ಸ್ಟೂಲ್ ಮೇಲೆ ನಿಂತು ಸೀಲಿಂಗ್ ಗೆ ಬಲ್ಬ್ ಗಳನ್ನು ಹಾಕುತ್ತಿದ್ದ ವ್ಯಕ್ತಿ, ಆತ ಕೆಳಗೆ ಬೀಳಬಹುದೆಂದು ಸ್ಟೂಲನ್ನು ಗಟ್ಟಿಯಾಗಿ ಹಿಡಿದು ನಿಂತ ನಾಯಿ
ನಾಯಿಗಳು ಎಷ್ಟು ನಿಷ್ಠೆಯನ್ನು ತೋರುತ್ತವೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಖಂಡಿತ ಇಲ್ಲ. ನಾಯಿಗಳು ನಿಷ್ಠೆ ಮತ್ತು ಪ್ರಾಮಾಣಿಕತೆ ಮಾತ್ರವೇ ಅಲ್ಲದೇ ಅವು ತಮ್ಮ ಬುದ್ಧಿ ವಂತಿಕೆಗೂ ಹೆಸರಾಗಿವೆ. ನಾಯಿಗಳು ತಮ್ಮ ಮಾಲೀಕರ ಸಣ್ಣ ಪುಟ್ಟ ಕೆಲಸಗಳಲ್ಲಿ ತಮ್ಮ ನೆರವನ್ನು ಸಹಾ ನೀಡುತ್ತವೆ. ಸೋಶಿಯಲ್ ಮೀಡಿಯಾಗಳಲ್ಲಿ ನಾಯಿಯ ಇಂತಹ ಅನೇಕ ವೀಡಿಯೋಗಳು ವೈರಲ್ ಆಗುತ್ತವೆ. ಈ ವೀಡಿಯೋಗಳಲ್ಲಿ ನಾವು, ಹೇಗೆ ನಾಯಿಗಳು ತಮ್ಮ ಮಾಲೀಕರ ಜೊತೆ ಮನೆಯ ಕೆಲಸಗಳನ್ನು ಮಾಡುತ್ತವೆ ಎನ್ನುವುದನ್ನು ನೋಡಬಹುದಾಗಿದೆ. ಈಗ ನಾಯಿಯ ಒಂದು ಹೊಸ ವೀಡಿಯೋ ಸೋಶಿಯಲ್ ಮೀಡಿಯಾಗಳ ಮೂಲಕ ಜನರ ಮುಂದೆ ಬಂದಿವೆ.
ವೈರಲ್ ಆಗಿರುವ ವೀಡಿಯೋವನ್ನು ನೋಡಿ ನಿಮಗೆ ಆಶ್ಚರ್ಯ ಆಗಬಹುದು. ಏಕೆಂದರೆ ಇಲ್ಲಿ ನಾಯಿಯು ತನ್ನ ಮಾಲೀಕನು ಕೆಳಗೆ ಬೀಳಬಾರದು ಎನ್ನುವ ಕಾರಣಕ್ಕೆ ಸ್ಟೂಲ್ ಒಂದನ್ನು ಹಿಡಿದು ನಿಂತಿರುವುದನ್ನ ಗಮನಿಸಬಹುದಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ಸ್ಟೂಲ್ ಮೇಲೆ ನಿಂತು ಸೀಲಿಂಗ್ ದೀಪಗಳನ್ನು ಹಾಕುತ್ತಿರುವುದನ್ನು ನಾವು ನೋಡಬಹುದು. ಮಾಲೀಕನು ಆ ವೇಳೆ ಎಲ್ಲಿ ಬೀಳುತ್ತಾನೇ ಎನ್ನುವ ಮುಂದಾಲೋಚನೆಯಿಂದ ನಾಯಿಯು ತನ್ನ ಮುಂದಿನ ಎರಡೂ ಕಾಲುಗಳಿಂದ ಸ್ಟೂಲನ್ನು ಹಿಡಿದುಕೊಂಡು ನಿಂತಿದೆ.
ಇದರ ನಂತರ ನಾಯಿಯ ಮಾಲೀಕರು ನಾಯಿಗೆ ತಮ್ಮ ಭಾಷೆಯಲ್ಲಿ ಏನನ್ನೋ ಹೇಳುತ್ತಾರೆ, ಅವರ ಮಾತನ್ನು ಕೇಳಿದ ಕೂಡಲೇ ನಾಯಿಯು ಓಡಿ ಹೋಗಿ ಲೈಟ್ ಸ್ವಿಚ್ ಅನ್ನು ಆನ್ ಮಾಡುತ್ತದೆ. ನಂತರ ಮಾಲೀಕನು ಲೈಟ್ ಸ್ವಿಚ್ ಆಫ್ ಮಾಡಲು ಹೇಳಿದ ಕೂಡಲೇ ಅದು ಓಡಿ ಹೋಗಿ ಸ್ವಿಚ್ ಆಫ್ ಮಾಡುತ್ತದೆ. ವೀಡಿಯೋದಲ್ಲಿ ನಾವು ನಾಯಿಯು ತನ್ನ ಮಾಲೀಕನ ಪ್ರತಿಯೊಂದು ಮಾತನ್ನು ಸಹಾ ಹೇಗೆ ಬಹಳ ಆಸಕ್ತಿಂದ ಕೇಳಿ, ಅದನ್ನು ಚಾಚೂ ತಪ್ಪದ ಹಾಗೆ ಪಾಲನೆ ಮಾಡುತ್ತದೆ ಎನ್ನುವುದನ್ನು ನಾವು ನೋಡಬಹುದಾಗಿದೆ. ನಾಯಿಯ ಬುದ್ಧಿವಂತಿಕೆ ಇಲ್ಲಿ ಎದ್ದು ಕಾಣುತ್ತದೆ.
ಈ ಆಸಕ್ತಿಕರವಾದ ವೀಡಿಯೋ ವನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಅವರು ಶೇರ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಈ ವೀಡಿಯೋವನ್ನು ಅನೇಕ ಜನರು ಮೆಚ್ಚಿಕೊಂಡಿದ್ದಾರೆ. ನೆಟ್ಟಿಗರಂತೂ ವೀಡಿಯೋ ನೋಡಿದ ನಂತರ ಕಾಮೆಂಟ್ ಸೆಕ್ಷನ್ ನಲ್ಲಿ ನಾಯಿಯ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡು ಭರ್ಜರಿ ಕಾಮೆಂಟ್ ಗಳನ್ನು ಮಾಡುತ್ತಾ ನಾಯಿಯನ್ನು ಹೊಗಳಿದ್ದಾರೆ. ನಾಯಿಯು ಮಾಡುವ ಕೆಲಸವನ್ನು ಕಂಡು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.
ವಿಡಿಯೋ ನೋಡಿ
Cute and Caring👌👌💐
— Rupin Sharma IPS (@rupin1992) July 3, 2021
Holds the stool for his friend too… pic.twitter.com/waHPgJturE
ವೀಡಿಯೋ ನೋಡಿದ ಮಂದಿ, ಇದೊಂದು ಬಹಳ ಮುದ್ದಾದ ವೀಡಿಯೋ ಎಂದಿದ್ದಾರೆ. ಒಬ್ಬರು ಬಹಳ ಪ್ರೇರಣಾದಾಯಕ ವೀಡಿಯೋ ಇದು ಎಂದಿದ್ದಾರೆ. ಇನ್ನೂ ಕೆಲವರು ಅದ್ಭುತವಾಗಿದೆ, ಬಹಳ ಚೆನ್ನಾಗಿದೆ ಎಂದಿರುವುದು ಮಾತ್ರವೇ ಅಲ್ಲದೇ ನಾಯಿಗೆ ಬಹಳ ಅದ್ಭುತವಾಗಿ ತರಬೇತಿಯನ್ನು ನೀಡಲಾಗಿದೆ ಎಂದು ತಮ್ಮ ಮೆಚ್ಚುಗೆಯನ್ನು ಸಹಾ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ನಾಯಿಯ ಬುದ್ಧಿವಂತಿಕೆ ಹಾಗೂ ಅದರ ಕಾರ್ಯ ನಿರ್ವಹಣೆಯ ಈ ವೀಡಿಯೋ ನೋಡುಗರ ಮನಸ್ಸನ್ನು ಸೂರೆಗೊಂಡಿದೆ ಹಾಗೂ ಅವರಿಗೆ ಬಹಳ ಇಷ್ಟವಾಗಿದೆ.