ಈ ಮೂವತ್ತು ಜಿಲ್ಲೆಗಳಲ್ಲಿ ಲಾಕ್ ಡೌನ್ 4 ರಲ್ಲಿ ಯಾವುದೇ ತರಹದ ಶಿಥಿಲತೆ ಇಲ್ಲ! ಯಾವವು ಒಮ್ಮೆ ನೋಡಿ.
ನವದೆಹಲಿ: ಕೊರೊನಾ ವೈರಸ್ ಸಂಕ್ರಮಣದ (Coronavirus) ಕಾರಣ ದೇಶದಲ್ಲಿ ಜಾರಿಯಾದ 3 ನೇ ಹಂತದ ಲಾಕ್ ಡೌನ್ ನಿನ್ನೆಗೆ ಮುಗಿದು 4 ನೇ ಹಂತದ ಲಾಕ್ ಡೌನ್ ಪ್ರಾರಂಭವಾಯಿತು. ಈ ನಾಲ್ಕನೇ ಹಂತದ ಲಾಕ್ ಡೌನ್ ದಲ್ಲಿ ಏನೆನೆಲ್ಲಾ ನಿಯಮಗಳು ಶಿಥಿಲ ಅಥವಾ ಬಿಗುವಿನ ವಾತಾವರಣವಿದೆ ಎನ್ನುವದು ತಿಳಿದುಕೊಳ್ಳುವದು ಅತ್ಯವಶ್ಯ. ಈ ನಾಲ್ಕನೇ ಹಂತದ ಲಾಕ್ ಡೌನ್ ಮೊದಲಿನ ಮೂರು ರೀತಿಯ ಲಾಕ್ ಡೌನ್ ಗಿಂತ ಭಿನ್ನವಾಗಿದೆ.
ಇದರಲ್ಲಿ ಕೆಲವೊಂದು ಜಿಲ್ಲೆಗಳ ಹೆಸರುಗಳು ಬಂದಿವೆ. ಈ ಜಿಲ್ಲೆಗಳಲ್ಲಿ ಕೊರೊನಾ ಸಂಕ್ರಮಣದ ಕೇಸುಗಳು ತುಂಬಾ ಹೆಚ್ಚಿಗಿವೆ. ಬರೀ ಈ ಜಿಲ್ಲೆಗಳಲ್ಲಿ ಲಾಕ್ ಡೌನ್ 4 ರಲ್ಲಿ ಯಾವುದೇ ರೀತಿಯ ಶಿಥಿಲತೆ ಕೊಡಲಾಗುವದಿಲ್ಲವೆಂದು ಹೇಳಲಾಗಿದೆ.

ದೇಶದಲ್ಲಿರುವ ಕೊರೊನಾದ ಒಟ್ಟು ರೋಗಿಗಳಲ್ಲಿ 80 ಪ್ರತಿಶತ ರೋಗಿಗಳು ಬರೀ ಈ ಮೂವತ್ತು ಜಿಲ್ಲೆಗಳಲ್ಲಿವೆ.
ದೇಶದ ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಎಲ್ಲಕ್ಕೂ ಹೆಚ್ಚು ಭಯದ ವಾತಾವರಣ ಮೂಡಿಸಿದೆ. ಆರ್ಥಿಕ ರಾಜಧಾನಿ ಮುಂಬಯಿ ಮತ್ತು IT ಸಿಟಿ ಪುಣೆಯಲ್ಲಿ ಕೊರೊನ ತನ್ನ ಜಾಲವನ್ನು ಬಲವಾಗಿ ಹೆಣೆದಿದೆ.
ಇವುಗಳ ಜೊತೆಗೆ ಬೇರೆ ಜಿಲ್ಲೆಗಳಾದ ಚೆನ್ನೈ, ಅಹಮದಾಬಾದ್, ಠಾಣೆ, ದೆಹಲಿ, ಇಂದೂರ್, ಕೊಲ್ಕತ್ತಾ, ಜಯಪುರ್, ನಾಶಿಕ್, ಜೋಧಪುರ್, ಆಗ್ರಾ, ತಿರುವಲ್ಲುವರ್, ಔರಂಗಾಬಾದ್, ಕಡ್ಡಾಲೋರ್, ಹೈದರಾಬಾದ್, ಸೂರತ್, ಚೆಂಗಲಪಟ್ಟು, ಅರಿಯಾಲೂರ್, ಹಾವಡಾ, ಕುರ್ನುಲ್, ಭೋಪಾಲ್, ಅಮೃತಸರ್, ವಿಲ್ಲುಪುರಂ, ವಡೋದರಾ, ಉದಯಪುರ್, ಪಾಲಘರ್, ಬರಹಮಪುರ್, ಸೊಲ್ಲಾಪುರ, ಮತ್ತು ಮೇರಠ ಗಳಲ್ಲಿ ಅತೀ ಹೆಚ್ಚು ಕೊರೊನಾ ಬಾಧಿತರಿದ್ದಾರೆ.