VIDEO : ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಬದುಕು ನೀವು ಅಂದುಕೊಂಡ ರೀತಿ ಇರಲಿಲ್ಲ!
ಸಂಚಾರಿ ವಿಜಯ್ ರವರ ಸಾವಿನ ಕುರಿತು ನಿನ್ನೆ ಬೆಳಿಗ್ಗೆಯೇ ಖಚಿತವಾಗಿತ್ತಾದರೂ, ಅಧಿಕೃತವಾಗಿ ನಿನ್ನೆ ಸಾಯಂಕಾಲ ಇಹಲೋಕ ತ್ಯಜಿಸಿದರು. ವೈದ್ಯರು ಅವರ ಸಾವನ್ನು ದೃಢೀಕರಿಸುವ ಮೂಲಕ ಕರ್ನಾಟಕ ರಂಗಭೂಮಿಯ ಅದ್ಭುತ ಚಿಗುರೊಂದು ಕಮರಿ ಹೋಯಿತು. ಬಾಳಿ ಬೆಳಗಬೇಕಾದ ಹುಡುಗನ ಬದುಕು ಬೈಕ್ ಅ’ಪ’ಘಾ’ತದಿಂದಾಗಿ ಮುರುಟಿ ಹೋಯಿತು.
ಹಗಲಿರುಳು ಕಲೆಯನ್ನೇ ಉಸಿರಾಡುತ್ತಿದ್ದ ವಿಜಯ್ ರವರ ಉಸಿರು ನಿಂತು ಹೋಯಿತು. ತಮಗೆಲ್ಲ ಗೊತ್ತಿರಲಿಕ್ಕಿಲ್ಲ, ಸಂಚಾರಿ ವಿಜಯ್ ಅವರು ದಾರಾವಾಹಿ, ಕಿರುಚಿತ್ರ, ಸಿನೆಮಾ ಇವುಗಳ ಆಕರ್ಷಣೆಗೆ ಬಿದ್ದವರಲ್ಲ, ಹಾಗೂ ಅವರ ಉದ್ದೇಶ ಸಿನೆಮಾ ರಂಗದಲ್ಲಿ ಮಿಂಚುವುದು ಕೂಡ ಆಗಿರಲಿಲ್ಲ. ಅವರದೇನಿದ್ದರೂ ರಂಗಭೂಮಿಯ ಸೆಳೆತ.

ನಿಮಗೆ ಅಚ್ಚರಿಯಾಗಬಹುದು, ಅಪ್ಪಟ ರಂಗಭೂಮಿ ಕಲಾವಿದರ ಸಿನೆಮಾದಲ್ಲಿ ನಟಿಸುವುದನ್ನು ಇಷ್ಟಪಡುವುದಿಲ್ಲ, ವಿಜಯ್ ಕೂಡ ಹೆಚ್ಚು ಕಡಿನೆ ಹಾಗೇ ಇದ್ದರು. ರಂಗಭೂಮಿಯ ತಾಕತ್ತು ಎಂಥದೆಂದರೆ, ಅಲ್ಲಿ ಬೆಳೆದ ಕಲಾವಿದನಿಗೆ ಒಪ್ಪದ ಪಾತ್ರವೇ ಇಲ್ಲ. ಸಾಮಾನ್ಯ ಸೇವಕನಿಂದ ಮಹಾರಾಜನವರೆಗೆ, ಕಳ್ಳನಿಂದ ಇನ್ಸಪೆಕ್ಟರ್ ವರೆಗೆ, ರಾಜಕಾರಣಿಯಿಂದ ಸ್ವಾಮೀಜಿವರೆಗೆ ಎಲ್ಲ ಪಾತ್ರಗಳಿಗೂ ಅವರು ಜೀವ ತುಂಬಬಲ್ಲರು.
ತಮಗೆ ಕೊಟ್ಟ ಎಲ್ಲ ಪಾತ್ರಗಳಲ್ಲಿ ರಂಗಭೂಮಿ ಮೂಲದವರು ಅಕ್ಷರಶ ಲೀನವಾಗಿಬಿಡಬಲ್ಲರು. ಸಂಚಾರಿ ವಿಜಯ್ ಆ ನಿಟ್ಟಿನಲ್ಲಿ ಸಾಕಷ್ಟು ಪಯಣಿಸಿದ್ದರು. ಆದರೆ ಅವರ ಹಾದಿ ಇನ್ನೂ ತುಂಬಾ ಇತ್ತು, ಆದರೆ ಅರ್ದಕ್ಕೇ ನಿಂತುಬಿಟ್ಟರು. ರಂಗಭೂಮಿಯಿಂದ ಸಿನೆಮಾದೆಡೆಗೆ ಬಂದಿದ್ದು ಜೀವನ ನಡೆಸುವುದಕ್ಕಾಗಿ ಅಂತ ಹೇಳಿದರೆ ತಪ್ಪಾಗಲಿಕ್ಕಿಲ್ಲ.

ಇತ್ತೀಚೆಗೆ ಅವರು ಸಿಕ್ಕ ಸಿಕ್ಕ ಪಾತ್ರ ಮಾಡಿದರು. ತಂದೆ ತಾಯಿಯನ್ನು ಕಳೆದುಕೊಂಡಾಗಿನಿಂದ ಬರೀ ನೋವನ್ನೇ ಉಂಡಿದ್ದ ಬದುಕಿಗೆ ಇತ್ತೀಚೆಗೆ ಸ್ವಲ್ಪ ಮೆರುಗು ಬಂದಿತ್ತು. ಸದಾಕಾಲ ಅವರೊಂದಿಗಿದ್ದ ಅವರ ಸೋದರನ ಜೊತೆ ಅವರ ಜೀವನಮಟ್ಟ ಸಾಕಷ್ಟು ಸುಧಾರಿಸಿತ್ತು, ಅಷ್ಟರಲ್ಲಿ ಈ ದು’ರಂ’ತ ಸಂಭವಿಸಿತು.
ಇನ್ನೊಬ್ಬರಿಗೆ ಸಹಾಯ ಮಾಡುವ ಅವರ ಗುಣವನ್ನು ಮರಣದಲ್ಲೂ ಮುಂದುವರೆಯುವಂತೆ ಮಾಡಿದ್ದು ಅವರ ಸೋದರ. ಅವರ ದೇಹದಾನ ಮಾಡಲು ನಿನ್ನೆಯೇ ಒಪ್ಪಿಗೆ ಕೊಟ್ಟಿದ್ದರಿಂದ ವಿಜಯ್ ರವರ ಸಾವು ಅಧಿಕೃತವಾಗುವ ಮೊದಲೆ, ಅಂದರೆ ಅವರ ಬ್ರೇನ್ ಡೆ’ಡ್ ಆದ ನಂತರ ಅವರ ಅಂಗಾಂಗಗಳನ್ನು ಇನ್ನೊಬ್ಬರಿಗೆ ಕಸಿ ಮಾಡುವ ಕೆಲಸ ಮಾಡಲಾಗುತ್ತದೆ.

ಈಗಾಗಲೇ ಅವರ ಕಿ’ಡ್ನಿಗಳನ್ನು ಮಹಿಳೆಯೊಬ್ಬರಿಗೆ ಜೋಡಣೆ ಮಾಡಲಾಗಿದೆ, ಈ ಆ’ಪ’ರೇ’ಶನ್ ಯಶಸ್ವಿಯಾಗಿದೆ ಎಂದು ಎಮ್ ಎಸ್ ರಾಮಯ್ಯ ಆಸ್ಪತ್ರೆ ತಿಳಿಸಿದೆ. ಲಗ್ಗೇರೆ ಮೂಲದ 34 ವರ್ಷ ಮಹಿಳೆಗೆ ವಿಜಯ್ ರವರ ಕಿ’ಡ್ನಿ ಸರಿಯಾಗಿ ಮ್ಯಾಚ್ ಆಗುತ್ತಿತ್ತು. ಬ್ಲ’ಡ್ ಗ್ರುಪ್, ಡಿಎನ್ಎ, ಕಿ’ಡ್ನಿ ಸೈಜ್ ಎಲ್ಲವೂ ಆ ಮಹಿಳೆಗೆ ಸರಿಯಾಗಿ ಹೊಂದಿಕೆಯಾಗುತ್ತಿದ್ದರಿಂದ ಟ್ರಾನ್ಸ್ ಪ್ಲಾಂಟ್ ಮಾಡಲಾಯಿತು.
ಹಾಗೆಯೇ ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆಯಲ್ಲಿ ಇಬ್ಬರಿಗೆ ವಿಜಯ್ ರವರ ಕಣ್ಣುಗಳನ್ನು ಜೋಡಿಸುವ ಕೆಲಸ ಕೂಡ ನಡೆದಿದೆ. ದೃಷ್ಟಿ ಕಳೆದುಕೊಂಡಿದ್ದ ಇಬ್ಬರ ಬಾಳಿಗೆ ವಿಜಯ್ ಬೆಳಕಾಗಲಿದ್ದಾರೆ, ಈಗಾಗಲೇ ಒಬ್ಬರಿಗೆ ಆ’ಪ’ರೇ’ಶನ್ ಮಾಡಲಾಗಿದೆ. ಹೀಗೆ ವಿಜಯ್ ತಮ್ಮ ಸಾ’ವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಬಗೆಗಿನ ಒಂದು ವಿಡಿಯೊ ಕೆಳಗಿದೆ, ಆಸಕ್ತರು ನೋಡಿ….
ಕಷ್ಟದಲ್ಲಿ ಬೆಳೆದ ವಿಜಯ್, ಬೇರೆ ಯಾರಿಗಾದರೂ ಕಷ್ಟ ಎಂದಾಗ ಕೇಳಿಸಿಕೊಂಡು ಸುಮ್ಮನೆ ಕುಳಿತವರೇ ಅಲ್ಲ, ಸ್ನೇಹಿತರನ್ನು ಕಟ್ಟಿಕೊಂಡು ಏನಾದರೊಂದು ಮಾಡುತ್ತಲೇ ಇರುತ್ತಿದ್ದರು. ಈ ಕೊರೊನ ಸಂಕಷ್ಟದ ಸಮಯದಲ್ಲೂ ಅವರು ಸುಮ್ಮನೆ ಕುಳಿತಿರಲಿಲ್ಲ. ಅಪಾರ ಮಾನವೀಯ ಗುಣವನ್ನು ಅಳವಡಿಸಿಕೊಂಡಿದ್ದ ವಿಜಯ್ ರವರು ದೇವರಿಗೂ ತುಂಬಾ ಇಷ್ಟವಾದ ಅನಿಸುತ್ತದೆ. ಅವರ ಬಗೆಗಿನ ಒಂದು ವಿಡಿಯೊ ಮೇಲಿದೆ, ಆಸಕ್ತರು ನೋಡಿ.
-Team Infotrend