ನೀನು ದಿನಕ್ಕೆ ಎಷ್ಟು ಸಿಗರೇಟ್ ಸೇದುತ್ತಿಯಾ? ಯೂಸರ್ ನೊಬ್ಬ ಕೇಳಿದ ಪ್ರಶ್ನೆಗೆ ನ್ಯಾಷನಲ್ ಕೃಷ್ ರಶ್ಮಿಕಾ ನೀಡಿದ ಉತ್ತರ ನೋಡಿ…
ತನ್ನ ಮೋಹಕ ಸೌಂದರ್ಯ ಮತ್ತು ಅದ್ಭುತ ಅಭಿನಯದಿಂದ ಕಡಿಮೆ ಅವಧಿಯಲ್ಲಿ ಬಹುಬೇಗ ಪ್ರಸಿದ್ಧಿಯ ಪಟ್ಟ ಏರಿದ ರಶ್ಮಿಕಾ ಮಂದಣ್ಣಳ ಫ್ಯಾನ್ ಫಾಲೋವರ್ಸ್ ಬರೀ ಕರ್ನಾಟಕ ಅಷ್ಟೇ ಅಲ್ಲ ದೇಶದ ತುಂಬ ಹರಡಿದೆ. ಇದೇ ಕಾರಣದಿಂದ ಸದ್ಯ ರಶ್ಮಿಕಾ ಮಂದಣ್ಣ ಅವರಿಗೆ ನ್ಯಾಷನಲ್ ಕೃಷ್ ಎಂದೆ ಗುರುತಿಸಲಾಗುತ್ತಿದೆ. ಕನ್ನಡ ಚಿತ್ರರಂಗದಿಂದ ಪ್ರಾರಂಭವಾದ ಪ್ರವಾಸ ಇಂದು ಬಾಲಿವುಡ್ ವರೆಗೆ ಬಂದು ನಿಂತಿದೆ. ತನ್ನ ಅಭಿಮಾನಿಗಳಿಗೆ ಇಂಪ್ರೆಸ್ ಮಾಡುವ ಒಂದು ಅವಕಾಶವೂ ರಶ್ಮಿಕಾ ಅವರು ಬಿಡುವುದಿಲ್ಲ. ಹೀಗಾಗಿ ಅವರ ಅಭಿಮಾನಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದಾರೆ.
ರಶ್ಮಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಯಾವತ್ತು ಆಕ್ಟಿವ್ ಆಗಿರುತ್ತಾರೆ. ತಮ್ಮ ಜೀವನದಲ್ಲಿಯ ಮಹತ್ವದ ಅಪ್ಡೇಟ್ ಗಳನ್ನು ಸೋಶಿಯಲ್ ಮೀಡಿಯ ಮುಖಾಂತರ ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ರಶ್ಮಿಕಾ ಅವರು ಇನ್ಸ್ಟಾಗ್ರಾಮ್ ಮುಖಾಂತರ ಅಭಿಮಾನಿಗಳ ಎದುರಿಗೆ ಲೈವ್ ಬಂದಿದ್ದರು. ಅದರಲ್ಲಿ ಅವರ ಅಭಿಮಾನಿಗಳು ರಶ್ಮಿಕಾ ಅವರಿಗೆ ಅನೇಕ ರೀತಿಯ ವಿವಿಧ ಪ್ರಶ್ನೆಗಳನ್ನು ಕೇಳಿದರು. ಇದೇ ಸಂದರ್ಭದಲ್ಲಿ ಅಭಿಮಾನಿಯೊಬ್ಬನು ರಶ್ಮಿಕಾ ಅವರಿಗೆ ನೀವು ದಿನಕ್ಕೆ ಎಷ್ಟೊಂದು ಸಿಗರೇಟುಗಳನ್ನು ಸೇದುತ್ತೀರಾ ಎಂದು ಕೇಳಿದ್ದನು. ಅದಕ್ಕೆ ಪ್ರತಿಯಾಗಿ ರಶ್ಮಿಕಾ ಅವರು ನಾನೆಂದು ಸಿಗರೇಟ್ ಸೇದುವುದಿಲ್ಲ, ಅಷ್ಟೇ ಏಕೆ ಸಿಗರೇಟ್ ಸೇದುವವರ ಹತ್ತಿರವು ಸಹಿತ ನಿಲ್ಲುವುದಿಲ್ಲ ಎಂದು ಉತ್ತರಿಸಿದ್ದರು. ಇದೇ ಸಂದರ್ಭದಲ್ಲಿ ಒಬ್ಬ ಅಭಿಮಾನಿಯು ತನ್ನ ಜೊತೆಗೆ ಮದುವೆಯಾಗುವ ಬಗ್ಗೆ ಇಚ್ಛೆ ವ್ಯಕ್ತ ಮಾಡಿದನು. ಆಗ ರಶ್ಮಿಕ ಅವರು ಆತನಿಗೆ ‘ನಿಧಾನ ಪ್ರೊಪೋಸ್ ಆದರೂ ಒಳ್ಳೆಯ ರೀತಿಯಲ್ಲಿ ಮಾಡು’ ಎಂದು ಸಲಹೆ ನೀಡಿದರು.

ಇದೇ ವೇಳೆ ರಶ್ಮಿಕಾ ಮಂದಣ್ಣ ಅವರು ಅಲ್ಲು ಅರ್ಜುನ್ ಅವರ ಜೊತೆಗಿನ ಕೆಲಸ ಮಾಡುವ ಅನುಭವವನ್ನು ಅಭಿಮಾನಿಗಳ ಜೊತೆಗೆ ಶೇರ್ ಮಾಡಿದರು. ‘ಪುಷ್ಪ’ ಈ ಚಿತ್ರದಲ್ಲಿ ರಶ್ಮಿಕಾ ಅವರು ಅಲ್ಲು ಅರ್ಜುನ್ ಅವರ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಜೊತೆಗೆ ತುಂಬಾ ಒಳ್ಳೆಯ ಅನುಭವ ಬಂದಿತು ಎಂದು ರಶ್ಮಿಕಾ ಕೇಳುತ್ತಾರೆ. ಅಲ್ಲು ಅರ್ಜುನ್ ಇವರು ಮನಸ್ಸಿನಿಂದ ನಿಜವಾಗಿಯೂ ತುಂಬಾ ಒಳ್ಳೆಯ ಹಾಗೂ ಅದ್ಭುತ ಡಾನ್ಸರ್ ಜೊತೆಗೆ ಉತ್ಕೃಷ್ಟ ನಟರಾಗಿದ್ದಾರೆ ಎಂದು ಹೇಳುತ್ತಾರೆ.

ಸದ್ಯ ಅವರ ಮುಂಬರುವ ಚಲನಚಿತ್ರದ ಬಗ್ಗೆ ಹೇಳಬೇಕಾದರೆ ಮುಂಬೈನಲ್ಲಿ ‘ಮಿಷನ್ ಮಜ್ನು’ ಚಿತ್ರದ ಶೂಟಿಂಗ್ ನಡೆದಿದೆ. ಅಲ್ಲು ಅರ್ಜುನ್ ಅವರ ಜೊತೆಗೆ ‘ಪುಷ್ಪ’ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆಗೆ ‘ಗುಡ್ ಬಾಯ್’ ಚಿತ್ರದಲ್ಲಿಯೂ ಕಾಣಲಿದ್ದಾರೆ.