ಸಿಂಹಕ್ಕೆ ನಿಮ್ಮ ಹಿಂಭಾಗವನ್ನು ತೋರಿಸಬೇಡಿ: ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಂದ ಸಿಂಹದ ವರ್ತನೆ ಕಂಡು ಬೆರಗಾದ ನೆಟ್ಟಿಗರು!

ವನ್ಯಜೀವಿಗಳ ವೈವಿಧ್ಯಮಯ ಎನಿಸುವಂತಹ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳನ್ನು ನೋಡಿದಾಗ ಬಹಳ ಆಶ್ಚರ್ಯದ ಜೊತೆಗೆ ಎಂತಹ ವಿಸ್ಮಯ ಇದು ಎನಿಸುತ್ತದೆ. ವನ್ಯಜೀವಿಗಳ ಇನ್ನೊಂದು ಮುಖವನ್ನು ಅನಾವರಣ ಮಾಡುವ ಅದೆಷ್ಟೋ ವಿಡಿಯೋಗಳು ಈಗಾಗಲೇ ನಮ್ಮ ಮುಂದೆ ಬಂದು ನಮಗೆ ಅಚ್ಚರಿಯನ್ನು ಉಂಟು ಮಾಡುವ ಅನುಭೂತಿಯನ್ನು ನೀಡಿವೆ. ನಾವು ವನ್ಯ ಜೀವಿಗಳ ಹೆಸರನ್ನು ಹೇಳುವಾಗ ಕಾಡಿನ ರಾಜ ಸಿಂಹದ ಹೆಸರನ್ನು ಹೇಳಿದ ಕೂಡಲೇ ಒಂದು ಕಡೆ ಮನಸ್ಸಿನ ಮೂಲೆಯಲ್ಲೆಲ್ಲೋ ಭ ಯ ಉಂಟಾಗುತ್ತದೆ. ಏಕೆಂದರೆ ಅಂತಹ ದೈತ್ಯಾಕಾರದ ಹಾಗೂ ಕ್ರೂ ರ ಪ್ರಾಣಿ ಎನಿಸಿಕೊಂಡಿದೆ ವನ ರಾಜ ಸಿಂಹ.

ಆದರೆ ಇಂತಹ ಸಿಂಹದ ವಿಭಿನ್ನವಾದ ವರ್ತನೆಯನ್ನು ತೋರಿಸುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಯೂಟ್ಯೂಬ್ ನಲ್ಲಿ ಸಿಂಹಗಳ ಜೊತೆಗೆ ತನ್ನ ಒಡನಾಟವನ್ನು ಕೊಳ್ಳುವ ಡೀನ್ ಸ್ಕ್ನೇಯ್ ಡರ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಡೀನ್ ಅವರು ಸಿಂಹಗಳನ್ನು ತರಬೇತಿಗೊಳಿಸುವ ತರಬೇತುದಾರನಾಗಿದ್ದಾರೆ. ಅವರು ಸಿಂಹಗಳ ಜೊತೆ ತನ್ನ ಒಡನಾಟ ಹಾಗೂ ಸ್ನೇಹದ ವಿಡಿಯೋಗಳನ್ನು ಶೇರ್ ಮಾಡಿಕೊಂಡಾಗಲೆಲ್ಲಾ ಅವು ಭರ್ಜರಿ ವೈರಲ್ ಆಗಿವೆ‌.

ಡೀನ್ ಅವರ ಈ ವಿಡಿಯೋಗಳನ್ನು ನೋಡಿದಾಗ ಸಿಂಹಗಳು ಕೂಡಾ ನಾವು ಸಾಕಿದ ಪ್ರಾಣಿಗಳಂತೆ ಬಹಳ ಮುದ್ದಿನ ಜೀವಿಗಳಂತೆ ಕಾಣುತ್ತದೆ. ಡೀನ್ ಅವರು ತಮ್ಮ ವಿಡಿಯೋಗಳ ಮೂಲಕ ಸಿಂಹಗಳ ಹಿಂದೆಂದೂ ನೋಡಿರದಂತಹ ವರ್ತನೆಯನ್ನು ನಮ್ಮ ಮುಂದೆ ತೋರಿಸುತ್ತಾರೆ. ಸಿಂಹಗಳು ಅವರ ಜೊತೆ ಆಡುವ ಆಟಗಳು, ಮಾಡುವ ತುಂಟಾಟಗಳು ಜನರನ್ನು ಸೆಳೆಯುತ್ತವೆ. ಇದೀಗ ಅಂತಹದೊಂದು ವಿಡಿಯೋದಲ್ಲಿ ಅವರು ಸಿಂಹಕ್ಕೆ ನಿಮ್ಮ ಬ್ಯಾಕ್ ಅಥವಾ ನಮ್ಮ ಪುಷ್ಟ ಭಾಗವನ್ನು ಎಂದೂ ತೋರಿಸಬೇಡಿ ಎಂದಿದ್ದಾರೆ. ಏಕೆಂದರೆ ಹಾಗೆ ಬ್ಯಾಕ್ ತೋರಿಸಿದಾಗ ಅವುಗಳ ವರ್ತನೆ ಆಗ ಹೇಗಿರುತ್ತದೆ?? ಎಂಬುದನ್ನು ಅವರು ವಿಡಿಯೋದ ಮೂಲಕ ತೋರಿಸಿದ್ದಾರೆ.

ವಿಡಿಯೋದಲ್ಲಿ ಗಮನಿಸಿದಾಗ ಅವರ ಹಿಂದೆ ಸ್ವಲ್ಪ ದೂರದಲ್ಲಿ ಒಂದು ಸಿಂಹ ನಿಂತಿರುತ್ತದೆ. ಆಗ ಅವರು ಸೆಲ್ಫಿ ವಿಡಿಯೋ ಮಾಡುತ್ತಾ ತಮ್ಮ ದೇಹದ ಹಿಂಭಾಗವನ್ನು ಸ್ವಲ್ಪ ಬಗ್ಗಿಸಿ ವೀಕ್ಷಕರ ಜೊತೆ ಮಾತನಾಡುತ್ತಾ, ಸಿಂಹಕ್ಕೆ ಬ್ಯಾಕ್ ತೋರಿಸಿದರೆ ಅದು ಹೇಗೆ ಆಕ್ರಮಣ ಮಾಡಲು ಬರುತ್ತದೆ ಎಂಬುದನ್ನು ತೋರಿಸುತ್ತಾರೆ. ಡೀನ್ ತಿರುಗಿ ನಿಂತಿದ್ದಾಗ ಸಿಂಹ ಹಿಂದೆಯಿಂದ ಅದನ್ನು ಗಮನಿಸುತ್ತದೆ. ನಂತರ ಅದು ಬಹಳ ಕೌಶಲ್ಯದಿಂದ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಡೀನ್ ಅವರ ಕಡೆಗೆ ಬರಲು ಪ್ರಾರಂಭಿಸುತ್ತದೆ. ಸಿಂಹ ಹೆಜ್ಜೆ ಹಾಕುವ ವಿನ್ಯಾಸವನ್ನು ನೋಡಿದಾಗ ಒಂದು ಕ್ಷಣ ಅತ್ಯಾಶ್ಚರ್ಯ ಉಂಟಾಗುತ್ತದೆ. ಸಿಂಹ ಹೀಗೆಲ್ಲ ನಡೆದುಕೊಳ್ಳುತ್ತದೆಯೇ ಎಂದು ಒಂದು ಕ್ಷಣ ಶಾಕ್ ಆಗುತ್ತದೆ..

ಹಾಗೆ ಕಳ್ಳಬೆಕ್ಕಿನಂತೆ ಬರುವ ಸಿಂಹದ ವರ್ತನೆಯನ್ನು ಸೆಲ್ಫಿ ಕ್ಯಾಮರಾದಲ್ಲಿ ಅದನ್ನು ಗಮನಿಸುತ್ತಿದ್ದ ಡೀನ್ ಅದು ಅವರ ಮೇಲೆ ಎಗರುವ ವೇಳೆಗೆ ಅವರು ತಮ್ಮ ಕೈಯನ್ನು ಸನ್ನೆ ಮಾಡುತ್ತಾ ನಾನು ಎಲ್ಲವನ್ನು ನೋಡುತ್ತಿದ್ದೇನೆ ಎನ್ನುವಂತೆ ಸೂಚನೆ ನೀಡುತ್ತಾರೆ. ಆಗ ಸಿಂಹವು ಅವರ ಮೇಲೆ ಬಹಳ ಪ್ರೀತಿಯಿಂದ ಎಗರಿ ಅವರನ್ನು ಹಿಡಿದುಕೊಳ್ಳುತ್ತದೆ. ಈ ದೃಶ್ಯವನ್ನು ನೋಡಿದಾಗ ಒಂದು ಕಡೆ ಸಿಂಹದ ವರ್ತನೆ ಆಶ್ಚರ್ಯ ಅನಿಸಿದರೆ, ಇನ್ನೊಂದು ಕಡೆಯಲ್ಲಿ ಮನುಷ್ಯ ಮತ್ತು ಸಿಂಹ ಗಳ ನಡುವಿನ ಆತ್ಮೀಯವಾದ ಸಂಬಂಧವೂ ಬಹಳ ಮುದ್ದಾಗಿದ್ದು, ಇದೊಂದು ವಿಶೇಷ ಬಂಧ ಎನಿಸುತ್ತದೆ.

ವಿಡಿಯೋ ನೋಡಿ

ಯೂಟ್ಯೂಬ್ ನಲ್ಲಿ ಈ ವಿಡಿಯೋವನ್ನು ಈಗಾಗಲೇ ಒಂದು ಕೋಟಿಗಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ, ಸುಮಾರು ಆರು ಲಕ್ಷಕ್ಕಿಂತ ಅಧಿಕ ಮಂದಿ ವಿಡಿಯೋಗೆ ಲೈಕುಗಳನ್ನು ನೀಡಿದ್ದಾರೆ. ವೀಡಿಯೋ ನೋಡಿದ ಮಂದಿ ಬಹಳ ಮುದ್ದಾದ ವೀಡಿಯೋ ಎಂದಿದ್ದಾರೆ. ಕೆಲವರು ತಾವು ಸಿಂಹ ಹೆಜ್ಜೆ ಇಟ್ಟು ಬರುವ ವಿನ್ಯಾಸವನ್ನು ನೋಡಿ ಬಹಳ ಆಶ್ಚರ್ಯ ಪಟ್ಟೆವು ಎಂದರೆ, ಇನ್ನೂ ಕೆಲವರು ನಾವು ಈ ಚಾನೆಲ್ ಅನ್ನು ಆಗಾಗ ನೋಡುತ್ತಲೇ ಇರುತ್ತೇವೆ. ಈ ವ್ಯಕ್ತಿ ಇನ್ನೂ ಸಿಂಹಕ್ಕೆ ಬಲಿಯಾಗಿಲ್ಲ ಎನ್ನುವುದು ಆಶ್ಚರ್ಯ ಎಂದಿದ್ದಾರೆ.