VIDEO : ದೇಶ ಕಂಡ ಸರ್ವಶ್ರೇಷ್ಟ ಇಂಜನೀಯರ್ ವಿಶ್ವೇಶ್ವರಯ್ಯನವರು ಕಟ್ಟಿದ ಈ ಡ್ಯಾಮ್ ನ ಒಂದು ಕಲ್ಲು ತಗೆದರೆ ಡ್ಯಾಮ್ ಮಟಾಷ್!?
ಸೆಪ್ಟೆಂಬರ್ 15, 1860 ರಲ್ಲಿ ಜನಿಸಿದ ಸರ್ ಎಂ.ವಿಶ್ವೇಶ್ವರಯ್ಯನವರ ಹೆಸರು ಕೇಳದವರೇ ಇಲ್ಲ.ಬರೀ ಭಾರತ ಮಾತ್ರವಲ್ಲ, ಪ್ರಪಂಚದ ಅನೇಕ ದೇಶಗಳಲ್ಲಿ ಅವರು ಚಿರಪರಿಚಿತ. ಇವತ್ತಿಗೂ ಜಗತ್ತಿನ ಸರ್ವಶ್ರೇಷ್ಟ ಇಂಜನೀಯರ್ ಗಳ ಸಾಲಿನಲ್ಲಿ ಎಂ.ವಿಶ್ವೇಶ್ವರಯ್ಯನವರನ್ನು ಎಣಿಸಲಾಗುತ್ತದೆ. ಅವರ ಸಾಧನೆಯ ಬಗ್ಗೆ ಎಷ್ಟು ಲೇಖನ – ಕಿರುಚಿತ್ರಗಳಿವೆಯೋ ಹಾಗೆಯೇ ಅವರ ಬಗ್ಗೆ ಕಪೋಲಕಲ್ಪಿತ ಕಥೆಗಳು ಕೂಡ ಸಾಕಷ್ಟಿವೆ.
ದೇಶವೇ ತಿರುಗಿ ನೋಡುವಂತೆ ಕೆ.ಆರ್.ಎಸ್ ಡ್ಯಾಮ್ ಕಟ್ಟಿದ ಎಂ.ವಿಶ್ವೇಶ್ವರಯ್ಯ (ಇನ್ನೂ ಹಲವರ ಶ್ರಮ ಇದೆ) ನವರನ್ನು ಕರ್ನಾಟಕದ ಜನತೆ ಎಂದೂ ಮರೆಯಲು ಸಾಧ್ಯವಿಲ್ಲ. ಅವರ ಮುಂದಾಲೋಚನೆ, ನೀರಾವರಿ ಯೋಜನೆ ಇತ್ಯಾದಿಗಳು ನಾಡಿನ ಸಾವಿರಾರು ಕುಟುಂಬಗಳ ಬದುಕು ಹಸನಾಗಿಸಿವೆ.

ಅಂಥ ಪ್ರಚಂಡ ಇಂಜನೀಯರ್ ಬಗ್ಗೆ ಸುಳ್ಳು ಕಥೆಗಳು ಕೂಡ ಸಾಕಷ್ಟಿವೆ. ಒಮ್ಮೆ ಅಮೆರಿಕದ ಇಂಜನೀಯರ್ ಗಳ ತಂಡ ಬಂದು ಎಂ.ವಿಶ್ವೇಶ್ವರಯ್ಯನವರಲ್ಲಿ ತಮ್ಮ ದೇಶದಲ್ಲೂ ಒಂದು ಅದ್ಭುತ ಡ್ಯಾಂ ಕಟ್ಟಿಕೊಡಲು ವಿನಂತಿಸಿದರಂತೆ, ಅದಕ್ಕೆ ಒಪ್ಪಿದ ವಿಶ್ವೇಶ್ವರಯ್ಯನವರು, ಅದಕ್ಕಾಗಿ ಒಂದು ಕಂಡಿಷನ್ ಹಾಕುತ್ತಾರೆ…
ಆ ಕಂಡಿಶನ್ ಏನೆಂದರೆ, ಡ್ಯಾಂ ಮೇಲೆ ನಮ್ಮ ಭಾರತ ದೇಶದ ಹೆಸರು ಕೆತ್ತಬೇಕು ಅಂತ. ಆದರೆ ಅದಕ್ಕೊಪ್ಪದ ಅಮೆರಿಕದವರು ಎಲ್ಲಾದರು ಒಂದು ಕಡೆ ಕಲ್ಲ ಮೇಲೆ ಬರೆಯಿಸಲು ಹೇಳಿದರು. ಸರಿ ಎಂದ ಎಂ.ವಿಶ್ವೇಶ್ವರಯ್ಯನವರು ಕಟ್ಟಿಸಿದ ಆ ಡ್ಯಾಂ ನ ಒಂದು INDIA ಎಂದು ಬರೆಯಿಸಿದ್ದರು.
ಆದರೆ ಅಚ್ಚರಿಯ ಸಂಗತಿಯೆಂದರೆ, ಈ INDIA ಎಂದು ಬರೆಯಿಸಿದ ಕಲ್ಲುಗಳಲ್ಲಿ ಒಂದು ಕಲ್ಲನ್ನು ತಗೆದರೂ ಆ ಡ್ಯಾಂ ಪೂರ್ತಿ ಮಟಾಷ್ ಆಗುತ್ತಂತೆ!!! ಪೂರ್ತಿ ಡ್ಯಾಮೇ ಬಿದ್ದು ಹೋಗುತ್ತದಂತೆ, ಹೇಗಿದೆ ನಮ್ಮ ವಿಶ್ವೇಶ್ವರಯ್ಯನವರ ತಾಕತ್ತು!? ಇಂಥ ಹಾಗೂ ಇಂಥವೇ ಇನ್ನೂ ಹಲವು ಕಥೆಗಳನ್ನು ನೀವು ಓದಿರಬಹುದು.
ಇದೊಂದೇ ಅಲ್ಲ, ಎಂ.ವಿಶ್ವೇಶ್ವರಯ್ಯನವರ ಬಗ್ಗೆ ಇನ್ನೂ ಹಲವಾರು ಕಪೋಲಕಲ್ಪಿತ ಕಥೆಗಳು ಇವೆ, ಅದ್ಯಾವ ಕಾರಣಕ್ಕೆ ಇಂಥ ಕಥೆಗಳನ್ನು ಹಬ್ಬಿಸುತ್ತಾರೊ ದೇವರೇ ಬಲ್ಲ. ಅವರ ಆ ಡ್ಯಾಮ್ ಹಾಗೂ ಆ ಕಲ್ಲಿನ ಕಥೆ ಹೇಳುವ ವಿಡಿಯೊವೊಂದು ಮೇಲಿದೆ, KANNADA TECH FOR YOU ನವರ ಆ ವಿಡಿಯೊವನ್ನು ತಪ್ಪದೇ ನೋಡಿ, ಕಾಮೆಂಟ್ ಮಾಡಿ.
-Team Infotrend