ಮೋಸ ಹೋದ ಪಾಕಿಸ್ತಾನಿಯರು, ಉಪಚಾರಕ್ಕಾಗಿ ದಾನ ನೀಡಿದ ಹಣವನ್ನು ಸಾಲ ತೀರಿಸಲು ಉಪಯೋಗಿಸಿದ ಇಮ್ರಾನ್ ಖಾನ್!
ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನ ರೋಗಿಗಳಿಗಾಗಿ ಹೋರಾಡಲು ಅಲ್ಲಿಯ ಪ್ರಧಾನಿ, ದೇಶದ ಮತ್ತು ದೇಶದ ಹೋರಗಡೆ ಇರುವ ನಾಗರಿಕರಿಗೆ PM ರಿಲೀಫ್ ಫಂಡ್ ನಲ್ಲಿ ಸಾಧ್ಯವಾದಷ್ಟು ಹೆಚ್ಚಿಗೆ ದಾನ ಮಾಡಿ ಎಂದು ಸಾತತ್ಯವಾಗಿ ಅಂಗಲಾಚುತ್ತಿದ್ದಾರೆ. ಆದರೆ ದುರದೃಷ್ಟಕರ ವಿಷಯವೇನೆಂದರೆ ಯಾವ ಕಾರಣವನ್ನು ಮುಂದಿಟ್ಟುಕೊಂಡು ಹಣವನ್ನು ಜನರಿಂದ ಪಡೆಯಲಾಗಿದೆ ಆ ಹಣವನ್ನು ಪ್ರಧಾನಿ ದೇಶದ ಸಾಲವನ್ನು ತೀರಿಸಿಕೊಳ್ಳಲು ಉಪಯೋಗಿಸುತ್ತಿದ್ದಾರೆ. ಪಾಕಿಸ್ತಾನಿ ವೃತ್ತಪತ್ರಿಕೆ ದಿ ಎಕ್ಸಪ್ರೆಸ್ ಟ್ರಿಬ್ಯುನ್ ನ ಡಿಜಿಟಲ್ ಎಡಿಷನ್ ನ ಒಂದು ಸುದ್ದಿಯ ಪ್ರಕಾರ ಕೊರೊನ ವೈರಸ್ ವಿರುದ್ಧ ಹೋರಾಡಲು PM ರಿಲೀಫ್ ಫಂಡ್ ನಲ್ಲಿ ಜಮೆಯಾದ ಹಣದಲ್ಲಿಯ 10 ಅರಬ್ ರೂಪಾಯಿಗಳನ್ನು ದೇಶದ ಉರ್ಜಾ ಕ್ಷೇತ್ರದಲ್ಲಿ ತೆಗೆದುಕೊಂಡ ಸಾಲದ ಬಡ್ಡಿಯನ್ನು ಕಟ್ಟಲು ಉಪಯೋಗ ಮಾಡಲಾಗಿದೆ.
ಈ ವೃತ್ತಪತ್ರಿಕೆಯಲ್ಲಿ ಪ್ರಸಾರವಾದ ಸುದ್ದಿಯ ಪ್ರಕಾರ 13 ಮೇ ವರೆಗೆ PM ರಿಲೀಫ್ ಫಂಡ್ ನಲ್ಲಿ 3.5 ಬಿಲಿಯನ್ ಹಣ ಜಮೆಯಾಗಿತ್ತು. ರೇಡಿಯೋ ಪಾಕಿಸ್ತಾನ ಪ್ರಕಾರ ಈ ಹಣವನ್ನು ದೇಶದ ಪ್ರತಿಯೊಂದು ಕ್ಷೇತ್ರಕ್ಕಾಗಿ ಉಪಯೋಗಿಸಲಾಗುವದೆಂದು ಹೇಳಲಾಗಿತ್ತು. ಹಾಗೂ ಅತೀ ಶೀಘ್ರದಲ್ಲಿ ಇಮ್ರಾನ್ ಖಾನ್ ಅವರು ಕೊರೊನ ವೈರಸ್ ವಿರುದ್ಧ ಹೋರಾಡಲು ಈ ಹಣವನ್ನು ಎಲ್ಲ ಪ್ರಾಂತಕ್ಕಾಗಿ ಹಂಚಿ ಕೊಡುತ್ತಾರೆಂದು ಭಾವಿಸಲಾಗಿತ್ತು. ಆದರೆ ಆದದ್ದೇ ಬೇರೆ. ಮೀಡಿಯಾ ರಿಪೋರ್ಟ್ ಪ್ರಕಾರ ಕ್ಯಾಬಿನೇಟಿನ ಆರ್ಥಿಕ ಸಮನ್ವಯ ಸಮಿತಿಯ ಸಭೆಯಲ್ಲಿ ದಾನವಾಗಿ ಬಂದ ಧನರಾಶಿಯಲ್ಲಿ ಒಂದಷ್ಟು ದುಡ್ಡು ಸಾಲದ ಮೇಲಿನ ಬಡ್ಡಿಯನ್ನು ಮುಟ್ಟಿಸಲು ಉಪಯೋಗಿಸುವ ನಿರ್ಣಯ ತೆಗೆದುಕೊಂಡರು. ಈ ಮೀಟಿಂಗಿನ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿಯ ವಿತ್ತೀಯ ಸಲಹೆಗಾರರಾದ ಅಬ್ದುಲ್ ಹಫೀಜ್ ಶೇಖ್ ವಹಿಸಿದ್ದರು.

ಈ ಮೀಟಿಂಗ್ ನಂತರ ಅರ್ಥ ವಿಭಾಗದ ಹೇಳಿಕೆಯ ಪ್ರಕಾರ, ಸಮಿತಿಯು PM ರಿಲೀಫ್ ಫಂಡ್ ದಿಂದ 200 ಅರಬ್ ರೂಪಾಯಿಗಳ ಎನರ್ಜಿ ಸುಕುಕ್-2 ಸಾಲದ ಬಡ್ಡಿ ತುಂಬಲಿದ್ದಾರೆ. ಸದ್ಯಕ್ಕೆ 10 ಅರಬ್ ರೂಪಾಯಿಗಳನ್ನು ತುಂಬುವ ನಿರ್ಣಯವಾಗಿದೆ. ಈ ವ್ಯವಸ್ಥೆ ಆರು ತಿಂಗಳುಗಳವರೆಗೆ ಮಾತ್ರ. ಒಂದು ವೇಳೆ ಈ ಆರು ತಿಂಗಳಲ್ಲಿ ಉರ್ಜಾ ನಿಯಮಕ ಮಂಡಳಿಯ ಕಾನೂನಿನಲ್ಲಿ ಏನಾದರೂ ಬದಲಾವಣೆಯಾದರೆ ಈ ಎಲ್ಲ ಭಾರ ಗ್ರಾಹಕರ ಮೇಲೆ ಬೀಳಲಿದೆ. ಇತ್ತ ಇಮ್ರಾನ್ ಖಾನ್ ಕೊರೊನ ಸಲುವಾಗಿ ತನ್ನ ಕೈಗಳನ್ನು ಖಾಲಿ ತೋರಿಸುತ್ತಾ ದೇಶದ ಪ್ರಜೆಗಳಿಂದ ಹಣಕ್ಕಾಗಿ ಅಪೀಲ್ ಮಾಡಿದ್ದರು. ಆದರೆ ಹಣದ ಈ ರೀತಿ ಉಪಯೋಗ ಮಾಡಿದ್ದನ್ನು ನೋಡಿ ಜನ ತಮ್ಮಷ್ಟಕ್ಕೆ ತಾವೇ ಮೋಸ ಹೋಗಿದ್ದೇವೆಂದು ತಿಳಿದುಕೊಂಡು ಇಮ್ರಾನ್ ಸರಕಾರಕ್ಕೆ ಶಪಿಸುತ್ತಿದ್ದಾರೆ.
ಇಮ್ರಾನ್ ಖಾನ್ ದೇಶದ ಆರ್ಥಿಕ ಪರಿಸ್ಥಿತಿ ತುಂಬಾ ನಾಜೂಕಾಗಿದ್ದರಿಂದ ತಾವು ಲಾಕ್ ಡೌನ್ ಮಾಡಲಿಲ್ಲ ಎಂದು ಹೇಳಿದ್ದಾರೆ. ಬದಲಾಗಿ ಜನರಿಗೆ ಸರ್ವ ರೀತಿಯಲ್ಲಿ ಸಹಾಯ ಮಾಡಲು ಒಂದೇ ಸಮನೆ ಗೋಗೆರೆದರು. PM ರಿಲೀಫ್ ಫಂಡ್ ನಲ್ಲಿ ಯಾರು ಒಂದು ರೂಪಾಯಿ ಸಹಾಯ ಮಾಡುತ್ತೀರಿ ಅವರಿಗೆ ಒಂದು ರೂಪಾಯಿ ಬದಲಾಗಿ ನಾಲ್ಕು ರೂಪಾಯಿಗಳನ್ನು ಮರಳಿ ಕೊಡಲಾಗುವದು ಎಂದು ಆಸೆಯನ್ನು ತೋರಿಸಿದ್ದರು. ಆದರೆ ಈಗ ಜನರ ಈ ಹಣವನ್ನು ಕೊರೊನ ವಿರುದ್ಧ ಬಿಟ್ಟು ಬೇರಾವುದಕ್ಕೋ ಉಪಯೋಗಿಸುತ್ತಿದ್ದಾರೆ ಎಂದರೆ ಪಾಕಿಸ್ತಾನಿ ಜನ ಈಗ ಪ್ರಧಾನಿಗಿಂತ ಭಗವಂತನ ಮೇಲೆ ಮಾತ್ರ ವಿಶ್ವಾಸವಿಟ್ಟಿದ್ದಾರೆ.