ಪದೇ ಪದೇ “ಮದುವೆ ಯಾವಾಗ..?” ಎಂದು ಕೇಳುವ ನೆರೆಮನೆಯವಳನ್ನೇ ಕೊಲೆ ಮಾಡಿದ ಯುವಕ!

ವಯಸ್ಸಿಗೆ ಬಂದ ನಂತರ ಒಂದು ಪ್ರಶ್ನೆ ಸತತವಾಗಿ ಕೇಳುತ್ತಾರೆ, ಅದೇ ಮದುವೆ ಯಾವಾಗ ಅಂತ. ಅದರಲ್ಲಿ ಮದುವೆಗೆ ಸ್ವಲ್ಪ ತಡವಾದರಂತೂ ಆಯ್ತು ಸಂಬಂಧಿಕರು, ಮಿತ್ರರು, ನೆರೆಹೊರೆಯವರು ಹೀಗೆ ಎಲ್ಲರೂ ಒಂದೇ ಸಮನೆ ಕೇಳೇ ಕೇಳುತ್ತಾರೆ. ಮದುವೆ ಇದು ಖಾಸಗಿ ವಿಷಯವಾದ್ದರಿಂದ ಕೆಲವರಿಗೆ ಈ ರೀತಿ ಕೇಳುವ ಪ್ರಶ್ನೆಯಿಂದ ಮುಜುಗರ ಅಥವಾ ರೋಷವೂ ಬರುವದುಂಟು. ಕೆಲವು ಸಲ ಒಬ್ಬೊಬ್ಬರು ಇಂಥ ಪ್ರಶ್ನೆಯ ಕಡೆಗೆ ದುರ್ಲಕ್ಷ ಮಾಡುವದೇ ಒಳ್ಳೆಯ ಉಪಾಯವೆನ್ನುತ್ತಾರೆ. ಆದರೆ ಇಂಡೋನೇಷಿಯಾದಲ್ಲಿ ಇಂಥ ಪ್ರಶ್ನೆಗೆ ಬೇಸರಿಸಿ ತನ್ನ ಮನೆಯ ಹತ್ತಿರದ ಯುವತಿಯನ್ನೇ ಒಬ್ಬ ಕೊಂದ ಘಟನೆ ವರದಿಯಾಗಿದೆ.

ಆ ಯುವತಿ ನಿನ್ನ ಮದುವೆ ಯಾವಾಗ ಎಂದು ಸತತವಾಗಿ ಕೇಳಿದ್ದಕ್ಕೆ 28 ವರ್ಷದ ತರುಣ ತನ್ನ ಮನೆಯ ಪಕ್ಕದಲ್ಲಿರುವ 32 ವರ್ಷದ ಮಹಿಳೆಯ ಕೊಲೆ ಮಾಡಿದ ವರದಿ ಪೊಲೀಸರು ನೀಡಿದ್ದಾರೆ. ಪೊಲೀಸರ ಹೇಳಿಕೆಯ ಪ್ರಕಾರ ಮಹಿಳೆಯು ಆರೋಪಿಯ ಮನೆಗೆ ಹೋದಾಗ ಆದಷ್ಟು ಬೇಗ ಮದುವೆಯಾಗು ಎಂದು ಸೂಚಿಸಿದ್ದಳು.

ಈ ರೀತಿಯಾಗಿ ತನ್ನ ವಿಚಾರ ಹೇಳಿದ ನಂತರ ತರುಣನಿಗೆ ತನ್ನ ಅಪಮಾನವಾದ ಹಾಗೆ ಎನಿಸಿದೆ. ಎರಡನೆಯ ದಿನ ಆ ಯುವತಿಯ ಮನೆಗೆ ಹೋಗಿ ಬೆಡ್ ರೂಮಿನಲ್ಲಿ ಎಳೆದೊಯ್ದು ಕುತ್ತಿಗೆ ಒತ್ತಿ ಹತ್ಯೆಗೈದಿದ್ದಾನೆ. ಮಹಿಳೆಯು ಸ್ವರಕ್ಷಣೆಯ ಸಲುವಾಗಿ ಆರೋಪಿಯ ಬೆರಳನ್ನು ಕಚ್ಚಿದ್ದಳೆಂದು ಪೊಲೀಸರು ಹೇಳಿದರು. ಮಹಿಳೆಯನ್ನು ಕೊಲೆಗೈದ ನಂತರ ಆರೋಪಿ ಆಕೆಯ ಮೊಬೈಲ್ ಮತ್ತು ಪರ್ಸ್ ತೆಗೆದುಕೊಂಡು ಪರಾರಿಯಾದ್ದನು. ಆದರೆ ಪೊಲೀಸರು ಆತನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.