ಜೋಕರ್ ವೈರಸ್ ಮತ್ತೊಮ್ಮೆ ವಾಪಸ್ ಬಂದಿದ್ದು ಈ 8 ಆ್ಯಪ್ ಗಳನ್ನು ಈಗಲೇ ಡಿಲೀಟ್ ಮಾಡಿ : ಕ್ವಿಕ್ ಹೀಲ್ ಎಚ್ಚರಿಕೆ
ಗೂಗಲ್ ಪ್ಲೇ ಸ್ಟೋರ್ ನಲ್ಲಿ ಜೋಕರ್ ಮಾಲ್ವೇರ್ ನ ಎಂಟ್ರಿ 2019 ರ ಮೇ ನಲ್ಲಿ ಆಗಿದ್ದು, 2020 ರ ಜುಲೈ ನಲ್ಲಿಯೂ ಕೂಡ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬಂದು 11 ಆ್ಯಪ್ ಗಳನ್ನು ಹಾಳು ಮಾಡಿತ್ತು, ಈಗ ಮತ್ತೊಮ್ಮೆ ಜೋಕರ್ ವಾಪಸ್ ಬಂದಿದ್ದು ಈ ಬಾರಿ ಅದು ಕಳೆದ ವರ್ಷ ಬ್ಯಾನ್ ಆದಂತಹ ಕ್ಯಾಮ್ ಸ್ಕ್ಯಾನರ್ ನಂತಹ ಆ್ಯಪ್ ಗಳನ್ನು ಟಾರ್ಗೆಟ್ ಮಾಡುತ್ತಿದೆ..!
ಕಳೆದ ವರ್ಷ ಜುಲೈ ನಲ್ಲಿ ಸೆಕ್ಯೂರಿಟಿ ಏಜೆನ್ಸಿ ಪಾಯಿಂಟ್ ಜೋಕರ್ ಡ್ರಾಪರ್ ಮತ್ತು ಪ್ರಿಮಿಯಮ್ ಡೈಲರ್ ಗಳ ಇರುವಿಕೆಯನ್ನು ಪತ್ತೆಹಚ್ಚಿತ್ತು, ಆದರೆ ಈ ಬಾರಿ ಕ್ವಿಕ್ ಹೀಲ್ ಸೆಕ್ಯೂರಿಟಿ ಲ್ಯಾಬ್ ಇವುಗಳ ಬಗ್ಗೆ ಎಚ್ಚರಿಕೆ ಕೊಟ್ಟಿದೆ. ಕ್ವಿಕ್ ಹೀಲ್ ಪ್ರಕಾರ ಜೋಕರ್ ಮಾಲ್ವೇರ್ ನಂತಹ ಮೊಬೈಲ್ ಗೆ ಹಾನಿ ಮಾಡುವ ಒಟ್ಟು 8 ಆ್ಯಪ್ ಗಳು ಪ್ಲೇ ಸ್ಟೋರ್ ನಲ್ಲಿವೆಯಂತೆ, ಬನ್ನಿ ಅವುಗಳು ಯಾವುವು ಎಂದು ನೋಡೋಣ…

Auxiliary Message :
ಇದೊಂದು ಮೆಸೇಜಿಂಗ್ ಆ್ಯಪ್ ಆಗಿದ್ದು ಇದರಲ್ಲಿ ಕೆಲವು ಸ್ಪೆಷಲ್ ಇಮೊಜಿಗಳು ಇರುತ್ತವೆ, ಗೂಗಲ್ ಪ್ಲೇ ಸ್ಟೋರ್ ಈ ಆ್ಯಪ್ ನ್ನು ತೆಗೆದು ಹಾಕಿದೆ, ಆದರೂ ಕೂಡ ಸರ್ಚ್ ಮಾಡಿದಾಗ ಇದರ APK ಫೈಲ್ ಸಿಗುತ್ತಿದ್ದು ಇದು ಅಕಸ್ಮಾತ್ ನಿಮ್ಮ ಫೋನಿನಲ್ಲಿದ್ದರೆ ಇದನ್ನು ಮೊದಲು ಡಿಲೀಟ್ ಮಾಡಿ.
Fast Magic SMS :
ಕಳೆದ ಏಪ್ರಿಲ್ ನಲ್ಲಿ ಅಪ್ಡೇಟ್ ಆದಂತಹ ಈ ಮೆಸೇಜಿಂಗ್ ಆ್ಯಪ್ ಇನ್ನೂ ಕೂಡ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು, ಇದು ಸಾಧಾರಣ ಮೆಸೇಜಿಂಗ್ ಆಪ್ ನಿಂದ ಸ್ವಲ್ಪ ಮಟ್ಟಿಗೆ ಭಿನ್ನವಾಗಿದೆ. ಇದು 30mb ಸೈಜ್ ನ ಆ್ಯಪ್ ಆಗಿದ್ದು, ಇದನ್ನು ಬಿಸಿನೆಸ್ ಮೆಸೇಜಿಂಗ್ ಗಾಗಿ ಡಿಸೈನ್ ಮಾಡಲಾಗಿದೆ, ಆದರೆ ಕ್ವಿಕ್ ಹೀಲ್ ಇದನ್ನು ಕೂಡ ಅಪಾಯಕಾರಿ ಎಂದು ಹೇಳುತ್ತಿದೆ.
Free Cam Scanner :
ಕಳೆದ ವರ್ಷ ಭಾರತ ಸರ್ಕಾರ ಭದ್ರತೆಯ ದೃಷ್ಟಿಯಿಂದ ಚೀನಾ ದೇಶದ ಕೆಲವು ಆ್ಯಪ್ ಗಳನ್ನು ಬ್ಯಾನ್ ಮಾಡೀತು, ಅವುಗಳಲ್ಲಿ ಕ್ಯಾಮ್ ಸ್ಕ್ಯಾನರ್ ಕೂಡ ಒಂದು. ಇದೊಂದು ಬಹುಪಯೋಗಿ ಆ್ಯಪ್ ಆಗಿತ್ತು, ಆದರೆ ಇದರ ಮೂಲಕ ಭದ್ರತೆಗೆ ಸಮಸ್ಯೆ ಉಂಟಾಗುತ್ತಿತ್ತು, ಹೀಗಾಗಿ ಇದನ್ನು ಬ್ಯಾನ್ ಮಾಡಿ ಇದಕ್ಕೆ ಪರ್ಯಾಯವಾಗಿ ಫ್ರಿ ಕ್ಯಾಮ್ ಸ್ಕ್ಯಾನರ್ ಬಿಡುಗಡೆ ಮಾಡಲಾಯಿತು. ಆದರೆ ಅದರಲ್ಲಿ ಜೋಕರ್ ಮಾಲ್ವೇರ್ ಇರುವ ಕಾರಣ ಈ ಆ್ಯಪ್ ನಿಮ್ಮ ಫೋನ್ ನಲ್ಲಿ ಇದ್ದರೆ ಮೊದಲು ಡಿಲೀಟ್ ಮಾಡಿ.

Super Message :
ಈ ಆ್ಯಪ್ ನಲ್ಲಿ ನಿಮಗೆ ಪ್ರೆಡಿಕ್ಟಿವ್ ಇಂಟೆಲಿಜೇನ್ಸ್ ನ ಸಪೋರ್ಟ್ ಸಿಗುತ್ತದೆ, ಇದಲ್ಲದೆ ಈ ಆ್ಯಪ್ ನಲ್ಲಿ ಸಾಧಾರಣ ಮೆಸೇಜ್ ನಿಂದ ಹಿಡಿದು ಇ-ಮೇಲ್ ವರೆಗೂ ವ್ಯವಸ್ಥೆ ಸಿಗುತ್ತದೆ. ಆದರೆ ಈ ಆ್ಯಪ್ ಭದ್ರತೆಯ ದೃಷ್ಟಿಯಿಂದ ನಿಮಗೆ ಒಳ್ಳೆಯದಲ್ಲ, ಹೀಗಾಗಿ ಡಿಲೀಟ್ ಮಾಡುವುದು ಒಳ್ಳೆಯದು.
Element Scanner :
ಇದೊಂದು ಉಪಯುಕ್ತ ಆ್ಯಪ್ ಆಗಿದ್ದು ಯಾವುದಾದರೂ ಪ್ರೆಸೆಂಟೇಷನ್, ಪಿಡಿಎಫ್ ಅಥವಾ ಪಿಪಿಟಿಯಲ್ಲಿನ ಟೆಕ್ಸ್ಟ್ ಕಾಪಿ ಮಾಡಲು ವಿಶೇಷವಾಗಿ ಡಿಸೈನ್ ಮಾಡಲಾದ ಆ್ಯಪ್ ಆಗಿದೆ. ಆದರೆ, ಇದರ ಮೂಲಕವಾಗಿಯು ಸಹ ಜೋಕರ್ ಮಾಲ್ವೇರ್ ನಿಮ್ಮ ಫೋನನ್ನು ತಲುಪಬಹುದಾಗಿದ್ದು ಇದೂ ಕೂಡ ಒಳ್ಳೆಯದಲ್ಲ.
Go messages :
ಈ ಆ್ಯಪ್ ನ ಕೆಲವು ಫೀಚರ್ಸ್ ವಾಟ್ಸಪ್ಪ್ ನಂತೆಯೇ ಇವೆ, ಹೆಸರಿಗೆ ಇದು ಮೆಸೇಜಿಂಗ್ ಆ್ಯಪ್, ಆದರೆ ಇದರಲ್ಲಿ ನೀವು ಮಲ್ಟಿ ಮೀಡಿಯಾ ಮೆಸೇಜ್ ಕೂಡ ಕಳುಹಿಸಬಹುದಾಗಿದೆ. ಅಷ್ಟೇ ಅಲ್ಲದೇ, ಇದರಲ್ಲಿ Gif ಗಳ ಸಪೋರ್ಟ್ ಕೂಡ ಇದೆ, ಆದರೆ ಇದು ಕೂಡ ಸೇಫ್ ಅಲ್ಲ ಎನ್ನುತ್ತಿದೆ ಕ್ವಿಕ್ ಹೀಲ್.

Travel Wall paper :
ಇದೊಂದು ವಾಲ್ ಪೇಪರ್ ಡೌನ್ಲೋಡ್ ಮಾಡುವ ಆ್ಯಪ್ ಆಗಿದ್ದು, ಇದನ್ನು ನೀವು ಮೊಬೈಲ್ ಅಷ್ಟೇ ಅಲ್ಲದೇ ಟ್ಯಾಬ್ ನಲ್ಲಿಯೂ ಕೂಡ ಹೆಚ್.ಡಿ ವಾಲ್ ಪೇಪರ್ ಡೌನ್ಲೋಡ್ ಮಾಡಿ ಫೇಸ್ಬುಕ್ ನಂತಹ ಸೋಶಿಯಲ್ ಮೀಡಿಯಾಗಳಲ್ಲೂ ಕೂಡ ಶೇರ್ ಮಾಡಬಹುದಾಗಿದೆ. ಆದರೆ ಈ ಆ್ಯಪ್ ಕೂಡ ಸೇಫ್ ಅಲ್ಲ.
Super SMS :
ಈ ಆ್ಯಪ್ ಕೇವಲ ಮೆಸೇಜ್ ಕಳುಹಿಸಲು ಹಾಗೂ ಸ್ವೀಕರಿಸಲು ಅಷ್ಟೇ ಅಲ್ಲದೇ ಯಾವುದೇ ಮೂಲದ ಮೆಸೇಜ್ ಗಳನ್ನು ಬ್ಯಾಕ್ ಆ್ಯಪ್ ಮಾಡಿಕೊಳ್ಳಲೆಂದೇ ಡಿಸೈನ್ ಮಾಡಲಾದ ಆ್ಯಪ್ ಆಗಿದ್ದು, ಇದರ ಉಪಯೋಗ ಇಷ್ಟಿದ್ದು ಕೂಡ ಇದರಲ್ಲಿಯೂ ಜೋಕರ್ ಮಾಲ್ವೇರ್ ಇದೆ ಎನ್ನುತ್ತದೆ ಕ್ವಿಕ್ ಹೀಲ್.
ಹೀಗಾಗಿ ಈ ಎಲ್ಲ ಆ್ಯಪ್ ಗಳನ್ನು ಡೌನ್ಲೋಡ್ ಮಾಡುವುದು ಒಳ್ಳೆಯದಲ್ಲ, ಅಕಸ್ಮಾತ್ ನಿಮ್ಮ ಮೊಬೈಲ್ ನಲ್ಲಿದ್ದರೂ ಕೂಡ ಇಂದೇ ಅವುಗಳನ್ನು ಡಿಲೀಟ್ ಮಾಡಿ.