ಕರೋನಾ ಬಿಕ್ಕಟ್ಟಿನಲ್ಲಿ, ಕಿಮ್ ಜೊಂಗ್ ಉನ್ ರೂಪಿಸುತ್ತಿದ್ದಾನೆ ಅಪಾಯಕಾರಿ ಯೋಜನೆ, ಸಭೆ ನಡೆಸಿ ಜಗತ್ತಿಗೆ ಕೊಟ್ಟನು ಎಚ್ಚರಿಕೆ!
ಪ್ಯೊಂಗ್ಯಾಂಗ್ : ಒಂದು ಕಡೆ ಕರೋನಾದಂತಹ ಜೈವಿಕ ಬಿಕ್ಕಟ್ಟಿನಿಂದ ಜಗತ್ತು ಹಿಡಿತದಲ್ಲಿಡಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದು ಕಡೆ ಉತ್ತರ ಕೊರಿಯಾ ತನ್ನ ಪರಮಾಣು ಸಾಮರ್ಥ್ಯವನ್ನು ವಿಸ್ತರಿಸುವ ಬಗ್ಗೆ ಯೋಚಿಸುತ್ತಿದೆ. ಈ ನಿಟ್ಟಿನಲ್ಲಿ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಇತ್ತೀಚೆಗೆ ಪರಮಾಣು ಸಾಮರ್ಥ್ಯವನ್ನು ಹೆಚ್ಚಿಸಲು ಮಿಲಿಟರಿ ಸಭೆ ತಗೆದುಕೊಂಡಿದ್ದಾರೆ. ಉತ್ತರ ಕೊರಿಯಾದ ಪ್ರತಿನಿಧಿಗಳಾದ ಕೆಸಿಎನ್ಎ ಈ ಸುದ್ದಿ ಭಾನುವಾರ ತಿಳಿಸಿದ್ದಾರೆ.
ವರದಿಯ ಪ್ರಕಾರ, ಉತ್ತರ ಕೊರಿಯಾ ಪ್ರಸ್ತುತ ತನ್ನ ಪರಮಾಣು ಸಾಮರ್ಥ್ಯವನ್ನು ಹೆಚ್ಚಿಸಲು ತಯಾರಿ ನಡೆಸುತ್ತಿದೆ. ಆದರೆ ಈ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲವಾದರೂ, ಕಿಮ್ ಜೊಂಗ್ ಉನ್ ಮಿಲಿಟರಿಯೊಂದಿಗೆ ಸಭೆ ನಡೆಸಿರುವದರಿಂದ ಈ ವಿಷಯ ನಿಶ್ಚಿತವಾಗಿದೆ. ಕಿಮ್ ಜೊಂಗ್ ಉನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಲವು ಮಹತ್ವಪೂರ್ಣ ನಿರ್ಧಾರಗಳು ಮತ್ತು ದೇಶದ ಕುರಿತು ಸಹ ಚರ್ಚಿಸಲಾಗಿದೆ. ಅಲ್ಲದೆ ಕೊರಿಯನ್ ಪೀಪಲ್ಸ್ ಆರ್ಮಿಯಲ್ಲಿ ಹೆಚ್ಚಿಸುವ ಬಗ್ಗೆಯೂ ಚರ್ಚಿಸಲಾಗಿದೆ.

●ಉತ್ತರ ಕೊರಿಯಾ ತನ್ನ ಸೈನ್ಯಕ್ಕೆ ಸಿದ್ದರಾಗಿರಲು ಎಚ್ಚರಿಸಿದೆ
ಕೆಸಿಎನ್ಎ ವರದಿಯ ಪ್ರಕಾರ, ಉತ್ತರ ಕೊರಿಯಾ ಪರಮಾಣು ಯುದ್ಧದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಈ ನೀತಿಯನ್ನು ಯೋಜಿಸುತ್ತಿದೆ. ಸಭೆಯಲ್ಲಿ ಈ ಯೋಜನೆಯ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಮಿಲಿಟರಿ ಆಯೋಗದ ಸಭೆಯಲ್ಲಿ ಯಾವುದೇ ಕ್ರಮಕ್ಕಾಗಿ ಮಿಲಿಟರಿಯನ್ನು ಹೆಚ್ಚು ಜಾಗರೂಕತೆಯಿಂದ ಇರಿಸುವ ಬಗ್ಗೆಯೂ ಚರ್ಚಿಸಲಾಯಿತು. ದೇಶದ ಮಿಲಿಟರಿಯ ಅಭಿವೃದ್ಧಿಯ ಪ್ರಕ್ರಿಯೆಯು ಅಡೆತಡೆಯಿಲ್ಲದೆ ಮುಂದುವರಿಸಲಾಗುತ್ತದೆ. ಆದರೆ ಈ ಸಭೆ ಯಾವಾಗ ನಡೆದಿದೆ ಎಂಬ ದಿನಾಂಕವನ್ನು ಬಹಿರಂಗಪಡಿಸಿಲ್ಲ.

●ಕಿಮ್ ಜೊಂಗ್ ಕಣ್ಮರೆಯಾದ ನಂತರ ಮೊದಲ ಸಭೆ:-ಈ ಸಭೆ ನಡೆದ ದಿನದ ಬಗ್ಗೆ ಯೋಚಿಸಿದರೆ , ಕಿಮ್ ಜೊಂಗ್ ಉನ್ ಕಣ್ಮರೆಯಾದ ನಂತರ ನಡೆದ ಮೊದಲ ಸಭೆ ಇದಾಗಿದೆ. ಏಪ್ರಿಲ್ ನಲ್ಲಿ ಕಿಮ್ ಜೊಂಗ್ ಉನ್ ಅವರ ಆರೋಗ್ಯದ ಬಗ್ಗೆ ಅನೇಕ ವದಂತಿಗಳು ಹಬ್ಬಿದ್ದವು. ಅಲ್ಲದೆ ಕಿಮ್ ಜೊಂಗ್ ಉನ್ ಸಾವಿನ ಸುದ್ದಿಯನ್ನು ಹರಡಿದ ನಂತರ ಅವರ ಒಂದು ವೀಡಿಯೊ ಕೂಡಾ ವೈರಲ್ ಆಗಿತ್ತು. ಇದರಲ್ಲಿ ಕಿಮ್ ಸ್ವತಃ ಯಾವುದೋ ಒಂದು ಕಂಪನಿಯ ಉದ್ಘಾಟನೆ ಮಾಡುತ್ತಿರುವ ವಿಡಿಯೋ ಇದಾಗಿತ್ತು. ಏತನ್ಮಧ್ಯೆ, ವಾಷಿಂಗ್ಟನ್ ಪೋಸ್ಟ್ ಶುಕ್ರವಾರ ಯುನೈಟೆಡ್ ಸ್ಟೇಟ್ಸ್ನಲ್ಲಿ ನಡೆದ ಟ್ರಂಪ್ ಆಡಳಿತದ ಸಭೆಯಲ್ಲಿ ಈ ಯೋಜನೆಯ ಕುರಿತು ವರದಿ ಮಾಡಿದೆ. ಈ ವರದಿಯಲ್ಲಿ ಅವರು ಉತ್ತರ ಕೊರಿಯಾದ ಪರಮಾಣು ಯುದ್ಧದ ಬಗ್ಗೆ ಮಾಹಿತಿ ನೀಡಿದರು. 1992 ರ ನಂತರ ಯುನೈಟೆಡ್ ಸ್ಟೇಟ್ಸ್ ಈ ಸಭೆಯಲ್ಲಿ ಪರಮಾಣು ಪರೀಕ್ಷೆಯ ಕುರಿತು ಚರ್ಚಿಸಿತು ಎಂದು ಹೇಳಲಾಗುತ್ತದೆ. ಇದು ರಷ್ಯಾ ಮತ್ತು ಚೀನಾದ ಮೋಸದ ಕುರಿತು ಈ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.