ಸರಿಯಾಗಿ ಗಮನಿಸಿ ನೋಡಿದರೆ ಮಾತ್ರವೇ ಈ ಫೋಟೋಗಳು ನಿಮಗೆ ಅರ್ಥವಾಗುವುದು : ಪರ್ಫೆಕ್ಟ್ ಟೈಮಿಂಗ್ ಕ್ಲಿಕ್ ಅಂದ್ರೆ ಇದು

ಕೆಲವೊಂದು ಫೋಟೋಗಳನ್ನು ನೋಡಿದಾಗ ನಾವು ಒಂದು ಕ್ಷಣ ಆಲೋಚನೆಗೆ ಬೀಳುತ್ತೇವೆ. ಆ ಫೋಟೋಗಳನ್ನು ಕ್ಲಿಕ್ ಮಾಡಿದವರು ಯಾರು? ಹೀಗೆ ನಮ್ಮ ತಲೆಯಲ್ಲೊಂದು ಪ್ರಶ್ನೆ ಸುತ್ತಲು ಆರಂಭಿಸುತ್ತದೆ. ಅದರ ಜೊತೆಗೆ ಅವರು ವಾಸ್ತವವಾಗಿ ಈ ಫೋಟೋಗಳನ್ನು ಹೀಗೇ ಕ್ಲಿಕ್ ಮಾಡಲು ಬಯಸಿದ್ದರಾ? ಅಥವಾ ಏನೋ ತಪ್ಪಾಗಿ ಈ ತರ ಕ್ಲಿಕ್ ಆಗಿರಬಹುದಾ??ಎನ್ನುವ ಪ್ರಶ್ನೆಗಳು ಕೂಡಾ ನಮಗೆ ಮೂಡುತ್ತವೆ.

ಆದರೆ ಈ ಫೋಟೋಗಳು ನಮ್ಮ ಮುಖದಲ್ಲಿ ಒಂದು ನಗುವನ್ನು ಖಂಡಿತ ಮೂಡಿಸುತ್ತವೆ. ಈ ಫೋಟೋಗಳ ಟೈಮಿಂಗ್ ಮತ್ತು ಪ್ಲೇಸಿಂಗ್ ನಿಜಕ್ಕೂ ಅದ್ಭುತ ಎನಿಸುತ್ತದೆ. ಅಂತಹುದೇ ಕೆಲವು ಫೋಟೋಗಳನ್ನು ನಾವು ನಿಮಗಾಗಿ ಆರಿಸಿ ತಂದಿದ್ದೇವೆ. ಇವು ನಿಜಕ್ಕೂ ನಿಮಗೆ ಆಶ್ಚರ್ಯವನ್ನು ಉಂಟು ಮಾಡುವುದರ ಜೊತೆಗೆ ಆನಂದವನ್ನು ಸಹ ನೀಡುತ್ತವೆ.

ಮೊದಲನೆಯ ಫೋಟೋವನ್ನು ಗಮನಿಸಿದಾಗ ಬಹುಶಃ ಅಲ್ಲಿರುವ ಕಲ್ಲಿನ ಬೃಹತ್ ಶಿಲ್ಪದ ಕೆಳಗೆ ಕುಳಿತಿದ್ದ ಮಹಿಳೆಗೆ ತನ್ನ ಇಂತಹುದೊಂದು ಫೋಟೋ ಕೂಡಾ ತೆಗೆಯಬಹುದು ಎನ್ನುವುದನ್ನು ಊಹಿಸಿ ಕೂಡಾ ಇರುವುದಿಲ್ಲ. ಇನ್ನು ಈ ಫೋಟೋ ನೋಡಿದಾಗ ಆಕೆಯ ಹಿಂಭಾಗದಲ್ಲಿ ಆಕೆಗಿಂತ ಬಹಳ ಎತ್ತರದಲ್ಲಿ ನಿಂತಿರುವ ಥಾರ್ ವಿಗ್ರಹದ ಕೈಯಲ್ಲಿ ಇರುವ ಆಯುಧ ಗಮನಿಸಿದಾಗ, ಥಾರ್ ಈಕೆಯ ತಲೆಯ ಮೇಲೆ ತನ್ನ ಆಯುಧದಿಂದ ಹೊ ಡೆ ತ ನೀಡಲು ಸಿದ್ಧವಾಗಿರುವಂತೆ ಕಾಣುತ್ತದೆ.

ಎರಡನೇ ಫೋಟೋ ದಲ್ಲಿ ಗಮನಿಸಿದಾಗ ಮೊದಲಿಗೆ ಈ ಫೋಟೋ ತೆಗೆದವನು ಗ್ರೇಟ್ ಎನ್ನಬಹುದು. ಏಕೆಂದರೆ ಇಲ್ಲಿರುವ ಕ್ರಿಯೇಟಿವಿಟಿ ನಿಜಕ್ಕೂ ವಾವ್ ಎನಿಸುತ್ತದೆ. ಮನೆಯ ಬಾಲ್ಕನಿಯಲ್ಲಿ ನಿಂತಿರುವ ವ್ಯಕ್ತಿಯೊಬ್ಬನು ಕೆಳಗೆ ರಸ್ತೆಯಲ್ಲಿ ಚಲಿಸುತ್ತಿರುವ ಕಾರುಗಳನ್ನು ಆಟಿಕೆಗಳಂತೆ ಆಡುತ್ತಿರುವಂತೆ ನಮ್ಮ ಕಣ್ಣಿಗೆ ಕಾಣುತ್ತದೆ. ಆತ ತನ್ನ ಕೈಯಲ್ಲಿ ರಸ್ತೆಯ ಮೇಲಿರುವ ಕಾರನ್ನು ಹಿಡಿದಿರುವಂತೆ ಕಾಣುತ್ತದೆ.

ಈ ಚಿತ್ರಕ್ಕೆ ನಾವು ಏನು ಹೇಳುವುದು.. ಇದು ನಿಜಕ್ಕೂ ಒಂದು ಅದ್ಭುತ ಎಂದೇ ಹೇಳಬೇಕು. ವೆಡ್ಡಿಂಗ್ ಫೋಟೋ ಇದಾಗಿದ್ದು ಫೋಟೋಗ್ರಾಫರ್ ಈ ಫೋಟೊವನ್ನು ಮದುವೆ ನಂತರ ವಧು ವರನಿಗೆ ಕೊಟ್ಟಾಗ ಅವರು ಶಾ ಕ್ ಆಗಿರುತ್ತಾರೆ. ಕುದುರೆಯ ಮೇಲೆ ಕುಳಿತ ಮದುವೆ ಹೆಣ್ಣಿನ ಡ್ರೆಸ್ ಗಾಳಿಗೆ ಮೇಲೆ ಹಾರಿದಾಗ ಕುದುರೆಯ ಕಾಲುಗಳು ಆಕೆಯ ಕಾಲುಗಳೇನೋ ಎನ್ನುವ ಹಾಗೆ ಕಾಣುತ್ತಿದೆ.

ಈ ಫೋಟೋ ನೋಡಿದವರು ಓ ಏನಿದು ಅಂತ ಉದ್ಗಾರ ತೆಗೆಯಬಹುದು. ಫೋಟೋ ಕ್ಲಿಕ್ ಮಾಡಿದವರ ಟೈಮಿಂಗ್ ಗೆ ಏನು ಹೇಳೋದು.. ಗಾಳಿಗೆ ಯುವತಿಯ ಡ್ರೆಸ್ ಹಾರಿದಾಗಲೇ ಕೋತಿ ಬಾಯಿ ಬಿಟ್ಟುಕೊಂಡು ನೋಡ್ತಾ ಇರೋ ಎಕ್ಸ್ ಪ್ರೆಷನ್ ನೋಡಿದಾಗ ನಗು ಬರುವ ಜೊತೆಗೆ ಒಂದು ವಿಭಿನ್ನ ಫೋಟೋ ಇದು ಅನಿಸುತ್ತೆ‌.

ಇದು ಯಾವುದೋ ಕ್ಯಾಂಪೇನ್ ವೇಳೆಯಲ್ಲಿ ರಸ್ತೆಯಲ್ಲಿ ಇಟ್ಟಿರುವ ಒಂದು ಫೋಟೋ ನೋಡಿದಾಗ ಅದು ಯಾವ ಕ್ಯಾಂಪೇನ್ ಎನ್ನುವುದು ನಮಗೆ ತಿಳಿಯದೇ ಹೋದರೂ, ಆ ಫೋಟೋ ಮೇಲೆ ನಾಯಿ ಮೂತ್ರ ವಿಸರ್ಜನೆ ಮಾಡುವ ವೇಳೆಗೆ ಸರಿಯಾಗಿ ಫೋಟೋಗ್ರಾಫರ್ ಫೋಟೋ ಕ್ಲಿಕ್ ಮಾಡಿದ್ದಾನೆ. ಫೋಟೋ ಗೆ ಜಬರ್ದಸ್ತ್ ಅವಮಾನ ಆದ ಹಾಗೆ ಕಾಣ್ತಾ ಇದೆ ಇಲ್ಲಿ.

ಆರಾಮವಾಗಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಅವರ ಫೋಟೋ ಹೀಗೆ ಕಾಣಬಹುದು ಅನ್ನೋ ಸಣ್ಣ ಸುಳಿವು ಕೂಡಾ ಇಲ್ಲ ಎನ್ನಬಹುದು. ಇಲ್ಲಿ ಕೂಡಾ ಫೋಟೋಗ್ರಾಫರ್ ನ ಕೈ ಚಳಕಕ್ಕೆ ನಾವು ಮೆಚ್ಚುಗೆಯನ್ನು ನೀಡಲೇಬೇಕು.

ಸೈನ್ ಬೋರ್ಡ್ ಅಥವಾ ಸೂಚನಾ ಫಲಕದ ಮೇಲೆ ಕುಳಿತ ಪಕ್ಷಿಯ ಈ ಫೋಟೋ ನೋಡಿದಾಗ ನಮಗೆ ನಗು ಬರುತ್ತೆ. ಮುಗ್ಧ ಪಕ್ಷಿಗೆ ತಾನು ಎಲ್ಲಿ ಕುಳಿತಿದ್ದೇನೆ ಎನ್ನುವುದೇ ಗೊತ್ತಿಲ್ಲ. ಇನ್ನು ಈ ಸೈನ್ ಬೋರ್ಡ್ ಬರೆದವನನ್ನು ಮೆಚ್ಚಲೇಬೇಕು‌. ಏಕೆಂದರೆ ಹಕ್ಕಿ ಅಲ್ಲಿ ಕೂರಬಾರದು ಎಂದು ಹಾಕಿದ ಸೂಚನೆ ಹಕ್ಕಿಗೆ ಅರ್ಥವಾಗುತ್ತದೆಯೇ??? 

ಕೊನೆಯ ಫೋಟೋ ನೋಡಿದಾಗ ಗೊಂದಲ ಆಗುತ್ತೆ. ಫೋಟೋ ತೆಗೆದಿರುವ ಚಾಣಾಕ್ಷತನ ಅಲ್ಲಿ ಕಾಣುತ್ತದೆ. ಸೂಟು ಬೂಟು ಹಾಕಿರುವ ವ್ಯಕ್ತಿಯ ದೇಹ, ಕುದುರೆಯ ತಲೆ ಬಹಳ ವಿಚಿತ್ರವಾಗಿ ಕಾಣುತ್ತದೆ. ಕೆಲವರಿಗೆ ಕುದುರೆ ಆ ವ್ಯಕ್ತಿಯ ತಲೆ ನುಂಗಿತೇನೋ ಎನ್ನುವಂತೆಯೂ ಕಾಣುತ್ತಿದೆ.