VIDEO : ಗೆಳೆಯನ ಹೆಗಲ ಮೇಲೆ ಕುಳಿತು ಡಾನ್ಸ್ ಮಾಡುತ್ತಿದ್ದ ವರನಿಗೆ ಕಾದಿತ್ತು ಶಾಕ್ : ಬ್ಯಾಲೆನ್ಸ್ ತಪ್ಪಿ ದೊಪ್ಪೆಂದು ನೆಲಕ್ಕೆ ಬಿದ್ದ ವಿಡಿಯೊ ವೈರಲ್

ಪ್ರಸ್ತುತ ಸೋಶಿಯಲ್ ಮೀಡಿಯಾ ಗಳಲ್ಲಿ ಮದುವೆ ವಿಡಿಯೋ ಒಂದು ವೈರಲ್ ಆಗುವ ಮೂಲಕ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳ ದೊಡ್ಡ  ಸದ್ದನ್ನು ಮಾಡುತ್ತಿದೆ. ಪ್ರತಿದಿನ ಒಂದಲ್ಲಾ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್  ಆಗುತ್ತಲೇ ಇರುತ್ತದೆ. ಅದೂ ಅಲ್ಲದೇ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮದುವೆ ದಿಬ್ಬಣದಲ್ಲಿ  ಹೊರಟಿದ್ದ ಮದುವೆ ಗಂಡು ಮಾಡಿದ ಭರ್ಜರಿ ಡ್ಯಾನ್ಸ್ ವಿಡಿಯೋ ಒಂದು ವೈರಲ್ಲಾಗಿತ್ತು.

ಈ ವೀಡಿಯೋದಲ್ಲಿ ಮದುವೆಯ ಗಂಡು ತಾನು ಮದುವೆಯಾಗುತ್ತಿರುವ ಖುಷಿಯಿಂದ ಬಹಳ ಜೋಶ್ ಆಗಿ ಡಾನ್ಸ್ ಮಾಡಿದ್ದ. ಆತನ ಡಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾ ಗಳಲ್ಲಿ ಒಂದು ಸಂಚಲನ ಹುಟ್ಟು ಹಾಕಿತ್ತು. ಈ ವಿಡಿಯೋವನ್ನು ನೆಟ್ಟಿಗರು ಬಹಳಷ್ಟು ಮೆಚ್ಚಿದ್ದರು, ವರನ ಉತ್ಸಾಹ ಕಂಡು ಆಶ್ಚರ್ಯ ಪಟ್ಟಿದ್ದರು. ಈಗ ಇನ್ನೂ ಆ ವೀಡಿಯೋದ ಸ್ಮರಣೆ ಗಳು ಹಸಿರಾಗಿ ಇರುವಾಗಲೇ ಮತ್ತೊಂದು ವೀಡಿಯೋ ವೈರಲ್ ಆಗಿದೆ.

ಹೌದು, ಮದುವೆಯ ಗಂಡಿನ ದಿಬ್ಬಣದ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ನೋಡಿ ಜನರಲ್ಲಿ ಸಂಚಲನ ಹುಟ್ಟುವುದೋ ಇಲ್ಲವೋ ಗೊತ್ತಿಲ್ಲವಾದರೂ ಮದುವೆ ಗಂಡಿಗೆ ಮಾತ್ರ ಖಂಡಿತವಾಗಿಯೂ ಒಂದು ಕಂಪನ ಹುಟ್ಟಿಕೊಂಡಿದೆ ಎಂದು ಹೇಳಬಹುದು. ಏಕೆಂದರೆ ಆತನ ಜೊತೆಗೆ ಅಂತಹುದೊಂದು ಅನಿರೀಕ್ಷಿತವಾದ ಘಟನೆ ನಡೆದಿದೆ.

ಸದ್ಯಕ್ಕಂತೂ ಸೋಶಿಯಲ್ ಮೀಡಿಯಾ ಗಳಲ್ಲಿ ಎಲ್ಲರ ಗಮನವನ್ನು ಈ ವಿಡಿಯೋ ಸೆಳೆಯುತ್ತಿದೆ. ನೋಡಿದವರು ನಗುವುದರ ಜೊತೆಗೆ ಅಯ್ಯೋ ಪಾಪ ಎನ್ನುತ್ತಿದ್ದಾರೆ. ಆದರೆ ಈ ಬಾರಿ ಈ ಹಿಂದಿನ ವೀಡಿಯೋದಂತೆ ಮದುವೆ ಗಂಡು ಡ್ಯಾನ್ಸ್ ಮಾಡಿಲ್ಲ ಅನ್ನುವುದು ಮಾತ್ರ ಖಚಿತ.

ಮದುವೆಯ ಗಂಡಿನ ಜೊತೆಯಲ್ಲಿ ಇದ್ದಂತಹ ವ್ಯಕ್ತಿಯೊಬ್ಬರು, ವರನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಖುಷಿಯಿಂದ ಕುಣಿದಾಡಿದ್ದಾರೆ. ಆದರೆ ನಂತರ ನಡೆದ ಘಟನೆ ಬಹುಶಃ ಮದುವೆ ಆ ವರ ತನ್ನ ಇಡೀ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಇನ್ನುವಸುತ್ತಮುತ್ತ ನೆರೆದಿದ್ದವರೂ ಈ ಮದುವೆಯಲ್ಲಿ ನಡೆದಂತಹ ಈ ವಿಚಿತ್ರವಾದ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಬಿಡಿ

ಹಾಗಾದ್ರೆ ಇಷ್ಟಕ್ಕೂ ಅಲ್ಲಿ ಅಂತದ್ದು ಏನಾಯ್ತು ಅನ್ನೋ ಕುತೂಹಲಕ್ಕೆ ಉತ್ತರ ಇಲ್ಲಿದೆ. ಮದುವೆಯ ಸಂಭ್ರಮದಲ್ಲಿ ಎಲ್ಲರೂ ಕುಣಿಯುತ್ತಾ ದಿಬ್ಬಣ ಬರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದು. ಒಬ್ಬ ವ್ಯಕ್ತಿ ವರನನ್ನು ತನ್ನ ಹೆಗಲ ಮೇಲೆ ಎತ್ತಿಕೊಂಡು ಬಹಳ ಖುಷಿಯಿಂದ ಕುಣಿಯುತ್ತಿದ್ದಾನೆ.

ಆತನ ಹೆಗಲ ಮೇಲೆ ಸಂತೋಷವಾಗಿ ಕುಳಿತಿದ್ದ ವರ ಇದ್ದಕ್ಕಿದ್ದಂತೆ ತನ್ನ ಬ್ಯಾಲೆನ್ಸ್ ತಪ್ಪಿ ಹಿಂದೆಕ್ಕೆ ವಾಲುತ್ತಾನೆ. ಆಗಲೇ ಆತನನ್ನು ಎತ್ತಿಕೊಂಡು ಕುಣಿಯುತ್ತಿದ್ದ ವ್ಯಕ್ತಿಯ ಬ್ಯಾಲೆನ್ಸ್ ಕೂಡಾ ತಪ್ಪಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ವರ ಹಾಗೆ ಬಿದ್ದ ಕೂಡಲೇ ಮುಂದೆ ನಡೆಯುತ್ತಿದ್ದ ಹುಡುಗಿಯರು ನಕ್ಕರೆ, ಹಿಂದೆ ಇದ್ದ ಮಹಿಳೆಯರು ಓಡಿ ಬಂದು ವರ ಏನಾದ ಎಂದು ನೋಡಿ, ಆತನನ್ನು ಮೇಲೆ ಎದ್ದು ನಿಲ್ಲಲು ಸಹಾಯವನ್ನು ಮಾಡುತ್ತಿದ್ದಾರೆ.

ಪಾಪ ವರನ ಖುಷಿಯಲ್ಲೇ ಇಂತಹುದೊಂದು ಘಟನೆ ನಡೆದು ಅದು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯಾ ಗಳಲ್ಲಿ ವಿಡಿಯೋ ವೈರಲ್ ಆದ ಮೇಲೆ ಬಹಳಷ್ಟು ಜನರು ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅನೇಕ ಮಂದಿ ಹಾಸ್ಯಭರಿತವಾದಂತಹ ಇಮೋಜಿಗಳು ಮಾಜಿಗಳು ಹಾಗೂ ಸ್ಟಿಕ್ಕರ್ ಗಳನ್ನು ಹಾಕುವ ಮೂಲಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

 
 
 
 
 
View this post on Instagram
 
 
 
 
 
 
 
 
 
 
 

A post shared by Niranjan Mahapatra (@official_niranjanm87)

ಇನ್ನೂ ಕೆಲವರು ಕಾಮೆಂಟ್ ಗಳನ್ನು ಮಾಡುತ್ತಾ, ಭಗವಂತ ಮೇಲಕ್ಕೆತ್ತಿಕೊಂಡು ಬಿಡು ಎಂದಿದ್ದಾರೆ. ಮತ್ತೆ ಕೆಲವರು ಸಿಡಿಲು ಬಡಿಯಿತು ಎಂದು ಹಾಸ್ಯ ಮಾಡಿದ್ದಾರೆ. ಒಟ್ಟಾರೆ ಈ ವಿಡಿಯೋ ಭರ್ಜರಿ ಮನರಂಜನೆಯ ನೀಡುವ ಜೊತೆಗೆ ನೋಡುಗರನ್ನು ನಗುವಂತೆ ಮಾಡುತ್ತಿದೆ. ವಿಡಿಯೊ ಮೇಲಿದೆ ನೋಡಿ…