VIDEO : ಹೊಸ ಐಟಿ ನಿಯಮ ಪಾಲಿಸದ ಟ್ವಿಟರ್ ಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡಿದ ಕೇಂದ್ರ ಸರ್ಕಾರ! ವಿಡಿಯೊ ನೋಡಿ…
ತನ್ನ ಹಠಮಾರಿ ಧೋರಣೆಯನ್ನು ಮುಂದುವರೆಸಿರುವ ಟ್ವಿಟರ್ ಗೆ ಈಗ ಕೇಂದ್ರ ಸರಕಾರ ಮುಟ್ಟಿ ನೋಡಿಕೊಳ್ಳುವಂಥ ಏ’ಟು ಕೊಟ್ಟಿದೆ. ಅದೂ ಕೂಡ ಒಂಥರ ಬಟ್ಟೆಯಲ್ಲಿ ಕಲ್ಲು ಕಟ್ಟಿ ಹೊಡೆದ ಹಾಗಿದೆ. ತುಂಬಾ ಜನ ಟ್ವಿಟರ್ ನ ಹಠಮಾರಿತನ ಹಾಗೂ ಕೇಂದ್ರ ಸರ್ಕಾರದ ಅಗ್ರೆಸಿವ್ನೆಸ್ ನೋಡಿ ಇನ್ನೇನು ಟ್ವಿಟರ್ ಬ್ಯಾ’ನ್ ಮಾಡ್ತಾರೆ ಅಂದುಕೊಂಡಿದ್ದರು. ಆದರೆ ಸರ್ಕಾರ ಮಾಡಿದ್ದೇ ಬೇರೆ. ಎಲ್ಲಿ ಮೂಗು ಹಿಡಿದರೆ ಎಲ್ಲಿ ಬಾಯಿ ತಗೆಯುತ್ತೆ ಎಂದು ಚೆನ್ನಾಗಿ ಅರೆತಿರುವ ಸರಕಾರ ಈಗ ಅದನ್ನೇ ಮಾಡಿದೆ.
ಭಾರತ ಸರ್ಕಾರ ಮಾಡಿದ್ದೇನೆಂದರೆ, ಅಂತರ್ಜಾಲ ಮಾಧ್ಯಮದ ಹೊಸ ನಿಯಮಗಳನ್ನು ಪಾಲಿಸದ ಕಾರಣ ಐಟಿ ಕಾಯ್ದೆಯಡಿ ಪಡೆದ ರಕ್ಷಣೆಯ ಹಕ್ಕನ್ನು ಸರ್ಕಾರ ಟ್ವಿಟರ್ ನಿಂದ ಹಿಂತೆಗೆದುಕೊಂಡಿದೆ! ಇದು ಮೇಲ್ನೋಟಕ್ಕೆ ಸಿಂಪಲ್ ಅನಿಸಿದರೂ ಟ್ವಿಟರ್ ಗೆ ಭರ್ಜರಿ ಏಟು ಬಿದ್ದಿದೆ. ಈಗದಕ್ಕೆ ನಮ್ಮ ಸರ್ಕಾರದ ದಾರಿಗೆ ಬರದೇ ಬೇರೆ ದಾರಿಯೇ ಇಲ್ಲ.

ಅಂದರೆ, ಟ್ವಿಟರ್ ನಲ್ಲಿ ಯಾರಾದರೂ ಆ’ಕ್ಷೇ’ಪಾರ್ಹ ಪೋಸ್ಟ್ ಹಾಕಿದರೆ, ಆಗ ಪೋಸ್ಟ್ ಹಾಕಿದವರ ಮೇಲಷ್ಟೇ ಅಲ್ಲ, ಟ್ವಿಟರ್ ವಿರುದ್ಧ ಕೂಡ ಕೇ’ಸ್ ದಾಖಲಾಗುತ್ತದೆ! ಇಷ್ಟು ದಿನ ಹಾಗಿರಲಿಲ್ಲ, ಏಕೆಂದರೆ ಐಟಿ ಆ್ಯಕ್ಟ್ ನಲ್ಲಿ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಆ ರಕ್ಷಣೆ ಇದೆ, ಈಗ ಆ ರಕ್ಷಣೆಯನ್ನು ಸರ್ಕಾರ ಟ್ವಿಟರ್ ಗೆ ಮಾತ್ರ ಹಿಂಪಡೆದಿದೆ!
ಈಗ ಯಾರೋ ಮಾಡಿದ ತಪ್ಪಿಗೆ ಸರ್ಕಾರವು ಟ್ವಿಟರ್ ವಿರುದ್ಧ ಕೂಡ ಕ್ರಮ ತೆಗೆದುಕೊಳ್ಳಬಹುದು. ಸರ್ಕಾರದ ಈ ಕ್ರಮದ ನಂತರ ಟ್ವಿಟ್ಟರ್ನ ವರ್ತನೆ ಈಗ ಮೃದುವಾಗಿದೆ. ಸರ್ಕಾರ ಹೊರಡಿಸಿರುವ ಹೊಸ ನಿಯಮಗಳನ್ನು ಒಪ್ಪಿಕೊಳ್ಳಲು ಸಿದ್ಧ ಎಂದು ಟ್ವಿಟರ್ ಹೇಳಿಕೆ ನೀಡಿದೆ.
ಹೊಸ ಐಟಿ ನಿಯಮಗಳನ್ನು ಪಾಲಿಸದ ಕಾರಣ ಟ್ವಿಟರ್ ಭಾರತದಲ್ಲಿ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಬುಧವಾರ ಹೇಳಿದ್ದಾರೆ. ಮೇ 25 ರಿಂದ ಜಾರಿಗೆ ಬಂದ ಹೊಸ ಐಟಿ ನಿಯಮಗಳನ್ನು ಟ್ವಿಟರ್ ಪಾಲಿಸಲಿಲ್ಲ ಎಂಬುದು ಸ್ಪಷ್ಟವಾಗಿದೆ.

ಹಾಗೆಯೇ ಹಲವು ಅವಕಾಶಗಳು ದೊರೆತರೂ ಅದು ಉದ್ದೇಶಪೂರ್ವಕವಾಗಿ ಪಾಲಿಸದ ಹಾದಿಯನ್ನು ಆರಿಸಿಕೊಂಡಿದೆ, ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಒಂದು ಕಡೆ ಟ್ವಿಟರ್ ತನ್ನ ಸತ್ಯ ಪರಿಶೀಲನಾ ವ್ಯವಸ್ಥೆಯ ಬಗ್ಗೆ ತೀವ್ರವಾಗಿ ತಲೆಕೆಡಿಸಿಕೊಂಡಿದೆ.
ಆದರೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಮೊನ್ನೆ ಹರಡಿದ ಸುಳ್ಳು ಪೋಸ್ಟ್ ಅನ್ನು ತಡೆಯುವಲ್ಲಿ ಕೂಡ ಅದು ವಿಫಲವಾಗಿದೆ, ತಪ್ಪು ಮಾಹಿತಿಯನ್ನು ತಡೆಯಲು ಯಾವುದೇ ಪ್ರಯತ್ನ ಮಾಡಿಲ್ಲ. ವೈರಲ್ ಆಗುವ ಸುಳ್ಳು ಸುದ್ದಿಗಳನ್ನು ತಡೆಯುವ ಇರಾದೆ ಕೂಡ ಟ್ವಿಟರ್ ಗೆ ಇದ್ದಂತಿಲ್ಲ.
ಭಾರತೀಯ ಕಂಪನಿಗಳು ಐಟಿ, ಫಾರ್ಮಾ ಅಥವಾ ಇತರ ಕ್ಷೇತ್ರಗಳಲ್ಲಿ ಇರಲಿ, ಅವರು ಯುಎಸ್ ಅಥವಾ ಇತರ ದೇಶಗಳಲ್ಲಿ ವ್ಯಾಪಾರ ಮಾಡಲು ಹೋದಾಗ ಅಲ್ಲಿನ ಸ್ಥಳೀಯ ಕಾನೂನುಗಳನ್ನು ಅನುಸರಿಸುತ್ತಾರೆ, ಹಾಗೆಯೇ ಇಲ್ಲಿಯೂ ಎಲ್ಲರೂ ಈ ನೆಲದ ಕಾನೂನು ಅನುಸರಿಸಬೇಕು ಎಂದು ಪ್ರಸಾದ್ ಹೇಳಿದರು.
ಟ್ವಿಟರ್ ವಕ್ತಾರರು ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ! ಅಂತೂ ಮೂಗು ಹಿಡಿದ ಮೇಲೆ ಬಾಯಿ ತಗೆದಿದೆ! ಆ ಬಗ್ಗೆ ವಿವರ ನೀಡುವ ವಿಡಿಯೊ ವಿವರ ಮೇಲಿದೆ ನೋಡಿ.
-Team Infotrend