ಮಹಾ ವಿಸ್ಮಯ : ವಿಜ್ಞಾನಿಗಳಿಗೆ ದೊರಕಿದೆ ಜಗತ್ತಿನ ಅತ್ಯಂತ ಹಳೆಯ ಮೀನು ಜೀವಂತವಾಗಿ! ಇದರ ವಯಸ್ಸು ಸುಮಾರು 42 ಕೋಟಿ ವರ್ಷಗಳು!
ಸಮುದ್ರದ ಜಗತ್ತು ತನ್ನಲ್ಲಿ ಅದೆಷ್ಟೋ ರಹಸ್ಯಗಳನ್ನು ಅಡಗಿಸಿಟ್ಟುಕೊಂಡಿದೆ. ಪ್ರತಿದಿನ ಸಾಗರದ ತಳದಿಂದ ಹೊಸ ಹೊಸ ಜೀವಿಗಳು ಹೊರ ಬರುತ್ತಿರುವ ವಿಷಯಗಳು ಸುದ್ದಿಯಾಗುತ್ತಲೇ ಇರುತ್ತವೆ, ಜನರಿಗೆ ವಿಸ್ಮಯವನ್ನು ಮೂಡಿಸುತ್ತಲೇ ಇರುತ್ತವೆ. ಕೆಲವು ದಿನಗಳ ಹಿಂದೆ ಮೊಗಾಂಬೆ ನ್ಯೂಸ್ ನ ವರದಿಯ ಪ್ರಕಾರ ಮಡಗಾಸ್ಕರ್ ಸಮುದ್ರದ ತಳದಿಂದ ಮೀನುಗಾರರಿಗೆ ವಿಶ್ವದ ಅತ್ಯಂತ ಹಳೆಯ ಮೀನನ್ನು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.
ಈ ಮೀನು 42 ಕೋಟಿ ವರ್ಷಗಳಷ್ಟು ಪುರಾತನವಾದುದು ಎನ್ನಲಾಗಿದೆ. ವಿಶೇಷವೆಂದರೆ ಈ ಮೀನು ಇನ್ನು ಸಹಾ ಜೀವಂತವಾಗಿದ್ಧು, ವಿಜ್ಞಾನಿಗಳು ಅದನ್ನು ತಮ್ಮ ಸುಪರ್ದಿಗೆ ಪಡೆದು ಅದರ ವಿಷಯವಾಗಿ ಅಧ್ಯಯನ ಮಾಡಲು ಆರಂಭಿಸಿದ್ದಾರೆ ಎನ್ನಲಾಗಿದೆ. ಈ ಮೀನುಗಳನ್ನು ಕೊವೆಲಾಕಂತ್ ಜಾತಿಯವು ಎನ್ನಲಾಗಿದೆ.

ಈ ವಿಶೇಷ ಜಾತಿಯ ಮೀನಿಗೆ ಕಾಲುಗಳೂ ಇವೆ. ಈ ಮೀನಿಗೆ ಇರುವ ನಾಲ್ಕು ಕಾಲುಗಳನ್ನು ನೋಡಿದ ನಂತರ ಈ ವಿಚಾರ ವಿಜ್ಞಾನಿಗಳ ನಡುವೆ ಒಂದು ಚರ್ಚೆಗೆ ಕಾರಣವಾಗಿದೆ. ಆದರೆ ಇದೇ ವೇಳೆ ಇಷ್ಟು ವರ್ಷಗಳ ಕಾಲ ಈ ಪ್ರಬೇಧದ ಮೀನುಗಳ ಅಸ್ತಿತ್ವ ಅಂತ್ಯವಾಗಿದೆ ಎಂದೇ ತಿಳಿಯಲಾಗಿತ್ತು ಎಂದಿದ್ದಾರೆ.
ಆದರೆ ಈಗ ಎಷ್ಟೋ ವರ್ಷಗಳ ನಂತರ ಶಾರ್ಕ್ ಹಂ ಟ ರ್ಸ್ ಇಂತಹ ಮೀನೊಂದನ್ನು ಸಾಗರದ ತಳದಿಂದ ಹುಡುಕಿ ತಂದಿರುವುದು ಆಶ್ಚರ್ಯ ಉಂಟು ಮಾಡಿದೆ. ಡೈನೋಸಾರ್ ಗಳ ಅಂತ್ಯದೊಡನೆ ಈ ಮೀನುಗಳು ಅಗತ್ಯವಾಗಿದ್ದವು ಎಂದು ಹೇಳಲಾಗಿತ್ತು. ಆದರೆ ಈಗ ಈ ಮೀನು ಸಿಕ್ಕಿರುವುದು ಒಂದು ಹೊಸ ಸಂಚಲನವನ್ನು ಸೃಷ್ಟಿಸಿದೆ.
ಈ ಮೀನಿನ ಜಾತಿ 42 ಕೋಟಿ ವರ್ಷಗಳಷ್ಟು ಪುರಾತನವಾದುದು ಎಂದಿದ್ದು, ಇವು ಸಮುದ್ರದಲ್ಲಿ ಸುಮಾರು 300 ರಿಂದ 500 ಅಡಿಗಳಲ್ಲಿ ವಾಸಿಸುತ್ತವೆ ಎನ್ನಲಾಗಿದೆ. ಎಲ್ಲಕ್ಕಿಂತ ವಿಶೇಷ ಎಂದರೆ ಈ ಮೀನಿಗೆ ಕಾಲುಗಳಿರುವುದು! ಈ ಮೀನು ದೊರೆತ ನಂತರ ವಿಜ್ಞಾನಿಗಳು ಆಶ್ಚರ್ಯ ಚಕಿತರಾಗಿದ್ದಾರೆ. ಅಲ್ಲದೇ ಇಷ್ಟು ವರ್ಷಗಳಾದರೂ ಹೇಗೆ ಬದುಕಿದೆ ಎನ್ನುವುದು ವಿಸ್ಮಯ ಎನಿಸಿದೆ.

ಈ ಮೀನು ಜೀವಂತವಾಗಿ ದೊರಕಿರುವುದು ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಅನುಕೂಲವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಮಡಗಾಸ್ಕರ್ ನ ಯಾವ ಭಾಗದಲ್ಲಿ ಈ ಮೀನು ಕಂಡುಬರುತ್ತದೆ ಎನ್ನುವ ಅನುಮಾನವಿತ್ತೋ ಅಲ್ಲೇ ಈ ಮೀನು ದೊರೆತಿದೆ. ಅಲ್ಲದೇ ಈಗ ವಿಜ್ಞಾನಿಗಳು ಈ ಮೀನಿನಿಂದ ಸಮುದ್ರದ ಇತರೆ ಜೀವಿಗಳಿಗೆ ಸಮಸ್ಯೆ ಯಾಗಬಹುದೇ ಎನ್ನುವ ಚಿಂತೆಯಲ್ಲಿ ಇದ್ದಾರೆ.
ಈ ವಿಶೇಷ ಜಾತಿಯ ಮೀನುಗಳಿಗಾಗಿ ವಿಜ್ಞಾನಿಗಳು ಬಹಳ ವರ್ಷಗಳಿಂದ ಶೋಧನೆಯನ್ನು ನಡೆಸುತ್ತಿದ್ದರು. ಆದರೆ ಈ ಮೀನಿನ ಬಗೆಗೆ ಯಾವುದೇ ಸುಳಿವು ಸಿಗದ ಕಾರಣದಿಂದ ಇವುಗಳು ಅವನತಿ ಹೊಂದಿವೆ ಎಂದೇ ತೀರ್ಮಾನ ಮಾಡಲಾಗಿತ್ತು. ಆದರೆ ಈಗ ಅದೇ ಮೀನು ಜೀವಂತವಾಗಿ ದೊರೆತಿರುವುದು ಸಂಶೋಧನೆಗೆ ಬಹಳಷ್ಟು ಅನುಕೂಲವಾಗಲಿದೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಅಲ್ಲದೇ ಈ ಮೀನಿನ ಲಭ್ಯತೆಯಿಂದಾಗಿ ತಮ್ಮ ಸಂಶೋಧನೆಗಳಿಗೆ ಒಂದು ಹೊಸ ದಿಕ್ಕು ಲಭ್ಯವಾಗಿದೆ ಎಂದು ವಿಜ್ಞಾನಿಗಳು ಹೊಸ ಹುರುಪಿನಲ್ಲಿ ಇದ್ದಾರೆ ಎನ್ನಲಾಗಿದೆ.
-Team Infotrend