ತನ್ನ ಪತಿಯ ಸೀಕ್ರೆಟ್ ತಿಳಿಯಲು ಫೇಕ್ ಅಕೌಂಟ್ ಮಾಡಿಕೊಂಡ ಮಹಿಳೆ : ಆತನ ಅಸಲಿಯತ್ತು ನೋಡಿ ದಂಗಾಗಿ ಹೋದಳು!

ಭಾರತದಲ್ಲಷ್ಟೇ ಅಲ್ಲ, ಬಹುತೇಕ ಎಲ್ಲ ದೇಶಗಳಲ್ಲಿ ಗಂಡ – ಹೆಂಡತಿ ಜಗಳ, ಮೋಸದಾಟ, ಮನಸ್ತಾಪ ಇದ್ದಿದ್ದೇ. ಅವುಗಳನ್ನು ಹ್ಯಾಂಡಲ್ ಮಾಡುವ ಬಗೆ ಮಾತ್ರ ಬೇರೆ ಬೇರೆಯಾಗಿರಯತ್ತವೆ. ಅಮೆರಿಕಾದಲ್ಲಿ ಮಹಿಳೆಯೊಬ್ಬರು ತನ್ನ ಗಂಡನ ವಿಚಿತ್ರ ವರ್ತನೆಗಳಿಂದ ಬೇಸತ್ತು ತಾನು ಅನುಭವಿಸುತ್ತಿರುವ ತೊಂದರೆಗಳು ಹಾಗೂ ಸಮಸ್ಯೆಗಳನ್ನು ಕುರಿತಾಗಿ ರಿಲೇಶನ್ಶಿಪ್ ತಜ್ಞರನ್ನು ಸಂಪರ್ಕಿಸಿ ಅವರ ಸಹಾಯವನ್ನು ಬೇಡಿದ್ದಾರೆ.

ಮಹಿಳೆಯು ನಾನು ನನ್ನ ಗಂಡನೊಂದಿಗೆ ಕಳೆದ 14 ವರ್ಷಗಳಿಂದ ಜೊತೆಯಾಗಿದ್ದೇನೆ. 11 ವರ್ಷಗಳ ಹಿಂದೆ ನಮಗೆ ಮದುವೆಯಾಯಿತು. ಮದುವೆಗೆ ಮೊದಲೇ ನನ್ನ ಗಂಡನಿಗೆ ಬಹಳಷ್ಟು ಜನ ಮಹಿಳೆಯರ ಪರಿಚಯ ಹಾಗೂ ಮಾಜಿ ಗರ್ಲ್ ಫ್ರೆಂಡ್ ಗಳು ಇದ್ದಾರೆ ಎನ್ನುವ ವಿಷಯ ನನಗೆ ಗೊತ್ತಾಗಿತ್ತು.

ಆದರೆ ನನ್ನ ಗಂಡ ಆ ವಿಷಯವನ್ನು ನನ್ನಿಂದ ಯಾವಾಗಲೂ ಮುಚ್ಚಿಡುವ ಪ್ರಯತ್ನವನ್ನು ಮಾಡುತ್ತಿದ್ದರು. ನನಗೆ ಎಲ್ಲಾ ವಿಷಯಗಳು ಗೊತ್ತಾಗಿದೆ ಎಂದು ಅವರಿಗೆ ತಿಳಿದ ಮೇಲೆ ಅಂತಹ ವಿಷಯಗಳನ್ನು ಬಹಿರಂಗವಾಗಿ ಹೇಗೆ ಮಾತನಾಡುವುದು ಎಂದು ನನಗೆ ಅದಾವುದನ್ನೂ ಹೇಳಲಿಲ್ಲ ಎಂದು ತನ್ನ ಗಂಡ ಹೇಳಿದ್ದರು ಎಂದಿದ್ದಾರೆ.

ತನ್ನ ಗಂಡ ಮಹಿಳೆಯರಿಂದ ಆಕರ್ಷಿತವಾಗಿದ್ದು ನಿಜ, ಆದರೆ ಅದೆಲ್ಲಾ ಕೇವಲ ಸ್ನೇಹ ಮಾತ್ರ ಇನ್ನೇನು ಇಲ್ಲ ಎಂದು ಹೇಳಿದ್ದರು ಎಂದು ಆಕೆ ತಿಳಿಸಿದ್ದಾರೆ. ಆದರೆ ಈಗ ಹನ್ನೊಂದು ವರ್ಷಗಳ ನಂತರ ಮತ್ತೊಮ್ಮೆ ನನ್ನ ಪತಿಯ ಮಹಿಳಾ ಗೆಳತಿಯರ ಬಗ್ಗೆ ತಿಳಿದು ಬಂದಿದೆ. ಆ ಗೆಳತಿಯರು ಅವರಿಗೆ ವಿವಿಧ ಡೇಟಿಂಗ್ ಸೈಟ್ ಗಳ ಮೂಲಕ ಪರಿಚಯವಾಗಿದ್ದಾರೆ.

ಇಂತಹ ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಗಂಡನ ಜೊತೆ ಬೈಕ್ ನಲ್ಲಿ ಲಾಂಗ್ ಡ್ರೈವ್ ಹೋಗಿದ್ದಾಳೆ. ಅಲ್ಲದೇ ಆಕೆಗೆ ನನ್ನ ಗಂಡ ತಾನು ಸಿಂಗಲ್ ಎಂದು ಹೇಳಿದ್ದು ಆಕೆಗೆ ನನ್ನ ಬಗ್ಗೆ ಏನೂ ತಿಳಿದಿಲ್ಲ ಮಹಿಳೆ ಮಾಹಿತಿಯನ್ನು ನೀಡಿದ್ದಾರೆ.

ಆಗ ಮಹಿಳೆ ಗಂಡನನ್ನು ಈ ವಿಚಾರದ ಕುರಿತಾಗಿ ಪ್ರಶ್ನೆ ಮಾಡಿದಾಗ, ಆತ ನೀನು ಯಾವಾಗಲೂ ಮಕ್ಕಳ ಜೊತೆ ಬ್ಯುಸಿಯಾಗಿರುವೆ, ಅದಕ್ಕೆ ನಾನು ಕೇವಲ ಚಾಟ್ ಮಾಡಲು ಆಕೆಯನ್ನು ಪರಿಚಯ ಮಾಡಿಕೊಂಡಿದ್ದೇನೆ. ಸ್ನೇಹಕ್ಕಿಂತ ಹೆಚ್ಚಿಗೆ ಏನೂ ಇಲ್ಲ ಎಂದು ಈ ಹಿಂದೆ ಹೇಳಿದಂತೆ ಹೇಳಿದರು ಎಂದು ಮಹಿಳೆ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಹಾಗೇ ಮುಂದುವರೆಸಿದ ಮಹಿಳೆ, ಇತ್ತೀಚಿಗೆ ನನಗೆ ಇನ್ನೊಂದು ಹೊಸ ವಿಷಯ ಬೇರೆ ಗೊತ್ತಾಗಿದೆ. ಅದೇನೆಂದರೆ ನನ್ನ ಪತಿ ಹಲವು ಮಹಿಳೆಯರಿಗೆ ಆತನ ಪತ್ನಿ ಸ ತ್ತು ಹೋಗಿದ್ದಾಳೆ ಎಂದು ಹೇಳಿದ್ದಾರೆ. ನನ್ನ ಗಂಡ ಆ ಮಹಿಳೆಯರಿಗೆ ಕರೆ ಮತ್ತು ಸಂದೇಶ ಕಳುಹಿಸುತ್ತಾರೆ.

ಆ ಮಹಿಳೆಯರು ಸಹ ನನ್ನ ಪತಿಯನ್ನು ಆಗಾಗ ಭೇಟಿಯಾಗಲು ಕರೆಸಿಕೊಳ್ಳುತ್ತಾರೆ. ಆದರೆ ಅವರಲ್ಲಿ ಯಾರನ್ನೂ ನಾನು ಭೇಟಿ ಮಾಡಿಲ್ಲ. ನಾನು ನನ್ನ ಪತಿಯನ್ನು ಆನ್ಲೈನ್ ನಲ್ಲೇ ನೇರವಾಗಿ ಹಿಡಿಯಲು, ಅವರ ಮೋಸದ ಆಟವನ್ನು ಕಂಡುಕೊಳ್ಳಲು ನನ್ನ ಪತಿ ಯಾವ ಯಾವ ಡೇಟಿಂಗ್ ಸೈಟ್ ನಲ್ಲಿ ಅಕೌಂಟ್ ಮಾಡಿದ್ದಾರೆಯೋ, ಅದರಲ್ಲಿ ನಾನು ಒಂದು ನಕಲಿ ಅಕೌಂಟ್ ತೆರೆದೆ.

ನಾನು ಆ ನಕಲಿ ಖಾತೆಯಿಂದ ಮೆಸೆಜ್ ಮಾಡಿದೆ. ಮೊದಲು ಆತ ಸಾಮಾನ್ಯವಾಗಿ ಮಾತನಾಡುತ್ತಿದ್ದ, ಕೆಲವು ದಿನಗಳಾದ ಮೇಲೆ ತನ್ನ ಫೋಟೋ ಕಳುಹಿಸಿದ. ನನ್ನನ್ನು ಭೇಟಿ ಮಾಡಲು ಪದೇ ಪದೇ ಕೇಳಿದ. ಆನ್ಲೈನ್ ನಲ್ಲಿ ಮಾತನಾಡುವಾಗ ಆತ ಹೇಳಿದ ಮಾತು ಕೇಳಿ ನಾನು ದಂಗಾಗಿ ಹೋದೆ.

ಆತ ಅಲ್ಲಿ ಚಾಟ್ ಮಾಡುತ್ತಿರುವುದು ನನ್ನೊಂದಿಗೆ ಎಂದು ತಿಳಿಯದೇ ಕೆಲವು ವರ್ಷಗಳ ಹಿಂದೆ ಆತನ ಪತ್ನಿ ಸತ್ತು ಹೋದಳೆಂದು, ಆ ನೋವಿನಿಂದ ಹೊರ ಬರಲು ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದ. ನನ್ನನ್ನು ಭೇಟಿ ಮಾಡಲು ಹಲವು ಸಲ ಪ್ರಯತ್ನ ಮಾಡಿದ. ಆದರೆ ನಾನು ಪ್ರತಿ ಸಲವೂ ಭೇಟಿ ಸಾಧ್ಯವಿಲ್ಲ ಎಂದು ತಪ್ಪಿಸಿಕೊಳ್ಳುತ್ತಿದೆ.

ಆತ ಯಾವ ಸಮಯದಲ್ಲಿ ಡೇಟಿಂಗ್ ಸೈಟ್ ನಲ್ಲಿ ಚಾಟ್ ಮಾಡುತ್ತಿದ್ದನೋ ಆಗ ನನ್ನ ಬಳಿ ಆಫೀಸಿನ ಕೆಲಸ ಇದೆ ಎಂದು ಹೇಳಿದ್ದರು. ಅಲ್ಲದೇ ಅವರು ಆ ಸೈಟ್ ನಲ್ಲಿ ಸೆ ಕ್ಸ್ ಬಗೆಗೆ ಏನು ಹೇಳುತ್ತಿದ್ದರೋ, ಆ ರಾತ್ರಿ ನನ್ನೊಂದಿಗೆ ಅದೇ ರೀತಿ ವರ್ತಿಸುತ್ತಿದ್ದರು ಎಂದು ಮಹಿಳೆ ಹೇಳಿದ್ದಾರೆ.

ಮಹಿಳೆ ತಜ್ಞರಿಗೆ ಬರೆದ ಪತ್ರದಲ್ಲಿ, ನನ್ನ ಗಂಡ ಸ್ನೇಹಕ್ಕಾಗಿ ಒಂದು ಡೇಟಿಂಗ್ ಸೈಟ್ ಅಥವಾ ಬೇರೆಯವರ ಬಳಿ ಏತಕ್ಕೆ ಹೋಗುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ಈ ಹಿಂದೆ ನಾವು ಒಮ್ಮೆ ಕಪಲ್ ಕೌನ್ಸಿಲಿಂಗ್ ಗೆ ಹೋಗಿ ಬಂದಿದ್ದೇವೆ. ಅದರಿಂದ ನನಗೆ ಸಾಕಷ್ಟು ಸಹಾಯವಾಗಿತ್ತು. ಆದರೆ ಈಗ ಮತ್ತೆ ಅದೇ ನಡೆಯುತ್ತಿದೆ.

ನಾನೀಗ ಏನು ಮಾಡುವುದು? ನನ್ನ ಮದುವೆಯನ್ನು ಹೇಗೆ ಉಳಿಸಿಕೊಳ್ಳುವುದು? ಪುರುಷರಿಗೆ ಏಕೆ ಇದೆಲ್ಲಾ ಸಾಮಾನ್ಯವಾಗಿದೆ. ನಾನು ಓವರ್ ರಿಯಾಕ್ಟ್ ಮಾಡುತ್ತಿದ್ದೇನೆಯೇ? ಎಂದು ಆಕೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರಿಲೇಷನ್ ಶಿಪ್ ತಜ್ಞರು, ನೀವು ನಿಮ್ಮ ಪತಿಯ ಸತ್ಯಾಂಶವನ್ನು ತಿಳಿಯುವ ಪ್ರಯತ್ನವನ್ನು ಮಾಡಿ ಒಳ್ಳೆಯ ಕೆಲಸವನ್ನೇ ಮಾಡಿರುವಿರಿ ಎಂದಿದ್ದಾರೆ.

ನೀವು ಓವರ್ ರಿಯಾಕ್ಟ್ ಮಾಡುತ್ತಿಲ್ಲ. ನಿಮ್ಮ ಪತಿ ಮಾಡುತ್ತಿರುವುದು ಸರಿಯಲ್ಲ, ಅದನ್ನು ಸ್ವೀಕರಿಸುವುದು ಸಾಧ್ಯವಿಲ್ಲ. ನೀವು ಕ್ಷಮಿಸುವ ಗುಣ ಹೊಂದಿದ್ದು, ನಿಮ್ಮ ಪತಿಗೆ ಅದರ ಮೌಲ್ಯ ತಿಳಿದಿಲ್ಲ ಅದಕ್ಕೆ ಅವರು ಮತ್ತೆ ತಪ್ಪು ಮಾಡುತ್ತಿದ್ದಾರೆ. ನಿಮ್ಮ ಪತಿ ಭರವಸೆಗೆ ಲಾಯಕ್ಕಾದ ವ್ಯಕ್ತಿ ಖಂಡಿತ ಅಲ್ಲ. ನಿಮ್ಮ ಪತಿಯ ವರ್ತನೆ ಒಂದು ದೊಡ್ಡ ಸಮಸ್ಯೆಯಾಗಿದೆ ಎಂದರು.

ನಿಮ್ಮ ಪತಿಗೆ ಆತ ಬೇರೊಂದಿಗೆ ಶಾರೀರಕ ಸಂಬಂಧ ಮಾಡುವವರೆಗೂ ಅವರಿಗೆ ಸಂತುಷ್ಟಿ ಸಿಗುವುದಿಲ್ಲ ಎನ್ನುವ ಭಾವನೆಯಲ್ಲಿ ಇದ್ದಾರೆ. ಇಂತಹ ವ್ಯಕ್ತಿಯ ಜೊತೆ ಇರುವುದು ಒಳ್ಳೆಯದೋ ಅಲ್ಲವೋ ಎಂಬುದನ್ನು ನೀವು ಆಲೋಚನೆ ಮಾಡಬೇಕಿದೆ. ನೀವು ಆತನ ಜೊತೆಗೆ ಇರಲು ಬಯಸಿದರೆ ಆಗ ನೀವು ನಿಮ್ಮ ಮಾನಸಿಕ ಸ್ಥಿತಿ ಅಥವಾ ಆಲೋಚನೆಗಳಿಗೆ ಕಡಿವಾಣ ಹಾಕಬೇಕಾಗುತ್ತದೆ ಎಂದು ತಜ್ಞರು ಮಹಿಳೆಯ ಸಮಸ್ಯೆಗೆ ಒಂದು ಉತ್ತರವನ್ನು ನೀಡುವ ಪ್ರಯತ್ನ ಮಾಡಿದ್ದಾರೆ.