ಅದ್ಭುತ VIDEO : ನಾಯಿಯ ವಾಲಿಬಾಲ್ ಕೌಶಲ್ಯ ನೋಡಿ, ಇಂಡಿಯನ್ ವಾಲಿಬಾಲ್ ಟೀಂ ಆಟಗಾರ ಎಂದು ಹೊಗಳಿದ ಐಪಿಎಸ್ ಅಧಿಕಾರಿ!
ಸೋಶಿಯಲ್ ಮೀಡಿಯಾಗಳಲ್ಲಿ ಪ್ರತಿದಿನ ಅದೆಷ್ಟೋ ವೀಡಿಯೋ ಗಳು ಹಾಗೂ ವ ಫೋಟೋ ಗಳನ್ನು ನೋಡಲು ಸಿಗುತ್ತವೆ. ಆದರೆ ಇವುಗಳಲ್ಲಿ ಒಂದಷ್ಟು ವೀಡಿಯೋಗಳು ಮಾತ್ರ ಬಹಳ ಬೇಗ ಎಲ್ಲೆಡೆ ವೈರಲ್ ಆಗುತ್ತಾ ಸಾಗುತ್ತವೆ. ಅಂತಹ ವೀಡಿಯೋಗಳಲ್ಲಿ ವಿಶೇಷವಾಗಿ ಗಮನ ಸೆಳೆಯುವುದು ಎಂದರೆ ಅದು ಪ್ರಾಣಿಗಳ ವೀಡಿಯೋ. ಹಲವು ಜೀವಿಗಳ ಬುದ್ದಿಮತ್ತೆ – ಜಾಣ್ಮೆ ನೋಡಿ ಅಚ್ಚರಿಗೊಳ್ಳುವವರೇ ಹೆಚ್ಚು.
ಪ್ರಾಣಿಗಳ ವೀಡಿಯೋಗಳು ನೋಡುಗರ ಮನಸ್ಸು ಸೆಳೆಯುವುದು ಮಾತ್ರವೇ ಅಲ್ಲದೇ ಅದರಲ್ಲಿ ಅವು ಆಡುವ ಆಟ, ತೋರುವ ಜಾಣ್ಮೆ, ಮಾಡುವ ತುಂಟಾಟಗಳು ಇವೆಲ್ಲವನ್ನು ನೋಡುವಾಗ ನಾವು ಕೆಲವು ಕ್ಷಣಗಳು, ಕೆಲವು ನಿಮಿಷಗಳಾದರೂ ನಾವು ಎಲ್ಲೋ ಒಂದು ಆಹ್ಲಾದಕರ ಅನುಭೂತಿಯಲ್ಲಿ ಕಳೆದು ಹೋಗಿ ಬಿಡುತ್ತೇವೆ. ಅಂತಹುದೇ ಒಂದು ವೀಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ.
ಐಪಿಎಸ್ ಅಧಿಕಾರಿಯಾಗಿರುವ ರುಪೇನ್ ಶರ್ಮಾ ಅವರು ಇಂತಹದೊಂದು ಸುಂದರವಾದ ವೀಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರು ಶೇರ್ ಮಾಡಿಕೊಂಡಿರುವ ಈ ವೀಡಿಯೋವನ್ನು ಈಗಾಗಲೇ ಸಾವಿರಾರು ನೆಟ್ಟಿಗರು ವೀಕ್ಷಣೆಯನ್ನು ಮಾಡಿದ್ದಾರೆ.

ಅನೇಕರು ವೀಡಿಯೋ ರೀಟ್ವೀಟ್ ಮಾಡಿಕೊಂಡು ಶೇರ್ ಮಾಡಿಕೊಂಡಿದ್ದಾರೆ. ಇನ್ನು ಈ ಮನೋಹರವಾದ ವೀಡಿಯೋದಲ್ಲಿ ಇರುವ ದೃಶ್ಯ ಏನೂ ಎನ್ನುವ ಕುತೂಹಲ ನಿಮಗೆ ಇದ್ದರೆ ಅದಕ್ಕೆ ಉತ್ತರವನ್ನು ನೀಡುತ್ತಿದ್ದೇವೆ. ಇದೊಂದು ನಾಯಿಯ ಕೌಶಲ್ಯವನ್ನು ತೋರುವಂತಹ ವೀಡಿಯೋ ಆಗಿದೆ.
ವೈರಲ್ ವೀಡಿಯೋದಲ್ಲಿ ನಾಯಿಯ ವಾಲಿಬಾಲ್ ಕಲೆಯನ್ನು ನಾವು ನೋಡಬಹುದಾಗಿದೆ. ಹೌದು ಈ ವೀಡಿಯೋದಲ್ಲಿ ನೋಡಿದಾಗ ವ್ಯಕ್ತಿಯೊಬ್ಬರು ತಮ್ಮ ಸಾಕಿದ ಹಾಗೂ ತರಬೇತಿ ನೀಡಿದ ನಾಯಿಯ ಜೊತೆ ವಾಲಿಬಾಲ್ ಆಡುವುದನ್ನು ನೋಡಬಹುದಾಗಿದೆ. ವೀಡಿಯೋದಲ್ಲಿ ಆ ವ್ಯಕ್ತಿಯು ವಾಲಿಬಾಲ್ ನ್ನು ಪುಷ್ ಮಾಡಿದರೆ, ಅದೂ ಹಾಗೇ ಮಾಡುತ್ತದೆ.
ನಾಯಿಯು ಸಹಾ ಬಹಳ ಅಚ್ಚುಕಟ್ಟಾಗಿ ಹಾಗೂ ಬಾಲ್ ಮಿಸ್ ಆಗದಂತೆ ಹಾಗೂ ಅದು ನೆಲದ ಮೇಲೆ ಬೀಳದಂತೆ ಅದು ನೀಡುವ ಹೊಡೆತಗಳನ್ನು ನೋಡಿದಾಗ ಒಂದು ಕ್ಷಣ ಆಶ್ಚರ್ಯವಾಗುವುದರ ಜೊತೆಗೆ ನಾಯಿಯ ಕೌಶಲ್ಯವನ್ನು ಹೊಗಳದೇ ಇರಲು ಮನಸ್ಸಾಗುವುದಿಲ್ಲ.

ಇದೇ ವೇಳೆಯಲ್ಲಿ ನಾವು ಮತ್ತೊಂದು ವಿಷಯವನ್ನು ಮರೆಯಬಾರದು, ಅದೇನೆಂದರೆ ಆ ನಾಯಿಯಲ್ಲಿ ಕಲಿಯುವ ಶ್ರದ್ಧೆ ಹಾಗೂ ಅದಕ್ಕೆ ಅಂತಹುದೊಂದು ತರಬೇತಿಯನ್ನು ನೀಡಿರುವ ವ್ಯಕ್ತಿಯ ತಾಳ್ಮೆ. ಇನ್ನು ಈ ವೀಡಿಯೋ ನೋಡಿದ ನೆಟ್ಟಿಗರು ಕೂಡಾ ಬಹಳಷ್ಟು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.
ವೀಡಿಯೋ ಶೇರ್ ಮಾಡಿಕೊಂಡಿರುವ ರುಪೇನ್ ಶರ್ಮಾ ಅವರು ಶೀರ್ಷಿಕೆಯಲ್ಲಿ ಟೋಕಿಯೋಗೆ ಹೋಗುವ ಇಂಡಿಯನ್ ವಾಲಿವಾಲ್ ತಂಡಕ್ಕೆ ಆಟಗಾರ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅನೇಕ ಮಂದಿ ವೈವಿಧ್ಯಮಯವಾದ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ.
ನೆಟ್ಟಿಗರೊಬ್ಬರು ತಮ್ಮ ಕಾಮೆಂಟ್ ನಲ್ಲಿ ಮಾಲೀಕನ ಜೊತೆ ನಿದ್ದೆ ಮಾಡುತ್ತಿರುವ ನಾಯಿಯ ಫೋಟೋ ಹಾಕಿ, ಮನುಷ್ಯನಂತೆ ನಾಯಿ ಎಂದು ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ. ಮತ್ತೊಬ್ಬರು ಬುದ್ಧಿವಂತ ಹಾಗೂ ಮುದ್ದಾದ ನಾಯಿಯ ವಾಲಿಬಾಲ್ ಆಟ ಸುಂದರವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Player for Indian Volleyball team for #Tokyo ☺️☺️☺️☺️
— Rupin Sharma IPS (@rupin1992) June 14, 2021
Cute..😊😊😊😊😊@hvgoenka @anandmahindra @susantananda3 @SudhaRamenIFS @ParveenKaswan @NaveedIRS @KirenRijiju ☺️☺️ pic.twitter.com/in65nn0mUD
ಇನ್ನೊಬ್ಬರು ನಾಯಿಗಳು ಯಾವಾಗಲೂ ಸಹಾ ಮನುಷ್ಯರಿಗೆ ಸ್ನೇಹಿತನಿದ್ದಂತೆ ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಬಹುತೇಕ ಎಲ್ಲರೂ ಸಹಾ ನಾಯಿಯ ಕೌಶಲ್ಯಕ್ಕೆ ಮಾರು ಹೋಗಿದ್ದಾರೆ. ಫೇಸ್ಬುಕ್ ನಲ್ಲಿಯೂ ಈ ವಿಡಿಯೊ ಭರ್ಜರಿಯಾಗಿ ವೈರಲ್ ಆಗುತ್ತಿದ್ದು, ಆ ವಿಡಿಯೊ ಮೇಲಿದೆ ನೋಡಿ, ನಿಮ್ಮ ಕಾಮೆಟ್ ದಾಖಲಿಸಿ…