ನಮ್ಮ ಹೆಮ್ಮೆಯ ಭಾರತೀಯ ರೆಲ್ವೆ ಕೊರೋನ ಸೆನ್ಸಿಟಿವ್ ಕೋಚ್ ಅಳವಡಿಸಲಿದೆ! ಅಲ್ಲಿರುತ್ತದೆ ಗಾಳಿಯಲ್ಲಿಯೇ ವೈರಸ್ ಕೊಲ್ಲುವ ತಂತ್ರಜ್ಞಾನ!

ನಿಮಗೆಲ್ಲ ಗೊತ್ತೇ ಇರುವ ಹಾಗೆ ಇಡೀ ಜಗತ್ತೇ ಕರೋನ ಎಂಬ ಹೆಮ್ಮಾರಿಯಿಂದ ತತ್ತರಿಸಿ ಹೋಗಿದೆ. ಎಲ್ಲಿ ಕರೋನ ಎಂಬ ಹೆಮ್ಮಾರಿ ನಮ್ಮ ದೇಹ ಸೇರುತ್ತದೋ ಏನೋ, ನಮಗೆಲ್ಲಿ ಸಮಸ್ಯೆ ಆಗುತ್ತದೋ ಏನೋ ಎಂದು ಮನೆಯಲ್ಲಿಯೇ ಕುಳಿತುಕೊಂಡಿದ್ದು ಆಯಿತು. ಆದರೆ ಮನೆಯಲ್ಲಿಯೇ ಕುಳಿತರೆ ಜೀವನ ನಡೆಯಬೇಕಲ್ಲ, ಮನೆಯಿಂದ ಹೊರಗೆ ಹೋಗಲೇಬೇಕು, ದುಡಿಯಲೇಬೇಕು. ಹಾಗಂತ ಎಲ್ಲರೂ ಸ್ವಂತ ವಾಹನ ಸೌಲಭ್ಯದಿಂದ ಹೋಗಲು ಆಗಲ್ಲ, ಅದಕ್ಕಾಗಿ ಸಾರ್ವಜನಿಕ ಸಾರಿಗೆ ವಾಹನಗಳು ಕೂಡ ಓಡಾಡಲೇ ಬೇಕು.

ನಮ್ಮ ದೇಶದಲ್ಲಿ ರೈಲು ಪ್ರಯಾಣ ಬಹಳಷ್ಟು ಕಡಿಮೆ ದರದಲ್ಲಿ ಸಿಗುವುದರಿಂದ ಹೆಚ್ಚಿನ ಜನರು ಅದನ್ನೇ ಬಳಸುತ್ತಾರೆ. ಆದರೆ ಅಲ್ಲಿ ಹೆಚ್ಚು ಜನರು ಒಂದೆಡೆ ಸೇರುವದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ಟ್ರೇನ್ ನಲ್ಲಿ ಕೋಚ್ ಗಳನ್ನು ಕರೋನ ಸೆನ್ಸಿಟಿವ್ ಮಾಡಲಾಗಿದೆ, ಅದು ಹೇಗೆ ಮಾಡುತ್ತಾರೆ ಹಾಗೂ ಅದೆಷ್ಟು ಪರಿಣಾಮಕಾರಿ, ಅದೆಲ್ಲದರ ವಿವರ ಇಲ್ಲಿದೆ…

ಇದೊಂದು ವಿಶೇಷ ತಂತ್ರಜ್ಞಾನವಾಗಿದ್ದು, ಈ ಕೋಚ್ ನ ಒಳಗಡೆ ಬಂದ ತಕ್ಷಣ ಕರೋನ ವೈರಸ್ ನ ಶಕ್ತಿ ಕುಂದಿ ಹೋಗುತ್ತದೆ. ಈ ತಂತ್ರಜ್ಞಾನಕ್ಕೆ ಪ್ಲಾಸ್ಮಾ ಏರ್ ಥೆರಪಿ ಎಂದು ಕರೆಯುತ್ತಾರೆ. ಈ ವಿಷಯವನ್ನು ರೈಲ್ವೆಯ ಉನ್ನತ ಅಧಿಕಾರಿಗಳೇ ನೀಡಿದ್ದು, ಸಧ್ಯ ಇದರ ಮೊದಲನೇ ಕೋಚನ್ನು ಶಾನ್ ಎ ಭೋಪಾಲ್ ಎಕ್ಸ್ಪ್ರೆಸ್ ರೈಲಿನಲ್ಲಿ ಅಳವಡಿಸಲಾಗಿದೆ.

ಅಷ್ಟೇ ಅಲ್ಲದೇ ಜುಲೈ ತನಕ ಇಂತಹ ಟೆಕ್ನಾಲಜಿ ಹೊಂದಿರುವ ರೈಲುಗಳ ಶ್ರೇಣಿಯೇ ಸಿಗುತ್ತದಂತೆ. ವರದಿಗಳ ಪ್ರಕಾರ ಕರೋನ ವೈರಸ್ ನಿಂದ ರಕ್ಷಿಸಿಕೊಳ್ಳಲು ರೈಲ್ವೆ ಇಲಾಖೆ ತಾನಾಗಿಯೇ ಸಕ್ರಿಯಗೊಂಡಿದ್ದು ಇದರಡಿಯಲ್ಲಿ ಎಲ್ ಹೆಚ್ ಬಿ ಕೋಚ್ ಗಳನ್ನು ಕರೋನ ಸೆನ್ಸಿಟಿವ್ ಮಾಡುವ ಯೋಜನೆ ಹಾಕಿಕೊಂಡಿದೆ.

ಕೋಚ್ ಗಳಲ್ಲಿ ಪ್ಲಾಸ್ಮಾ ಏರ್ ಥೆರಪಿ ಬಳಕೆ ಮಾಡುವದರಿಂದ ಕೋವಿಡ್ -19 ಅಷ್ಟೇ ಅಲ್ಲದೇ ಯಾವುದೇ ವೈರಸ್ ಇದ್ದರೂ ಕೂಡ ಅದು ಕ್ಷಣಾರ್ಧದಲ್ಲಿ ಸತ್ತು ಹೋಗುತ್ತದಂತೆ..! ಇದೊಂದು ಅದ್ಭುತ ಹಾಗೂ ವಿಶ್ವದ ಬೇರೆಲ್ಲೂ ಬಳಸದ ಅತ್ಯುತ್ತಮ ಯೋಜನೆಯಾಗಿದೆ ಅನ್ನಬಹುದು.

ಹೇಗಿರುತ್ತದೆ ಆ ವಿಶೇಷ ಕೋಚ್?
ಈ ಕೋಚ್ ಗಳ ಗೇಟಿನ ಹ್ಯಾಂಡಲ್ ಗೆ ಕಾಪರ್ ಕೋಟಿಂಗ್ ಮಾಡಲಾಗಿರುತ್ತದೆ, ಇದು ಹ್ಯೂಮನ್ ಟಚ್ ಆಗುವುದನ್ನು ಆದಷ್ಟು ಕಡಿಮೆ ಮಾಡುತ್ತದೆ, ಕೋಚ್ ನ ಒಳಗಡೆ ಟೈಟಾನಿಯಂ ಡೈ ಆಕ್ಸೈಡ್ ಇರುತ್ತದೆ, ಇದರಲ್ಲಿ ಕರೋನ ವೈರಸ್ ಜೀವಂತವಾಗಿರುವುದಿಲ್ಲ. ಅಲ್ಲಿ ಬಳಸುವ ಟಾಯ್ಲೆಟ್ ಹಾಗೂ ಸಿಂಕಿನ ನಲ್ಲಿ, ಸೋಪ್ ಹಾಗೂ ಡಿಟರ್ಜೆಂಟ್ ಗಳನ್ನು ಟಚ್ ಲೆಸ್ ಮಾಡಲಾಗುತ್ತದೆ. ಇವುಗಳನ್ನು ಕೇವಲ ಏಸಿ ಬೋಗಿಗಳಿಗೆ ಮಾತ್ರವಲ್ಲದೇ ನಾನ್ ಏಸಿ ಭೋಗಿಗಳಿಗೂ ಕೂಡ ಅಳವಡಿಸಲಾಗುತ್ತಿದೆಯಂತೆ..!

ನಿಶಾತಪುರ ಕೋಚ್ ಫ್ಯಾಕ್ಟರಿಗೆ ಇದರ ಜವಾಬ್ದಾರಿ ಸಿಗುತ್ತದೆ :
ವರದಿಗಳ ಪ್ರಕಾರ ನಿಶಾತಪುರ ಕೋಚ್ ಫ್ಯಾಕ್ಟರಿಯಲ್ಲಿ ಪ್ರೊಡಕ್ಷನ್ ಯೂನಿಟ್ ಶುರುವಾಗೋದು ಇದೆ, ಆದಷ್ಟು ಬೇಗ ಈ ಕಾರ್ಯಕ್ಕೆ ರೈಲ್ವೆ ಇಲಾಖೆಯಿಂದ ಆದೇಶ ಬರುವದಿದೆ ಎಂದು ಹೇಳಲಾಗುತ್ತಿದೆ. ಎಲ್ ಎಚ್ ಬಿ ಕೋಚ್ ಗಳ ಮೆಂಟೇನನ್ಸ್ ಮಾಡುವ ಸಮಯದಲ್ಲಿಯೇ ಅವುಗಳನ್ನು ಕರೋನ ಸೆನ್ಸಿಟಿವ್ ಮಾಡಲಾಗುತ್ತದಂತೆ.

ಆದಷ್ಟು ಬೇಗನೆ ಈ ವ್ಯವಸ್ಥೆ ಆಗಲಿ, ಎಲ್ಲ ದೇಶಗಳ ರೈಲು ವ್ಯವಸ್ಥೆ ಇತ್ತ ತಿರುಗಿ ನೋಡುವಂತಾಗಲಿ, ರೈಲು ಪ್ರಯಾಣ ಸುರಕ್ಷಿತವಾಗಿರಲಿ ಎಂಬುದೇ ನಮ್ಮ ಆಶಯ.
-ಮಂಜುನಾಥ್