ನಿಮ್ಮ ದೃಷ್ಟಿಗೊಂದು ಸವಾಲ್ : ಈ ಚಿತ್ರದಲ್ಲಿ ಒಂದಲ್ಲ ಎರಡು ಚಿರತೆಗಳಿವೆ‌. ಆದರೆ ಜನರಿಗೆ ಒಂದೇ ಕಾಣುತ್ತಿದೆ, ಇನ್ನೊಂದು ಎಲ್ಲಿದೆ ಹುಡುಕಬಲ್ಲಿರಾ?

ಸೋಶಿಯಲ್ ಮೀಡಿಯಾಗಳಲ್ಲಿ ದಿನಾ ಒಂದಲ್ಲಾ ಒಂದು ಫೋಟೋ ಅಥವಾ ವೀಡಿಯೋ ವೈರಲ್ ಆಗುವುದು ಸಹಜ. ವೈರಲ್ ಆಗುವ ವೀಡಿಯೋಗಳು ಹಾಗೂ ಫೋಟೋಗಳು ಭರ್ಜರಿ ಸದ್ದು ಮಾಡುತ್ತವೆ. ಅದರಲ್ಲೂ ಕೆಲವು ಫೋಟೋಗಳು ನೆಟ್ಟಿಗರ ಮುಂದೆ ಸವಾಲನ್ನು ಹಾಕುತ್ತವೆ. ಏಕೆಂದರೆ ಆ ಫೋಟೋಗಳು ಮೊದಲ ದೃಷ್ಟಿಗೆ ಸಾಮಾನ್ಯ ಎನಿಸಿದರೂ, ಅದರಲ್ಲಿ ಅಸಾಧಾರಣ ಹಾಗೂ ಅಸಾಮಾನ್ಯವಾದ ವಿಷಯಗಳು ಅಡಗಿರುತ್ತದೆ.

ಅದು ನಾವು ಸರಿಯಾಗಿ ಗಮನಿಸಿದರೆ ಮಾತ್ರವೇ ತಿಳಿಯುತ್ತದೆ. ಕೆಲವರಿಗಂತೂ ಎಷ್ಟೇ ಪ್ರಯತ್ನವನ್ನು ಮಾಡಿದರೂ ಸಹಾ ಆ ಫೋಟೋಗಳಲ್ಲಿ ಇರುವ ಸೀಕ್ರೆಟ್ ಅನ್ನು ಕಂಡು ಹಿಡಿಯುವುದು ಸಾಧ್ಯವಾಗುವುದಿಲ್ಲ ಎನ್ನುವುದು ಸಹಾ ವಾಸ್ತವ. ಕಾಡಿನ ಪ್ರಾಣಿಗಳ ವಿಷಯ ಬಂದಾಗ ಒಂದು ವಿಶೇಷ ಆಸಕ್ತಿ ಎಲ್ಲರಲ್ಲೂ ಮೂಡುತ್ತದೆ‌.

ವನ್ಯ ಮೃಗಗಳ ವಿಷಯ ಮಾತನಾಡುವಾಗ ಚಿರತೆಯ ವಿಷಯ ಬಂದರೆ, ಮೊದಲಿಗೆ ನಾವು ಗಮನಿಸುವ ಅದರ ವಿಶೇಷ ಗುಣವೆಂದರೆ ಅದು ಅದರ ಓಟದ ವೇಗ, ಅದು ಬಿಟ್ಟರೆ ಚಿರತೆಯ ಮೈ ಬಣ್ಣ ಸಹಾ ಬಹಳ ವಿಶೇಷ. ಈ ಬಣ್ಣದಿಂದಾಗಿ ಚಿರತೆಯು ಕಾಡಿನ ಬಣ್ಣದೊಳಗೆ ಬೆರೆತು ಅನೇಕ ಬಾರಿ ಕಣ್ಮರೆಯಾಗಿ ಬಿಡುತ್ತದೆ.

ಚಿರತೆ ಕುಳಿತಿದೆಯೋ ಇಲ್ಲವೋ ಎನ್ನುವುದು ಸಹಾ ಗೊತ್ತಾಗುವುದಿಲ್ಲ. ಈಗ ಅಂತಹುದೇ ಒಂದು ಫೋಟೋ ಹೊರ ಬಂದಿದೆ. ಈ ಫೋಟೋ ವನ್ನು ನೋಡಿದಾಗ ಒಂದು ಚಿರತೆ ನಮಗೆ ಕಾಣಿಸುತ್ತದೆ. ಆದರೆ ಕಣ್ಣಿನ ದೃಷ್ಟಿ ತೀಕ್ಷ್ಮವಾಗಿರುವವರಿಗೆ ಆ ಫೋಟೋದಲ್ಲಿ ಇನ್ನೊಂದು ಚಿರತೆಯು ಕಾಣಿಸುತ್ತದೆ.

ಹಾಗಾದರೆ ನಿಮ್ಮ ದೃಷ್ಟಿಯು ತೀಕ್ಷ್ಣವಾಗಿದೆಯೋ, ಇಲ್ಲವೋ ಎಂಬುದನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. ಟ್ವಿಟರ್ ನಲ್ಲಿ ಗೆಟ್ ಮೋಹನ್ ಥಾಮಸ್ ಎನ್ನುವ ಬಳಕೆದಾರರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಶೇಷ ಎನಿಸುವ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಇನ್ನು ಈ ಫೋಟೋ ಜೊತೆಗೆ ಅವರು ಕ್ಯಾಪ್ಷನ್ ನಲ್ಲಿ ನೀವು ಇದರಲ್ಲಿ ಯಂಗ್ ಲೆಪರ್ಡ್ ನ ಮುಖವನ್ನು ಹುಡುಕಬಲ್ಲಿರಾ?? ಹಾಗಾದರೆ ನೋಡಿ, ಇದರಲ್ಲಿ ನೋಡಿದಾಗ ನಮಗೆ ಒಂದೇ ಚಿರತೆ ಕಾಣುತ್ತದೆ. ಚಿತ್ರದಲ್ಲಿ ಮರದ ಕೊಂಬೆಯ ಮೇಲೆ ಕುಳಿತ ಚಿರತೆ ಬಹಳ ಸ್ಪಷ್ಟವಾಗಿ ನಮಗೆ ಕಾಣುತ್ತದೆ.

ಆದರೆ ಟ್ವಿಟರ್ ಬಳಕೆದಾರರು ಫೋಟೋ ಶೇರ್ ಮಾಡಿ ಮತ್ತೊಂದು ಚಿರತೆ ಎಲ್ಲಿದೆ ಎನ್ನುವುದನ್ನು ಹುಡುಕುವುದಕ್ಕೆ ಆರಂಭಿಸಿ ಎಂದು ನೆಟ್ಟಿಗರ ಮುಂದೆ ಒಂದು ಸವಾಲನ್ನು ಒಡ್ಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆದ ಕೆಲವೇ ಸಮಯದಲ್ಲಿ ಅನೇಕರ ಗಮನವನ್ನು ತನ್ನೆಡೆಗೆ ಸೆಳೆದಿದೆ.‌

ಅಲ್ಲದೇ ಅನೇಕರು ಅದರಲ್ಲಿರುವ ಇನ್ನೊಂದು ಚಿರತೆಯನ್ನು ಹುಡುಕಿದ್ದಾರೆ. ನಿಮಗೂ ಕೂಡಾ ಚಿರತೆ ಕಾಣಿಸಿತೇ? ಅಥವಾ ನೀವು ಬೇರೆ ಫೋಟೋಗಳನ್ನು ನೋಡಿ ಅಲ್ಲಿರುವ ಚಿರತೆಯನ್ನು ಗುರುತಿಸಿದಿರಾ?? ನೀವಾಗಿಯೇ ಗುರುತಿಸಿದ್ದೆ ಆದರೆ ನೀವು ಸಹಾ ಸೂಕ್ಷ್ಮ ದೃಷ್ಟಿಯುಳ್ಳವರು ಎಂದು ಹೇಳಬಹುದು. ನಿಮ್ಮ ದೃಷ್ಟಿಗೆ ಖಚಿತವಾಗಿ ಈ ಫೋಟೋ ಒಂದು ಸವಾಲು.