50 ಸಾವಿರ ಬಂಡವಾಳದಲ್ಲಿ ಪ್ರಿಂಟೆಡ್ ಟೀ ಶರ್ಟ್ ಬಿಜಿನೆಸ್ ಪ್ರಾರಂಭಿಸಿ : ಪ್ರತಿ ತಿಂಗಳು ಒಳ್ಳೆ ಆದಾಯ ಗಳಿಸಬಹುದು
ವ್ಯವಹಾರವನ್ನು ಯಶಸ್ವಿಯಾಗಿ ನಡೆಸಲು ಒಂದು ಹೊಸ ಕಲ್ಪನೆಯ ಅಗತ್ಯವಿದೆ. ಅವೇ ಹಳೆಯ ಉದ್ಯೋಗಗಳಿಗೆ ಅಂಟಿಕೊಳ್ಳದೇ ನೀವು ಹೊಸದನ್ನು ಮಾಡಲು ನಿರ್ಧರಿಸಿದ್ದರೆ, ಪ್ರಿಂಟೆಡ್ ಟಿ-ಶರ್ಟ್ ವ್ಯವಹಾರವು ನಿಮ್ಮ ಉತ್ತಮ ಆಯ್ಕೆಯಾಗಲಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ಹೊಸ ವಿನ್ಯಾಸದ ಟೀ ಶರ್ಟ್ ಧರಿಸಲು ಇಷ್ಟಪಡುತ್ತಾರೆ. ಹೀಗಾಗಿ ನಿಮ್ಮ ಕ್ರಿಯೆಟಿವಿಟಿಗೆ ಖಂಡಿತ ಬೆಲೆ ಸಿಗುತ್ತದೆ.
ಕೆಲವರು ಶರ್ಟ್ ಗಿಂತ ಹೆಚ್ಚು ಟೀ ಶರ್ಟ್ ಧರಿಸುತ್ತಾರೆ. ಹಾಗಿರುವಾಗ ಆದಾಯದ ದೃಷ್ಟಿಯಿಂದ ಈ ವ್ಯವಹಾರವು ನಿಮಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಆದ್ದರಿಂದ ಪ್ರಿಂಟೆಡ್ ಟೀ ಶರ್ಟ್ಗಳನ್ನು ತಯಾರಿಸುವ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮುಂದುವರೆಯಿರಿ.

ಟೀ – ಶರ್ಟ್ ಯೂನಿಫಾರ್ಮ್ :
ಮುದ್ರಿತ ಅಥವಾ ಪ್ರಿಂಟೆಡ್ ಟೀ ಶರ್ಟ್ಗಳನ್ನು ತಯಾರಿಸುವ ವ್ಯವಹಾರವನ್ನು ಕೇವಲ 50 ಸಾವಿರ ರೂಪಾಯಿಗಳ ಬಂಡವಾಳದಿಂದ ಪ್ರಾರಂಭಿಸಬಹುದು. ಹಾಗೆಯೇ ಇದರಿಂದ ನೀವು ಪ್ರತಿ ತಿಂಗಳು 45 ರಿಂದ 60 ಸಾವಿರ ರೂಪಾಯಿಗಳನ್ನು ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಟೀ ಶರ್ಟ್ಗಳ ಭಾರಿ ವ್ಯಾಮೋಹವಿದೆ. ಮತ್ತು ಅನೇಕ ಶಾಲೆ – ಕಾಲೇಜುಗಳು ಸಹ ಏಕರೂಪದ ಟೀ ಶರ್ಟ್ ಗಳನ್ನು ಬಳಸತೊಡಗಿವೆ.
ಜೊತೆಗೆ ವಿವಿಧ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಪ್ರಿಂಟೆಡ್ ಟೀ ಶರ್ಟ್ ಗಳನ್ನು ತಯಾರಿಸಲು ಆರ್ಡರ್ ಕೊಡುತ್ತಿವೆ. ಇನ್ನು ಅನೇಕ ಜನರು ಹುಟ್ಟುಹಬ್ಬದ ಉಡುಗೊರೆಗಳಲ್ಲಿ ಟಿ-ಶರ್ಟ್ಗಳನ್ನು ನೀಡಲು ಇಷ್ಟಪಡುತ್ತಾರೆ. ಆದ್ದರಿಂದ ಈ ವ್ಯವಹಾರದಲ್ಲಿ ಸಾಕಷ್ಟು ಹರವು ಇದ್ದು ಇದು ನಿಮ್ಮ ಉತ್ತಮ ಆದಾಯದ ಮೂಲವಾಗಬಹುದು.

ಎಷ್ಟು ಹೂಡಿಕೆ ಮಾಡಬೇಕು?
ಆರಂಭದಲ್ಲಿ ಪ್ರಿಂಟೆಡ್ ಟೀ ಶರ್ಟ್ ಗಳನ್ನು ತಯಾರಿಸುವ ವ್ಯವಹಾರವನ್ನು 50 ರಿಂದ 70 ಸಾವಿರ ರೂಪಾಯಿಗಳಿಂದ ಪ್ರಾರಂಭಿಸಬಹುದು. ನಿಮ್ಮ ಗಳಿಕೆ ಹೆಚ್ಚಾದಂತೆ ನಿಮ್ಮ ವ್ಯವಹಾರವನ್ನು ನೀವು ವಿಸ್ತರಿಸಬಹುದು. ಈ ವ್ಯವಹಾರವನ್ನು ಬಹಳ ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸುವ ಮೂಲಕ, ನೀವು ಪ್ರತಿ ತಿಂಗಳು 40 ಸಾವಿರ ಸುಲಭವಾಗಿ ರೂಪಾಯಿಗಳನ್ನು ಗಳಿಸಬಹುದು.
ನೀವು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೆ ನೀವು ಇನ್ನೂ ಹೆಚ್ಚಿನದನ್ನು ಗಳಿಸಬಹುದು. ನೀವು ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಟಿ-ಶರ್ಟ್ ಗಳನ್ನು ಸಹ ಮಾರಾಟ ಮಾಡಬಹುದು. ಇಲ್ಲಿ ನಿಮ್ಮ ವ್ಯಾಪಾರ ಬೆಳೆಸಲು ಸಾಕಷ್ಟು ಅವಕಾಶಗಳಿವೆ. ಇನ್ನು ಹೊರಗಡೆ ಒಳ್ಳೆ ಕಾಂಟ್ಯಾಕ್ಟ್ ಇಟ್ಟುಕೊಂಡರೆ ಅಲ್ಲೂ ಸಾಕಷ್ಟು ಆರ್ಡರ್ ಸಿಗುತ್ತವೆ.

ಕಚ್ಚಾ ವಸ್ತುಗಳ ವೆಚ್ಚ :
ಮುದ್ರಿತ ಟೀ ಶರ್ಟ್ಗಳ ವ್ಯವಹಾರಕ್ಕೆ ಸಂಬಂಧಿಸಿದ ತಜ್ಞರು ನೀವು ಟಿ-ಶರ್ಟ್ ಗಳನ್ನು ಮುದ್ರಿಸುವ ಯಂತ್ರವನ್ನು 50 ಸಾವಿರ ರೂ.ಗೆ ಖರೀದಿಸಬಹುದು ಎಂದು ಹೇಳುತ್ತಾರೆ. ಇನ್ನು ನೀವು ಸಾಮಾನ್ಯ ಬಿಳಿ ಟೀ ಶರ್ಟ್ ಗಳನ್ನು ಕಚ್ಚಾ ವಸ್ತುವಾಗಿ ಖರೀದಿಸಬಹುದು. ಇದರ ವೆಚ್ಚ 100 ರಿಂದ 120 ರೂಪಾಯಿಗಳವರೆಗೆ ಇರುತ್ತದೆ. ಅದನ್ನು ಮುದ್ರಿಸಲು ಟಿ-ಶರ್ಟ್ ಗೆ 1 ರಿಂದ 10 ರೂಪಾಯಿಯವರೆಗೆ ವೆಚ್ಚವಾಗುತ್ತದೆ. ಈ ಟೀ ಶರ್ಟ್ ಅನ್ನು ನೀವು 250 ರಿಂದ 300 ರೂ.ಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.
ಮುದ್ರಿತ ಟಿ-ಶರ್ಟ್ ವ್ಯವಹಾರದಿಂದ ಗಳಿಸುವುದು :
ಟಿ-ಶರ್ಟ್ಗಳನ್ನು ಮುದ್ರಿಸಲು ಎರಡು ರೀತಿಯ ಯಂತ್ರಗಳಿವೆ – ಒಂದು ಮ್ಯಾನುವಲ್ ಮತ್ತು ಇನ್ನೊಂದು ಸ್ವಯಂಚಾಲಿತ. ನೀವು ಹೊಸದಾಗಿ ವ್ಯವಹಾರ ಮಾಡುತ್ತಿದ್ದರೆ ಕೈಚಾಲಿತ ಯಂತ್ರದೊಂದಿಗೆ ಮಾತ್ರ ಕೆಲಸ ಮಾಡಲು ಪ್ರಾರಂಭಿಸಿ. ಈ ಯಂತ್ರದ ಸಹಾಯದಿಂದ, ನೀವು ದಿನದಲ್ಲಿ 15 ರಿಂದ 20 ಟೀ ಶರ್ಟ್ಗಳನ್ನು ಸಹ ಮುದ್ರಿಸಬಹುದು.

ಈ ರೀತಿಯಾಗಿ ತಿಂಗಳಿಗೆ 450 ರಿಂದ 600 ಟೀ ಶರ್ಟ್ ಗಳನ್ನು ಆರಾಮವಾಗಿ ಮುದ್ರಿಸಬಹುದು. ನೀವು ಟಿ-ಶರ್ಟ್ ಗೆ 100 ರೂ.ಗಳನ್ನು ಉಳಿಸಿದರೆ, ನೀವು ತಿಂಗಳಿಗೆ 45 ರಿಂದ 60 ಸಾವಿರ ಗಳಿಸಬಹುದು. ನಂತರ ಸ್ವಯಂಚಾಲಿತ ಯಂತ್ರವನ್ನು ಖರೀದಿಸುವ ಮೂಲಕ ನಿಮ್ಮ ವ್ಯವಹಾರವನ್ನು ವಿಸ್ತಸಬಹುದು. ಕೆಲಸ ನಿಮ್ಮನ್ನು ಹುಡುಕಲ್ಲ, ನೀವೇ ಕೆಲಸ ಹುಡುಕಬೇಕು.