ಏಳನೇ ಅತಿ ದೊಡ್ಡ ಶ್ರೀಮಂತ ಕ್ರಿಕೇಟಿಗನಾಗಿರುವ ಸುರೇಶ್ ರೈನಾ ಒಂದು ಕಾಲದಲ್ಲಿ ಜೀವ ಕಳೆದುಕೊಳ್ಳುವ ಬಗ್ಗೆ ಯೋಚಿಸಿದ್ದರು! ರೈನಾ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯಗಳು ಇಲ್ಲಿವೆ

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮ್ಯಾನ್ ಹಾಗೂ ಫೀಲ್ಡರ್ ಎನ್ನುವ ಹೆಗ್ಗಳಿಕೆ ಪಡೆದಿರುವ ಕ್ರಿಕೆಟ್ ಆಟಗಾರರಲ್ಲಿ ಸುರೇಶ್ ರೈನಾ ಕೂಡ ಒಬ್ಬರು. ಇವರ ಜನ್ಮ ನವೆಂಬರ್ 27 ರಂದು ಗಾಜಿಯಾಬಾದ್ ನ ಮುರಾರ್ಜಿ ನಗರದಲ್ಲಿ ಆಯ್ತು. ಸುರೇಶ್ ರೈನಾ ಕ್ರಿಕೆಟ್ ಆಟಗಾರನಾಗಿ ಟೀಮ್ ಇಂಡಿಯಾದ ಪರವಾಗಿ ಹಲವು ಐತಿಹಾಸಿಕ ಪಂದ್ಯಗಳಲ್ಲಿ ಆಡಿದ್ದಾರೆ. ಆದರೆ ಅವರ ಜೀವನದ ಬಗ್ಗೆ ತಿಳಿದಾಗ ಅದೊಂದು ಅನೇಕ ಸಂಘರ್ಷಗಳಿಂದ ಕೂಡಿದಂತಹ ಕಥೆಯಾಗಿದೆ.

ಅವೆಲ್ಲ ಅಡೆತಡೆ ದಾಟಿಕೊಂಡು ಉನ್ನತವಾದ ಸಾಧನೆಯನ್ನು ಮಾಡಿದ್ದಾರೆ ಸುರೇಶ್ ರೈನಾ. ಒಂದು ಸಲವಂತೂ ಅವರು ಜೀವನದಲ್ಲಿ ನಡೆದ ಘಟನೆಯಿಂದ ಜೀ’ವ ಕ’ಳೆ’ದುಕೊಳ್ಳುವ ಆಲೋಚನೆಯನ್ನು ಸಹ ಮಾಡಿದ್ದರು ಎನ್ನಲಾಗಿದೆ‌! ಸುರೇಶ್ ರೈನಾ ರೈಲಿನಲ್ಲಿ ಪ್ರಯಾಣ ಹೊರಟಾಗ ನಡೆದ ಘಟನೆ ಇದು.

ರೈಲು ಆಗ್ರಾದ ಕಡೆಗೆ ಹೊರಟಿತ್ತು, ಸುರೇಶ್ ರೈನ ರೈಲಿನಲ್ಲಿ ನ್ಯೂಸ್ ಪೇಪರ್ ಅನ್ನು ಕೆಳಗೆ ಹಾಕಿಕೊಂಡು ಮಲಗಿದ್ದರು. ಚಳಿಯಿಂದ ರಕ್ಷಿಸಿಕೊಳ್ಳಲು ಪ್ಯಾಡ್, ಚೆಸ್ಟ್ ಗಾರ್ಡ್ ಮತ್ತು ಥೈ ಗಾರ್ಡ್ ಗಳನ್ನು ಧರಿಸಿಕೊಂಡೇ ಮಲಗಿದ್ದರು. ಆಗ ಅವರಿಗೆ 13ವರ್ಷ ವಯಸ್ಸು. ಲಕ್ನೋದ ಸ್ಪೋರ್ಟ್ಸ್ ಹಾಸ್ಟೆಲ್ ನಲ್ಲಿದ್ದ ದಿನಗಳವು.

ಅಂದು ಆಗ್ರಾ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಆಡಲು 12ರಿಂದ 15 ವರ್ಷದ ವಯಸ್ಸಿನ ಇನ್ನಷ್ಟು ಮಕ್ಕಳು ರೈಲಿನಲ್ಲಿ ಇದ್ದರು. ತಡರಾತ್ರಿಯಲ್ಲಿ ರೈ‌ನ ಗೆ ತನ್ನ ಎದೆಯ ಮೇಲೆ ಯಾರೋ ಕುಳಿತಿರುವಂತೆ ಅನಿಸಿತ್ತು. ಆತ ಕಣ್ಣನ್ನು ಬಿಟ್ಟಾಗ ಅವರ ಎರಡು ಕೈಗಳನ್ನು ಕಟ್ಟಿ ಹಾಕಲಾಗಿತ್ತು.

ಅವರ ಮೇಲೆ ಒಬ್ಬ ಧಡೂತಿ ಹುಡುಗ ಕುಳಿತುಕೊಂಡು ಅವರ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ. ಆಗ ರೈನಾ ಬಹಳ ಕಷ್ಟಪಟ್ಟು ಜೋರಾಗಿ ನೂಕುವ ಮೂಲಕ ತನ್ನ ಮೇಲೆ ಕುಳಿತಿದ್ದವನನ್ನು ಸ್ಟೇಷನ್ನಲ್ಲಿ ನಿಂತಿದ್ದ ರೈಲಿನಿಂದ ಹೊರಗೆ ತಳ್ಳಿದ್ದರು. ಇಂತಹ ಘಟನೆಗಳಿಂದಾಗಿಯೇ ರೈನಾ ಹಾಸ್ಟೆಲ್ ತೊರೆದು ಮನೆಗೆ ಬರುವ ಆಲೋಚನೆ ಮಾಡಿದ್ದರಂತೆ. ಒಂದು ಸಲ ಬಂದು ಜೀವ ಕಳೆದುಕೊಳ್ಳುವ ಬಗ್ಗೆ ಯೋಚಿಸಿದ್ದು ಉಂಟಂತೆ.

ರೈನಾ ತಮ್ಮ ಕೋಚ್ ನ ಬಹಳ ಪ್ರಿಯವಾದ ಆಟಗಾರರಾಗಿದ್ದರು. ಅದೇ ಕಾರಣದಿಂದಾಗಿಯೇ ಇತರೆ ಹುಡುಗರು ಇವರನ್ನು ಕಂಡು ಅಸೂಯೆಪಡುತ್ತಿದ್ದರು, ತೊಂದರೆ ಕೊಡುತ್ತಿದ್ದರು. ಕುಡಿಯುವ ಹಾಲಿನಲ್ಲಿ ಹುಲ್ಲನ್ನು ಹಾಕುವುದು, ಚಳಿಯ ದಿನಗಳಲ್ಲಿ ತಣ್ಣೀರನ್ನು ಸುರಿಯುವುದು ಹೀಗೆಲ್ಲಾ ಅವರಿಗೆ ತೊಂದರೆ ಕೊಡುತ್ತಿದ್ದರು.

ಆಗೆಲ್ಲ ಅವರನ್ನು ಹೊ’ಡೆಯಬೇಕು ಎಂದು ರೈನಾಗೆ ಅನಿಸುತ್ತಿತ್ತು, ಆದರೆ ಒಬ್ಬನನ್ನು ಹೊಡೆದರೆ ಐದು ಮಂದಿ ತಿರುಗಿ ಬೀಳುತ್ತಾರೆ ಎನ್ನುವ ಸತ್ಯ ಅವರಿಗೆ ತಿಳಿದಿತ್ತು. ಒಂದು ಸಲ ರೈನಾ ಅವರನ್ನು ಹಾಕಿ ಸ್ಟಿಕ್ ನಿಂದಲೂ ಹೊ’ಡೆಯಲಾಗಿತ್ತು. ಅವರೇ  ಹೇಳುವಂತೆ ಅವರ ಒಬ್ಬ ಗೆಳೆಯನನ್ನು ಯಾವ ರೀತಿ ಹೊಡೆಯಲಾಗಿತ್ತು ಎಂದರೆ ಆತ ಕೋ’ಮಾ ತಲುಪುವಂತೆ ಆಗಿದ್ದನಂತೆ.

ಅನಂತರ ಭ’ಯಗೊಂಡ ಇನ್ನೊಬ್ಬ ಗೆಳೆಯ ಕಟ್ಟಡದ ಮೇಲಿಂದ ಧುಮುಕಲು ಹೋಗಿದ್ದನಂತೆ. ಆಗ ರೈನಾ  ಮತ್ತು ಅವರ ಗೆಳೆಯ ನೀರಜ್ ಇಬ್ಬರು ಸೇರಿ ಆ ಹುಡುಗನಿಗೆ ಬುದ್ಧಿ ಹೇಳಿ, ನೀನು ಮಾಡುವ ಕೆಲಸದಿಂದ ಎಲ್ಲಾ ಬಂದ್ ಆಗಿಬಿಡುತ್ತದೆ ಇಂತಹ ಕೆಲಸ ಮಾಡಬೇಡ ಎಂದು ಹೇಳಿದರಂತೆ.

ಅದಾದ ನಂತರ ಹಾಸ್ಟಲ್ ಆವರಣದಲ್ಲಿ ಪೊಲೀಸರು ಗಸ್ತು ತಿರುಗಲು ಪ್ರಾರಂಭಿಸಿದರಂತೆ. ಹಾಸ್ಟೆಲ್ ನಲ್ಲಿ ಪ್ರತಾಪಗಡ, ರಾಯ್ಬರೇಲಿ, ಗೋರಕ್ಪುರ್ ಮತ್ತು ಅಜಮ್ ಗಡ ದಿಂದ ಬರುವವರು ರಾತ್ರಿ ಮಲಗುವಾಗ ತಮ್ಮ ಜೊತೆಯಲ್ಲಿ ರಿ’ವಾ’ಲ್ವ’ರ್ ಇಟ್ಟುಕೊಂಡು ಮಲಗುತ್ತಿದ್ದರಂತೆ.

ಇನ್ನೊಂದು ಘಟನೆಯಲ್ಲಿ ರೈನ ಒಮ್ಮೆ ಟ್ರಕ್ಕೊಂದರಲ್ಲಿ ಮೀರತ್ ನ ಕಡೆಗೆ ಹೋಗುವಾಗ, ಅವರು ಟ್ರಕ್ ನಿಲ್ಲಿಸಲು ಎಷ್ಟು ಕೇಳಿಕೊಂಡರೂ ಟ್ರಕ್ಕನ್ನು ಡ್ರೈವರ್ ನಿಲ್ಲಿಸಲಿಲ್ಲ. ಟ್ರಕ್ ನಲ್ಲಿ ಇನ್ನು ಕೆಲವರು ಇದ್ದರು. ಆಗ ಸುರೇಶ್ ರೈನ ಅವರಿಗೆ ಅಲ್ಲಿ ಏನು ನಡೆಯಲಿದೆ ಎಂದು ಅನುಮಾನ ಬಂದಿತ್ತಂತೆ.

ಅಲ್ಲಿರುವವರು ಹುಡುಗ ಚೆನ್ನಾಗಿದ್ದಾನೆ ಎಂದು ಅಂದುಕೊಂಡಿದ್ದರಂತೆ! ಆಗ ರೈನಾ ಟೋಲ್ ಒಂದರ ಬಳಿ ಬಹಳ ಚಾಣಾಕ್ಷತನದಿಂದ ಟ್ರಕ್ ನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದರಂತೆ. ಹಾಸ್ಟೆಲ್  ನಿಂದ ತಪ್ಪಿಸಿಕೊಂಡು ಬಂದ ರೈನಾ ಅವರನ್ನು ಅವರ ಸಹೋದರ ಒಂದು ವರ್ಷದ ನಂತರ ಮತ್ತೊಮ್ಮೆ ಹಾಸ್ಟೆಲ್ ಗೆ ಸೇರಿಸಿದರು.

ಕೋಚ್ ಜೊತೆ

ಹಾಸ್ಟೆಲ್ ನ ಆಡಳಿತ ಮಂಡಳಿ ರೈನಾ ಅವರ ಸುರಕ್ಷತೆಯ ಭರವಸೆಯನ್ನು ನೀಡಿದ್ದರು. ರೈನಾ ಹೇಳುವಂತೆ ಅವರ ತಂದೆ ಇನ್ನೂರು ರೂಪಾಯಿಯ ಮನಿಯಾರ್ಡರ್ ಕಳಿಸುತ್ತಿದ್ದರಂತೆ. ಅದರಲ್ಲಿ ಅವರು ಹಾಗೂ ಅವರ ಸ್ನೇಹಿತರು ಸಮೋಸ ಹಾಗೂ ಬಿಸ್ಕೆಟ್ ಗಳನ್ನು ಖರೀದಿ ಮಾಡಿ ತಿನ್ನುತ್ತಿದ್ದರಂತೆ.

ಆ ದಿನಗಳು ಬಹಳ ಕಷ್ಟಕರವಾಗಿತ್ತು ಎನ್ನುವ ಅವರು ಆಗ ಹಳ್ಳಿಗೆ ಬಂದಂತಹ ಸಂದರ್ಭದಲ್ಲಿ ಕ್ರಿಕೆಟ್ ಆಡುವ ತಂಡಗಳ ಆಟಗಾರರು, ನನ್ನನ್ನು ಅವರ ತಂಡದಲ್ಲಿ ಆಡುವಂತೆ ಹೇಳುತ್ತಿದ್ದರು. 4-5 ಸಿಕ್ಸ್ ಗಳನ್ನು ಹೊಡೆದರೆ ಇನ್ನೂರು ರೂಪಾಯಿಗಳನ್ನು ಕೊಡುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.

ಸುರೇಶ್ ರೈನಾ ಅವರಿಗೆ 1999 ರಲ್ಲಿ ಏರ್ ಇಂಡಿಯಾ ಕಡೆಯಿಂದ ಕ್ರಿಕೆಟ್ ಆಡುವ ಅವಕಾಶ ಒದಗಿ ಬಂತು. ಅವರು ಕೂಡಲೇ ಆ ಅವಕಾಶ ಒಪ್ಪಿಕೊಂಡರು. ಅವರಿಗೆ ಹತ್ತು ಸಾವಿರ ರೂಪಾಯಿಗಳ ಸ್ಕಾಲರ್ಶಿಪ್ ದೊರೆಯಿತು. ಅದರಲ್ಲಿ ಎಂಟು ಸಾವಿರ ರೂಪಾಯಿಗಳನ್ನು ಸುರೇಶ್ ರೈನಾ ಮನೆಗೆ ಕಳುಹಿಸಿದರು.

ಆಗ ಮನೆಗೆ ದೂರವಾಣಿ ಕರೆ ಮಾಡಿದರೆ ಒಂದು ಕರೆಗೆ 4 ರೂಪಾಯಿಗಳ ದರ ನೀಡಬೇಕಿತ್ತು. ಸುರೇಶ್ ರೈನ ಕೇವಲ ಎರಡು ನಿಮಿಷಗಳು ಮಾತ್ರ ಮಾತನಾಡುತ್ತಿದ್ದಾರಂತೆ. ಇಂತಹ ಘಟನೆ ಗಳಿಂದಲೇ ತನಗೆ ಹಣದ ಮೌಲ್ಯ ಏನೆಂದು ತಿಳಿಯಿತು ಎಂದು ಅವರು ಹೇಳುತ್ತಾರೆ.

2003ರಲ್ಲಿ ಸುರೇಶ್ ರೈನಾ ಇಂಗ್ಲೆಂಡ್  ಕ್ಲಬ್ ಕ್ರಿಕೆಟ್ ಆಡಲು ಹೋದರು. ಒಂದು ವಾರದ ಆಟಕ್ಕೆ ಅವರಿಗೆ 250 ಪೌಂಡ್ ಹಣ ದೊರೆಯಿತು. ಫೈನಲಿ ಸುರೇಶ್ ರೈನಾ 2005ರಲ್ಲಿ ಮೊಟ್ಟಮೊದಲ ಬಾರಿಗೆ ಭಾರತದ ಪರವಾಗಿ ಏಕದಿನ ಪಂದ್ಯದಲ್ಲಿ ಆಡಿದರು. ಸೀರೀಸ್ ಗಿಂತ ಮೊದಲು ಕ್ಯಾಂಪ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಜೊತೆ ರೂಮ್ ಶೇರ್ ಮಾಡಿಕೊಂಡ ವಿಚಾರವನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಆಗ ರೈನಾ ನೆಲದ ಮೇಲೆ ಮಲಗುತ್ತಿದ್ದಂತೆ, ಅವರು ಬೆಡ್ ಬಳಸುತ್ತಿರಲಿಲ್ಲವಂತೆ. ಕೆಲವು ದಿನಗಳ ನಂತರ ಧೋನಿ ಕೂಡಾ ನೆಲದ ಮೇಲೆ ಬಂದು ಮಲಗಿದ್ದರಂತೆ. ತನಗೂ ಕೂಡಾ ಬೆಡ್ ಮೇಲೆ ಮಲಗುವ ಅಭ್ಯಾಸವಿಲ್ಲ ಎಂದು ಹೇಳಿದ್ದರಂತೆ! ನೆಲದ ಮೇಲೆ ಒಂದು ಕಡೆ ನಾನು, ಇನ್ನೊಂದು ಕಡೆ ಧೋನಿ ಮಲಗುತ್ತಿದ್ದೆವು.

ಬೆಡ್ ಮೇಲೆ ನೀರಜ್ ಪಟೇಲ್ ಮಲಗುತ್ತಿದ್ದ ಎನ್ನುತ್ತಾರೆ ರೈನಾ. ಸುರೇಶ್ ರೈನಾ ಅವರ ಜೀವನದಲ್ಲಿ ಐಪಿಎಲ್ ಎರಡನೇ ಮಹತ್ವದ ತಿರುವನ್ನು ನೀಡಿತು. ಈ ವೇಳೆ ಅವರು ಮೊಣಕಾಲಿನ ಗಾಯದಿಂದ ಬಳಲಬೇಕಾಯಿತು. ಅವರು ಶಸ್ತ್ರಚಿಕಿತ್ಸೆಗೆ ಒಳಗಾದರು. ಅದು ನನ್ನ ಬಹಳ ಕಷ್ಟದ ದಿನಗಳು ಎಂದು ಅವರು ಹೇಳುತ್ತಾರೆ.

ಆಗ 80 ಲಕ್ಷ ರೂಪಾಯಿಗಳ ಮನೆ ಸಾಲವನ್ನು ಪಾವತಿಸಬೇಕಿತ್ತು. ನಾನು ಮತ್ತೊಮ್ಮೆ ಕ್ರಿಕೆಟ್ ಆಟವನ್ನು ಆಡುವುದಕ್ಕೆ ಪ್ರಾರಂಭಿಸಿದೆ ಎಂದು ಅವರು ಹೇಳುತ್ತಾರೆ. ಕ್ರಿಕೇಟಿನ ಮೂರೂ ಬಗೆಯ ಆಟಕ್ಕೆ ಹೊಂದಿಕೊಳ್ಳುವ ರೈನಾ ಭಾರತ ಕಂಡ ಕೆಲವೇ ಕೆಲವು ಪರ್ಫೆಕ್ಟ್ ಆಟಗಾರರಲ್ಲಿ ಒಬ್ಬರು, ಅಂದ ಹಾಗೆ ಸುರೇಶ್ ರೈನಾ ಈಗ ಭಾರತದ ಏಳನೇ ಅತಿ ದೊಡ್ಡ ಶ್ರೀಮಂತ ಕ್ರಿಕೇಟಿಗ!! ಅವರ ಸದ್ಯದ ಆಸ್ತಿ ಅಂದಾಜು 25 ಮಿಲಿಯನ್ ಡಾಲರ್!!!