ಅಪರೂಪದ ಸಾಧನೆ : ಒಂದೇ ಕುಟುಂಬದಲ್ಲಿ ಮೂರು ಜನ IAS – ಒಬ್ಬರು IPS ಆಫೀಸರ್! : ಒಬ್ಬರಾದ ಮೇಲೆ ಒಬ್ಬರು UPSC ರ್ಯಾಂಕ್ ಪಡೆದರು!

ಭಾರತದ ಅತ್ಯುನ್ನತ ಹುದ್ದೆಯಾದ ಐಎಎಸ್ ಅಧಿಕಾರಿಯಾಗುವುದು ಅಷ್ಟೇನೂ ಸುಲಭದ ಮಾತಲ್ಲ, ಅದಕ್ಕೆ ಕಠಿಣ ಪರಿಶ್ರಮ ಬೇಕಾಗುತ್ತದೆ. ನಿಮಗೆಲ್ಲ ತಿಳಿದಿರುವ ಹಾಗೆ ಜಿಲ್ಲೆಯಲ್ಲಿ, ತಾಲೂಕಿನಲ್ಲಿ ಅಥವಾ ಯಾವುದೋ ಊರಿನಲ್ಲಿ ಒಬ್ಬ ಐಎಎಸ್ ಪಾಸು ಮಾಡಿದ್ದನ್ನು ಸಾಮಾನ್ಯವಾಗಿ ನೀವು ನೋಡಿರುತ್ತೀರಾ ಆದರೆ ಇಲ್ಲೊಂದು ಕುಟುಂಬದಲ್ಲಿ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ನಾಲ್ಕು ಜನರು ಐಎಎಸ್ ಅಧಿಕಾರಿಗಳಿದ್ದಾರೆ!

ಅದು ಕೂಡ ಎಲ್ಲರೂ ಒಂದೇ ದಂಪತಿಯ ಮಕ್ಕಳು ಅಂದರೆ ಸಹೋದರ ಸಹೋದರಿಯರು..! ಅದರ ವಿವರ ಇಲ್ಲಿದೆ… ಉತ್ತರಪ್ರದೇಶದ ಒಂದು ಮಧ್ಯಮ ವರ್ಗದ ಕುಟುಂಬದ ಅನಿಲ್ ಮಿಶ್ರ ಎಂಬ ಒಬ್ಬರು ಗ್ರಾಮೀಣ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಕೇವಲ ಎರಡು ಬೆಡ್ರೂಮ್ ನ ಒಂದು ಮನೆಯಲ್ಲಿ ವಾಸಿಸುತ್ತಿದ್ದರು.

ಇವರಿಗೆ ಇಬ್ಬರು ಹೆಣ್ಣುಮಕ್ಕಳು ಇಬ್ಬರು ಗಂಡು ಮಕ್ಕಳು, ಅವರ ಹೆಸರು ಯೋಗೇಶ್, ಲೋಕೇಶ್, ಮಾಧವಿ ಹಾಗೂ ಕ್ಷಮಾ. ಈ ನಾಲ್ವರು ಒಬ್ಬರ ನಂತರ ಮತ್ತೊಬ್ಬರಂತೆ ಕೆಲವೇ ವರ್ಷಗಳಲ್ಲಿ ನಾಲ್ಕೂ ಜನರು ಐಎಎಸ್ ಪಾಸ್ ಮಾಡಿದ್ದಾರೆ..! ಇದು ಅಚ್ಚರಿಯಲ್ಲಿಯೇ ಅಚ್ಚರಿಯ ಘಟನೆಯಾಗಿದೆ.

ಮಕ್ಕಳ ಮೇಲೆ ಅತ್ಯಂತ ಪ್ರೀತಿ ಇಟ್ಟುಕೊಂಡಿದ್ದ ಅನಿಲ್ ಮಿಶ್ರ ಅವರು ಎಲ್ಲ ಮಕ್ಕಳಿಗೂ ಅತ್ಯಂತ ಕಾಳಜಿ ಮಾಡುತ್ತಿದ್ದರು, ಅಷ್ಟೇ ಅಲ್ಲದೇ ಅವರ ಓದಿಗೆ ಪ್ರೋತ್ಸಾಹಿಸುತ್ತಿದ್ದರು. ಅವರ ಹಿರಿಯ ಮಗ ಲೋಕೇಶ್ ಹೇಳುವ ಪ್ರಕಾರ ಅವರಿಗೆ ತಮ್ಮ ತಂದೆಯೇ ಸ್ಫೂರ್ತಿಯಂತೆ ಅವರು ಯಾವತ್ತೂ ಮಕ್ಕಳನ್ನು ಗದರಿಸಿಲ್ಲವಂತೆ.

ಓದಿನಲ್ಲೂ ಅಷ್ಟೇ ಅಲ್ಲದೇ ಇವರಿಗೆ ಓದಿನಲ್ಲೂ ಪೂರ್ತಿ ಸ್ವಾತಂತ್ರ್ಯ ಕೊಟ್ಟಿದ್ದರಂತೆ, ಅಷ್ಟು ಅಂಕ ಪಡೆಯಬೇಕು ಇಷ್ಟು ಅಂಕ ಪಡೆಯಬೇಕು ಎಂದೆಲ್ಲ ನಿಯಮಗಳನ್ನು ಮಾಡುತ್ತಿರಲಿಲ್ಲವಂತೆ, ತಮ್ಮ ಯಾವುದೇ ಅಭಿಪ್ರಾಯ ಅವರ ಮೇಲೆ ಹೇರುತ್ತಿರಲಿಲ್ಲವಂತೆ. ನನ್ನ ತಂದೆಯೇ ನಮ್ಮೆಲ್ಲರ ಪಾಲಿನ ಹೀರೋ ಎನ್ನುತ್ತಾರೆ ಲೋಕೇಶ್.

2013 ರಲ್ಲಿ ಮೊದಲ ಮಗ ಲೋಕೇಶ್ ಐಎಎಸ್ ಪಾಸ್ ಮಾಡಿದರು :
ನಾಲ್ವರಲ್ಲಿ ದೊಡ್ಡವರಾಗಿದ್ದ ಲೋಕೇಶ್ ಅವರು ಐಎಎಸ್ ಮಾಡಲೇಬೇಕೆಂದು ಹಠ ತೊಟ್ಟು ಓದಲು ಕುಳಿತರು. ಹಾಗೇನೇ 2013 ರಲ್ಲಿ ಇವರ ಈ ಪ್ರಯತ್ನಕ್ಕೆ ಫಲ ಸಿಕ್ಕೇ ಬಿಟ್ಟಿತು. ಇವರ ಈ ಸಾಧನೆ ಇನ್ನುಳಿದ ಇವರ ಸಹೋದರ ಸಹೋದರಿಯರಿಗೆ ಮಾದರಿ ಕೂಡ ಆಯಿತು. ಇವರು ಕೋಲ್ಕತ್ತಾದಲ್ಲಿರುವ ಫಿರಂಗಿ ಮತ್ತು ಗುಂಡು ತಯಾರಿಕ ಘಟಕದ ಆಡಳಿತಾತ್ಮಕ ಅಧಿಕಾರಿ ಕೂಡ ಆಗಿದ್ದರು.

ಇಡೀ ಕುಟುಂಬ

ಯೋಗೇಶ್ ಅವರ ಈ ಸಾಧನೆಗೆ ಅವರ ಸಹೋದರಿಯರು ಕಷ್ಟ ಪಡುವುದು ಕೂಡ ಒಂದು ಕಾರಣವಂತೆ, ಇಂಜಿನಿಯರಿಂಗ್ ಪಾಸ್ ಮಾಡಿದ ತಕ್ಷಣ ದೆಹಲಿಯಲ್ಲಿ ಇವರಿಗೆ 6 ಲಕ್ಷ ರೂಪಾಯಿ ವಾರ್ಷಿಕ ಸಂಬಳ ಇರುವ ಕೆಲಸ ಸಿಕ್ಕಿತ್ತಂತೆ. ಹಬ್ಬಕ್ಕಾಗಿ ಊರಿಗೆ ಬಂದಾಗ ಅವರ ತಂಗಿಯರು ಎಷ್ಟು ಕಷ್ಟ ಪಟ್ಟರು ಪರೀಕ್ಷೆ ಪಾಸಾಗದೆ ಇರುವುದನ್ನು ನೋಡಿ 2012 ರಲ್ಲಿ ಐಎಎಸ್ ಮಾಡಲೇಬೇಕು ಎಂಬ ದೃಢ ನಿರ್ಧಾರ ಕೈಗೊಂಡರಂತೆ.

ಇದರಿಂದಲಾದರೂ ನನ್ನ ತಂಗಿಯರು ಪರೀಕ್ಷೆ ಪಾಸು ಮಾಡಲಿ ಎಂದು ತೀರ್ಮಾನಿಸಿ 2013 ರಲ್ಲಿ ಇವರು ಪಾಸಾದ ಮಾರನೇ ವರ್ಷವೆ ಇವರ ಸಹೋದರಿ ಮಾಧವಿ ಕೂಡ 2014 ರಲ್ಲಿ ಐಎಎಸ್ ಪರೀಕ್ಷೆಯನ್ನು 62 ನೆ ರಾಂಕ್ ನೊಂದಿಗೆ ಪಾಸು ಮಾಡಿದರಂತೆ!

ಲೋಕೇಶ್ ಅವರ ಸ್ಟಡಿ ಪ್ಲಾನ್ ಹೇಗಿತ್ತು ಗೊತ್ತಾ..??
ಲೋಕೇಶ್ ಅವರು 2012 ರಲ್ಲಿ ಪರೀಕ್ಷೆ ತೆಗೆದುಕೊಳ್ಳಲು ನಿರ್ಧಾರಿಸಿದಾಗ ಅವರಿಗೆ ಐಎಎಸ್ ಪರೀಕ್ಷೆ ಬರೆಯುವ ಒಂದೇ ಒಂದು ಅವಕಾಶ ಉಳಿದಿತ್ತು, ಇದರಿಂದ ಮಾಡು ಇಲ್ಲವೆ ಎಂಬಂಥ ಪರಿಸ್ಥಿತಿಯಲ್ಲಿದ್ದ ಯೋಗೇಶ್ ಅವರು ಐಎಎಸ್ ಪರೀಕ್ಷೆಗೆ ಆಯ್ದುಕೊಂಡ ವಿಷಯದ ಪುಸ್ತಕವನ್ನು ಪೂರ್ತಿಯಾಗಿ ಓದುವುದರ ಜೊತೆಗೆ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಹೆಚ್ಚಾಗಿ ಅಭ್ಯಾಸ ಮಾಡಿದರಂತೆ.

ಇಷ್ಟೇ ಅಲ್ಲದೇ ಅವರು ಐಎಎಸ್ ಪರೀಕ್ಷೆಯನ್ನು ಕಠಿಣ ಪರೀಕ್ಷೆ ಎಂದು ಪರಿಗಣಿಸದೆ ಇದನ್ನು ಕೂಡ ತಾವು ಅಭ್ಯಸಿಸಿದ ಇಂಜಿನಿಯರಿಂಗ್ ವಿದ್ಯಾಭ್ಯಾಸವೇ ಎಂದುಕೊಂಡು ಓದಿ ಮೊದಲ ಯತ್ನದಲ್ಲೇ ಪಾಸು ಮಾಡಿದರು. ಕಿರಿಯ ಸಹೋದರ ಲೋಕೇಶ್ ಅವರು ಕೂಡ ಒಬ್ಬ ಇಂಜಿನಿಯರಿಂಗ್ ಪದವೀಧರನಾಗಿದ್ದು ಅದು ಕೂಡ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿಯಲ್ಲಿ ಓದು ಮುಗಿಸಿದ್ದಾರೆ.

ನಂತರ ಇವರು ಕೂಡ ಐಎಎಸ್ ಪಾಸು ಮಾಡಲೇಬೇಕೆಂದು ಹಠ ಹಿಡಿದು ಓದಲು ಆರಂಭಿಸಿದರು, ಆದರೆ 2014 ರಲ್ಲಿ ಪೂರ್ಣ ಸಫಲತೆ ಕಾಣಲಿಲ್ಲ, ನಂತರ ಅವರ ಸಹೋದರನ ರಣನೀತಿಯನ್ನೇ ಅನುಸರಿಸಿ ಕೊನೆಗೂ 2015 ರಲ್ಲಿ ಸೈಕಾಲಜಿಯನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡು ಐಎಎಸ್ ಪಾಸು ಮಾಡಿ, ಮಿಶ್ರಾ ಕುಟುಂಬದ ಮೂರನೇ ಐಎಎಸ್ ಅಧಿಕಾರಿಯಾದರು.

ಕೊನೆಯ ಮಗಳು ಕ್ಷಮಾ ಕೂಡ 2015 ರಲ್ಲಿ UPSC ಯ CSE ಪರೀಕ್ಷೆಯಲ್ಲಿ 172 ನೆ ರಾಂಕ್ ಪಡೆದುಕೊಂಡು ಪಾಸು ಮಾಡಿದರು, ಆದರೆ ಇಷ್ಟಕ್ಕೆ ಸುಮ್ಮನಾಗದ ಕ್ಷಮಾ ಅವರು 2016 ರಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆದು ಪಾಸು ಮಾಡಿ ಸಧ್ಯ ಐಪಿಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೊಡಗು ಎಸ್ಪಿ ಕ್ಷಮಾ ಶರ್ಮಾ

ಮೂರು ಬಾರಿ ಪರೀಕ್ಷೆ ಬರೆದರು ಪಾಸಾಗದೆ ಇದ್ದಾಗ ಇವರಿಗೋಸ್ಕರವೇ ಇವರ ಹಿರಿಯ ಅಣ್ಣ ತಮಗಿದ್ದ ಅಷ್ಟು ಸಂಬಳದ ಕೆಲಸ ಬಿಟ್ಟು ಐಎಎಸ್ ಪಾಸು ಮಾಡಲು ಕುಳಿತಾಗ ಕ್ಷಮಾ ಅವರಿಗೆ ಛಲ ಇನ್ನೂ ಹೆಚ್ಚಾಗಿತ್ತು. ಇವರ ಪದವಿ ಮುಗಿದ ಕೂಡಲೇ ಇವರಿಗೆ ಮದುವೆಯಾಗಿ ಬಿಟ್ಟಿತ್ತು, ಆದರೂ ಇವರು ಓದು ನಿಲ್ಲಿಸಲಿಲ್ಲ.

ಇವರ ಪತಿ ಕೂಡ ಇವರಿಗೆ ಸಾಕಷ್ಟು ಸಹಾಯ ಮಾಡಿದರು, ಹೀಗಾಗಿ ಐಪಿಎಸ್ ಪಾಸು ಮಾಡಿ ತಮ್ಮ ಬಾಲ್ಯದ ಕನಸನ್ನು ಈಡೇರಿಸಿಕೊಂಡರು. ಸದ್ಯ ಕರ್ನಾಟಕ ಕೆಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ ಈ ಕ್ಷಮಾ ಅವರು. ಒಂದು ಇಂಟರ್ವ್ಯೂ ನಲ್ಲಿ ಈ ನಾಲ್ವರು ಹೆಮ್ಮೆಯಿಂದ ಹೇಳಿಕೊಂಡ ವಿಷಯವೆಂದರೆ ಈ ಎಲ್ಲ ಸಾಧನೆಗೂ ಇವರಿಗೆ ತಮ್ಮ ತಂದೆ ತಾಯಿ ಹಾಗೂ ತಾವು ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತಿದ್ದ ಪರಿ ಇವೆಲ್ಲವೂ ಕಾರಣವಂತೆ.