ಲವರ್ ಬಾಯ್: ರೀನ ದತ್ತಳಿಂದ ಫಾತಿಮ ವರೆಗೂ, 35 ವರ್ಷಗಳಲ್ಲಿ 6 ಅಫೇರ್, 2 ಮದುವೆಗಳು, ಈಗ ಹೊಸ ಸಂಗಾತಿಯ ಹುಡುಕಾಟ ಶುರು!
ಕಳೆದ 35 ವರ್ಷಗಳಿಂದಲೂ ನಾವು ಆತನ ಗರ್ಲ್ ಫ್ರೆಂಡ್ ಗಳ ಮಗ ಮಾತ್ರ ವಿಷಯಗಳನ್ನು ಕೇಳುತ್ತಾ ಬಂದಿದ್ದೇವೆ ಆ ವ್ಯಕ್ತಿಯ ವಿಶೇಷತೆಯೇನೆಂದರೆ ಆತನ ಒಬ್ಬ ಗರ್ಲ್ಫ್ರೆಂಡ್ ಅಥವಾ ಹೆಂಡತಿ ಆತನ ಜೀವನದಿಂದ ಹೊರ ಹೋಗುವ ವೇಳೆಗೆ ಮತ್ತೊಬ್ಬರು ಆತನ ನಿರೀಕ್ಷೆಯಲ್ಲಿರುತ್ತಾರೆ. ಅಧಿಕೃತವಾಗಿ ಹೇಳುವುದಾದರೆ ನಟ ಅಮೀರ್ ಖಾನ್ ಅವರಿಗೆ ಕೇವಲ ಎರಡು ಮದುವೆಗಳು ಮಾತ್ರವೇ ಆಗಿದೆ. ರೀನಾ ದತ್ತಾ ಅವರ ಜೊತೆ ಅಮೀರ್ ಖಾನ್ ಅವರ ಮೊದಲ ಮದುವೆ ಹದಿನಾರು ವರ್ಷಗಳ ಕಾಲ ನಡೆದರೆ, ಎರಡನೇ ಮದುವೆ ಕಿರಣ್ ರಾವ್ ಅವರ ಜೊತೆಗೆ ಹದಿನೈದು ವರ್ಷಗಳ ಕಾಲ ನಡೆಯಿತು. ಕೆಲವೇ ದಿನಗಳ ಹಿಂದೆ ಅಮೀರ್ ಖಾನ್ ಮತ್ತು ಕಿರಣ್ ರಾವ್ ತಮ್ಮ ವೈವಾಹಿಕ ಸಂಬಂಧವನ್ನು ವಿಚ್ಛೇದನದ ಮೂಲಕ ಕೊನೆ ಮಾಡಿದ್ದಾರೆ.
ಅಮೀರ್ ಖಾನ್ ಅವರ ಎರಡನೇ ಮದುವೆಯು ವಿಚ್ಛೇದನದಲ್ಲಿ ಮುಗಿದ ಮೇಲೆ ಅವರ ವಿಚ್ಛೇದನಕ್ಕೆ ಹಲವು ಕಾರಣಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ನೀಡಲಾಗುತ್ತಿದೆ. ಸದ್ಯಕ್ಕೆ ಅಮೀರ್ ಖಾನ್ ಮತ್ತು ನಟಿ ಫಾತಿಮಾ ಸನಾ ಶೇಖ್ ಅವರ ಹೆಸರುಗಳು ಸಾಕಷ್ಟು ಹರಿದಾಡುತ್ತಿದ್ದು, ಅಮೀರ್ ಖಾನ್ ಅವರ ಜೀವನ ಪ್ರೇಮ ಕಥೆಗಳಿಂದ ತುಂಬಿದ್ದು, ಇದರಲ್ಲಿ ಹಲವು ವಿವಾಹೇತರ ಸಂಬಂಧಗಳೇ ಆಗಿವೆ ಎನ್ನುವುದು ವಿಶೇಷ. ಅಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ನೆರೆ ಮನೆಯವರಾಗಿದ್ದರು. ಮೊದಲು ಆಕೆ ಅಮೀರ್ ಖಾನ್ ಜೊತೆ ವಿವಾಹವನ್ನು ನಿರಾಕರಿಸಿದ್ದರು. ಆದರೆ ಅನಂತರ 18 ಏಪ್ರಿಲ್ 1986 ರಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು. ಈ ಜೋಡಿಗೆ ಜುನೈದ್ ಮತ್ತು ಈರಾ ಎನ್ನುವ ಇಬ್ಬರು ಮಕ್ಕಳಿದ್ದಾರೆ.

ಆದರೆ ಇವರ ವಿವಾಹ 2002 ರಲ್ಲಿ ಕೊನೆಯಾಯಿತು. ಇಬ್ಬರು ವಿಚ್ಚೇದನ ಪಡೆದರು. ಆಗ ಅಮೀರ್ ಖಾನ್ ನಟಿ ಪೂಜಾ ಭಟ್ ಜೊತೆ ಅಫೇರ್ ಇಟ್ಟುಕೊಂಡಿದ್ದರೆನ್ನುವ ಸುದ್ದಿಗಳು ಹರಡಿದ್ದವು. ಅಲ್ಲದೇ ವಿವಾಹದ ನಂತರವೂ ಸಹಾ ಅಮೀರ್ ಖಾನ್ ಪೂಜಾ ಭಟ್ ಜೊತೆ ಸಂಬಂಧ ಮುಂದುವರೆಸಿದ್ದರು ಎನ್ನಲಾಗಿದ್ದು, ಇದೇ ಕಾರಣಕ್ಕಾಗಿಯೇ ರೀನಾ ದತ್ತ ಹಾಗೂ ಅಮೀರ್ ಖಾನ್ ನಡುವೆ ಸಂಬಂಧ ಮುರಿದು ಬಿತ್ತು ಎನ್ನಲಾಗಿದೆ. ನಟಿ ಪೂಜಾ ಭಟ್ ಜೊತೆ ಅಮೀರ್ ಖಾನ್ ದಿಲ್ ಹೇ ಕಿ ಮಾನ್ತಾ ನಹೀಂ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು.
ನಟ ಅಮೀರ್ ಖಾನ್ ಅವರು ಬ್ರಿಟನ್ ಮೂಲದ ಪತ್ರಕರ್ತೆ ಜೆಸಿಕಾ ಹೈನ್ಸ್ ಎನ್ನುವವರ ಜೊತೆ ಕೂಡಾ ಅಫೇರ್ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಅಮೀರ್ ಖಾನ್ ಅವರು ಗುಲಾಮ್ ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ ಜೆಸಿಕಾ ರನ್ನು ಭೇಟಿಯಾಗಿದ್ದರೆನ್ನಲಾಗಿದೆ.
ಜೆಸಿಕಾ ಒಂದು ಆಟೋಬಯೋಗ್ರಫಿ ಮಾಡಲು ಭಾರತಕ್ಕೆ ಬಂದಿದ್ದರು ಎನ್ನಲಾಗಿದೆ. ಇಬ್ಬರೂ ಕೆಲವು ಕಾಲ ಡೇಟಿಂಗ್ ಮಾಡಿದ್ದಲ್ಲದೇ, ಲಿವಿನ್ ರಿಲೇಷನ್ ಶಿಪ್ ನಲ್ಲಿ ಸಹಾ ಇದ್ದರು ಎನ್ನಲಾಗಿದೆ. ಜೆಸಿಕಾ ಅಮೀರ್ ಅವರ ಮಗುವಿನ ತಾಯಿ ಕೂಡಾ ಆದರು. ಅಲ್ಲದೇ ಆ ಮಗುವಿಗೆ ಜಾನ್ ಎನ್ನುವ ಹೆಸರನ್ನು ಸಹಾ ಇಟ್ಟರು. ಇದಾದ ನಂತರ 2001 ರ ವೇಳೆಯಲ್ಲಿ ನಟ ಅಮೀರ್ ಖಾನ್ ಅವರಿಗೆ ದಿಲ್ ಚಾಹ್ತಾ ಹೇ ಸಿನಿಮಾದಲ್ಲಿ ಸಹ ನಟಿಯಾಗಿದ್ದ ಪ್ರೀತಿ ಜಿಂಟಾ ಜೊತೆ ಪ್ರೇಮ ಉಂಟಾಯಿತು..

ಎಲ್ಲೆಡೆ ಅಮೀರ್ ಖಾನ್ ಹಾಗೂ ಪ್ರೀತಿ ಜಿಂಟಾ ನಡುವಿನ ಅಫೇರ್ ಬಗ್ಗೆ ಗಾಸಿಪ್ ಗಳು ಹರಡಿದವು. ಆ ವೇಳೆಯಲ್ಲಿ ಅಮೀರ್ ಅವರಿಗೆ ಪತ್ನಿ ಜೊತೆಗಿನ ಸಂಬಂಧ ಕೊನೆಯ ಹಂತವನ್ನು ತಲುಪಿತ್ತು. ಸಿನಿಮಾದಲ್ಲಿ ಆನ್ ಸ್ಕ್ರೀನ್ ಜೋಡಿಯಾಗಿದ್ದ ಅಮೀರ್ ಖಾನ್ ಮತ್ತು ಪ್ರೀತಿ ಜಿಂಟಾ ರಿಯಲ್ ಲೈಫ್ ನಲ್ಲಿ ಸಹಾ ಡೇಟ್ ಮಾಡಲು ಆರಂಭಿಸಿಬಿಟ್ಟರು. ರೀನಾ ದತ್ತ ಜೊತೆಗೆ ಅಮೀರ್ ಖಾನ್ ಅವರಿಗೆ ಅಧಿಕೃತವಾಗಿ ವಿಚ್ಚೇದನ ದೊರೆತ ಮೇಲೆ ಅಮೀರ್ ಖಾನ್ ಹಾಗೂ ಪ್ರೀತಿ ಜಿಂಟಾ ಇಬ್ಬರೂ ರಹಸ್ಯವಾಗಿ ಮದುವೆಯಾದರು ಎನ್ನುವ ಸುದ್ದಿಯೊಂದು ಹರಡಿತು. ವರ್ಷಗಳ ನಂತರ ಈ ಸೀಕ್ರೆಟ್ ವೆಡ್ಡಿಂಗ್ ಕುರಿತಾಗಿ ಪ್ರೀತಿ ಸ್ಪಷ್ಟನೆ ನೀಡಿದರು.
ಪ್ರೀತಿ ಜಿಂಟಾ ತಾನು ಮತ್ತು ಅಮೀರ್ ಖಾನ್ ಇಬ್ಬರು ಒಳ್ಳೆಯ ಸ್ನೇಹಿತರು ಎಂದು ಹೇಳಿದರು. ನಮ್ಮಿಬ್ಬರ ನಡುವೆ ಒಂದು ಉತ್ತಮವಾದ ಕೆಲಸದ ಬಾಂಧವ್ಯ ಇತ್ತು. ಆದ್ದರಿಂದಲೇ ನಾನು ಅವರೊಡನೆ ಬಹಳ ಹತ್ತಿರದ ಸ್ನೇಹವನ್ನು ಹೊಂದಿದ್ದೆ. ಆದರೆ ಅದೇ ನಾನು ಅವರನ್ನು ಮದುವೆಯಾಗದೆಯೇ ಸುದ್ದಿಗಳಲ್ಲಿ ಮಿಸೆಸ್ ಖಾನ್ ಆಗಿ ಬಿಟ್ಟೆ. ಆದರೆ ಅಂತಹ ಯಾವುದೇ ಸಂಬಂಧ ನನಗಿಲ್ಲ ಎಂದು ಹೇಳಿ ಅಮೀರ್ ಖಾನ್ ಜೊತೆಗಿನ ತನ್ನ ಸಂಬಂಧ ಕೇವಲ ಸ್ನೇಹ ಮಾತ್ರವೇ ಎಂದು ಪ್ರೀತಿ ಜಿಂಟಾ ಹೇಳಿದ್ದರು. 25 ಡಿಸೆಂಬರ್ 2005 ರಲ್ಲಿ ಅಮೀರ್ ಖಾನ್ ಅವರು ಕಿರಣ್ ರಾವ್ ಅವರೊಡನೆ ವಿವಾಹ ಜೀವನಕ್ಕೆ ಅಡಿಯಿಟ್ಟರು.
ಕಿರಣ್ ರಾವ್ ಅವರು ಅಮೀರ್ ಖಾನ್ ಅವರ ಜೊತೆ ಅವರ ಲಗಾನ್ ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಆಗಲೇ ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರ ನಡುವೆ ಸ್ನೇಹ ವಾಗಿ, ಅದು ಪ್ರೀತಿಯಾಗಿ ಇಬ್ಬರೂ ವಿವಾಹವಾಗಲು ನಿರ್ಧರಿಸಿ, ಸತಿ ಪತಿಯಾದರು. 2011 ರಲ್ಲಿ ಬಾಡಿಗೆ ತಾಯಿಯ ಮೂಲಕ ತಮ್ಮ ಮೊದಲ ಮಗ ಆಜಾದ್ ರಾವ್ ಖಾನ್ ನನ್ನು ಪಡೆದುಕೊಂಡರು. ಹೀಗೆ ಅವರ ವೈವಾಹಿಕ ಜೀವನವು ಕಳೆದ ಹದಿನೈದು ವರ್ಷಗಳಿಂದ ಯಾವುದೇ ಸಮಸ್ಯೆ ಇಲ್ಲದೇ ನಡೆದು ಬಂದಿತ್ತು. ಆದರೆ ಕೆಲವೇ ದಿನಗಳ ಹಿಂದೆ ಈ ಸಂಬಂಧ ಕೂಡಾ ಒಂದು ಕೊನೆಯನ್ನು ಕಂಡಿದೆ.

2016 ರಲ್ಲಿ ಅಮೀರ್ ಖಾನ್ ಅವರು ದಂಗಲ್ ಸಿನಿಮಾದಲ್ಲಿ ನಟಿಸುವಾಗ, ಆ ಸಿನಿಮಾದಲ್ಲಿ ತಮ್ಮ ಮಗಳ ಪಾತ್ರದಲ್ಲಿ ನಟಿಸಿದ್ದ ನಟಿ ಫಾತಿಮಾ ಸನಾ ಖಾನ್ ಜೊತೆಗೆ ಸ್ನೇಹ ಮಾಡಿದರು ಎನ್ನುವ ಸುದ್ದಿಗಳು ಹರಡಿದವು. ಇಬ್ಬರೂ ಪಾರ್ಟಿಗಳು ಹಾಗೂ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ಅದಾದ ನಂತರ ಅಮೀರ್ ಖಾನ್ ಅವರ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾದಲ್ಲಿ ಸಹಾ ನಟಿ ಫಾತಿಮಾ ಅಮೀರ್ ಅವರ ಜೊತೆಗೆ ಕಾಣಿಸಿಕೊಂಡಿದ್ದರು. ಇದಾದ ನಂತರ ಇವರ ನಡುವಿನ ಸಂಬಂಧದ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಡಿದವು. ಇವರ ನಡುವೆ ಸ್ನೇಹಕ್ಕಿಂತ ಬೇರೇನೋ ಇದೆ ಎನ್ನುವ ಸುದ್ದಿಗಳಾದವು..
ಅಮೀರ್ ಖಾನ್ ಮತ್ತು ಫಾತಿಮಾ ಸನಾ ಖಾನ್ ನಡುವೆ ಇದ್ದ ಅಫೇರ್ ಕುರಿತಾಗಿ ಕಿರಣ್ ರಾವ್ ಅವರಿಗೂ ತಿಳಿದಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಕಿರಣ್ ರಾವ್ ತಾನು ಅಮೀರ್ ಖಾನ್ ಜೊತೆ ಸಂಬಂಧವನ್ನು ಮುಂದುವರೆಸಲು ಇಷ್ಟಪಡಲಿಲ್ಲ ಎನ್ನಲಾಗಿದ್ದು, ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಚೇದನ ಪಡೆದರು ಎನ್ನಲಾಗಿದೆ. ಅಲ್ಲದೇ ಅಮೀರ್ ಮತ್ತು ಕಿರಣ್ ರಾವ್ ನಡುವೆ ವಿಚ್ಚೇದನ ಆದ ಮೇಲೆ ಫಾತಿಮಾ ಸನಾ ಖಾನ್ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡಿದ್ದು, ಫಾತಿಮಾರನ್ನು ನೆಟ್ಟಿಗರು ಟ್ವಿಟರ್ ನಲ್ಲಿ ಟ್ರೆಂಡ್ ಮಾಡಿದ್ದು ಕೂಡಾ ವಾಸ್ತವ.