ಖಾಸಗಿ ನೌಕರರಿಗೆ ಇಲ್ಲಿದೆ ಸಿಹಿಸುದ್ದಿ! ಅಕ್ಟೋಬರ್ 1 ರಿಂದ ಬೇಸಿಕ್ ಸ್ಯಾಲರಿ 15000 ದಿಂದ 21000 ಆಗುವ ಸಾಧ್ಯತೆ! ಓದಿ ಏನಿದೆ ನಿಯಮ

ನವದೆಹಲಿ:- ಕೊಟ್ಯಾವಧಿ ನೌಕರ ವರ್ಗದವರಿಗೆ ಸಂಬಂಧಿಸಿದಂತೆ ಮೋದಿ ಸರಕಾರ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳುವ ದಟ್ಟ ಸಾಧ್ಯತೆ ಇದೆ. ದೊರೆತ ಮೂಲಗಳ ಪ್ರಕಾರ ಅಕ್ಟೋಬರ್ 1 ರಿಂದ ಮೋದಿ ಸರಕಾರ ಲೇಬರ್ ಕೊಡ್ ನಿಯಮವನ್ನು ಜಾರಿಗೆ ತರಲಿದೆ. ಮೀಡಿಯಾ ರಿಪೋರ್ಟ್ ಪ್ರಕಾರ ಜುಲೈ 1 ರಿಂದಲೇ ಲೇಬರ್ ಕೊಡ್ ನಿಯಮವನ್ನು ಜಾರಿಗೆ ತರುವುದಿತ್ತು. ಆದರೆ ರಾಜ್ಯ ಸರಕಾರಗಳು ಇದಕ್ಕೆ ರೆಡಿ ಇರದ ಕಾರಣ ಈಗ ಅಕ್ಟೋಬರ್ 1 ರಿಂದ ಈ ನಿಯಮವನ್ನು ಕೇಂದ್ರ ಜಾರಿಗೆ ತರುವ ಪ್ರಯತ್ನ ಮಾಡಲಿದೆ. ಒಂದು ವೇಳೆ ಲೇಬರ್ ಕೊಡ್ ನಿಯಮವನ್ನು ಜಾರಿಗೆ ತಂದರೆ ಖಾಸಗಿ ನೌಕರರ ಬೇಸಿಕ್ ಸ್ಯಾಲರಿ 15 ಸಾವಿರದಿಂದ ಒಮ್ಮೆಲೇ 21 ಸಾವಿರಕ್ಕೆ ಜಂಪ್ ಆಗಲಿದೆ. ಈ ಕಾರಣದಿಂದ ನೌಕರರ ಸಂಬಳದಲ್ಲಿ ಭಾರಿ ಹೆಚ್ಚಳ ಆಗುವ ಸಾಧ್ಯತೆ ಇದೆ.

ಇದರ ಜೊತೆಗೆ ಲೇಬರ್ ಕೊಡ್ ನಲ್ಲಿ ಬದಲಾವಣೆಗೆ ಕಾರ್ಮಿಕ ಸಂಘಟನೆಗಳು ಕೆಲವು ಬೇಡಿಕೆಗಳನ್ನಿಟ್ಟಿವೆ. ಆ ಬೇಡಿಕೆಯ ಪ್ರಕಾರ ಬೇಸಿಕ್ ಸ್ಯಾಲರಿಯಲ್ಲಿ ಹೆಚ್ಚಳವಾಗಬೇಕು ಎಂದಿದ್ದಾರೆ. ಅಂದರೆ ಸ್ಯಾಲರಿ 15 ಸಾವಿರದಿಂದ 21 ಸಾವಿರಕ್ಕೆ ಹೆಚ್ಚಳವಾಗಲಿದೆ. ನೂತನ ಡ್ರಾಫ್ಟ್ ರೂಲ್ ಪ್ರಕಾರ ಬೇಸಿಕ್ ಸ್ಯಾಲರಿ ಒಟ್ಟು ಸಂಬಳದ 50% ಕ್ಕಿಂತ ಹೆಚ್ಚಿಗೆ ಇರಬೇಕು. ಇದೇ ಕಾರಣದಿಂದ ಸಾಕಷ್ಟು ನೌಕರರ ಸ್ಯಾಲರಿ ಸ್ಟ್ರಕ್ಚರ್ ನಲ್ಲಿ ಬದಲಾವಣೆ ಆಗಲಿದೆ.

ಮೂಲ ಸಂಬಳ ಹೆಚ್ಚಾಗುವುದರಿಂದ ಪಿಎಫ್ ಮತ್ತು ಗ್ರ್ಯಾಜುಟಿಗಾಗಿ ಕಡಿತವಾಗುವ ಹಣದಲ್ಲಿಯೂ ಹೆಚ್ಚಳವಾಗುತ್ತದೆ. ಒಂದು ವೇಳೆ ಹೀಗೆ ಆದರೆ ನಿಮ್ಮ ಕೈಗೆ ಸಂಬಳ ಕಡಿಮೆ ಬರುತ್ತದೆ. ಆದರೆ ನಿವೃತ್ತಿಯ ನಂತರ ಮಾತ್ರ ದೊರೆಯುವ ಸಂಬಳ ಹಾಗೂ ಗ್ರ್ಯಾಜುಟಿ ಹೆಚ್ಚಾಗುವುದು. ಕಾರ್ಮಿಕ ಸಂಘಟನೆಗಳು ಇದೇ ವಿಷಯವನ್ನು ವಿರೋಧಿಸುತ್ತಿವೆ. ಮತ್ತು ಹೊಸ ನಿಯಮದ ಪ್ರಕಾರ ನೌಕರರ ಸಂಬಳ 15 ರಿಂದ 21 ಸಾವಿರದ ವರೆಗೆ ಹೆಚ್ಚಿಸಲು ಬೇಡಿಕೆ ಮಾಡುತ್ತಿದ್ದಾರೆ.

ಮೂಲ ಸಂಬಳ ಹೆಚ್ಚಾಗುವುದರಿಂದ ಪಿಎಫ್ ಮತ್ತು ಗ್ರ್ಯಾಜುಟಿಗಾಗಿ ಕಡಿತವಾಗುವ ಹಣದಲ್ಲಿಯೂ ಹೆಚ್ಚಳವಾಗುತ್ತದೆ. ಒಂದು ವೇಳೆ ಹೀಗೆ ಆದರೆ ನಿಮ್ಮ ಕೈಗೆ ಸಂಬಳ ಕಡಿಮೆ ಬರುತ್ತದೆ. ಆದರೆ ನಿವೃತ್ತಿಯ ನಂತರ ಮಾತ್ರ ದೊರೆಯುವ ಸಂಬಳ ಹಾಗೂ ಗ್ರ್ಯಾಜುಟಿ ಹೆಚ್ಚಾಗುವುದು. ಕಾರ್ಮಿಕ ಸಂಘಟನೆಗಳು ಇದೇ ವಿಷಯವನ್ನು ವಿರೋಧಿಸುತ್ತಿವೆ. ಮತ್ತು ಹೊಸ ನಿಯಮದ ಪ್ರಕಾರ ನೌಕರರ ಸಂಬಳ 15 ರಿಂದ 21 ಸಾವಿರದ ವರೆಗೆ ಹೆಚ್ಚಿಸಲು ಬೇಡಿಕೆ ಮಾಡುತ್ತಿದ್ದಾರೆ.

ಸಂಬಳಕ್ಕೆ ಸಂಬಂಧಿಸಿದ ನಿಯಮದಲ್ಲಿ ಆಗಲಿದೆ ಬದಲಾವಣೆ….

ಕಾರ್ಮಿಕ ಸಚಿವಾಲಯದ ಪ್ರಕಾರ, ಸರಕಾರ ಲೇಬರ್ ಕೊಡ್ ನಲ್ಲಿ ಏಪ್ರಿಲ್ 1 ರಿಂದ ಬದಲಾವಣೆ ತರುವ ವಿಚಾರದಲ್ಲಿತ್ತು. ಆದರೆ ರಾಜ್ಯಗಳು ಇದಕ್ಕೆ ಪೂರಕವಾಗಿರಲಿಲ್ಲ. ಹೀಗಾಗಿ HR ಪಾಲಿಸಿ ಬದಲಾವಣೆಯ ಸಲುವಾಗಿ ಸಾಕಷ್ಟು ಸಮಯ ಬೇಕಾಗಿರುವುದರಿಂದ ತುರ್ತು ಮಂದೂಡಲಾಯಿತು. ತದನಂತರ ಲೇಬರ್ ಕೊಡ್ ನಿಯಮದಲ್ಲಿ ಜುಲೈ 1 ರಿಂದ ನೋಟಿಫಾಯ್ ಮಾಡುವದಿತ್ತು. ಆದರೆ ರಾಜ್ಯಗಳು ಈ ನಿಯಮವನ್ನು ಜಾರಿಗೆ ತರಲು ಸಮಯಾವಕಾಶ ಬೇಡಿದವು. ಹೀಗಾಗಿ ಈ ನಿರ್ಣಯವನ್ನು ಅಕ್ಟೋಬರ್ ವರೆಗೆ ಮುಂದೂಡಲಾಯಿತು.

ಈಗ ಕಾರ್ಮಿಕ ಸಚಿವಾಲಯವು ಲೇಬರ್ ಕೊಡ್ ನ ನಿಯಮವನ್ನು ಅಕ್ಟೋಬರ್ 1 ರಿಂದ ಜಾರಿಗೆ ತರಲು ಯೋಚಿಸುತ್ತಿದೆ. ಸಂಸತ್ತು 2019 ರಲ್ಲಿ ಮೂರು ಲೇಬರ್ ಕೊಡ್ ಇಂಡಸ್ಟ್ರಿಯಲ್ ರಿಲೇಶನ್ ಕೆಲಸದಲ್ಲಿ ಸಂರಕ್ಷಣೆ, ಹೆಲ್ಥ ಮತ್ತು ವರ್ಕಿಂಗ್ ಕಂಡೀಷನ್ ಹಾಗೂ ಸೋಶಿಯಲ್ ಸೆಕ್ಯೂರಿಟಿ ಸಂಬಂಧಪಟ್ಟಂತೆ ಕೆಲವೊಂದು ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಈ ನಿಯಮಗಳಿಗೆ ಸೆಪ್ಟೆಂಬರ್ 2020 ರಲ್ಲಿ ಮಂಜೂರಿ ನೀಡಲಾಯಿತು.

ನಿವೃತ್ತಿಯ ನಂತರ ದೊರೆಯುವ ಮೊತ್ತದಲ್ಲಿ ಆಗಲಿದೆ ಹೆಚ್ಚಳ.

ಗ್ರ್ಯಾಜುಟಿ ಮತ್ತು ಪಿಎಫ್ ನಲ್ಲಿ ಕಲೆಹಾಕಿದ ಹಣ ಹೆಚ್ಚಾಗುವುದರಿಂದ ನಿವೃತ್ತಿಯ ನಂತರ ದೊರೆಯುವ ಹಣ ಮಾತ್ರ ಹೆಚ್ಚಾಗಲಿದೆ. ಇವೆರಡು ಹೆಚ್ಚಾಗುವುದರಿಂದ ಕಂಪನಿಗಳ ಖರ್ಚಿನಲ್ಲಿ ಸಹಜವಾಗಿಯೇ ಹೆಚ್ಚಳವಾಗಲಿದೆ. ಆದ್ದರಿಂದ ಅವರಿಗೆ ತಮ್ಮ ನೌಕರರಿಗೆ ಪಿಎಫ್ ಮತ್ತು ಗ್ರ್ಯಾ ಜುಟಿ ಹೆಚ್ಚಿಗೆ ಹಣ ವರ್ಗಾವಣೆ ಮಾಡಬೇಕಾಗಿದೆ. ಇದು ಕಂಪನಿಯ ಬ್ಯಾಲೆನ್ಸ್ ಶೀಟ್ ಮೇಲೂ ಪರಿಣಾಮ ಕಂಡು ಬರಲಿದೆ.