ಚಾಯನಾ ಬಿಟ್ಟು ಭಾರತಕ್ಕೆ ಬರುತ್ತಿದೆ ಜರ್ಮನ್ ಫುಟ್ ವೆಯರ್, 10 ಸಾವಿರಕ್ಕಿಂತಲೂ ಹೆಚ್ಚು ಜನರ ಕೈಗೆ ಸಿಗುವದು ಕೆಲಸ.

ಜರ್ಮನಿಯ ಹೆಸರಾಂತ ಕಂಪನಿ ವಾನ್ ವೇಲ್ಕ್ಸ್(Von Wellx) ಚಾಯನಾದಲ್ಲಿರುವ ತನ್ನ ಮ್ಯಾನುಫ್ಯಾಕ್ಚರಿಂಗ್ ಪ್ಲಾಂಟ್ UP ಯ ಆಗ್ರಾದಲ್ಲಿ ಶಿಫ್ಟ್ ಮಾಡಲಿದೆ. ಈ ಪ್ಲಾಂಟ್ ನಲ್ಲಿ ಪ್ರತಿವರ್ಷ 30 ಲಕ್ಷ ಜೋಡಿ ಬೂಟುಗಳ ಮ್ಯಾನುಫ್ಯಾಕ್ಚರಿಂಗ್ ಮಾಡಲಿದೆ. ಮೊದಲ ಹಂತದಲ್ಲಿ ಇಲ್ಲಿ 10 ಸಾವಿರ ಜನರಿಗೆ ಕೆಲಸ ಸಿಗಲಿದೆ.

80 ಕ್ಕೂ ಹೆಚ್ಚು ದೇಶಗಳಲ್ಲಿ ಬೂಟುಗಳನ್ನು ಸಪ್ಲಾಯ್ ಮಾಡುವ ಈ ವಾನ ವೇಲ್ಕ್ಸ್ ಕಂಪನಿ ಚಾಯನಾದಿಂದ ತನ್ನ ಪ್ಲಾಂಟ್ ಆಗ್ರಾ ಕ್ಕೆ ಶಿಫ್ಟ್ ಮಾಡಲಿದೆ.

ಆಗ್ರಾದಲ್ಲಿ ಪ್ರಸ್ತಾಪಿಸಲಿರುವ ಈ ಯೂನಿಟ್ ಪ್ರತಿವರ್ಷ 30 ಲಕ್ಷ ಜೊತೆ ಬೂಟುಗಳನ್ನು ತಯಾರಿಸುತ್ತದೆ, ಮೊದಲ ಹಂತದಲ್ಲಿ 110 ಕೋಟಿ ರೂಪಾಯಿಗಳ ಬಂಡವಾಳ ಹೂಡಲಿದೆ, ಮತ್ತು 10 ಸಾವಿರ ಜನರ ಕೈಗೆ ಕೆಲಸ ಸಿಗಲಿದೆ.

ಜರ್ಮನಿಯ ಈ ಕಂಪನಿ ಚಾಯನಾ ಬಿಟ್ಟು UP ಯಲ್ಲಿ ಹೂಡಿಕೆ ಮಾಡುತ್ತಿರುವ ಹಿಂದಿನ ದೊಡ್ಡ ಉದ್ದೇಶ ಇಲ್ಲಿ ಕಡಿಮೆ ಸಂಬಳ ಮತ್ತು ಜಾಣ್ಮೆಯುಳ್ಳ ನುರಿತ ಲೇಬರ್ ಗಳಿದ್ದಾರೆ. ಈ ಜರ್ಮನ್ ಕಂಪನಿ ಲೈಟ್ರಿಕ್ ಇಂಡಸ್ಟ್ರೀಜ್ ಜೊತೆಗೂಡಿ ಕೆಲಸ ಮಾಡಲಿದೆ. ಕಂಪನಿ ಮುಂದಿನ ಎರಡು ವರ್ಷಗಳಲ್ಲಿ ಪರಿಪೂರ್ಣವಾದ ಹೂಡಿಕೆ ಮಾಡಲಿದೆ.

ಎರಡನೇಯ ಹಂತದಲ್ಲಿ ಏನ್ಸಿಲರಿ ಯೂನಿಟ್ ಯೋಜನೆ ಅನುಸಾರ ಮೊದಲ ಹಂತದಲ್ಲಿ ಜರ್ಮನ್ ಕಂಪನಿ ಆಗ್ರಾದಲ್ಲಿ ಪ್ಲಾಂಟ್ ಶುರುಮಾಡಲಿದೆ. ಎರಡನೇಯ ಹಂತದಲ್ಲಿ ಎನ್ಸಿಲರಿ ಯೂನಿಟ್ ತಯಾರಿಸುವ ಕೆಲಸ ಮಾಡಲಾಗುವದು. ಇದು ಕಂಪನಿಗೆ ಕಚ್ಚಾ ಮಾಲನ್ನು ಸಪ್ಲಾಯ್ ಮಾಡುವದು. ಎನ್ಸಿಲರಿ ಯೂನಿಟ್ ನಲ್ಲಿ ಫುಟ್ ವೆಯರ್ ಕಂಪನಿಗೆ ಬೇಕಾದ ಸೋಲ್, ಸ್ಪೆಷಲ್ ಫ್ಯಾಬ್ರಿಕ್ ಮತ್ತು ಕೆಮಿಕಲ್ ತಯಾರಿಸಲಾಗುವದು. ಸದ್ಯದ ಸಮಯದಲ್ಲಿ ಇದು ಭಾರತದಲ್ಲಿ ಲಭ್ಯವಿಲ್ಲ.

UP ಯಲ್ಲಿ ಈ ಪ್ಲಾಂಟ್ ನಿರ್ಮಾಣ ಮಾಡುವ ಇನ್ನೊಂದು ಕಾರಣ UP ಸರಕಾರ ಈ ಹೂಡಿಕೆಗೆ ಕೊಟ್ಟ ಸಬ್ಸಿಡಿಯೂ ಒಂದು ಕಾರಣವಾಗಿದೆ. ಜೊತೆಗೆ ಆಗ್ರಾ ಬೂಟು ತಯಾರಿಕೆಯ ದೊಡ್ಡ ಕೇಂದ್ರವಾಗಿದೆ. ಇದೇ ಕಾರಣದಿಂದ ಕಂಪನಿ ತಮ್ಮ ಯೂನಿಟ್ ಸಲುವಾಗಿ ಆಗ್ರಾವನ್ನು ಆರಿಸಿದೆ.