ವೈರಲ್ VIDEO : ಮುಖಕ್ಕೆ ಹೊಡೆದ ಹಾಗೆ ಕೋಕಾ ಕೋಲಾ ಬಾಟಲ್ ಸೈಡಿಗೆ ತಳ್ಳಿದ ಕ್ರಿಶ್ಚಿಯಾನೋ ರೋನಾಲ್ಡೋ! ಕೋಕ್ ಬದಲಾಗಿ ನೀರು ಕುಡಿಯಿರಿ ಎಂದರು!
ಪೋರ್ಚಗಲ್ ನ ಫುಟ್ಬಾಲ್ ಹೀರೋ ಕ್ರಿಶ್ಚಿಯಾನೋ ರೋನಾಲ್ಡೋ ಅವರ ಪೋರ್ಚಗಲ್ ಯುರೋ 2020 ಕಪ್ ನ ಒಂದು ಪಂದ್ಯದಲ್ಲಿ ಹಂಗೇರಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ನಡೆದ ಒಂದು ಪ್ರೆಸ್ ಕಾನ್ಫರೆನ್ಸ್ ನಲ್ಲಿ ಮಾಡಿದ ಆ ಒಂದು ಕೆಲಸದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ ಹಾಗಾದ್ರೆ ಆ ವಿಡಿಯೋದಲ್ಲೇನಿದೆ ಎಂದು ನೋಡೋಣ ಬನ್ನಿ…
36 ವರ್ಷದ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೋ ರೋನಾಲ್ಡೋ ಅವರು ಅವರ ದೇಹವನ್ನು ಇನ್ನೂ ಕೂಡ ಇಪ್ಪತ್ತರ ಯುವಕನಂತೆಯೇ ಇಟ್ಟುಕೊಂಡಿದ್ದಾರೆ, ಅಷ್ಟೊಂದು ಫಿಟ್ ಆಗಿರುವ ದೇಹದ ಹಿಂದೆ ಅವರು ಪಾಲಿಸುವ ಅತ್ಯಂತ ಶಿಸ್ತು ಹಾಗೂ ಕಟ್ಟುನಿಟ್ಟಿನ ಡಯಟ್ ಕಾರಣ, ಅದರಲ್ಲೂ ಆಹಾರದ ವಿಷಯದಲ್ಲಿ ಅವರು ಮಾದರೀಯ ಮನುಷ್ಯ.

ಪೋರ್ಚಗಲ್ ದೇಶದ ಪರವಾಗಿ ಅಂಡರ್-15, ಅಂಡರ್ -17, ಅಂಡರ್-19, ಅಂಡರ್-21 ಹಾಗೂ ಅಂಡರ್-23 ತಂಡಗಳ ಪರವಾಗಿ ಆಡಿ ಸಧ್ಯ ಪೋರ್ಚಗಲ್ ಸೀನಿಯರ್ ಟೀಮ್ ಪರವಾಗಿ ಆಡುತ್ತಿರುವ ರೋನಾಲ್ಡೋ ಅವರು ಪೋರ್ಚಗಲ್ ಸೀನಿಯರ್ ಟೀಮ್ ನ ಪರವಾಗಿ 175 ಪಂದ್ಯಗಳನ್ನಾಡಿ 104 ಗೋಲುಗಳನ್ನು ಗಳಿಸಿದ್ದಾರೆ.
ಇನ್ನೂ ಕೂಡ ಉತ್ತಮ ಫಾರ್ಮ್ ನಲ್ಲಿದ್ದು ಇನ್ನಷ್ಟು ಸಾಧನೆ ಮಾಡುತ್ತಾರೆ ಕೂಡ. ಇಷ್ಟೆಲ್ಲ ಫಿಟ್ನೆಸ್ ಮೇಂಟೈನ್ ಮಾಡಿರುವ ರೋನಾಲ್ಡೋ ಅವರು ತಿನ್ನುವ ಆಹಾರ ಹಾಗೂ ಕುಡಿಯುವ ನೀರಿನ ವಿಷಯದಲ್ಲಿ ಸಾಕಷ್ಟು ಜಾಗರೂಕತೆ ವಹಿಸುತ್ತಾರೆ. ಹೀಗಿರುವ ರೊನಾಲ್ಡೊ ಎದುರು ಜಾಹಿರಾತಿನ ಉದ್ದೇಶ ಇಟ್ಟುಕೊಂಡು ಅವರು ಕೂರುವ ಟೇಬಲ್ ಮುಂಭಾಗ ಎರಡೆರಡು ಕೋಕಾ ಕೋಲಾ ಬಾಟಲ್ ಇಟ್ಟರೆ ಅವನು ಸುಮ್ಮನಿದ್ದಾರೆಯೇ!

ಆ ವಿಡಿಯೋದಲ್ಲಿ ನೋಡುವಂತೆ, ಪ್ರೆಸ್ ಕಾನ್ಫರೆನ್ಸ್ ಜಾಗದ ಕಡೆಗೆ ಬಂದಾಗ ಅವರ ಮುಂದೆ ಟೇಬಲ್ ಮೇಲೆ ಒಂದಲ್ಲ ಎರಡು ಕೋಕಾ ಕೋಲಾ ಬಾಟಲಿಗಳನ್ನು ಇಟ್ಟಿದ್ದರು, ಅವರು ಬಂದು ಕುಳಿತುಕೊಂಡ ಕೂಡಲೇ ಇವುಗಳನ್ನು ಪ್ರೆಸ್ ನವರ ಮುಂದೆಯೇ ಮುಖಕ್ಕೆ ಹೊಡೆದ ಹಾಗೆ ತೆಗೆದು ಪಕ್ಕಕ್ಕೆ ಇಟ್ಟು ಒಂದು ನೀರಿನ ಬಾಟಲ್ ಎತ್ತಿ ತೋರಿಸಿ “ನೀರು ಕುಡಿಯಿರಿ” ಎನ್ನುತ್ತಾರೆ!
ನೀರಿನ ಬಾಟಲ್ಎತ್ತಿ ತೋರಿಸುವ ಮೂಲಕ ಕೋಲಾ ಕುಡಿಯುವ ಬದಲು ನೀರು ಕುಡಿಯಿರಿ ಅರೋಗ್ಯಕ್ಕೆ ಒಳ್ಳೆಯದು ಎಂದು ಮಾರ್ಮಿಕವಾಗಿ ಹೇಳಿದರು. ಯಾವುದೇ ಆಟಗಾರ ಇಂಥ ದೊಡ್ಡ ಕಂಪನಿಗಳ ವಿರುದ್ದ ಹೀಗೆ ನೇರವಾಗಿ ಮಾತಾಡುವುದಿಲ್ಲ, ಹೀಗಾಗಿ ರೋನಾಲ್ಡೊ ಮಾಡಿದ ಈ ಕೆಲಸ ಎಲ್ಲರ ಮೆಚ್ಚುಗೆ ಗಳಿಸಿದ್ದಷ್ಟೇ ಅಲ್ಲ, ಅವರ ವಿಡಿಯೊ ಭರ್ಜರಿ ವೈರಲ್ ಆಗುತ್ತಿದೆ.
ಈ ಕೆಲಸದ ಮೂಲಕ ತಮ್ಮ ಡಯಟ್ ಹೇಗಿರುತ್ತದೆ ಎಂಬುದನ್ನು ತಿಳಿಸುವಂತಿತ್ತು. ಜೂನ್ 11 ರಿಂದ ಜುಲೈ 11 ರವರೆಗೆ ನಡೆಯುತ್ತಿರುವ ಯುರೋ 2020 ಟೂರ್ನಮೆಂಟ್ ನಲ್ಲಿ ರೋನಲ್ಡೋ, ಫೆರ್ನಾಂಡೋ ಸ್ಯಾಂತೋಷ್, ಆಂಡ್ರೆ ಸಿಲ್ವಾ ಮತ್ತು ಡಿಯಾಗೋ ಜೋಟಾ ಅವರಂತ ಆಟಗಾರರನ್ನೊಳಗೊಂಡ ಉತ್ತಮ ಫ್ರಂಟ್ ಲೈನ್ ಹೊಂದಿದ್ದ ಪೋರ್ಚಗಲ್ ತಂಡ ಹಂಗೇರಿ ವಿರುದ್ಧ ಮೊನ್ನೆ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿತು.
😂👍 Cristiano Ronaldo te recomienda beber aguapic.twitter.com/We0ozFpBqi
— Carrusel Deportivo (@carrusel) June 14, 2021
ಒಂದು ತಂಡವನ್ನು ಅವರದೇ ನೆಲದಲ್ಲಿ ಸೋಲಿಸುವುದೆಂದರೆ ಸುಲಭದ ಮಾತಲ್ಲ ಆದರೆ ನಾವು ಒಳ್ಳೆಯ ಪ್ಲಾನ್ ಮಾಡಿ ಒಳ್ಳೆಯ ಆಟವಾಡಿ ಗೆಲುವು ಸಾಧಿಸಿದೆವು ನಮಗೆ ಹೆಮ್ಮೆಯಿದೆ ಎಂದು ಖುಷಿ ಪಡುತ್ತಿದ್ದಾರೆ. ಇನ್ನು ಕೋಕ್ ವಿಷಯದಲ್ಲಿ ರೊನಾಲ್ಡೊ ಅವರ ನಿಲುವನ್ನು ಅಪಾರ ಅಭಿಮಾನಿಗಳನ್ನು ಹೊಂದಿರುವ ಇತರ ಕ್ರೀಡಾಪಟುಗಳು ಕೂಡ ಅನುಸರಿಸಬೇಕು.
-Team Infotrend