ಸತ್ತ ಹೆಂಡತಿಗೆ ವರ್ಷಗಳ ಕಾಲ ಗಂಡ ಮೆಸ್ಸೆಜ್ ಕಳಿಸುತ್ತಲೇ ಇದ್ದ : ಕೊನೆಗೆ ಒಂದು ದಿನ ರಿಪ್ಲೆ ಬಂದೆ ಬಿಟ್ಟಿತು!

ಈ ಜಗತ್ತನ್ನು ತೊರೆದ ತನ್ನ ಹೆಂಡತಿಯನ್ನು ನೆನಪಿಟ್ಟುಕೊಳ್ಳಲು ಈ ಪತಿ ಆಕೆ ಜೀವಂತ ಇದ್ದಾಗ ಬಳಸುತ್ತಿದ್ದ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸುವ ವಿಧಾನವನ್ನು ಅಳವಡಿಸಿಕೊಂಡ! ರಿಪ್ಲೆ ಬರಲ್ಲ ಅಂತ ಗೊತ್ತಿದ್ದೂ ಕಳಿಸುತ್ತಿದ್ದ, ಆದರೆ ಕೊನೆಗೂ ಒಂದು ದಿನ ಆತ ಆ ಸಂದೇಶಗಳಿಗೆ ಉತ್ತರವನ್ನು ಪಡೆದೇಬಿಟ್ಟ! ಪ್ರೀತಿಪಾತ್ರರ ಸಾವಿನ ಆಘಾತವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ಅನೇಕ ಜನರು ಅದನ್ನು ಮರೆಯಲು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ.

ಅದೇ ರೀತಿ ಬ್ರಿಟನ್ನಿನ ಈ ವ್ಯಕ್ತಿ ಹೆಂಡತಿಯ ಮರಣದ ನಂತರ ತುಂಬಾ ದುಃಖಿತನಾದನು, ಹೆಂಡತಿ ಇನ್ನು ಮುಂದೆ ಈ ಜಗತ್ತಿನಲ್ಲಿ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆತನಿಗೆ ಆಗಲೇ ಇಲ್ಲ. ತನ್ನ ಹೆಂಡತಿಯ ನೆನಪಿಗಾಗಿ ಅವನು ಅವಳ ಮೊಬೈಲ್ ಸಂಖ್ಯೆಗೆ ಸಂದೇಶಗಳನ್ನು ಕಳುಹಿಸತೊಡಗಿದನು. ವರ್ಷಗಳ ಕಾಲ ಕಳಿಸಿದರೂ ಯಾವುದೇ ರಿಪ್ಲೆ ಬರಲಿಲ್ಲ, ಬರುವುದಾದರೂ ಹೇಗೆ!

ಆದರೆ ಒಂದು ದಿನ ಅವರು ತಮ್ಮ ಹೆಂಡತಿಯ ಸಂಖ್ಯೆಯಿಂದ ರಿಪ್ಲೆ ಪಡೆದರು ಮತ್ತು ಆ ವ್ಯಕ್ತಿಗೆ ಶಾಕ್ ಆಯಿತು! ಮಿರರ್ ಪ್ರಕಾರ, ಈ ವ್ಯಕ್ತಿ ತನ್ನ ಹೆಂಡತಿಯನ್ನು ನೆನಪಿಟ್ಟುಕೊಳ್ಳುವ ಮಾರ್ಗವೆಂದರೆ, ಪ್ರತಿವರ್ಷ ತಾಯಂದಿರ ದಿನದಂದು ಅವನು ತನ್ನ ಹೆಂಡತಿಯ ಸಂಖ್ಯೆಗೆ ಹ್ಯಾಪಿ ಮದರ್ಸ್ ಡೇ ಸಂದೇಶವನ್ನು ಕಳುಹಿಸುತ್ತಿದ್ದನು.

ಆರಂಭದಲ್ಲಿ ಕೆಲವು ವರ್ಷ ಯಾವುದೇ ಉತ್ತರವನ್ನು ಪಡೆಯಲಿಲ್ಲ, ನಂತರ ಒಂದು ದಿನ ಅವರು ಆ ಸಂಖ್ಯೆಯಿಂದ ಉತ್ತರವನ್ನು ಪಡೆದರು. ಈ ಘಟನೆ ಅವನಿಗೆ ಆಹ್ಲಾದಕರ ಆಶ್ಚರ್ಯವನ್ನುಂಟು ಮಾಡಿತು. ತನ್ನ ತೀರಿ ಹೋದ ಹೆಂಡತಿಯೇ ರಿಪ್ಲೆ ಮಾಡಿದಷ್ಟು ಖುಷಿಯಾಯಿತು.

ಹೇಗೆ?
ತಾಯಿಯ ದಿನದಂದು ಒಂದು ಮುದ್ದಾದ ಸಂದೇಶವನ್ನು ಸ್ವೀಕರಿಸಿದ ನಂತರ ತನ್ನ ಹೆಂಡತಿಯ ಸಂಖ್ಯೆಯಿಂದ ರಿಪ್ಲೆ ಬಂತು, ಅದು “ನೀವು ಯಾರು?” ಎಂಬುದಾಗಿತ್ತು. ಅದು ಆ ವ್ಯಕ್ತಿಗೆ ಸ್ವಲ್ಪ ಆಘಾತಕಾರಿಯಾಗಿತ್ತಾದರೂ, ಮೊದಲ ಬಾರಿಗೆ ಯಾರಾದರೂ ನನ್ನ ಸಂದೇಶಕ್ಕೆ ಉತ್ತರವನ್ನು ಕಳುಹಿಸಿದ್ದಾರಲ್ಲ ಎಂದು ಖುಷಿಯಾಯಿತು. ವಾಸ್ತವದಲ್ಲಿ ಅವರ ಸಂಖ್ಯೆಯನ್ನು ಬೇರೆಯವರಿಗೆ ಅಲಾಟ್ ಮಾಡಲಾಗಿತ್ತು, ಅವರೇ ರಿಪ್ಲೆ ಮಾಡಿದ್ದರು.

ತಕ್ಷಣ ಆತ ಅವರಿಗೆ ರಿಪ್ಲೆ ಮಾಡಿದ “ಕ್ಷಮಿಸಿ, ಇದು ನನ್ನ ದಿವಂಗತ ಪತ್ನಿಯ ಸಂಖ್ಯೆ, ಅವಳ ನೆನಪಿಗಾಗಿ ನಾಣು ಸಂದೇಶ ಕಳಿಸುತ್ತಿದ್ದೆ, ಯಾರೂ ರಿಪ್ಲೆ ಮಾಡಲ್ಲ ಅಂದುಕೊಂಡಿದ್ದೆ, ಕ್ಷಮಿಸಿ, ನಾನು ಇನ್ನು ಮುಂದೆ ಸಂದೇಶ ಕಳಿಸುವುದಿಲ್ಲ, ದೇವರು ನಿಮಗೆ ಒಳ್ಳೆದು ಮಾಡಲಿ” ಎಂಬರ್ಥದಲ್ಲಿ ಉತ್ತರಿಸಿದ.

ಸೋಶಿಯಲ್ ಮೀಡಿಯಾದಲ್ಲಿ ಜನರ ಭಾವುಕರಾದರು :
ಈ ಕಥೆಯನ್ನು ರೆಡ್ಡಿಟ್ ನಲ್ಲಿ ಓದಿದ ನಂತರ ಜನರು ಬಗ್ಗೆ ಸಾಕಷ್ಟು ಪ್ರತಿಕ್ರಿಯಿಸಿದ್ದಾರೆ. ತನ್ನ ಸೋದರ ಸಂಬಂಧಿಯ ಮರಣದ ನಂತರ ಅವನು ಸ್ವತಃ ಅದೇ ರೀತಿ ಮಾಡುತ್ತಿದ್ದನು ಎಂದು ಯಾರೋ ಬರೆದಿದ್ದಾರೆ, ಅವರು ತುಂಬಾ ಕೆಟ್ಟ ರಿಪ್ಲೆ ಪಡೆದಿದ್ದರು. ಅನೇಕ ಜನರು ತಮ್ಮ ಕಥೆಯನ್ನು ಹಂಚಿಕೊಂಡರು ಮತ್ತು ಅವರು ಅದೇ ರೀತಿ ಮಾಡುತ್ತಿದ್ದರಂತೆ.