಲ್ಲಿ DRDO ಇವುಗಳನ್ನು ತಾನೇ ತಯಾರಿಸಿದೆ.
ಭಾರತದ ಸೈನಿಕರ ಶಕ್ತಿ ಇಡೀ ಜಗತ್ತಿಗೆ ಗೊತ್ತು, ಈ ಹಿಂದೆ ಅವರಿಗೆ ನೀಡಿರುವ ಕೆಲವೊಂದು ಅ’ಸ್ತ್ರಗಳು ಕೈ ಕೊಟ್ಟರೂ ಸಹ ಎದೆಗುಂದದೆ ಯುದ್ಧ ಭೂಮಿಯಿಂದ ಹಿಂದೆ ಸರಿಯದೇ ತಮ್ಮ ಕೊನೆಯುಸಿರು ಇರುವವರೆಗೂ ಹೋ’ರಾಡಿ ಇಡೀ ದೇಶ ಅಷ್ಟೇ ಏಕೆ ಜಗತ್ತಿನ ಮೂಲೆ ಮೂಲೆಗೂ ಇವರ ದೇಶ ಭಕ್ತಿ – ಇವರ ಹೋ’ರಾಟದ ಕಿಚ್ಚು ಎಂಥದು ಎಂದು ಸಾರಿದ್ದಾರೆ. ಇಂದಿಗೂ ಸಹ ಅತಿ ಕಡಿಮೆ ಸೌಕರ್ಯದಲ್ಲೂ ಎಲ್ಲದಕ್ಕೂ ಸೈ ಎನ್ನುತ್ತ ಹೋ’ರಾಡಲು ತಯಾರಾಗಿ ನಿಂತಿರುತ್ತಾರೆ ನಮ್ಮ ಹೆಮ್ಮೆಯ ವೀರರು.

ಇಂತಹ ವೀರರಿಗೆ ಮತ್ತಷ್ಟು ಶಕ್ತಿ ತುಂಬಿದರೆ ಏನಾಗಬೇಡ! ಇತ್ತೀಚೆಗೆ ನಮ್ಮ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯು ಒಂದು ಹೊಸ ಆವಿಷ್ಕಾರ ಮಾಡಿದೆ, ಅದರ ಹೆಸರು ಎಕ್ಸೋ ಸ್ಕೆಲೀಟನ್ ಅಂತ. ಈ ಒಂದು ಸಾಧನ ಹೇಗಿದೆ ಎಂದರೆ, ಆಯಾಸವಾದ ಮನುಷ್ಯನನ್ನ ಕೈ ಹಿಡಿದು ನಡೆಸಲು ಬಂದ ಸಂಗಾತಿಯತೆಯೇ ಇದು ಕಾರ್ಯನಿರ್ವಹಿಸುತ್ತದೆ.
ಇದನ್ನು ಧರಿಸಿದ ಮೇಲೆ ನಮ್ಮ ಸೈನಿಕರು ಹೊತ್ತೋಯುತ್ತಿದ್ದ ಭಾರದ ಪ್ರಮಾಣದಲ್ಲಿ ಇದು ಅರ್ಧ ಪಾಲು ಪಡೆಯುವುದಲ್ಲದೆ ಸೈನಿಕರ ಶಕ್ತಿಯನ್ನು ಕೂಡ ದುಪ್ಪಟ್ಟು ಮಾಡುತ್ತದೆ. ಅವರ ಕಾಲುಗಳ ಮೇಲೆ ಬೀಳುತ್ತಿದ್ದ ಭಾರವನ್ನು ಇದು ಅರ್ದದಷ್ಟು ತಾನು ಹೊತ್ತು ನಡೆಯುತ್ತದೆ. ಇದು ಬ್ಯಾಟರಿ ಆಧಾರಿತವಾದ್ದರಿಂದ ಸೈನಿಕನಿಗೆ ದುರ್ಗಮ ಪರಸ್ಥಿತಿಯಲ್ಲಿ ಹೆಜ್ಜೆ ಹಾಕಲು ಸಹಾಯ ಮಾಡುವುದು.

ಹೇಗೆ ಕೆಲಸ ಮಾಡುತ್ತದೆ ಈ ಎಕ್ಸೋ ಸ್ಕೆಲಿಟನ್?
ಈ ಒಂದು ಸಾಧನವನ್ನು ಈಗಾಗಲೇ ಅಮೇರಿಕ ರಷ್ಯಾ ಹಾಗೂ ಚೀನಾ ದೇಶಗಳು ಬಳಸುತ್ತಿವೆ. ಇವುಗಳನ್ನು ಸೈನಿಕರು ಪ್ಯಾಂಟ್ ಧರಿಸಿದಂತೆ ಧರಿಸಿ ಬೆನ್ನಿಗೆ ಹಾಕುವ ಭಾರವನ್ನು ಕೂಡ ಇವುಗಳ ಮೇಲೆಯೇ ಹಾಕಲಾಗುತ್ತದೆ, ಇದನ್ನು ಧರಿಸಿದಾಗ ಸೈನಿಕನ ಸಾಮಗ್ರಿಗಳ ಬಹುತೇಕ ಭಾರ ಇದರ ಮೇಲೆ ಹೋಗುವ ಹಾಗೆ ತಯಾರಿಸಲಾಗಿದೆ.
ಇದರಿಂದ ಸೈನಿಕರು ತಮ್ಮ ಬೆನ್ನಿನ ಮೇಲೆ ಹೊತ್ತೋಯುತ್ತಿದ್ದ ತಮ್ಮ ಆಹಾರ ಸಾಮಗ್ರಿ, ನೀರು, ಮ’ದ್ದು ಗುಂ’ಡು ಹಾಗೂ ಇನ್ನಿತರೇ ಭಾರವನ್ನು ತುಂಬಿರುವ ಬ್ಯಾಗನ್ನು ಈ ಸ್ಕೆಲಿಟನ್ ಗಳನ್ನು ಧರಿಸಿ ಹೊತ್ತುಕೊಂಡರೆ ಮೊದಲು 20 ಕೆಜಿ ಭಾರ ಹೊರುತ್ತಿದ್ದವರು ಅದರ ದುಪ್ಪಟ್ಟು ಭಾರ ಹೊರುತ್ತಾರೆ, ಹಾಗೂ ಅದನ್ನು ಹೊತ್ತು ನಡೆಯುವುದು ಕೂಡ ಅರಾಮದಾಯಕವೆನಿಸುತ್ತದೆ.
ಇನ್ನೂ ವಿಶೇಷ ಎಂದರೆ ಪಕ್ಕದ ಚೀನಾ ಇಂತಹ ಎಕ್ಸೋ ಸ್ಕೆಲೀಟನ್ ಗಳಿಗೆ ಯಾವುದೇ ಪವರ್ ಕೊಟ್ಟಿಲ್ಲ, ಆದರೆ ಭಾರತದ DRDO ತಯಾರಿಸುತ್ತಿರುವ ಈ ಸಾಧನಗಳು ಬ್ಯಾಟರಿ ಚಾಲಿತವಾಗಿರುವದರಿಂದ ಇವುಗಳು ಮತ್ತಷ್ಟು ಸುಲಭವಾಗಿ ರಕ್ಷಣಾ ಕಾರ್ಯ ನಿರ್ವಹಿಸಲು ಸೈನಿಕರಿಗೆ ಅನುಕೂಲವಾಗಲಿವೆ.
ಭಾರತದ ಶತ್ರು ರಾಷ್ಟ್ರಗಳ ಹಲವು ಗಡಿಗಳು ಅದರಲ್ಲೂ ಸಿಯಾಚಿನ್ ಗ್ಯಾಲನ್ ವ್ಯಾಲಿಯಂತಹ ಜಾಗಗಳಂತ ಕಠಿಣ ಜಾಗಗಳಲ್ಲಿ ಕೂಡ ಹಂಚಿಕೊಂಡಿರುವದರಿಂದ ಅಲ್ಲಿನ ದುರ್ಗಮ ಜಾಗಗಳಿಗೆ ಬರೀಗೈಯಲ್ಲಿ ಹತ್ತುವುದೇ ಬಹಳ ಕಷ್ಟ, ಆದರೆ ನಮ್ಮ ಸೈನಿಕರು ಅಷ್ಟೊಂದು ಭಾರವನ್ನು ಹೊತ್ತುಕೊಂಡು ಹತ್ತುವುದು ಎಷ್ಟೊಂದು ಕಷ್ಟವಾಗುತ್ತದೆ ಎಂದು ನೀವೇ ಊಹಿಸಿಕೊಳ್ಳಿ.
ಈ ಸಾಧನದಿಂದ ಆ ಎಲ್ಲಾ ಭಾರವು ಸುಲಭವಾಗುವುದಲ್ಲದೆ ಬೆಟ್ಟ ಏರುವ ಕೆಲಸ ಕೂಡ ಬಹಳಷ್ಟು ಸರಳವಾಗುತ್ತದೆ. ಭಾರತ ಇತ್ತೀಚೆಗೆ ಬ್ರ’ಹ್ಮೋ’ಸ್ ಕ್ಷಿ’ಪ’ಣಿ, ಆಕಾಶ್ ಮಿ’ಸೈ’ಲ್, ನಮ್ಮ ದೇಶದಲ್ಲೇ ತಯಾರಾದಂತಹ ಬು’ಲೆ’ಟ್ ಪ್ರೂ’ಫ್ ಜಾಕೆಟ್ ಗಳು ಹಾಗೂ ರುದ್ರದಂತಹ ಹೆಲಿಕ್ಯಾಪ್ಟರ್ ಗಳನ್ನು ರಫ್ತು ಮಾಡುತ್ತಿದೆ.
ಭಾರತ ಕೂಡ ಸೇನಾ ಪರಿಕರಗಳನ್ನು ರಫ್ತು ಮಾಡುವ ಮಟ್ಟಿಗೆ ಬೆಳೆಯುತ್ತಿದೆ, ನಮ್ಮ ಸೈನಿಕರಿಗೆ ಒದಗಿಸಿದ ಮೇಲೆ ಈ ಹೊಸ ಆವಿಷ್ಕಾರಗಳಾದ ಬ್ಯಾಟರಿ ಚಾಲಿತ ಎಕ್ಸೋ ಸ್ಕೆಲಿಟನ್ ಗಳು ಕೂಡ ಎಕ್ಸ್ಪೋರ್ಟ್ ಆಗಲಿವೆ. ಒಟ್ಟಿನಲ್ಲಿ ನಮ್ಮ ಸೈನಿಕರಿಗೆ ಅನುಕೂಲವಾಗುವ ಪರಿಕರಗಳಾಗಿರುವದರಿಂದ ನಮಗೂ ಹೆಮ್ಮೆಯೇ. ಜೈ ಹಿಂದ್
-Team Infotrend