ಲಾಕ್ ಡೌನ್ ನಲ್ಲಿಯೂ ಕೋಟ್ಯಾಧಿಪತಿಯಾದ ಭಾರತೀಯ! ಅದೃಷ್ಟ! ನಂಬೋಕೆ ಸಾಧ್ಯವಾಗುತ್ತಿಲ್ಲ!
ಈ ಲಾಕ್ ಡೌನ್ ನಲ್ಲಿ ಭಾರತಿಯನೊಬ್ಬ ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿಯಾದ.!ಇಷ್ಟೊಂದು ಹಣ ನೋಡಿ ತನ್ನ ಅದೃಷ್ಟದ ಮೇಲೂ ವಿಶ್ವಾಸವೆನಿಸುತ್ತಿಲ್ಲ!
ಜಗತ್ತಿನಲ್ಲಿ ದೇಶದಲ್ಲಿ ಎಲ್ಲಿ ನೋಡಿದರೂ ಕೊರೊನ ಆತಂಕ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಸಂಪೂರ್ಣ ಜಗತ್ತು ಇಂದು ಲಾಕ್ ಡೌನ್ ನಿಂದ ತನ್ನ ಮನೆಯಲ್ಲಿಯೇ ಬಂಧಿತವಾಗಿದೆ. ಆದರೆ ದುಬೈನಲ್ಲಿ ಭಾರತೀಯ ಬಿಜಿನೆಸ್ ಮನ್ ರಾಜನ್ ಕುರಿಯನ್ ಮಾತ್ರ ಒಂದೇ ಒಂದು ರಾತ್ರಿಯಲ್ಲಿ ಕೋಟ್ಯಾಧಿಪತಿಯಾದನು.
ತಾನು ಮಾಡುತ್ತಿದ್ದ ಬಿಜಿನೆಸ್ ದ ಏಳಿಗೆ ಸಲುವಾಗಿ ಏನಾದರೂ ಖರ್ಚು ಮಾಡಲೇಬೇಕು ಎನ್ನುವ ರಾಜನ್ ಗೆ ದುಬೈ ಡ್ಯೂಟಿ ಫ್ರೀ ಡ್ರಾ ನಲ್ಲಿ ಕೋಟಿ ರೂಪಾಯಿಗಳ ಲಾಟರಿ ಹೊಡೆದಿದೆ.

ಲಾಟರಿಯ ಈ ಹಣ ಸುಮಾರು 7.6 ಕೋಟಿ ಮೊತ್ತವಾಗಿದೆ. ವಿಶ್ವದಲ್ಲಿ ಸದ್ಯದ ಪರಿಸ್ಥಿತಿ ನೋಡಲಾಗಿ ತನಗೆ ಹೊಡೆದ ಈ ಲಾಟರಿ ತುಂಬಾ ವಿಶೇಷವಾಗಿದೆ ಎಂದು ರಾಜನ್ ತಮ್ಮ ಖುಷಿ ವ್ಯಕ್ತ ಪಡಿಸಿದ್ದಾರೆ. ಲಾಟರಿಯಿಂದ ಬಂದ ಹಣದಲ್ಲಿ ಸ್ವಲ್ಪ ತನ್ನ ಬಿಜಿನೆಸ್ ಗಾಗಿ ಖರ್ಚು ಮಾಡುವೆ, ಇನ್ನು ಸ್ವಲ್ಪ ಮಕ್ಕಳ ಭವಿಷ್ಯಕ್ಕಾಗಿ ಕೂಡಿಡುವೆ. ಕಳೆದ ವರ್ಷ ಅಕ್ಟೊಬರ್ ನಿಂದ ನಾನು ಈ ಲಾಟರಿ ಖರೀದಿಸುತ್ತಿದ್ದೆ, ಈಗ ಇಷ್ಟೊಂದು ಹಣ ನೋಡಿ ನನಗೆ ನನ್ನ ಅದೃಷ್ಟದ ಮೇಲೆಯೇ ನನಗೆ ವಿಶ್ವಾಸ ಕೂಡುತ್ತಿಲ್ಲ.