Tik Tok ರೇಟಿಂಗ್ ನಲ್ಲಿ ಮತ್ತೆ ಏರಿಕೆ! ಇನ್ನೂ ಸುಧಾರಣೆಯಾಗುವ ಸಾಧ್ಯತೆ, ಇದರ ಹಿಂದಿನ ಕಾರಣವೇನು?
ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಟಿಕ್ ಟಾಕ್ ವಿರುದ್ಧ ಯುಟ್ಯೂಬ್ ವಾರ್ ದಲ್ಲಿ ಇದೀಗ ಫೇಸ್ ಬುಕ್, ಇನ್ಸ್ಟಾಗ್ರಾಮ್ ಈ ಪ್ಲಾಟ್ ಫಾರ್ಮ್ ದಲ್ಲಿ ಎಕ್ಟಿವ್ ಇದ್ದ ‘ಮೀಮರ್ಸ್’ ಸಹ ಸಹಾಭಾಗಿಯಾಗಿದ್ದಾರೆ. ಇದರಿಂದ ಟಿಕ್ ಟಾಕ್ ಮತ್ತೆ ಹಿಂದೆ ಬೀಳಲು ಕಾರಣವಾಯ್ತು. ಗೂಗಲ್ ಪ್ಲೇ ಸ್ಟೋರ್ ನಲ್ಲಿ 4.5 ರೇಟಿಂಗ್ ನಲ್ಲಿದ್ದ ಈ ಆಪ್ ಕೆಲವೇ ದಿನಗಳಲ್ಲಿ 1.2 ರೇಟಿಂಗ್ ಗೆ ಬಂದು ಮುಗ್ಗರಿಸಿತ್ತು.BanTikTok ಈ ಟ್ರೆಂಡ್ ಜೋರಾಗಿದ್ದಾಗ ಟಿಕ್ ಟಾಕ್ ರೇಟಿಂಗ್ ಇನ್ನು ಕಡಿಮೆಯಾಗುತ್ತೆ ಎನ್ನುವಂತಾಗಿತ್ತು. ಆದರೆ ಆದದ್ದೇ ಬೇರೆ. ಸದ್ಯಕ್ಕೆ ಈಗ 1.6 ರೇಟಿಂಗ್ ನಲ್ಲಿದ್ದು ಇದು ಇನ್ನಷ್ಟು ಹೆಚ್ಚಾಗಿ ಮತ್ತೆ 4* ರೇಟಿಂಗ್ ಸಮೀಪ ಹೋಗುವ ಸಾಧ್ಯತೆಯ ಹಿಂದಿನ ಕಾರಣಗಳೇನು ಎಂಬುದನ್ನು ನೀವೇ ನೋಡಿ.

ಗೂಗಲ್ ತನ್ನ ಪ್ಲಾಟ್ ಫಾರ್ಮ್ ನಲ್ಲಿ ಯಾವುದೇ ರಿವ್ಯೂವ್ ಬಗ್ಗೆ ಸರಿಯಾಗಿ ಮತ್ತು ವಿಚಾರಪೂರ್ವಕ ನಿರ್ಣಯಗಳನ್ನು ತೆಗೆದುಕೊಳ್ಳುತ್ತೆ. ಅವರು ರೀವ್ಯೂವ್ ಪಾಲಿಸಿ ತಯಾರಿಸುವಾಗ ಯಾವುದೇ ಡಿವಲಪರ್ ಗೆ ತಪ್ಪು ಕಾರಣಗಳಿಂದ ಲಾಭ ಅಥವಾ ನಷ್ಟವಾಗದ ಹಾಗೆ ನೋಡಿಕೊಳ್ಳುತ್ತದೆ. ಗೂಗಲ್ ಪ್ರಕಾರ ರಿವ್ಯೂವ್ ಬರೀ ಪ್ರೊಡಕ್ಟ್ ಮೇಲೆ ಆಧಾರವಾಗಿರಬೇಕೆ ಹೊರತು ಬೇರೆ ಯಾವುದೇ ಕಾರಣದಿಂದ ಪ್ರೇರಿತವಾಗಿದ್ದರೆ ಅದರ ರಿವ್ಯೂವ್ ತೆಗೆದು ಹಾಕುವ ಅಥವಾ ಕಡಿತ ಗೊಳಿಸುವ ಅಧಿಕಾರ ಗೂಗಲ್ ತನ್ನ ಕಡೆಗೆ ಇಟ್ಟುಕೊಂಡಿದೆ. ತನ್ನ ಪರಮ ಶತ್ರು ಟಿಕ್ ಟಾಕ್ ಗೆ ಇದರಿಂದ ಲಾಭವಾಗುತ್ತಿದ್ದರೂ ಸಹಿತ ಗೂಗಲ್ ತನ್ನ ಪಾಲಿಸಿ ಮೇಲೆ ಕಟಿಬದ್ಧವಾಗಿದೆ.
ಯಾವುದೇ App ಮುಂದೆ ಕಾಣುವ ರೇಟಿಂಗ್ ಆ App ನ ಸದ್ಯದ ಸ್ಥಿತಿಯ ಅನುಸಾರವಾಗಿರುತ್ತೆ, ಮತ್ತು ಸದ್ಯದ ವರ್ಜನ್ ಸಲುವಾಗಿರುತ್ತೆ. ಜನರು ಕೊಟ್ಟ ರೇಟಿಂಗ್ ಕೊನೆಯವರೆಗೂ ಗ್ರಹಿತವಾಗಿರುವದಿಲ್ಲ. ಆದ್ದರಿಂದ ಹೇಗೆ ಹೊಸ ಅಪ್ ಡೇಟ್ ಬರುತ್ತವೆ ಹಾಗೆ ಪ್ರತಿಯೊಂದು App ರೇಟಿಂಗ್ ನಲ್ಲಿ ಸಹಿತ ಬದಲಾವಣೆಯಾಗುವದು ಕಂಡುಬರುತ್ತೆ.

Tik Tok ರೇಟಿಂಗ್ ಹೆಚ್ಚಾಗುವ ಹಿಂದಿನ ಮಹತ್ವದ ಕಾರಣ ಜನರು ಕೊಟ್ಟ 1* ರೇಟಿಂಗ್ ಗೂಗಲ್ ತೆಗೆದು ಹಾಕಿದೆ ಎಂಬ ಸುದ್ದಿ ಇದೆ. ಇನ್ನು ಮುಂದೆಯೂ ಹೀಗೆ ರಿವ್ಯೂವ್ ತೆಗೆದು ಹಾಕುವ ಹಾಗೂ ರೇಟಿಂಗ್ ನಲ್ಲಿ ಸುಧಾರಣೆಯಾದದ್ದು ಕಂಡು ಬರುವ ಸಾಧ್ಯತೆಗಳಿವೆ. App ಗೆ ರಿವ್ಯೂವ್ ನೀಡಿ App ನ್ನು uninstall ಮಾಡಿದಾಗ ಆ ರಿವ್ಯೂವ್ Genuine ಇಲ್ಲ ಅಂತ ಅರ್ಥವಾಗುತ್ತೆ. ಆದ್ದರಿಂದ ಆ ರಿವ್ಯೂವ್ ತೆಗೆದುಹಾಕಲಾಗುತ್ತೆ.