ಪೆಟ್ರೋಲ್, ಡೀಸೆಲ್ ಬೆಲೆಯ ಚಿಂತೆ ಬಿಡಿ: ಪ್ರತಿ ಕಿಮೀ ಗೆ ಕೇವಲ 10 ಪೈಸೆ ಖರ್ಚಾಗುವ ಎಲೆಕ್ಟ್ರಿಕ್ ಸೈಕಲ್ ನಲ್ಲಿ ಪಯಣಿಸಿ!
ನಹಕ್ ಮೋಟಾರ್ಸ್ ಇತ್ತೀಚೆಗಷ್ಟೇ ತನ್ನ ಎಲೆಕ್ಟ್ರಿಕ್ ಸೈಕಲ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಕಂಪನಿಯು ತನ್ನ ಈ ಸೈಕಲ್ ಗಳನ್ನು ಡಿಲೆವರಿ ಮಾಡಲು ಸಹಾ ಆರಂಭಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಜಿಪ್ಪಿ ಸೈಕಲ್ ನ ಬೆಲೆ 31,999 ರೂ.ಗಳಾಗಿವೆ. ಇದೇ ವೇಳೆ ಗರುಡ ಎಲೆಕ್ಟ್ರಿಕ್ ಸೈಕಲ್ ಗಳ ಬೆಲೆಯು 33,499 ರೂ.ಗಳಾಗಿವೆ. ಕಂಪನಿಯ ಕಡೆಯಿಂದ ಎಲೆಕ್ಟ್ರಿಕ್ ಸೈಕಲ್ ಗಳ ಮೊದಲ ಹಂತದಲ್ಲಿ ಜುಲೈ 2 ರಿಂದ ಜುಲೈ 11 ವರೆಗೆ ಫ್ರೀ ಬುಕ್ಕಿಂಗ್ ನೀಡಲಾಗಿದೆ. ಜಿಪ್ಪಿ ಮತ್ತು ಗರುಡು ಎಲೆಕ್ಟ್ರಿಕ್ ಸೈಕಲ್ ಗಳಲ್ಲಿ ಗ್ರಾಹಕರಿಗೆ ರಿಮೂವಬಲ್ ಬ್ಯಾಟರಿ, ಎಲ್ ಸಿ ಡಿ ಡಿಸ್‌ಪ್ಲೇ ಮತ್ತು ಪೆಡಲ್ ಸೆನ್ಸರ್ ನಂತಹ ಸೌಲಭ್ಯಗಳು ಪಡೆಯುವರು. ಈ ಸೈಕಲ್ ಗಳನ್ನು ಕೊಳ್ಳಲು ಬಯಸುವವರು ಕಂಪನಿಯ ಅಧಿಕೃತ ವೆಬ್‌ಸೈಟ್‌ನ ಮೂಲಕ ಸೈಕಲ್ ಗೆ ಆರ್ಡರ್ ನೀಡಬಹುದಾಗಿದೆ.

ಎಲೆಕ್ಟ್ರಿಕ್ ಸೈಕಲ್ ಗಳನ್ನು ಖರೀದಿ ಮಾಡಲು ಬಯಸುವ ಗ್ರಾಹಕರು ಆನ್ಲೈನ್ ನಲ್ಲಿ ಅರ್ಜಿಯನ್ನು ಭರ್ತಿ ಮಾಡಿ, 2,999 ರೂ.ಗಳ ಠೇವಣಿ ಹಣವನ್ನು ಪಾವತಿಸಿ ಮುಂಗಡ ಬುಕ್ಕಿಂಗ್ ಮಾಡಬಹುದಾಗಿದೆ. ಬುಕ್ಕಿಂಗ್ ಮಾಡಲಾಗಿರುವ ಸೈಕಲ್ ಗಳನ್ನು ಜುಲೈ 13 ರಂದು ಡಿಸ್ಪ್ಯಾಚ್ ಮಾಡಲಾಗುವುದು. ಅಲ್ಲದೇ ಕಂಪನಿಯು ಆಗಸ್ಟ್ 15 ರ ವೇಳೆಗೆ ಎಲ್ಲಾ ಗ್ರಾಹಕರಿಗೂ ಸಹಾ ಹೋಂ ಡಿಲೆವರಿಯನ್ನು ನೀಡಲಾಗುವುದು ಎಂದು ಹೇಳಿದೆ. ಕಂಪನಿಯು ಜಿಪ್ಪಿ ಮತ್ತು ಗರಡು ಎರಡೂ ಎಲೆಕ್ಟ್ರಿಕ್ ಸೈಕಲ್ ಗಳನ್ನು ಭಾರತೀಯ ರಸ್ತೆಗಳ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಸಿದ್ಧಪಡಿಸಲಾಗಿದೆ ಎಂದು ಹೇಳಿದೆ.
ಈ ಎಲೆಕ್ಟ್ರಿಕ್ ಸೈಕಲ್ ನಲ್ಲಿ ಲೀಥಿಯಂ ಅಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿ ಫುಲ್ ಚಾರ್ಜ್ ಮಾಡಲು ಮೂರು ಗಂಟೆಗಳ ಅವಧಿಯು ಬೇಕಾಗಿರುತ್ತದೆ. ಇದನ್ನು ಚಾರ್ಜ್ ಮಾಡಲು ಮನೆಯಲ್ಲಿರುವ ಒಂದು ಸಾಮಾನ್ಯ ಪವರ್ ಸಾಕೆಟ್ ಅನ್ನು ಗಳಿಸಿ ಸಹಾ ಚಾರ್ಜ್ ಮಾಡಬಹುದಾಗಿದೆ. ಬ್ಯಾಟರಿ ಒಂದು ಸಲ ಫುಲ್ ಜಾರ್ಜ್ ಆದ ಮೇಲೆ ಈ ಸೈಕಲ್ ಸುಮಾರು 40 ಕಿಮೀ ದೂರವನ್ನು ಕ್ರಮಿಸಲು ಸಕ್ಷಮವಾಗಿರುತ್ತದೆ ಎನ್ನಲಾಗಿದೆ.

ಜಿಪ್ಪಿ ಮತ್ತು ಗರುಡ ಎರಡೂ ಎಲೆಕ್ಟ್ರಿಕ್ ಸೈಕಲ್ ಗಳಲ್ಲಿ ಎಲಾಯ್ ಸ್ಟೀಲ್ ಫ್ರೇಮ್ ( ಮಿಶ್ರ ಲೋಹ ) ಅನ್ನು ನೀಡಲಾಗಿದೆ. ಈ ಎಲೆಕ್ಟ್ರಿಕ್ ಸೈಕಲ್ ಗಳಿಂದ ಗ್ರಾಹಕರಿಗೆ ಬಹಳ ಉಪಯೋಗ ಹಾಗೂ ಲಾಭಗಳಿವೆ ಎಂದು ಕಂಪನಿಯು ಭರವಸೆಯನ್ನು ನೀಡಿದೆ. ಕಂಪನಿಯ ಪ್ರಕಾರ ಗ್ರಾಹಕರು ಈ ಸೈಕಲ್ ನಲ್ಲಿ ಒಂದು ಕಿಮೀ ಪ್ರಯಾಣ ಮಾಡಲು ತಗಲುವ ವೆಚ್ಚ ಕೇವಲ ಹತ್ತು ಪೈಸೆಗಳು ಮಾತ್ರ. ಈ ಎಲೆಕ್ಟ್ರಿಕ್ ಸೈಕಲ್ ಗಳನ್ನು ಬ್ಯಾಟರಿ ಯಿಂದ ಹಾಗೂ ಪೆಡಲ್ ತುಳಿಯುವ ಮೂಲಕ ಸಹ ಚಾಲನೆ ಮಾಡಬಹುದಾಗಿದೆ. ಒಂದು ವೇಳೆ ಸೈಕಲ್ ನಲ್ಲಿ ಬ್ಯಾಟರಿ ಖಾಲಿಯಾದರೆ ಒಂದು ಸಾಮಾನ್ಯ ಸೈಕಲ್ ನಂತೆಯೂ ಚಾಲನೆ ಮಾಡಬಹುದು.