ಕೊರೊನ: ಬರೀ ಒಳಉಡುಪು ಧರಿಸಿ ಉಪಚಾರಮಾಡುವ ನರ್ಸ್ ಕೊಟ್ಟ ಉತ್ತರ; ನಾಚಿಕೆಯಾಗಬೇಕು ನಿಮಗೆ….

ಮಾಸ್ಕೊ: ರಶಿಯಾದ ಒಂದು ಆಸ್ಪತ್ರೆಯಲ್ಲಿ ಪಾರದರ್ಶಕ PPE ಸೂಟು ಧರಿಸಿ ಒಳಗೆ ಬರೀ ಇನ್ನರ್ ವಿಯರ್ ಧರಿಸಿ ಕೊರೊನಾ ಪೀಡಿತರಿಗೆ ಉಪಚಾರ ಮಾಡುತ್ತಿರುವ ಫೋಟೋ ಒಂದು ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗಿದೆ. ಆ ನರ್ಸ್ ಳಿಗೆ ‘ಟು ಹಾರ್ಟ್ ನರ್ಸ್’ ಎಂದು ಕರೆಯಲಾಗುತ್ತಿದೆ. ಸದ್ಯಕ್ಕೆ ರಶಿಯಾದ ಈ ನರ್ಸ್ ಮತ್ತು ಇವಳ ಜೊತೆಗಾರರು ತಮ್ಮ ಫೋಟೋಗಳನ್ನು ಶೇರ್ ಮಾಡಿದವರಿಗೆ ಹಾಗೂ ಸೋಶಿಯಲ್ ಮಿಡಿಯಾದಲ್ಲಿ ತರ್ಲೆಯಾಗಿ ಮೋಜು ಮಾಡಿದವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಫೋಟೋ ವೈರಲ್ ಆದನಂತರ ಸಂಬಂಧಿತ ನರ್ಸ್ ಹೇಳಿದಳು, ಸತತವಾಗಿ PPE ಕಿಟ್ ಧರಿಸಿ ಕೆಲಸ ಮಾಡುವದರಿಂದ ತುಂಬಾ ಹೀಟ್ (ಗರಮ್) ಆಗುತ್ತೆ, ಮತ್ತು ರೋಗಿಗಳು ಸಹಿತ ಮಿತಿಮೀರಿ ಇರುವದರಿಂದ ಮಧ್ಯದಲ್ಲಿ ಬ್ರೇಕ್ ಸಹಿತ ತೆಗೆದುಕೊಳ್ಳೋದು ಆಗುವದಿಲ್ಲ. ಇಂಥದ್ದರಲ್ಲಿ PPE ಕಿಟ್ ಒಳಗಡೆ ಬರೀ ಇನ್ನರ್ ವಿಯರ್ ಹಾಕಿಕೊಂಡು ಕೆಲಸ ಮಾಡೋದು ಸರಿ ಎನಿಸಿತು. ಕಾರಣ ರೋಗಿಗಳಿಗೆ ಉಪಚಾರವಿಲ್ಲದೆ ಹಾಗೆ ಬಿಡಲು ಮನಸ್ಸಿರಲಿಲ್ಲ. ಇಷ್ಟಾದರೂ ಸಹಿತ ಸೋಶಿಯಲ್ ಮಿಡಿಯಾದಲ್ಲಿ ಮತ್ತೆ ಮತ್ತೆ ಗೇಲಿ ಮಾಡಿದಾಗ ರಶಿಯಾದ ಜನರು, ರಾಜಕಾರಣಿಗಳು, ಉದ್ಯೋಗಪತಿಗಳು ಈ ನರ್ಸಗಳ ಪರವಾಗಿ ನಿಂತರು. ಅಷ್ಟೇ ಅಲ್ಲ ಅವರು ಎಲ್ಲ ಆಸ್ಪತ್ರೆಗಳಿಗೆ ‘ಯಾರು ತಮ್ಮ ಜೀವದ ಹಂಗು ತೊರೆದು ಬೇರೊಬ್ಬರ ಜೀವ ಉಳಿಸಲು ಪ್ರಯತ್ನಿಸುತ್ತಿದ್ದಾರೋ, ಜನ ಅವರ ಬಟ್ಟೆ ನೋಡಿ ಅವರನ್ನು ಜಜ್ ಮಾಡ್ತಾ ಇದ್ದಾರೆ ಅವರ ವಿಚಾರಗಳ ಹಾಗೆ ಅವರು ಸಹಿತ ಕೊಳಕರಾಗಿದ್ದಾರೆಂದು ಸಂದೇಶವನ್ನು ಕಳಿಸಿದ್ದಾರೆ.

23 ವರ್ಷದ ನಾದಿಯಾ ಹೆಸರಿನ ನರ್ಸ್ ಹೇಳುವ ಪ್ರಕಾರ ‘ಅಸಹನೀಯವಾದ ಸೆಕೆಯಿಂದಾಗಿ ನಾನು ನನ್ನ ಗೌನ್ ನ್ನು ತೆಗೆದು ಸ್ವಿಮ್ ಸೂಟ್ ನಲ್ಲಿಯೇ ಕೆಲಸ ಮಾಡಲು ನಿರ್ಧರಿಸಿದೆ. ಆ ದಿನ ನಾನು ಸತತವಾಗಿ ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡುವಾಗ ರೋಗಿಗಳ ಉಪಚಾರ ಮಾಡುವದು ತುಂಬಾ ಅವಶ್ಯಕವಾದದ್ದು ಎಂದೆನಿಸಿತ್ತು’. ಸುದ್ದಿ ಮೂಲಗಳ ಪ್ರಕಾರ ನಾದಿಯಾ ಕೆಲಸ ಮಾಡುವ ಆಸ್ಪತ್ರೆಯಿಂದ ನಾದಿಯಾಳನ್ನು ಸಸ್ಪೆಂಡ್ ಮಾಡಲಾಯಿತು. ಆಮೇಲೆ ಆಸ್ಪತ್ರೆಯ ಸ್ಟಾಫ್, ಡಾಕ್ಟರ್ಸ್, ನರ್ಸ್, ಹಾಗೂ ಬೇರೆ ಮೆಡಿಕಲ್ ಸ್ಟಾಫ್ ನವರು ನಾದಿಯಾಳ ಪರವಾಗಿ ಮುಷ್ಕರ ಮಾಡಿದರು. ಪರಿಸ್ಥಿತಿಯನ್ನು ಅರಿಯುವ ಬದಲು ಕೆಲವು ಕಿಡಿಗೇಡಿಗಳು ಮಾಡಿದ ಟ್ರೋಲ್ ಒಪಿನಿಯನ್ ಆಧಾರದ ಮೇಲೆ ಆಸ್ಪತ್ರೆ ತೆಗೆದುಕೊಂಡ ನಿರ್ಣಯ ತಪ್ಪಾಗಿದೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಪ್ರಾವದಾ ಹೆಸರಿನ ಸುದ್ದಿ ಪತ್ರಿಕೆಯಲ್ಲಿ ಕೊಟ್ಟ ಒಂದು ಸಂದರ್ಶನದಲ್ಲಿ ನಾದಿಯಾ ‘ನಾನು ನನ್ನ ಕೆಲಸ ಮಾಡುತ್ತಿದ್ದೆ, ಸೆಕೆಯಿಂದಾಗಿ ನಾನು ಮಾಡುವ ಕೆಲಸವನ್ನು ಅರ್ಧದಲ್ಲೇ ಬಿಡಲು ಮನಸ್ಸಿರಲಿಲ್ಲ. ನಾವು ನಮ್ಮ ಜೀವವನ್ನು ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದೆವು, ಆದರೆ ನಮ್ಮ ಉಡುಪಿನಿಂದ ಯಾರಿಗೆ ಅಸಮಾಧಾನವಾಗಿದ್ದರೆ ಅವರಿಗೆ ನಾಚಿಕೆಯಾಗಬೇಕಷ್ಟೇ.

ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಇನ್ನೊಬ್ಬಳು ಡಾಕ್ಟರ್ ಅನಸ್ತಾಸಿಯಾ ವಾಸಿಲ್ವೆಯಾ,’ನಾವು ಆಸ್ಪತ್ರೆ ಕಮೀಟಿಗೆ ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದೇವೆ, ನಾದಿಯಾಳಿಗೆ ಕೆಲಸದ ಮೇಲೆ ಮತ್ತೆ ಸೇರಿಸಿಕೊಳ್ಳಲೇಬೇಕು. ನಾದಿಯಾ PPE ಕಿಟ್ ತೊಟ್ಟಿದ್ದರೂ ಸಹಿತ ಟ್ರೋಲಿಗರಿಗೆ ಬರೀ ಅವಳು ತೊಟ್ಟ ಒಳ ಉಡುಪು ಅಷ್ಟೇ ಕಾಣಿಸಿತು, ಹಾಗೂ ಅವಳು ಮಾಡುವ ಕೆಲಸ ಕಾಣಲಿಲ್ಲವಾ? ಅವಳ ಕೆಲಸದ ಮೇಲೆ ಗಮನಹರಿಸಿ’ ಎಂದು ಹೇಳಿದ್ದಾರೆ.

ಈ ಎಲ್ಲ ವಿವಾದದ ನಡುವೆ ನಾದಿಯಾಳಿಗೆ ಒಂದು ಲಿಂಗ್ರಿ ಬ್ರಾಂಡ್ ಮಿಸ್ ಎಕ್ಸ್ ನಿಂದ ಮಾಡೆಲಿಂಗ್ ಆಫರ್ ಬಂದಿದೆ. ಆದ್ರೆ ನಾದಿಯಾ ಮಾತ್ರ ಮತ್ತೆ ಆಸ್ಪತ್ರೆಗೆ ಹೋಗಿ ರೋಗಿಗಳ ಉಪಚಾರ ಮಾಡುವ ಆಸೆ ಹೊಂದಿದ್ದಾಳೆ.