ಕಳ್ಳತನ ಮಾಡಿಯೂ ಜನರ ಮನ ಗೆದ್ದ ಕಳ್ಳ! ಅಷ್ಟಕ್ಕೂ ಅಲ್ಲಿ ಆಗಿದ್ದೇನು ನೀವೇ ಕಣ್ಣಾರೆ ನೋಡಿ ವಿಡಿಯೋ!

ಜಗತ್ತಿನಲ್ಲಿ ಅನೇಕ ಪ್ರಕಾರದ ಜನರು ಇರುತ್ತಾರೆ. ಅದರಲ್ಲಿ ಕೆಲವರು ಕಷ್ಟದಿಂದ ದುಡಿದು ಹಣವನ್ನು ಗಳಿಸುತ್ತಾರೆ, ಇನ್ನು ಕೆಲವರು ಕಳ್ಳತನ ಮಾಡಿ ಹಣವನ್ನು ಗಳಿಸುತ್ತಾರೆ. ಕಳ್ಳತನ ಇದು ಅಪರಾಧವಾಗಿದೆ. ಇದೇ ಕಾರಣದಿಂದ ಕಳ್ಳತನ ಮಾಡುವವರನ್ನು ಜನರು ತಿರಸ್ಕಾರದ ಭಾವನೆಯಿಂದ ನೋಡುತ್ತಾರೆ. ಆದರೆ ಇಂಟರ್ನೆಟ್ ನಲ್ಲಿ ಕಳವು ಮಾಡಿದ ವ್ಯಕ್ತಿಯೊಬ್ಬನ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ. ಅದನ್ನು ನೋಡಿದ ಜನರು ಆ ಕಳ್ಳನಿಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಆಶ್ಚರ್ಯವಾಯಿತು ಅಲ್ಲವೇ?

ಈ ಕಳ್ಳನ ಕಥೆಯೇ ಹಾಗಿದೆ. ಈತ ATM ನಲ್ಲಿ ಕಳ್ಳತನ ಮಾಡಲು ಹೋದನು. ಅದಕ್ಕೂ ಮೊದಲು ಆತ ATM ನಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಒಮ್ಮೆ ಮುಖ ತೋರಿ ನಂತರ ಸಿಟ್ಟಿನಿಂದ ತನ್ನ ಮುಖವನ್ನು ಸಿಂಡರಿಸಿದ್ದಾನೆ. ಆಮೇಲೆ ATM ನಲ್ಲಿ ಇರುವ ಹಣದ ಬಾಕ್ಸ್ ತೆಗೆದು ಓಡಿ ಹೋಗಿದ್ದಾನೆ. ಆದರೆ ಈತ ಹಣವನ್ನು ತೆಗೆಯುವಾಗ ಒಂದು ವಿಶೇಷ ಕೆಲಸವನ್ನು ಮಾಡಿದ್ದಾನೆ. ಅದೇನೆಂದರೆ ತನಗೆ ಅವಶ್ಯವಿದ್ದಷ್ಟು ಹಣವನ್ನು ಮಾತ್ರ ಅದರಲ್ಲಿಂದ ತೆಗೆದುಕೊಂಡು ಅಲ್ಲಿಂದ ಓಡಿ ಹೋಗಿದ್ದಾನೆ. ಆತನ ಈ ಕೃತ್ಯವನ್ನು ನೋಡಿ ನೇಟಿಜನ್ಸ್ ಗಳು ತುಂಬಾ ಭಾವುಕರಾಗಿದ್ದಾರೆ. ಅನೇಕರು ಆತನ ಮೇಲೆ ದಯೆ, ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋದ ಕೆಳಗಡೆ ‘ಮಾನವೀಯತೆ ಇನ್ನೂ ಬದುಕಿದೆ’ ಎಂದು ಕ್ಯಾಪ್ಷನ್ ನೀಡಲಾಗಿದೆ.

ವಿಡಿಯೋ ನೋಡಿ

ಆ ಕಳ್ಳನು ATM ನಲ್ಲಿ ಇರುವ ಎಲ್ಲ ಹಣವನ್ನು ದೋಚಬಹುದಾಗಿತ್ತು. ಆದರೆ ಆತನು ಹಾಗೆ ಮಾಡದೆ ತನ್ನ ಅವಶ್ಯಕತೆಗೆ ಎಷ್ಟು ಬೇಕೋ ಅಷ್ಟೇ ಹಣವನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾನೆ. ದುಃಖದ ಸಂಗತಿಯೆಂದರೆ ಈ ಕಳ್ಳ ನಂತರ ಸಾವಿಗೀಡಾಗಿದ್ದಾನೆ.