ನಡೆದುಕೊಂಡೇ ಸೋತು ಸುಣ್ಣವಾಗಿ ಮನೆಗೆ ಬಂದಿದ್ದ ಮಗ, ಅಮ್ಮ ಬಾಗಿಲೂ ತೆರೆಯಲಿಲ್ಲ! ಊಟವೂ ಕೊಡಲಿಲ್ಲ!
ಇಂದಿನ ಕಾಲದಲ್ಲಿ ಅಣ್ಣ-ತಮ್ಮಂದಿರಿಂದ, ಮಗ-ತಾಯಿಯಿಂದ ಮತ್ತು ಪತಿ-ಪತ್ನಿಯಿಂದ ದೂರವಾಗುತ್ತಿರುವ ಹಲವಾರು ಘಟನೆಗಳು ನಡೆಯುತ್ತಿವೆ. ಇಂತಹದೇ ಒಂದು ಘಟನೆ ಜಮಲಾಪುರ್ ನಲ್ಲಿಯ ಛೋಟಿ ಕೇಶೋಪುರ್ ಎಂಬಲ್ಲಿ ನಡೆದಿದೆ. ಈ ಘಟನೆ ಪ್ರತಿಯೊಬ್ಬರ ಹೃದಯ ಬಡಿತ ಹೆಚ್ಚಿಸುವದು ಖಚಿತ. ನಡೆದದ್ದು ಏನೆಂದರೆ, ಛೋಟಿ ಕೇಶೋಪುರ್ ನಿವಾಸಿಯಾದ ಜಗದೀಶ್ ಶಾಹ ಅವರ ಮಗ ಲಲನ್ ಕುಮಾರ ಮುಂಬಯಿ ಯಿಂದ ಟ್ರೇನ್, ಬಸ್, ಹಾಗೆ ನಡೆಯುತ್ತ ತುಂಬಾ ದಣಿದು ತನ್ನ ತಾಯಿಯ ಮನೆಗೆ ಬಂದು ತಲುಪಿದ, ಇನ್ನೇನೂ ತನ್ನ ಮನೆಯೊಳಗೆ ಹೆಜ್ಜೆ ಇಡಬೇಕು ಎನ್ನುವಷ್ಟರಲ್ಲಿ ಒಳಗಿನಿಂದ ಹೆತ್ತ ತಾಯಿ ಬಾಗಿಲನ್ನು ಮುಚ್ಚಿದಳು.

ಮಗ ತುಂಬಾ ಕಷ್ಟಪಟ್ಟು ಅಮ್ಮನ ಕಡೆಗೆ ಬಂದಿದ್ದ, ಅಲ್ಲದೆ ತುಂಬಾ ಆಯಾಸ ಹಾಗೂ ಹಸಿವು ಏನನ್ನು ಲೆಕ್ಕಿಸದೆ ಸತತವಾಗಿ ಪ್ರಯತ್ನ ಪಡುತ್ತಾ ಮನೆಗೆ ಬಂದಿದ್ದ ಮಗನನ್ನು ಏನು ಕೇಳದೆ ಮಗನಿಗೆ ಹೊರಗೆ ನಿಲ್ಲಿಸಿ ಬಾಗಿಲು ಹಾಕಿದಳು, ಲಲನ್ ತನ್ನ ತಾಯಿಯನ್ನು ಬಾಗಿಲು ತೆರೆಯುವಂತೆ ತುಂಬಾ ಹೊತ್ತು ಬೇಡಿಕೊಂಡನು ಆದರೆ ಕೋರೊನಾ ವೈರಸ್ ಗೆ ಹೆದರಿದ ತಾಯಿಯ ಹೃದಯ ಮಗನಿಗಾಗಿ ಕರಗಲಿಲ್ಲ, ನೀನು ಮುಂಬಯಿಯಿಂದ ಬಂದಿರುವೆ ಮೊದಲು ನೀನು ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಕೊಂಡು ಬಾ, ತದನಂತರ ನಾನು ಮನೆಯೊಳಗಡೆ ಸೇರಿಸಿಕೊಳ್ಳುವೆ ಎಂದು ಮಗನಿಗೆ ಹೇಳಿದಳು. ಆದರೆ ಮಗ ಪ್ರತ್ಯುತ್ತರವಾಗಿ, “ಅಮ್ಮಾ ನನಗೆ ಏನೂ ಆಗಿಲ್ಲ, ನಾನು ಸರಿಯಾಗಿಯೇ ಇದ್ದೇನೆ ” ಎಂದು ಹೇಳಿದನು. ಇಷ್ಟೆಲ್ಲ ಹೇಳಿದರು ಸಹ ತಾಯಿ ಬಾಗಿಲು ತಗೆಯಲಿಲ್ಲ. ತದನಂತರ ಆತನನ್ನು ಅಲ್ಲಿದ್ದ ಜನರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ವಿಷಯ ತಿಳಿದ ಕೂಡಲೇ ಕೌನ್ಸಲರ್ ಸನಮ್ ಅವರು ತಮ್ಮ ಆರೋಗ್ಯ ಅಧಿಕಾರಿಗಳ ಜೊತೆಗೂಡಿ ಅವನಿದ್ದ ಸ್ಥಳಕ್ಕೆ ಹೋಗಿ ಅವನನ್ನು ತಪಾಸಣೆ ಮಾಡಿದರು. ಅಲ್ಲದೆ ಲಲನ್ ಗೆ ಕ್ವಾರಂಟೈನ್ ಸೆಂಟರ್ ನಲ್ಲಿ ಕಳುಹಿಸಿದರು.