ರಿಕ್ವೆಸ್ಟ್ ಕಳಿಸಿದಕ್ಕೆ ಡಿ ಬಾಸ್ ಬೆಲ್ಟ್ ತಗೊಂಡು ಹೊಡೆದ್ರು! – ರಕ್ಷಕ್, ಬುಲೆಟ್ ಪ್ರಕಾಶ್ ಮಗ
ಡಿ.ಬಾಸ್ ಖ್ಯಾತಿಯ ನಟ – ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಆಪ್ತ ಗೆಳೆಯರ ಪಟ್ಟಿಯಲ್ಲಿ ಬುಲೆಟ್ ಪ್ರಕಾಶ್ ಹೆಸರು ಕೂಡ ಒಂದು. ತೆರೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಇಬ್ಬರೂ ಖಾಸಾ ಸ್ನೇಹಿತರು. ಡಿ ಬಾಸ್ ಬಳಗದ ಖಾಯಂ ಸದಸ್ಯರಲ್ಲಿ ಬುಲೆಟ್ ಪ್ರಕಾಶ್ ಪ್ರಮುಖರು. ಹೀಗಿರುವಾಗ ಬುಲೆಟ್ ಮಗನನ್ನು ಕೂಡ ದರ್ಶನ್ ಸ್ವಂತ ಮಗನಂತೆ ಕಾಣುತ್ತಿದ್ದರು.
ಬುಲೆಟ್ ಪ್ರಕಾಶ್ ಮಗ ರಕ್ಷಕ್ ಬಗ್ಗೆ ದರ್ಶನ್ ಗೆ ಪ್ರೀತಿ ಮಾತ್ರವಲ್ಲ, ಇನ್ನಿಲ್ಲದ ಕಾಳಜಿ ಕೂಡ ಇತ್ತು. ಹೀಗಿರುವಾಗ ಇನ್ನೂ ಚಿಕ್ಕ ವಯಸ್ಸಿನಲ್ಲೇ ರಕ್ಷಕ್ ಫೇಸ್ಬುಕ್ ನಲ್ಲಿ ಖಾತೆ ಓಪನ್ ಮಾಡಿ ಖುದ್ದು ದರ್ಶನ್ ರವರಿಗೇ ರಿಕ್ವೆಸ್ಟ್ ಕಳಿಸಿದ್ದ! ಅವರೇನು ಫೇಸ್ಬುಕ್ ನೋಡಲ್ಲ ಅಂತ ರಕ್ಷಕ್ ಅಂದುಕೊಂಡಿದ್ದ. ಆದರೆ ಆಗಿದ್ದೇ ಬೇರೆ.

ಮರುದಿನ ದರ್ಶನ್ ಮನೆಗೆ ಹೋದಾಗ ರಕ್ಷಕ್ ಗೆ ಶಾಕ್ ಕಾದಿತ್ತು. ಹೋದ ಕೂಡಲೇ ಫೇಸ್ಬುಕ್ ಖಾತೆ ತೆರೆದಿದ್ದು ಹಾಗೂ ರಿಕ್ವೆಸ್ಟ್ ಕಳಿಸಿದ್ದರ ಬಗ್ಗೆ ವಿಚಾರಿಸಿದ ದರ್ಶನ್ ಬೆಲ್ಟ್ ತಗೆದುಕೊಂಡು ರಕ್ಷಕ್ ಗೆ ಭಾರಿಸಿದ್ದರು! ಆ ವಯಸ್ಸಿನಲ್ಲಿ ಎಫ್ಬಿ ಬೇಡ ಎಂಬುದು ದರ್ಶನ್ ನಿಲುವಾಗಿತ್ತು.
ಕಲಿಯುವ ವಯಸ್ಸಿನಲ್ಲಿ ಸಾಮಾಜಿಕ ಜಾಲತಾಣಗಳಿಗೆ ಎಂಟ್ರಿಯಾದರೆ ಅರ್ದ ಅಭ್ಯಾಸ ಹಾಳಾದ ಹಾಗೆಯೇ ಲೆಕ್ಕ. ಅದರಿಂದ ಆಗುವ ಅನಾಹುತಗಳ ಲೆಕ್ಕ ಒತ್ತಟ್ಟಿಗಿರಲಿ, ಆ ಜಾಲತಾಣ ಬಳಸಲಿಕ್ಕಾಗಿಯೇ ದಿನದ ಬಹುತೇಕ ಸಮಯವನ್ನು ಕಳೆದುಬಿಡುತ್ತಾರೆ. ದಿನಕ್ಕೆ ಎರಡೇ ತಾಸು ಬಳಸುವುದಾದರೂ, ಅದೇ ಸಮಯದಲ್ಲಿ ಓದು – ಬರಹ ಮಾಡಿದರೆ ಭವಿಷ್ಯಕ್ಕೆ ನೆರವಾಗಬಹುದು.

ಈ ಥರ ಯೋಚಿಸಿದ್ದ ದರ್ಶನ್ ಬುಲೆಟ್ ಪ್ರಕಾಶ್ ಮಗನಿಗೆ ಕಾಳಜೀಪೂರ್ವಕವಾಗಿ ಭಾರಿಸಿದ್ದರು. ಅದನ್ನು ಇಂದಿಗೂ ನೆನಪಿಸಿಕೊಳ್ಳುವ ರಕ್ಷಕ್ ಆ ಕುರಿತು ದಿಗ್ವಿಜಯ್ ಚಾನೆಲ್ ಜೊತೆ ಮಾತಾಡಿದಾಗ ಹೇಳಿದ ವಿಡಿಯೊ ಇಲ್ಲಿದೆ ನೋಡಿ. ಅದರಲ್ಲಿ ಆತ ದರ್ಶನ್ ಕಡೆಯಿಂದ ಏಟು ತಿಂದಿದ್ದು ನನ್ನ ಜೀವನದ ಸ್ಮರಣೀಯ ಘಟನೆ ಎಂದಿದ್ದಾನೆ. ಆ ಏಟು ಖುಷಿ ಕೊಟ್ಟಿದೆಯೇ ಹೊರತು ಬೇಜಾರು ಮಾಡಿಲ್ಲ.
ದರ್ಶನ್ ಮತ್ತು ಬುಲೆಟ್ ನಡುವಿನ ಸ್ನೇಹ ಒಮ್ಮೆ ಬಿರುಕು ಬಿಟ್ಟಿದೆ ಎಂಬ ಸುದ್ದಿ ಹರಡಿತ್ತು. ದರ್ಶನ್ ಸಹೋದರ ದಿನಕರ್ ಜೊತೆಗಿನ ಕಿರಿಕ್ ನಿಂದ ಅವರ ಸ್ನೇಹ ಹಳಸಿದೆ ಅಂದುಕೊಳ್ಳಲಾಗಿತ್ತು. ಆದರೆ ಹಾಗೇನೂ ಆಗದೇ ಡಿ ಬಾಸ್ ಮತ್ತು ಬುಲೆಟ್ ಪ್ರಕಾಶ್ ಎಂದಿಗೂ ಆತ್ಮಿಯರಾಗೇ ಇದ್ದರು. ಹೋಗಿ ಬನ್ನಿ ನಿಂದ ಸುರುವಾಗಿ ಹೋಗೊ ಬಾರೊ ವರೆಗೆ ಅವರ ಸ್ನೇಹ ಬೆಳೆಯಿತು, ಹಾಗೇ ಇತ್ತು.

ನಿಮಗೆ ಅಚ್ಚರಿಯಾಗಬಹುದು, ದರ್ಶನ್ ನಟಿಸಿದ 50 ಚಿತ್ರಗಳಲ್ಲಿ ಬುಲೆಟ್ ಪ್ರಕಾಶ್ 41 ಚಿತ್ರಗಳಲ್ಲಿ ಅವರ ಜೊತೆ ನಟಿಸಿದ್ದಾರೆ! ಅವರ ಜುಗಲ್ ಬಂದಿ ಜನಕ್ಕೂ ಕೂಡ ಅಪಾರವಾಗಿ ಹಿಡಿಸಿತ್ತು. ಇನ್ನು ಕಿಡ್ನಿ ವೈಫಲ್ಯದಿಂದ ಬುಲೆಟ್ ನಿದನರಾದ ಮೇಲೆ ದರ್ಶನ್ ಮನೆಯ ಹಿರಿಯನಂತೆ ಎಲ್ಲ ಜವಾಬ್ದಾರಿ ವಹಿಸಿಕೊಂಡರು. ಪ್ರಕಾಶ್ ರವರ ಮಗಳ ಮದುವೆ ಜವಾಬ್ಧಾರಿಯನ್ನೂ ತಾವೇ ತಗೆದುಕೊಂಡರು.
ಇನ್ನು ಅವರ ಮಗ ರಕ್ಷಕ್ ವಿಚಾರದಲ್ಲೂ ದರ್ಶನ್ ಅವರ ಮನೆಯವರಂತೆಯೇ ಕಾಳಜಿ ತಗೆದುಕೊಳ್ಳುತ್ತಾರೆ. ಬೆಲ್ಟ್ ನಿಂದ ಹೊಡೆದಿದ್ದು ಆ ಹುಡುಗ ಬುದ್ದಿ ಕಲಿಯಲೆಂದು. ಸಾಮಾಜಿಕ ಜಾಲತಾಣ ಮಾಡುವ ಅನಾಹುತ ದರ್ಶನ್ ಗೆ ಗೊತ್ತು. ಎಲ್ಲ ಪಾಲಕರು ದರ್ಶನ್ ರೀತಿ ಯೋಚಿಸಿ ಸಾಧ್ಯವಾದಷ್ಟು ತಮ್ಮ ಮಕ್ಕಳನ್ನು ಓದುವ ವಯಸ್ಸಿನಲ್ಲಿ ಸಾಮಾಜಿಕ ಜಾಲತಾಣದಿಂದ ದೂರ ಇಡಬೇಕು.
ಸೋಶಿಯಲ್ ಮೀಡಿಯಾದಲ್ಲಿ ಇದ್ದ ಮಾತ್ರಕ್ಕೆ ಹಾಳಾಗ್ತಾರೆ ಅಂತಲ್ಲ, ಸಾಕಷ್ಟು ಸಮಯ ಹಾಳಾಗುತ್ತದೆ ಎಂಬುದು ತಮ್ಮ ಗಮನದಲ್ಲಿರಲಿ. ಓದುವ ಹುಡುಗನಿಗೆ, ಅದರಲ್ಲೂ ಈ ಕಾಂಪಿಟೇಶನ್ ಯುಗದಲ್ಲಿ ಒಂದೊಂದು ಗಂಟೆಯೂ ಕೂಡ ಅತಿ ಮುಖ್ಯ ಎಂಬುದನ್ನು ನೆನಪಿಡಿ. ವಿಡಿಯೊ ಮೇಲಿದೆ ನೋಡಿ, ಕಾಮೆಂಟ್ ಮಾಡಿ.