ಈ ಒಂದು ‘ಐಡಿಯಾ’ ಬಳಸಿ ಕೊನೆತನಕ ನಂಬರ್ ಪ್ಲೇಟ್ ಇಲ್ಲದೆ ಕಾರು ಓಡಿಸಿದ Apple ಮಾಲೀಕ ಸ್ಟೀವ್ ಜಾಬ್ಸ್!
ನೀವು ತಂತ್ರಜ್ಞಾನವನ್ನು ಬಳಸುವ ವ್ಯಕ್ತಿಯಾಗಿದ್ದರೆ ನಿಶ್ಚಿತವಾಗಿ ನಿಮಗೆ ಸ್ಟೀವ್ ಜಾಬ್ಸ್ ಯಾರು ಅಂತ ಗೊತ್ತಿದೆ. ತಂತ್ರಜ್ಞಾನದ ಜಗತ್ತಿನಲ್ಲಿ ಹೊಸ ಹೊಸ ಶೋಧಗಳ ಸಲುವಾಗಿ ಸ್ಟೀವ್ ಜಾಬ್ಸ್ ಅವರನ್ನು ಗುರುತಿಸಲಾಗುತ್ತದೆ. ಸದ್ಯಕ್ಕೆ ಸ್ಟೀವ್ ಜಾಬ್ಸ್ ಈ ಜಗತ್ತಿನಲ್ಲಿಲ್ಲದಿದ್ದರೂ ಅವರಿಗೆ ಸಂಬಂಧಪಟ್ಟ ಬೇರೆ ಬೇರೆ ವಿಷಯಗಳನ್ನು ತಿಳಿದುಕೊಳ್ಳಲು ಜನರಿಗೆ ತುಂಬಾ ಆಸಕ್ತಿ ಇರುತ್ತೆ.

ಸ್ಟೀವ್ ಜಾಬ್ಸ್ ಅವರ ಜೀವನದಲ್ಲಿಯ ಒಂದು ಸ್ವಾರಸ್ಯಕರ ಘಟನೆಯನ್ನು ಇಲ್ಲಿ ತಿಳಿಯುವಾ. ಸ್ಟೀವ್ ಅವರು ಜೀವನಪೂರ್ತಿ ಎಂದಿಗೂ ನಂಬರ್ ಪ್ಲೇಟ್ ಇಲ್ಲದ ಕಾರನ್ನೇ ಬಳಸಿದ್ದಾರೆ, ಅದು ಹೇಗೆ ಸಾಧ್ಯವಾಯಿತು ನೀವೇ ನೋಡಿ!
ಸ್ಟೀವ್ ಜಾಬ್ಸ್ ಅವರು ಕ್ಯಾಲಿಫೋರ್ನಿಯಾದಲ್ಲಿರುತ್ತಿದ್ದರು. ಅವರು Mercedes SL55 AMG ಕಾರನ್ನು ಉಪಯೋಗಿಸುತ್ತಿದ್ದರು. ಕಾರಿಗೆ ಸ್ಟೀವ್ ಅವರು ಯಾವತ್ತೂ ನಂಬರ್ ಪ್ಲೇಟ್ ಯೂಜ್ ಮಾಡಿಲ್ಲ, ಮತ್ತು ಈ ಕಾರಣಕ್ಕೆ ಅವರು ಎಂದೂ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿಲ್ಲ, ಹಾಗೂ ಅವರ ಮೇಲೆ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿಲ್ಲ, ಮತ್ತು ಅವರು ಕಾನೂನಿನ ಯಾವುದೇ ನಿಯಮವನ್ನೂ ಮುರಿದಿಲ್ಲ. ಸ್ಟೀವ್ ಅವರು ಕ್ಯಾಲಿಫೋರ್ನಿಯಾ ರಸ್ತೆ ಸಾರಿಗೆ ನಿಯಮಗಳಲ್ಲಿಯ ದೈರ್ಬಲ್ಯವನ್ನು ಪತ್ತೆ ಹಚ್ಚಿ ಅದರ ಉಪಯೋಗ ಜೀವನಪೂರ್ತಿ ತಮ್ಮ ಕಾರಿಗೆ ನಂಬರ್ ಇಲ್ಲದೆ ತಿರುಗಾಡಲು ಬಳಸಿದರು.
ಕ್ಯಾಲಿಫೋರ್ನಿಯಾ ರಸ್ತೆ ಸಾರಿಗೆ ನಿಯಮದ ಪ್ರಕಾರ ಹೊಸದಾದ ವಾಹನವನ್ನು ನಂಬರ್ ಪ್ಲೇಟ್ ಇಲ್ಲದೆ ಆರು ತಿಂಗಳುಗಳವರೆಗೆ ರಸ್ತೆಯ ಮೇಲೆ ಓಡಾಡಿಸಲು ಅನುಮತಿ ಇದೆ. ಇದೆ ದೌರ್ಬಲ್ಯವನ್ನು ಉಪಯೋಗಿಸಿ ಸ್ಟೀವ್ ಅವರು ಕಾರನ್ನು ಖರೀದಿಸಿದ ನಂತರ ಆರು ತಿಂಗಳುಗಳ ವರೆಗೆ ನಂಬರ್ ಪ್ಲೇಟ್ ಅಳವಡಿಸದೇ ಸುತ್ತಾಡುತ್ತಿದ್ದರು. ಆಮೇಲೆ ಸ್ಟೀವ್ ಅವರು ಆರು ತಿಂಗಳಾಗುವದರೊಳಗಾಗಿ ಬೇರೆ ಹೊಸ ಕಾರನ್ನೇ ಖರೀದಿಸುತ್ತಿದ್ದರು. ಇದೇ ಕಾರಣದಿಂದ ಅವರು ಎಂದೂ ಕಾರಿಗೇ ನಂಬರ್ ಪ್ಲೇಟ್ ತಾಗಿಸುವ ಗೋಜಿಗೆ ಹೋಗಿಲ್ಲ.
ಈಗ ಪ್ರಶ್ನೆ ಮೂಡುವದು ಸ್ಟೀವ್ ಹೀಗೇಕೆ ಮಾಡುತ್ತಿದ್ದರು. ಅದರ ಹಿಂದಿನ ಕಾರಣವೇನೆಂದರೆ, ಯಾರೂ ತಮ್ಮ ಕಾರನ್ನು ಫಾಲೋ ಮಾಡಬಾರದೆಂಬ ಉದ್ದೇಶ ಸ್ಟೀವ್ ಹೊಂದಿದ್ದರು. ನಂಬರ್ ಪ್ಲೇಟ್ ಇಲ್ಲದ ಕಾರು ಉಪಯೋಗಿಸುವದರಿಂದ ಕಾರು ಯಾರದು ಎಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ, ಮತ್ತು ಅವರಿಗೆ ಬೇರೆಯವರು ಫಾಲೋ ಮಾಡುವ ಪ್ರಶ್ನೆಯೇ ಬರುತ್ತಿರಲಿಲ್ಲ.