ಹುಟ್ಟಿನಿಂದಲೇ ಕಾಗೆಗಳು ಗಣಿತಜ್ಞರು! ಅವುಗಳಿಗೆ ಶೂನ್ಯ ಪರಿಕಲ್ಪನೆ ತಿಳಿದಿದೆ‌ : ಕಾಗೆಯ ತಲೆಬುರುಡೆ ಅಧ್ಯಯನ ಮಾಡಿದ ವಿಜ್ಞಾನಿಗಳೂ ಕೂಡ ಶಾಕ್!

ಕಾಗೆಗಳ ಕಾವ್ ಕಾವ್ ಸದ್ದು ನಿಮಗೆ ಹಿಡಿಸದೆ ಹೋಗಬಹುದು‌‌, ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇದ್ದರೆ ಕಾಗೆಗಳು ಎಷ್ಟು ಬುದ್ಧಿವಂತ ಪಕ್ಷಿಗಳು ಅಥವಾ ಅವುಗಳು ಕೂಡ ಮನುಷ್ಯರಂತೆ ಸ್ಮಾರ್ಟ್ ಎನ್ನುವ ವಿಷಯ ಅರ್ಥವಾಗುವುದರ ಜೊತೆಗೆ ಆಶ್ಚರ್ಯವನ್ನು ಉಂಟುಮಾಡುತ್ತದೆ. ಕಾಗೆಯ ತಲೆಬುರುಡೆಯನ್ನು ಇಟ್ಟುಕೊಂಡು ಮಾಡಿರುವ ಹೊಸ ಅಧ್ಯಯನವೊಂದರಲ್ಲಿ ವಿಜ್ಞಾನಿಗಳು ಸಾಕಷ್ಟು ವಿಷಯ ಹೊರಗೆಡಹಿದ್ದಾರೆ.

ಕಾಗೆಗಳು ಬಹಳ ಸ್ಮಾರ್ಟ್ ಮತ್ತು ಅವುಗಳು ಜೀರೋ ಅಥವಾ ಶೂನ್ಯ ಪರಿಕಲ್ಪನೆಯನ್ನು ಬಹಳ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಶೂನ್ಯದ ಪರಿಕಲ್ಪನೆಯು 5 ನೇ ಶತಮಾನ ಅಥವಾ ಅದಕ್ಕಿಂತ ಸ್ವಲ್ಪ ಹಿಂದೆ ಈ ಜಗತ್ತಿಗೆ ಪರಿಚಯಿಸಲ್ಪಟ್ಟಿದೆ. ವಿಜ್ಞಾನಿಗಳು ಕಾಗೆಗಳು ಹೇಗೆ ಶೂನ್ಯ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಪಡೆದಿದೆ ಎಂದು ಆಶ್ಚರ್ಯವನ್ನು ವ್ಯಕ್ತ ಪಡಿಸಿದ್ದಾರೆ.

ಕಾಗೆಗಳಿಗೆ ಎಂದೂ, ಯಾರೂ ಶೂನ್ಯದ ಪರಿಕಲ್ಪನೆಯ ಕುರಿತಾಗಿ ತರಬೇತಿಯನ್ನು ನೀಡಿಲ್ಲ, ಅಲ್ಲದೇ ಅವುಗಳು ಆ ಪರಿಕಲ್ಪನೆಯ ಬಗ್ಗೆ ಓದುವುದು ಸಾಧ್ಯವಿಲ್ಲ. ಐದನೇ ಶತಮಾನದ ನಂತರ ಗಣಿತ ವಿಷಯದಲ್ಲಿ ಸಾಕಷ್ಟು ಕ್ರಾಂತಿಕಾರಕ ಬದಲಾವಣೆಗಳು ಆಗಿದೆ. ಆದರೆ ಕಾಗೆಗಳು ಹೇಗೆ ಶೂನ್ಯ ಪರಿಕಲ್ಪನೆಯನ್ನು ಅರ್ಥ ಮಾಡಿಕೊಂಡವು ಎನ್ನುವುದು ಒಂದು ಆಸಕ್ತಿಕರ ವಿಷಯವಾಗಿದ್ದು, ಈ ಪರಿಕಲ್ಪನೆಯ ಅರ್ಥ ಅವುಗಳಿಗೆ ಬಹಳ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ.

ಶೂನ್ಯದ ಪರಿಕಲ್ಪನೆಯ ಬಗ್ಗೆ ಹೇಳುವುದಾದರೆ, ಶೂನ್ಯವನ್ನು ಬೇರೆ ಯಾವುದೇ ಸಂಖ್ಯೆಯೊಂದಿಗೆ ಕುಡಿದರು ಕಳೆದರು ಗೂಡಿಸಿದರು ಅಥವಾ ಭಾವಿಸಿದರೂ ಸಹ ಶೂನ್ಯದ ಅಸ್ತಿತ್ವ ಕೊನೆಯಾಗುವುದಿಲ್ಲ. ಶೂನ್ಯದ ಇರುವಿಕೆಯು ಯಾವುದೇ ರೀತಿಯ ಪರಿಣಾಮವನ್ನು ಬರುವುದಿಲ್ಲ.

ಜರ್ಮನಿಯಲ್ಲಿರುವ ಯೂನಿವರ್ಸಿಟಿ ಆಫ್ ತುಬಿನಿಜೆ‌ನ್ ನ ಇನ್ಸ್ಟಿಟ್ಯೂಟ್ ಆಫ್ ನ್ಯೂರೋಬಯೋಲಜಿ ನಲ್ಲಿ ಪ್ರೊಫೆಸರ್ ಆಗಿರುವ ಆಂಡ್ರಿಯಾ ನಿಯೆಡರ್ ಶೂನ್ಯದ ಆವಿಷ್ಕಾರ ಗಣಿತಜ್ಞರಿಗೆ ಒಂದು ದೊಡ್ಡ ಸಾಧನೆಯಾಗಿದೆ. ಶೂನ್ಯವು ಶೂನ್ಯತೆಯನ್ನು ತೋರಿಸುವ ಸಂಖ್ಯೆಯಾಗಿದ್ದು, ಇದನ್ನು ನಮ್ಮ ದಿನಚರಿಯಲ್ಲಿ ಸೇರಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಆಂಡ್ರಿಯಾ ಅವರು ಕಾಗೆಗಳ ಮೆದುಳನ್ನು ಅಧ್ಯಯನ ಮಾಡುವ ಪ್ರಯತ್ನ ಮಾಡಿದಾಗ ಕಾಗೆಗಳು ಬೇರೆ ಸಂಖ್ಯೆಗಳ ಹಾಗೆಯೇ ಶೂನ್ಯವನ್ನು ಕೂಡ ಅರ್ಥಮಾಡಿಕೊಳ್ಳುತ್ತವೆ ಎಂಬ ವಿಷಯ ತಿಳಿದು ಬಂದಿತು ಎಂದಿದ್ದಾರೆ. ವಿಶೇಷವೇನೆಂದರೆ ಶೂನ್ಯ ಎಂಬುದು ಒಂದಕ್ಕಿಂತ ಮೊದಲು ಬರುವ ಸಂಖ್ಯೆ ಎಂಬುದನ್ನು ಕಾಗೆಗಳು ತಿಳಿದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಇದರ ಬಗ್ಗೆ ಅಧ್ಯಯನವನ್ನು ಮಾಡಲು ವಿಜ್ಞಾನಿಗಳು ಎರಡು ಪ್ರಯೋಗಗಳನ್ನು ನಡೆಸಿದ್ದಾರೆ. ಒಂದು ಪ್ರಯೋಗದಲ್ಲಿ ಎರಡು ಗಂಡು ಕಾಗೆಗಳನ್ನು ಕಂಪ್ಯೂಟರ್ ಪರದೆಯ ಮುಂದೆ ಮರದ ತುಂಡಿನ ಮೇಲೆ ಕೂರಿಸಲಾಯಿತು. ಅವುಗಳ ಮುಂದೆ ಬೂದು ಬಣ್ಣದ ಪರದೆಯ ಮೇಲೆ ಶೂನ್ಯ ಹಾಗೂ 4 ಚುಕ್ಕೆಗಳು ಏಕಕಾಲದಲ್ಲಿ ಹೊರಬಂದವು. ಕಾಗೆಗಳಿಗೆ ಸಂಖ್ಯೆಗಳ ಸಮಾನತೆಯ ಹಾಗೂ ವ್ಯತ್ಯಾಸದ ಪರಿಚಯವಿತ್ತು.

ಎರಡು ಕಾಗೆಗಳು ಕಂಪ್ಯೂಟರ್ ಪರದೆಯಲ್ಲಿ ದುಂಡಗಿನ ಚುಕ್ಕೆಗಳನ್ನು ನೋಡುತ್ತಿರುವಾಗ, ಒಂದು ಮೆದುಳಿನಲ್ಲಿರುವ 500 ನ್ಯೂರಾನ್‌ಗಳಲ್ಲಿ 223 ಮತ್ತು ಇನ್ನೊಂದರಲ್ಲಿ 268 ನ್ಯೂರಾನ್‌ಗಳು ಸಕ್ರಿಯವಾಗಿದ್ದವು. ಅನಂತರ ಇತರ ಸಂಖ್ಯೆಗಳು ಪರದೆಯ ಮೇಲೆ ಕಾಣಿಸಿಕೊಂಡಿದ್ದರಿಂದ ಕಾಗೆಗಳು ನ್ಯೂರಾನ್‌ಗಳ ಸಕ್ರಿಯಗೊಳಿಸುವಿಕೆಯನ್ನು ಕಡಿಮೆಗೊಳಿಸಿದವು.

ಸ್ವಲ್ಪ ಸಮಯದ ನಂತರ ಅವು ಪರದೆಯನ್ನು ನೋಡುವುದನ್ನು ನಿಲ್ಲಿಸಿದವು. ಶೂನ್ಯ ಮತ್ತೆ ಕಾಣಿಸಿಕೊಂಡ ತಕ್ಷಣ, ಕಾಗೆಗಳು ಸಕ್ರಿಯವಾಗಿದ್ದವು. ಕಾಗೆಗಳಿಗೆ ಶೂನ್ಯ ಎಂಬ ಪರಿಕಲ್ಪನೆಯ ಅರ್ಥವೇನೆಂದು ತಿಳಿದಿಲ್ಲ, ಆದರೆ ಅವು ಶೂನ್ಯವನ್ನು ಅರ್ಥಮಾಡಿಕೊಳ್ಳುತ್ತವೆ ಎನ್ನುವುದು ತಿಳಿದುಬಂದಿದೆ ಎನ್ನಲಾಗಿದೆ.