VIDEO : ಆ ವಿಮಾನದಲ್ಲಿದ್ದ 121 ಜನ ವಿಮಾನ ಕ್ರ್ಯಾಶ್ ಆಗೋದಕ್ಕೆ ಮುಂಚೆನೇ ಸಾವನ್ನಪ್ಪಿದ್ದರು! ಅವತ್ತು ನಿಜಕ್ಕೂ ಏನಾಯ್ತು ಗೊತ್ತಾ?
16 ವರ್ಷಗಳ ಹಿಂದೆ ಗ್ರೀಸ್ ನಲ್ಲಿ ಒಂದು ಘಟನೆ ನಡೆದಿತ್ತು, ಬೋಯಿಂಗ್ ವಿಮಾನವು ಅಲ್ಲಿನ ಪರ್ವತ ಪ್ರದೇಶದಲ್ಲಿ ಅ’ಪ’ಘಾ’ತಕ್ಕೀಡಾಗಿದ್ದು, ಅದರಲ್ಲಿದ್ದ 121 ಜನರು ಸಾವನ್ನಪ್ಪಿದ್ದರು. ಒಂದು ವರ್ಷ ತನಿಖೆ ನಡೆಸಿದ ಅಧಿಕಾರಿಗಳು ಕ್ಯಾಬಿನ್ ಒತ್ತಡವನ್ನು ನಿಯಂತ್ರಿಸುವಲ್ಲಿ ವಿಫಲವಾದದ್ದು ಅಪಘಾತಕ್ಕೆ ಪ್ರಮುಖ ಕಾರಣ ಎಂಬ ತೀರ್ಮಾನಕ್ಕೆ ಬಂದರು. ವಿಚಿತ್ರವೆಂದರೆ, ಆ ವಿಮಾನದಲ್ಲಿದ್ದ 121 ಜನ ವಿಮಾನ ಕ್ರ್ಯಾಶ್ ಆಗುವುದಕ್ಕೂ ಮೊದಲೇ ಮೃ’ತಪಟ್ಟಿದ್ದರು.
ವಾಸ್ತವವಾಗಿ ಹೆಲಿಯೊಸ್ ಏರ್ವೇಸ್ ವಿಮಾನ ಸಂಖ್ಯೆ 522 ಆಗಸ್ಟ್ 14, 2005 ರಂದು ಸೈಪ್ರಸ್ ನ ಲಾರ್ನಕಾದಿಂದ ಗ್ರೀಸ್ ನ ಅಥೆನ್ಸ್ ಗೆ ಹೊರಟಿತು, ಆದರೆ ವಿಮಾನವು ಮಧ್ಯದಲ್ಲಿಯೇ ಅ’ಪ’ಘಾ’ತಕ್ಕೀಡಾಯಿತು. ಅ’ಪ’ಘಾ’ತದಲ್ಲಿ ಸಿಬ್ಬಂದಿ ಸೇರಿದಂತೆ ಒಟ್ಟು 121 ಪ್ರಯಾಣಿಕರು ಸಾ’ವನ್ನಪ್ಪಿದರು. ಸೈಪ್ರಸ್‌ನ 103 ಪ್ರಯಾಣಿಕರು ಮತ್ತು 4 ಸಿಬ್ಬಂದಿ, ಜರ್ಮನಿಯ ಪೈಲಟ್, ಗ್ರೀಸ್ ನ 12 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಸದಸ್ಯರು ಇವರಲ್ಲಿ ಸೇರಿದ್ದಾರೆ.

ವಿಮಾನ ಗ್ರೀಸ್ ಗೆ ಹೊರಡುವ ಮೊದಲು ಲಂಡನ್ ಗೆ ತೆರಳಿ ಆಗಸ್ಟ್ 14 ರ ಬೆಳಿಗ್ಗೆ ಸೈಪ್ರಸ್ ತಲುಪಿತ್ತು. ಈ ಸಮಯದಲ್ಲಿ ಸಿಬ್ಬಂದಿಯೊಬ್ಬರು ವಿಮಾನದ ಬಲಭಾಗದ ಬಾಗಿಲು ಜ್ಯಾಮ್ ಆಗುತ್ತಿದೆ, ಶಬ್ದ ಬರುತ್ತಿದೆ ಎಂದು ದೂರು ನೀಡಿದ್ದರು. ಅವರು ಬಾಗಿಲನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಕೋರಿದರು, ಅದರ ನಂತರ ಗ್ರೌಂಡ್ ಎಂಜಿನಿಯರ್ ಕ್ಯಾಬಿನ್ ಪ್ರೆಶರ್ ಚೆಕ್ ಮಾಡಿದರು.
ಪರೀಕ್ಷೆಯ ನಂತರ, ವಿಮಾನದ ಪ್ರೆಶರ್ ಸಿಸ್ಟಂ ಅನ್ನು ಅಟೊ ಮೋಡ್ ಗೆ ಇಡುವ ಬದಲು ಮ್ಯಾನುವಲ್ ಗೇ ಬಿಟ್ಟು ಬಿಡುತ್ತಾರೆ. ಟೆಸ್ಟ್ ಮುಗಿದ ನಂತರ ವಿಮಾನವನ್ನು ‘ಆಟೋ’ ಮೋಡ್‌ಗೆ ಮರುಹೊಂದಿಸಲು ಎಂಜಿನಿಯರ್‌ಗಳು ಮರೆತಿದ್ದರು. ಇದನ್ನು ಚೆಕ್ ಮಾಡದೇ ವಿಮಾನ ಹಾರಲು ಅನುಮತಿ ನೀಡಲಾಯಿತು.
ವಿಮಾನವು ಹೊರಡುವ ಮೊದಲು ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ವಿಮಾನದ ಸಿಬ್ಬಂದಿ ಈ ಅಟೊ ಮೋಡ್ ಬಗ್ಗೆ ನಿರ್ಲಕ್ಷಿಸಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಈ ಒತ್ತಡದ ವ್ಯವಸ್ಥೆಯ ತಪ್ಪು ಸೆಟ್ಟಿಂಗ್ ಅನ್ನು ಯಾವುದೇ ಸಿಬ್ಬಂದಿ ಸದಸ್ಯರು ಗಮನಿಸಲಿಲ್ಲ. ಕೊನೆಗೆ ಪೈಲಟ್ ಕೂಡ ನೋಡಲಿಲ್ಲ. ಅ’ನಾ’ಹುತಕ್ಕೆ ಅದೇ ಕಾರಣವಾಯಿತು.
ಇದರ ನಂತರ ವಿಮಾನವು ಹೊರಟು 10 ಸಾವಿರ ಅಡಿ ದಾಟಿದ ನಂತರ, ಕ್ಯಾಬಿನ್ ಒಳಗೆ ಸಮಸ್ಯೆ ಸುರುವಾದ ಬಗ್ಗೆ ಸೂಚನೆ ಸಿಗತೊಡಗಿದವು. ವಿಮಾನವು 12,000 ಅಡಿ ಎತ್ತರವನ್ನು ತಲುಪಿದಾಗ ಪೈಲಟ್ ಗಳು ಈ ಪ್ರೆಶರ್ ಕಂಟ್ರೋಲ್ ಮಾಡುವ ಸಿಸ್ಟಂ ಅಟೊ ಮೋಡ್ ಗೆ ಇಲ್ಲದಿರುವ ಎ’ಚ್ಚ’ರಿಕೆಗಳನ್ನು ಪಡೆಯಲಾರಂಭಿಸಿದರು.
ಆದರೆ ಅವರಿಗೆ ಆ ಅಲಾರಾಂ ಅಥವಾ ವಾ’ರ್ನಿಂ’ಗ್ ನ ಅರ್ಥ ಏನೆಂಬುದೇ ಗೊತ್ತಾಗಲಿಲ್ಲ. ಕಂಟ್ರೋಲ್ ರೂಮ್ ನಿಂದ ಸಿಕ್ಕ ಸೂಚನೆಗಳನ್ನೂ ಅರ್ಥ ಮಾಡಿಕೊಳ್ಳಲಿಲ್ಲ. ಅವರೇನೋ ಕೇಳಿದರೆ ಇವರೇನೋ ಹೇಳಿದರು. ಪರಿಣಾಮ ಎಲ್ಲರೂ ಸಾ’ವನ್ನಪ್ಪಿದರು. ಈ ಬಗ್ಗೆ ಅಚ್ಚುಕಟ್ಟಾಗಿ ವಿವರಿಸುವ ಎರಡು ವಿಡಿಯೊ ಮೇಲಿವೆ, ಭಾಗ-1 ಮುಗಿದ ಮೇಲೆ ಭಾಗ-2 ನೋಡಿ.