VIDEO : ಆ್ಯಂಬುಲೆನ್ಸ್ ಗಳಿಗೆ ಯಾವ ಯಾವ ದೇಶದಲ್ಲಿ ಜನ ಹೇಗೇಗೆ ದಾರಿ ಬಿಡ್ತಾರೆ ನೋಡಿ…

ವ್ಯಕ್ತಿಯೊಬ್ಬನ ಜೀವನದ ಮೌಲ್ಯ ಜಗತ್ತಿನ ಎಲ್ಲಾ ವಸ್ತುಗಳಿಗಿಂತ ಹೆಚ್ಚು ಎಂದೇ ಹೇಳಬಹುದು. ಜೀವ ಎನ್ನುವುದು ಎಷ್ಟು ಮೌಲ್ಯಯುತ ಎನ್ನುವುದಾದರೆ ಪ್ರಪಂಚದ ಅತಿ ಶ್ರೀಮಂತ ವ್ಯಕ್ತಿಯೂ ತನ್ನಲ್ಲಿರುವ ಹಣದಿಂದ ಜೀವ ಕಳೆದು ಕೊಂಡವನಿಗೆ ಮರು ಜೀವ ನೀಡುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಅವನಲ್ಲಿರುವ ಎಲ್ಲಾ ಹಣವೂ ಒಂದು ಜೀವವನ್ನು ವಾಪಸ್ಸು ಕರೆತರಲು ಸಾಧ್ಯವೇ ಇಲ್ಲ.

ಆದ್ದರಿಂದಲೇ ತುರ್ತು ಪರಿಸ್ಥಿತಿಯಲ್ಲಿ ಒಂದು ಜೀವವನ್ನು ಉಳಿಸುವ ಕಾರ್ಯ ಮಾಡಲು ಹೊರಡುವ ಆಂಬುಲೆನ್ಸ್ ಮತ್ತು ಅಗ್ನಿಶಾಮಕ ದಳದ ವಾಹನಗಳಿಗೆ ರಸ್ತೆಯಲ್ಲಿ ಯಾವುದೇ ಅಡಚಣೆಯಾಗದಂತೆ ನಿರಾತಂಕವಾಗಿ ಚಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಏಕೆಂದರೆ ಇವು ಕೇವಲ ವಾಹನಗಳು ಖಂಡಿತ ಅಲ್ಲ, ಇವು ಯಾವುದೋ ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುವ ಒಂದು ಅರ್ಥಪೂರ್ಣವಾದ ಪ್ರಯತ್ನವಾಗಿರುತ್ತದೆ.

ಅದೆಷ್ಟೋ ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಜನ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಅಂತಹ ಪ್ರಾಣವನ್ನು ಉಳಿಸುವ ಸಲುವಾಗಿ ರಸ್ತೆಯಲ್ಲಿ ಸಂಚರಿಸುವ ಆಂಬುಲೆನ್ಸ್ ತನ್ನ ಸೈರನ್ ಸದ್ದು ಮಾಡುತ್ತಾ ಬಂದಾಗ ರಸ್ತೆಯಲ್ಲಿ ವಾಹನದ ಮುಂದೆ ದೇಶದ ಪ್ರಧಾನಿಯ ವಾಹನವೇ ಚಲಿಸುತ್ತಿದ್ದರೂ ಕೂಡ ಆಂಬುಲೆನ್ಸ್ ಗೆ ದಾರಿ ಮಾಡಿಕೊಡಬೇಕಾದದ್ದು ಕರ್ತವ್ಯವಾಗಿದೆ.

ಕೆಲವು ದೇಶಗಳಲ್ಲಿ ಆಂಬುಲೆನ್ಸ್ ರಸ್ತೆಯಲ್ಲಿ ಸಂಚರಿಸುವಾಗ ಒಂದು ವೇಳೆ ಯಾರಾದರೂ ಅವುಗಳ ಸಂಚಾರಕ್ಕೆ ತಡೆಯನ್ನು ಉಂಟು ಮಾಡುವಂತೆ ವರ್ತಿಸಿದರೆ, ಆಂಬುಲೆನ್ಸ್ ಚಾಲಕನಿಗೆ ಅಂತಹವರ ವಾಹನವನ್ನು ಗುದ್ದಿಕೊಂಡು ಮುಂದೆ ಸಂಚರಿಸುವಂತಹ ಅಧಿಕಾರವನ್ನು ನೀಡಲಾಗಿದೆ.

ಅಂತಹ ಸಂದರ್ಭದಲ್ಲಿ ಆ ವಾಹನದಲ್ಲಿನ ವ್ಯಕ್ತಿ ಪ್ರಾಣ ಕಳೆದುಕೊಂಡರು ಸಹಾ ಆಂಬುಲೆನ್ಸ್ ನ ಚಾಲಕನ ಮೇಲೆ ಯಾವುದೇ ಆರೋಪ ಅಥವಾ ಆತನು ಮಾಡಿದ ಕೆಲಸವನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಆದರೆ ನಮ್ಮ ದೇಶದಲ್ಲಿ ಪರಿಸ್ಥಿತಿ ಹಾಗಿಲ್ಲ. ಹಾಗಾದರೆ ಬನ್ನಿ ವಿವಿಧ ದೇಶಗಳಲ್ಲಿ ಆ್ಯಂಬುಲೆನ್ಸ್ ಸಂಚಾರಕ್ಕೆ ಇರುವ ಸೌಲಭ್ಯ ಹಾಗೂ ಕಾನೂನಿನ ಬಗ್ಗೆ ಸ್ವಲ್ಪ ತಿಳಿಯೋಣ.

ಜಪಾನ್ : ಜಪಾನ್ ಜನರು ತಮ್ಮ ಸಭ್ಯತೆಗೆ ಇಡೀ ಜಗತ್ತಿನಲ್ಲೇ ಹೆಸರುವಾಸಿಯಾಗಿದೆ. ಈ ದೇಶದಲ್ಲಿ ಆಂಬುಲೆನ್ಸ್ ನ ಸದ್ದು ಕೇಳಿದ ಕೂಡಲೇ ಎಂತಹದೇ ರಸ್ತೆಯೇ ಆಗಿರಲಿ, ನೂರಾರು ವಾಹನಗಳೇ ಇರಲಿ ಎಲ್ಲರೂ ರಸ್ತೆಯ ಬದಿಗೆ ವಾಹನಗಳನ್ನು ಸರಿಸಿ, ಆಂಬುಲೆನ್ಸ್ ಗೆ ಮೊದಲು ಹೊರಡಲು ಅನುವು ಮಾಡಿಕೊಡುತ್ತಾರೆ.

ಆ್ಯಂಬುಲೆನ್ಸ್ ಮುಂದೆ ಹೋಗುವವರೆಗೂ ಯಾವುದೇ ಬೇರೆ ವಾಹನಗಳ ಚಕ್ರ ಕದಲುವುದಿಲ್ಲ. ಇಲ್ಲಿನ ಜನರು ಆಂಬುಲೆನ್ಸ್ ನಲ್ಲಿ ಇರುವ ವ್ಯಕ್ತಿಯ ಜೀವಕ್ಕಿಂತ ಇನ್ಯಾವುದೇ ಕೆಲಸ ಮುಖ್ಯವಲ್ಲ ಎಂದು ನಂಬುತ್ತಾರೆ. ಜಪಾನ್ ದೇಶದಲ್ಲಿ ನಿಯಮಗಳನ್ನು ಜನರೇ ಮಾಡಿಕೊಂಡು ಅದನ್ನು ಪಾಲಿಸುವ ಕಡೆ ಗಮನ ನೀಡುವಲ್ಲಿ ಸದಾ ಇತರ ದೇಶಗಳಿಗಿಂತ ಮುಂದೆ ಇದ್ದಾರೆ.

ಫ್ರಾನ್ಸ್ : ಫ್ರಾನ್ಸ್ ದೇಶದಲ್ಲಿ ಆ್ಯಂಬುಲೆನ್ಸ್ ಸಂಚರಿಸುವಾಗ ಅದರ ಮುಂದೆ ಬೈಕ್ ಸವಾರಿ ಮಾಡುವ ಪೊಲೀಸರು ಸಂಚರಿಸುತ್ತಾ ರಸ್ತೆಯನ್ನು ಖಾಲಿ ಮಾಡಿಸುತ್ತಾರೆ. ಆಂಬುಲೆನ್ಸ್ ನ ಮುಂದೆ ಸಾಗುವ ಮೂಲಕ ಆಂಬುಲೆನ್ಸ್ ನ ಸಂಚಾರಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸುತ್ತಾರೆ. ಏಕೆಂದರೆ ಕೆಲವರು ಅಂಬುಲೆನ್ಸ್ ಬರುತ್ತಿದ್ದರೂ ನಿರ್ಲಕ್ಷ್ಯ ಧೋರಣೆ ತೋರುವುದರಿಂದ, ಈ ರೀತಿ ಬೈಕ್ ಪೊಲೀಸರನ್ನು ಫ್ರಾನ್ಸ್‌ ನ ಸರ್ಕಾರ ನೇಮಕ ಮಾಡಿದ್ದು, ಅವರ ಈ ಕಾರ್ಯ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಕೆನಡಾ : ಐರೋಪ್ಯ ರಾಷ್ಟ್ರಗಳಲ್ಲಿ ಒಂದು ಅಭಿವೃದ್ಧಿ ರಾಷ್ಟ್ರವಾಗಿದೆ ಕೆನಡಾ. ಆದರೆ ಪ್ರಗತಿಶೀಲ ರಾಷ್ಟ್ರದ ಹೊರತಾಗಿಯೂ ಇಲ್ಲಿ ಆ್ಯಂಬುಲೆನ್ಸ್ ಸಂಚಾರದ ದುಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಂಬುಲೆನ್ಸ್ ನ ಸಂಚಾರಕ್ಕೆ ಈ ದೇಶದಲ್ಲಿ ಯಾವುದೇ ರೀತಿಯ ವಿಶೇಷವಾದ ಪ್ರಾಧಾನ್ಯತೆಯನ್ನು ನೀಡಲಾಗಿಲ್ಲ.

ಬಹಳಷ್ಟು ಸಂದರ್ಭಗಳಲ್ಲಿ ಇಲ್ಲಿ ಆಂಬುಲೆನ್ಸ್ ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ಜನರನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಕರೆದು ಕೊಂಡು ಹೋಗುವಲ್ಲಿ ವಿಫಲವಾಗುತ್ತದೆ. ಆ್ಯಂಬುಲೆನ್ಸ್ ಸಂಚಾರಕ್ಕೆ ಕುರಿತಾದ ಕಾನೂನುಗಳು ಇದೆಯಾದರೂ ಇಲ್ಲಿನ ಜನಕ್ಕೆ ಒಬ್ಬ ವ್ಯಕ್ತಿಯ ಪ್ರಾಣಕ್ಕಿಂತ ತಮ್ಮ ಕೆಲಸದ ಮುಖ್ಯ ಎನ್ನುವಂತಹ ಧೋರಣೆ ಎದ್ದು ಕಾಣುತ್ತದೆ.

ಚೀನಾ : ಚೀನಾ ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವ ದೇಶ. ಆದ್ದರಿಂದಲೇ ಇಲ್ಲಿನ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಅಧಿಕ. ಕೆಲವೊಮ್ಮೆ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತದೆ. ಆದರೆ ಚೀನಿಯರು ಆ್ಯಂಬುಲೆನ್ಸ್ ಸದ್ದು ಕೇಳಿದ ಕೂಡಲೇ ತಮ್ಮ ವಾಹನಗಳನ್ನು ರಸ್ತೆಯ ಬದಿಗೆ ಸರಿಸಿ, ಆ್ಯಂಬುಲೆನ್ಸ್ ಮುಂದೆ ಹೋಗಲು ಅವಕಾಶ ಮಾಡಿಕೊಡುತ್ತಾರೆ.

ಅಲ್ಲದೇ ಚೀನಾ ಸರ್ಕಾರ ಕಾನೂನೊಂದನ್ನು ಮಾಡಿದ್ದು ಯಾರು ಆ್ಯಂಬುಲೆನ್ಸ್ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಾರೆಯೋ, ಅವರನ್ನು ಹತ್ತು ತಿಂಗಳ ಕಾಲ ಜೈಲಿನಲ್ಲಿ ಇಡುವುದರ ಜೊತೆಗೆ ಎರಡು ಸಾವಿರ ರೂಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ.

ಜರ್ಮನಿ : ಒಂದು ಕಾಲದಲ್ಲಿ ಹಿ’ಟ್ಲ’ರನ ನಿರಂಕುಶ ಆಡಳಿತಕ್ಕೆ ಒಳಗಾಗಿ ಅಪಾರ ಸಂಖ್ಯೆಯ ಪ್ರಾಣ ನಷ್ಟವಾದಂತಹ ಜರ್ಮನಿ ದೇಶದಲ್ಲಿ ಇಂದು ಆ್ಯಂಬುಲೆನ್ಸ್ ಗೆ ವಿಶೇಷ ಸೌಲಭ್ಯವನ್ನು ನೀಡಲಾಗಿದೆ. ಈ ದೇಶದಲ್ಲಿ ಆ್ಯಂಬುಲೆನ್ಸ್ ನ ಸದ್ದು ಕೇಳಿದ ತಕ್ಷಣವೇ ರಸ್ತೆಯಲ್ಲಿರುವ ವಾಹನಗಳು ಪಕ್ಕಕ್ಕೆ ಸರಿದು, ಅದರ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತವೆ.

ಹೆಚ್ಚು ಟ್ರಾಫಿಕ್ ಇರುವ ಕಡೆಯಲ್ಲಿ ಕೂಡಾ ಜನರು ಮೊದಲ ಆದ್ಯತೆ ಆ್ಯಂಬುಲೆನ್ಸ್ ಸಂಚಾರಕ್ಕೆ ನೀಡುತ್ತಾರೆ.‌ ಇದರ ಹೊರತಾಗಿಯೂ ಸರ್ಕಾರ ಕಾನೂನನ್ನು ಜಾರಿ ಮಾಡಿದ್ದು ಆ್ಯಂಬುಲೆನ್ಸ್ ನ ಸಂಚಾರಕ್ಕೆ ತಡೆ ಉಂಟುಮಾಡಿದವರಿಗೆ ಜೈಲುಶಿಕ್ಷೆಯಾಗುತ್ತದೆ, 53 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ.

ಭಾರತ : ನಮ್ಮ ದೇಶ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಇಲ್ಲಿ ಆ್ಯಂಬುಲೆನ್ಸ್ ನ ಸಂಚಾರ, ಸೌಲಭ್ಯದ ಹೆಸರಿನಲ್ಲಿ ಅನೇಕ ಕಾನೂನುಗಳೇನೋ ಇದೆ. ಆದರೆ ಅದರ ಪಾಲನೆ ಮಾತ್ರ ಸಾಧ್ಯವಾಗಿಲ್ಲ. ಇಲ್ಲಿನ ಟ್ರಾಫಿಕ್ ನಲ್ಲಿ ಜನ ತಾವು ಮೊದಲು ಹೋಗಲು ಬಯಸುತ್ತಾರೆಯೇ ಹೊರತು, ಆಂಬುಲೆನ್ಸ್ ನಲ್ಲಿ ಜೀವದೊಂದಿಗೆ ಹೋರಾಟ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಚಿಂತಿಸುವುದಿಲ್ಲ.

ಅನೇಕ ಸಂದರ್ಭಗಳಲ್ಲಿ ಜನರು ಅ್ಯಂಬುಲೆನ್ಸ್ ಅನ್ನು ಓವರ್ ಟೇಕ್ ಮಾಡಿ ಆರಾಮವಾಗಿ ಮುಂದೆ ಸಾಗುತ್ತಾರೆ. ಮಂತ್ರಿ ಮಹೋದಯರ ಆಗಮನವಾದರೆ ಆ್ಯಂಬುಲೆನ್ಸ್ ಗಳನ್ನು ತಡೆಯಲಾಗುತ್ತದೆ. ಆದರೆ ಇವೆಲ್ಲವುಗಳ ನಡುವೆಯೂ ಕೆಲವು ಸಂದರ್ಭಗಳಲ್ಲಿ ಜನ ಆ್ಯಂಬುಲೆನ್ಸ್ ಗೆ ತಡೆ ರಹಿತವಾಗಿ ಹೋಗಲು ಅವಕಾಶ ಮಾಡಿಕೊಟ್ಟಿರುವ ನಿದರ್ಶನಗಳೂ ಇವೆ.

ರಷ್ಯಾ : ರಷ್ಯಾದಲ್ಲಿ ಜನರು ಕೆಟ್ಟ ವಾಹನ ಚಾಲನೆಗೆ ಹೆಸರುವಾಸಿ. ರಸ್ತೆ ಅಪಘಾತಗಳ ಸಂಖ್ಯೆ ಸಹಾ ಹೆಚ್ಚು. ಇದರ ಹೊರತಾಗಿಯೂ ಇಲ್ಲಿನ ಜನರು ಆ್ಯಂಬುಲೆನ್ಸ್ ‌ ನ ವಿಚಾರದಲ್ಲಿ ಬಹಳಷ್ಟು ಜಾಗೃತರಾಗಿದ್ದಾರೆ. ರಸ್ತೆಯಲ್ಲಿ ಆ್ಯಂಬುಲೆನ್ಸ್ ನ‌ ಸೈರನ್ ಕೇಳಿದ ಕೂಡಲೇ ವಾಹನಗಳನ್ನು ಪಕ್ಕಕ್ಕೆ ತೆಗೆದುಕೊಂಡು ಆಂಬುಲೆನ್ಸ್ ಸಂಚಾರ ಮಾಡಲು ಅವಕಾಶವನ್ನು ಮಾಡಿಕೊಡುತ್ತಾರೆ. ಈ ದೇಶದಲ್ಲಿ ಆ್ಯಂಬುಲೆನ್ಸ್ ಸಂಚಾರಕ್ಕೆ ತಡೆ ಉಂಟು ಮಾಡುವವರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

ಬ್ರಿಟನ್ : ಆ್ಯಂಬುಲೆನ್ಸ್ ಸಂಚಾರಕ್ಕೆ ತಡೆ ಉಂಟು ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳುವುದರಲ್ಲಿ ಬ್ರಿಟನ್ ಬಹಳ ಗಮನಸೆಳೆಯುತ್ತದೆ. ಇಲ್ಲಿ ಕಠಿಣವಾದ ಕಾನೂನುಗಳನ್ನು ಜಾರಿಗೊಳಿಸಲಾಗಿದ್ದು, ಆ್ಯಂಬುಲೆನ್ಸ್ ಸಂಚಾರಕ್ಕೆ ತಡೆಯೊಡ್ಡಿದ ವ್ಯಕ್ತಿಗೆ ಐದು ಲಕ್ಷ ರೂಪಾಯಿಗಳ ದಂಡವನ್ನು ವಿಧಿಸುವ ಜೊತೆಗೆ ಜೈಲು ಶಿಕ್ಷೆಯನ್ನು ಕೂಡಾ ವಿಧಿಸಲಾಗುತ್ತದೆ.

ಅಮೆರಿಕಾ : ಇನ್ನು ಅಮೆರಿಕದ ವಿಷಯಕ್ಕೆ ಬಂದರೆ ಇಲ್ಲಿ ಆ್ಯಂಬುಲೆನ್ಸ್ ಸಂಚಾರಕ್ಕೆ ತಡೆ ಒಡ್ಡಿದವರಿಗೆ ಹತ್ತು ದಿನಗಳ ಜೈಲು ಶಿಕ್ಷೆ ಮತ್ತು ಎರಡು ಸಾವಿರ ರೂಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ. ನಮ್ಮ ಭಾರತದಲ್ಲಿ ಮೂರು ತಿಂಗಳ ಶಿಕ್ಷೆ ಹಾಗೂ ಮೂರು ಸಾವಿರ ರೂಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ. ಇದು ವಿಶ್ವದ ಬೇರೆ ಬೇರೆ ರಾಷ್ಟ್ರ ಗಳಲ್ಲಿ ಆ್ಯಂಬುಲೆನ್ಸ್ ನ ಸಂಚಾರಕ್ಕೆ ಇರುವಂತಹ ನಿಯಮಗಳು, ಸೌಲಭ್ಯಗಳು ಹಾಗೂ ಅಲ್ಲಿನ ಜನರ ವಿಚಾರವಂತಿಕೆಯಾಗಿದೆ.
-Team Infotrend