ಸಾವಿನ ಬಾಯಿಂದ ಹೊರ ಬಂದ ಅದೃಷ್ಟವಂತ : ತಿಮಿಂಗಲದ ಬಾಯಿ ಸೇರಿದ ವ್ಯಕ್ತಿ 40 ಸೆಕೆಂಡ್ ಗಳ ನಂತರ ಜೀವಂತವಾಗಿ ಹೊರ ಬಂದ!
ಅಮೇರಿಕಾದ ಮಸಾಚುಸೆಟ್ಸ್ ನಲ್ಲಿ ನಡೆದಿರುವ ಒಂದು ಘಟನೆಯು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಕೆಲವರು ಈ ಘಟನೆಯ ಕುರಿತಾಗಿ ತಿಳಿದು ಅಕ್ಷರಶಃ ದಿಗ್ಬ್ರಾಂತಿಗೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ವ್ಯಕ್ತಿಯೊಬ್ಬರನ್ನು ಒಂದು ದೊಡ್ಡ ತಿಮಿಂಗಲ ನುಂಗಿತ್ತು. ಆ ವ್ಯಕ್ತಿಯು ಸುಮಾರು 40 ಸೆಕೆಂಡುಗಳ ಕಾಲ ತಿಮಿಂಗಲದ ಬಾಯಿಯೊಳಗೆ ಇದ್ದರು ಎನ್ನಲಾಗಿದ್ದು, ಅದೃಷ್ಟವಶಾತ್ ಕೆಲವು ಸೆಕೆಂಡ್ ಗಳ ನಂತರ ಹೊರಬಂದಿದ್ದಾರೆ!
40 ಸೆಕೆಂಡ್ ನಂತರ ತಿಮಿಂಗಲ ಆತನನ್ನು ವಾಂತಿ ಮಾಡುವ ರೀತಿಯಲ್ಲಿ ಹೊರಗೆ ಉಗುಳಿದೆ. ಆಶ್ಚರ್ಯ ಎನಿಸಿದರೂ ಇದು ನಿಜವಾಗಿ ನಡೆದ ಘಟನೆಯಾಗಿದೆ. ಮೈಕಲ್ ಪ್ಯಾಕರ್ಡ್ ಎನ್ನುವ 56 ವರ್ಷ ವಯಸ್ಸಿನ ಈ ವ್ಯಕ್ತಿಯು ಕಳೆದ 40 ವರ್ಷಗಳಿಂದಲೂ ಲಾಂಬ್ ಸ್ಟರ್ ಡೈವರ್ ಹಾಗೆ ಕಾರ್ಯವನ್ನು ನಿರ್ವಹಿಸುತ್ತಾ ಬರುತ್ತಿದ್ದಾರೆ.
ಅವರು ಸಮುದ್ರದಲ್ಲಿ ವಿವಿಧ ರೀತಿಯ ಜೀವಿಗಳನ್ನು ಹಿಡಿದು ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಹಣವನ್ನು ಗಳಿಸುತ್ತಾರೆ. ಕಳೆದ ಶುಕ್ರವಾರವೂ ಅವರು ಎಂದಿನಂತೆ ಸಮುದ್ರ ಜೀವಿಗಳನ್ನು ಹಿಡಿಯಲು ಸಮುದ್ರದ ಒಳಗೆ ಸುಮಾರು 35 ಅಡಿಗಳ ಆಳಕ್ಕೆ ಇಳಿದಿದ್ದರು.

ನ್ಯೂಯಾರ್ಕ್ ಪೋಸ್ಟ್ ಮಾಡಿರುವ ವರದಿಯ ಪ್ರಕಾರ, ಈ ವಿಚಿತ್ರವಾದ ಘಟನೆಯು ಅಂದು ಬೆಳಿಗ್ಗೆ ಎಂಟು ಗಂಟೆಯ ವೇಳೆಯಲ್ಲಿ ನಡೆದಿದೆ ಎನ್ನಲಾಗಿದೆ. ಪ್ಯಾಕರ್ಡ್ ಈ ವಿಷಯದ ಬಗ್ಗೆ ಮಾತನಾಡುತ್ತಾ, ಮೊದಲು ನನಗೆ ಒಂದು ಹೊ ಡೆ ತವು ಬಿದ್ದ ಹಾಗೆ ಆಯಿತು. ಅನಂತರ ಸುತ್ತಲ ವಾತಾವರಣದಲ್ಲಿ ಕತ್ತಲಾದಂತೆ ಕಂಡಿತು.
ಆದರೆ ನಾನು ಚಲಿಸುತ್ತಿದ್ದೇನೆ ಎನ್ನುವ ಅರಿವು ನನಗೆ ಉಂಟಾಗುತ್ತಿತ್ತು. ಅದೇ ವೇಳೆ ತಿಮಿಂಗಲವು ನನ್ನನ್ನು ಅದರ ಬಾಯೊಳಗೆ ನೂಕಲು ಬಲವನ್ನು ಪ್ರಯೋಗ ಮಾಡುತ್ತಿರುವುದು ತಿಳಿಯುತ್ತಿತ್ತು. ನಾನು ಮೊದಲಿಗೆ ಯಾವುದೋ ಶಾರ್ಕ್ ನನ್ನ ಮೇಲೆ ಹಲ್ಲೆ ಮಾಡಿದೆ ಎಂದು ಭಾವಿಸಿದ್ದೆ, ಆದರೆ ಅದು ಒಂದು ವೇಲ್ ಆಗಿತ್ತು ಎಂದು ಅವರು ಹೇಳಿದ್ದಾರೆ.
ಹಾಗೇ ಮಾತನಾಡುತ್ತಾ, ಆ ಕ್ಷಣದಲ್ಲಿ ಇನ್ನು ನಾನು ಬದುಕುವುದಿಲ್ಲ ಅನಿಸಿತು. ನಾನು ತಿಮಿಂಗಲದ ಬಾಯಿಯೊಳಗೆ ಇದ್ದೆ, ಸುತ್ತಲೂ ಸಂಪೂರ್ಣ ಕತ್ತಲು ಆವರಿಸಿತ್ತು. ಆಗ ಅಲ್ಲಿಂದ ಹೊರಗೆ ಬರುವುದು ಅಸಾಧ್ಯ ಎಂದು ಆಲೋಚನೆ ಬಂದು, ನನ್ನ ಮಕ್ಕಳ ಬಗ್ಗೆ ನನಗೆ ಚಿಂತೆ ಉಂಟಾಯಿತು.

ಆದರೆ ಅದೇ ವೇಳೆ ವಿಶಾಲವಾದ ತಿಮಿಂಗಲದ ಬಾಯಿಯಲ್ಲಿ ಹಲ್ಲುಗಳು ತನಗೆ ತಗುಲಿಲ್ಲವೆಂದೂ, ನನಗೆ ಯಾವುದೇ ಗಾಯ ಆಗಿಲ್ಲವೆಂದು ಎಂದು ತಿಳಿದು, ಕೂಡಲೇ ಹೊರಗೆ ಬರುವ ಪ್ರಯತ್ನವನ್ನು ಪ್ರಾರಂಭಿಸಿದೆ. ತಿಮಿಂಗಿಲವು ತನ್ನ ತಲೆಯನ್ನು ಅಲ್ಲಾಡಿಸಲು ಪ್ರಾರಂಭಿಸಿತು. 40 ಸೆಕೆಂಡ್ ಗಳ ಅವಧಿಯಲ್ಲಿ ಅದು ತನ್ನ ಬಾಯಿಂದ ನನ್ನನ್ನು ಹೊರಗೆ ಉಗುಳಿತು ಎಂದು ಪ್ಯಾಕರ್ಡ್ ಭ’ಯಾ’ನಕವಾದ ಅನುಭವ ಬಿಚ್ಚಿಟ್ಟಿದ್ದಾರೆ.
ನನ್ನ ಪ್ರಯತ್ನದ ಫಲವಾಗಿ ನನಗೆ ಬೆಳಕು ಕಾಣಿಸಿತು. ತಿಮಿಂಗಿಲ ತನ್ನ ತಲೆಯನ್ನು ಅತ್ತ ಇತ್ತ ಆಡಿಸುತ್ತಿತ್ತು. ಆಗ ನನಗೆ ಕಂಡ ದೃಶ್ಯ, ನಾನು ತಿಮಿಂಗಲದ ಬಾಯಿಯ ಬದಲಾಗಿ ಸಮುದ್ರದಲ್ಲಿ ಇದ್ದೇನೆ ಎಂದು. ಆ ಕ್ಷಣದಲ್ಲಿ ಹೇಗೆ ನಾನು ಅದರ ಬಾಯಿಂದ ಹೊರಗೆ ಬಂದೆ ಎನ್ನುವುದು ನನಗೆ ನಂಬಲು ಸಾಧ್ಯವಾಗಲಿಲ್ಲ.
ನನ್ನ ಮೈ ಮೇಲೆ ಯಾವುದೇ ಗಾಯಗಳು ಆಗಿರಲಿಲ್ಲ. ಆ ವೇಳೆಯಲ್ಲಿ ನನ್ನ ಗೆಳೆಯ ಜೊಸಿಯ ಮಾಯೋ ನನಗೆ ನೆರವನ್ನು ನೀಡಿ ಸಮುದ್ರದಿಂದ ಹೊರಗೆ ಕರೆದುಕೊಂಡು ಬಂದ. ನನ್ನನ್ನು ಆಸ್ಪತ್ರೆಗೆ ಸೇರಿಸಿದ ಎಂದು ಪ್ಯಾಕರ್ಡ್ ತನ್ನ ಜೀವನದಲ್ಲಿ ನಡೆದಂತಹ ಅನಿರೀಕ್ಷಿತ ಅ’ವ’ಘ’ಡ ಹಾಗೂ ಪವಾಡಸದೃಶ ರೀತಿಯಲ್ಲಿ ತಾನು ಪಾರಾದ ಘಟನೆಯನ್ನು ಸ್ಮರಿಸಿದ್ದಾರೆ.