ಇಲಿಗಳನ್ನು ಹಿಡಿಯಲು ಯೋಜನೆ ರೂಪಿಸಿದ್ದ ಕುಟುಂಬಕ್ಕೆ ಮುಂಜಾನೆ ಕಾದಿತ್ತು ಶಾಕ್! ನೋಡಿ ಈ Video
ರಾಜಸ್ಥಾನದ ಉದಯಪುರದಿಂದ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಇಲ್ಲಿಯ ಒಂದು ಮನೆಯಲ್ಲಿ ಇಲಿಗಳನ್ನು ಹಿಡಿಯುವ ಸಲುವಾಗಿ ಪಂಜರವನ್ನಿಡಲಾಗಿತ್ತು. ಆದರೆ ಅದರಲ್ಲಿ ಇಲಿಗಳ ಬದಲಾಗಿ ಬ್ಲಾಕ್ ಕೋಬ್ರಾ ಸಿಕ್ಕಿಬಿದ್ದಿತ್ತು. ಮುಂಜಾನೆ ಕುಟುಂಬದವರು ಪಂಜರವನ್ನು ನೋಡಿದಾಗ ಶಾಕ್ ಕಾದಿತ್ತು. ಅದನ್ನು ನೋಡಿದ ತಕ್ಷಣವೇ ಬ್ಲಾಕ್ ಕೋಬ್ರಾ ರೆಸ್ಕ್ಯೂ ಟೀಮಿಗೆ ಕರೆಸಲಾಯಿತು. ರೆಸ್ಕ್ಯೂ ಟೀಮಿನವರು ಪಂಜರವನ್ನು ಕತ್ತರಿಸಿ ಕೋಬ್ರಾವನ್ನು ಹೊರಗೆ ತೆಗೆದು ಅರಣ್ಯದಲ್ಲಿ ಬಿಟ್ಟರು.
ಎಕಲಿಂಗಪೂರ ನಿವಾಸಿ ಲಕ್ಷ್ಮಣ್ ಸಿಂಹ ಅವರು ಮನೆಯಲ್ಲಿ ಇಲಿಗಳ ಕಾಟದಿಂದಾಗಿ ಬೇಜಾರಾಗಿದ್ದರು. ಕೊನೆಗೆ ಇಲಿಗಳನ್ನು ಮಟ್ಟಹಾಕಲು ಮನೆಯಲ್ಲಿ ಪಂಜರವನ್ನು ತಂದಿಟ್ಟರು. ಆದರೆ ಮುಂಜಾನೆಯವರೆಗೆ ಬೋನಿನಲ್ಲಿ ಇಲಿಗಳ ಬದಲಾಗಿ ಬ್ಲಾಕ್ ಕೋಬ್ರಾ ಸಿಕ್ಕಿಬಿದ್ದಿತ್ತು. ರಾತ್ರಿ ಹೊತ್ತಿನಲ್ಲಿ ಪಂಜರದ ಬಾಗಿಲು ತೆರೆದು ಇಟ್ಟಿದ್ದರು. ಮುಂಜಾನೆ ಏಳುವಷ್ಟರಲ್ಲಿ ಪಂಜರದ ಬಾಗಿಲು ಮುಚ್ಚಿದ್ದು ಒಳಗೆ ಮಾತ್ರ ಹೆಡೆ ತೆಗೆದು ಕೋಬ್ರಾ ಕುಳಿತಿತ್ತು. ಇದನ್ನು ನೋಡಿದ ಮೇಲೆ ಮನೆಯವರೆಲ್ಲರೂ ಒಮ್ಮೆಲೆ ಗಾಬರಿಯಾದರು. ತಕ್ಷಣ ವೈಲ್ಡ್ ಎನಿಮಲ್ ರೆಸ್ಕ್ಯೂ ಟೀಮಿಗೆ ಕರೆಸಿದರು.
ವಿಡಿಯೋ ನೋಡಿ
ಹಾವಿನ ಸಂಪೂರ್ಣ ದೇಹ ಪಂಜರದಲ್ಲಿ ಸಿಕ್ಕಿತ್ತು….
ವೈಲ್ಡ್ ಎನಿಮಲ್ ರೆಸ್ಕ್ಯೂ ಟೀಮ್ ನವರು ಬಂದು ನಾಗರಹಾವನ್ನು ಪಂಜರದಿಂದ ಹೊರಗೆ ತೆಗೆದರು. ಹಾವಿನ ಸಂಪೂರ್ಣ ದೇಹವು ಪಂಜರದಲ್ಲಿ ಸಿಕ್ಕಿಬಿಟ್ಟಿತ್ತು. ಈ ಕಾರಣದಿಂದ ಪಂಜರವನ್ನು ಕತ್ತರಿಸಿ ಹಾವನ್ನು ಹೊರಗೆ ತೆಗೆಯಲಾಯಿತು. ಆಮೇಲೆ ಅದನ್ನು ಅರಣ್ಯದಲ್ಲಿ ಬಿಡಲಾಯಿತು. ಮಳೆಗಾಲದ ಸಮಯದಲ್ಲಿ ಹೆಚ್ಚುವರಿ ಕಾಡು ಪ್ರಾಣಿಗಳು ಆಸರೆಗಾಗಿ ಮನುಷ್ಯರ ವಸತಿಗಳ ಕಡೆಗೆ ಬರುತ್ತಿರುತ್ತವೆ. ಅದರಲ್ಲಿ ಹಾವುಗಳು ಹೆಚ್ಚಾಗಿ ಮನೆಯ ಹತ್ತಿರ ಅಥವಾ ಮನೆಯೊಳಗೆ ಸಿಗುವ ಸಾಧ್ಯತೆಗಳು ಇರುತ್ತವೆ.