ಚೇರ್ ಪುಲ್ಲಿಂಗ್ ಪ್ರಾಂಕ್ ವೀಡಿಯೋ ಮಾಡಿದ ಯೂಟ್ಯೂಬರ್: ವೀಡಿಯೋ ನೋಡಿ ಕೋಪಗೊಂಡ ನೆಟ್ಟಿಗರು!

ಪ್ರಾಂಕ್ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತವೆ. ಆದರೆ ಅನೇಕ ವೇಳೆ ಪ್ರಾಂಕ್ ವೀಡಿಯೋ ಮಾಡುವವರು ಜನರೊಂದಿಗೆ ಹಾಸ್ಯ ಮಾಡುವ ಉದ್ದೇಶದಿಂದ ಮಾಡುವ ಕೆಲಸಗಳು ಅದೆಷ್ಟೋ ಜನರ ಕೋಪ, ಅಸಮಾಧಾನಕ್ಕೆ ಕಾರಣವಾಗುವುದು ಸಹಾ ನಿಜ. ಪ್ರಾಂಕ್ ವೀಡಿಯೊ ನೋಡಿ ಜನರು ನಗುವುದು, ಮೆಚ್ಚಿಕೊಳ್ಳುವುದೇನೋ ಸರಿ, ಆದರೆ ಅದೇ ವೇಳೆಯಲ್ಲಿ ಆ ಜಾಗದಲ್ಲಿ ನಾವೇ ಇದ್ದರೆ ಹೇಗಿರಬಹುದು? ಎಂದು ಊಹಿಸಿಕೊಂಡರೆ ನಮ್ಮ ನಗು ಮಾಯವಾಗಬಹುದು. ಪ್ರಾಂಕ್ ವೀಡಿಯೋ ಮನರಂಜನೆಯನ್ನು ನೀಡಬೇಕು, ಅದರ ಬದಲಾಗಿ ಯಾರಿಗೋ ತೊಂದರೆ ಕೊಟ್ಟು ಅವರ ತೊಂದರೆಯನ್ನು ನಗುವಾಗಿ ಮಾಡುವುದು ಹಾಸ್ಯ ಎನಿಸುವುದಿಲ್ಲ, ಅದು ಅನಾಗರಿಕ ವರ್ತನೆ ಎನಿಸುತ್ತದೆ.

ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಪ್ರಾಂಕ್ ವೀಡಿಯೋ ಸಾಕಷ್ಟು ವೈರಲ್ ಆಗಿದೆ. ಭಾರತದಲ್ಲೂ ಸಹಾ ಅನೇಕರು ಪ್ರಾಂಕ್ ವೀಡಿಯೋಗಳನ್ನು ಮಾಡಿದ್ದಾರೆ. ಆದರೆ ಈಗ ಒಂದು ಪ್ರಾಂಕ್ ವೀಡಿಯೋ ವೈರಲ್ ಆಗಿದೆ, ಆದರೆ ಇದೇ ವೇಳೆ ಈ ವೀಡಿಯೋ ನೋಡಿದ ಅನೇಕ ಜನರು ವೀಡಿಯೋ ಮಾಡಿದವರನ್ನು ಬಹಳ ಕಟುವಾಗಿ ಟೀಕೆ ಮಾಡುತ್ತಿದ್ದಾರೆ. ಪ್ರಾಂಕ್ ವೀಡಿಯೋ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಿರುವುದನ್ನು ಬಹಳಷ್ಟು ಜನರು ಖಂಡನೆ ಮಾಡಿದ್ದಾರೆ. ವೀಡಿಯೋ ನೋಡಿದಾಗ ಪ್ರತಿಯೊಬ್ಬರಿಗೂ ಒಂದು ಕ್ಷಣ ಹಾಗೆ ಅನಿಸುವುದು ಸಹಜ.

ವೈರಲ್ ಆಗಿರುವುದು ಚೇರ್ ಪುಲ್ಲಿಂಗ್ ಪ್ರಾಂಕ್ ವೀಡಿಯೋ‌. ಇಲ್ಲಿ ನಾವು ನೋಡಿದಾಗ ಪ್ರಾಂಕ್ ವೀಡಿಯೋ ಮಾಡುವವರು ರೆಸ್ಟೋರೆಂಟ್ ಗಳು, ಹೊಟೇಲ್ ಗಳ ಹಾಗೂ ರಸ್ತೆ ಬದಿಯ ಅಂಗಡಿಗಳ ಬಳಿ ಯಾರಾದರೂ ಕುರ್ಚಿಯ ಮೇಲೆ ಕೂರಲು ಹೋದಾಗ, ಮೊದಲೇ ಅಲ್ಲಿದ್ದ ವ್ಯಕ್ತಿಯು ಸಮಯ ಸಾಧಿಸಿ ಹಿಂದಿನಿಂದ ಆ ಕುರ್ಚಿಯನ್ನು ಎಳೆದು ಬಿಡುತ್ತಾನೆ ಅಥವಾ ಕುರ್ಚಿಯನ್ನು ಎತ್ತಿಕೊಂಡು ಓಡುತ್ತಾನೆ. ಆಗ ಅದರ ಅರಿವಿಲ್ಲದೇ ಕೂರಲು ಹೋದ ವ್ಯಕ್ತಿ ದೊಪ್ಪೆಂದು ನೆಲದ ಮೇಲೆ ಬೀಳುತ್ತಾರೆ. ಪ್ರಾಂಕ್ ವೀಡಿಯೋ ಮಾಡುವ ಭರದಲ್ಲಿ ಇವರು ಜನರು ಯಾವ ಮನಸ್ಥಿತಿ ಯಲ್ಲಿ ಇರುವರು ಎನ್ನುವ ಇಂಗಿತ ಜ್ಞಾನ ಸಹಾ ಇಲ್ಲದ ಹಾಗೆ ವೀಡಿಯೋ ಮಾಡಿದ್ದಾರೆ.

ಕೆಳಗೆ ಬಿದ್ದವರು ಕೋಪ ಹಾಗೂ ಅಸಹನೆಯಿಂದ ಚೇರ್ ಎಳೆದ ವ್ಯಕ್ತಿಯನ್ನು ಅಟ್ಟಿಸಿಕೊಂಡು ಓಡುತ್ತಾರೆ. ಹೀಗೆ ಓಡುವಾಗ ಅವರ ರಸ್ತೆಗಳಲ್ಲಿ ವಾಹನಗಳ ಕಡೆ ಗಮನ ನೀಡದೇ ಹೋಗುತ್ತಾರೆ. ಅಂತಹ ಸಂದರ್ಭದಲ್ಲಿ ಅಪಘಾತ ಸಂಭವಿಸಿದರೆ ಏನು ಗತಿ?? ಹಾಸ್ಯದ ಹುಚ್ಚಿಗೆ ಬಿದ್ದು ಪ್ರಾಂಕ್ ವೀಡಿಯೋ ಮಾಡಲು ಹೋಗಿ ತಾವು ಅಪಾಯಕ್ಕೆ ಸಿಲುಕಿ, ಬೇರೊಬ್ಬರನ್ನು ಸಹಾ ಅಪಾಯಕ್ಕೆ ಸಿಲುಕಿಸುವ ಪ್ರಯತ್ನ ಮಾಡುವುದು ಎಷ್ಟು ಸರಿ?? ಚೇರ್ ಎಳೆದಾಗ ಬಿದ್ದ ವ್ಯಕ್ತಿಗೆ ಏನಾದರೂ ಏಟಾದರೆ?? ಹೀಗೆ ಹಲವು ಆಲೋಚನೆಗಳು ಮೂಡುತ್ತವೆ.

ವಿಡಿಯೋ ನೋಡಿ

ವೀಡಿಯೋವನ್ನು ಈಗಾಗಲೇ ಎರಡು ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ನಾಲ್ಕು ಲಕ್ಷ ಜನ ಮೆಚ್ಚುಗೆ ನೀಡಿದ್ದು, 65 ಸಾವಿರಕ್ಕೂ ಅಧಿಕ ಜನ ಡಿಸ್ ಲೈಕ್ ಒತ್ತಿದ್ದಾರೆ. ಕಾಮೆಂಟ್ ಮಾಡಿದವರಲ್ಲಿ ಅನೇಕರು ಟೀಕೆ ಮಾಡಿದ್ದಾರೆ. ಒಬ್ಬರು ಪ್ರಾಂಕ್ ಹೆಸರಿನಲ್ಲಿ ಜನರಿಗೆ ಏಕೆ ತೊಂದರೆ ಕೊಡುವಿರಿ, ಇಂತಹವರ ಮೇಲೆ ಕ್ರಮ ಜರುಗಿಸಬೇಕು ಎಂದಿದ್ದಾರೆ. ಮತ್ತೊಬ್ಬರು ಇದೊಂದು ಮೂರ್ಖತನದ ಪ್ರಾಂಕ್ ಎಂದಿದ್ದಾರೆ. ಕೆಲವರು ನಿಮ್ಮ ಮನೆಯವರ ಜೊತೆ ಇಂತಹ ಪ್ರಾಂಕ್ ಮಾಡಿ ಎಂದು ಬೈದಿದ್ದಾರೆ. ಮತ್ತೆ ಕೆಲವರು ಈ ಪ್ರಾಂಕ್ ಸರಿಯಲ್ಲ ಎಂದಿದ್ದಾರೆ. ಹೀಗೆ ಬಹಳಷ್ಟು ಜನರು ಪ್ರಾಂಕ್ ವೀಡಿಯೋ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.