ನನ್ನ ಕೆರಿಯರ್ ನಾಶ ಮಾಡಿದ್ದೇ ಅಮೀರ್ ಖಾನ್ : ನಟ ಅಮೀರ್ ಖಾನ್ ಮೇಲೆ ಆರೋಪ ಮಾಡಿದ ಅವರ ಸಹೋದರ!
ಬಾಲಿವುಡ್ ನಟ, ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಅವರು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ ಸ್ಟಾರ್ ನಟ. ಇದೀಗ ಅವರ ಸಹೋದರ ಫೈಜಲ್ ಖಾನ್ ಅವರು ತಮ್ಮ ಸಹೋದರ ಅಮೀರ್ ಖಾನ್ ಅವರನ್ನೇ ಗುರಿಯಾಗಿಸಿಕೊಂಡು, ತನ್ನ ವೈಫಲ್ಯಕ್ಕೆ ತಮ್ಮ ಸಹೋದರನೇ ಕಾರಣ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಮಾತನಾಡುತ್ತಾ ಫೈಜಲ್ ಖಾನ್ ಅವರು ತಮ್ಮ ಮೊದಲ ನಿರ್ದೇಶನದ ಸಿನಿಮಾ ಫ್ಯಾಕ್ಟರಿ ಸಿನಿಮಾದ ವೇಳೆ ತಮ್ಮ ಸಹೋದರ ಅಮೀರ್ ಖಾನ್ ತನಗೆ ಯಾವುದೇ ರೀತಿಯ ಸಹಾಯ ಹಾಗೂ ನೆರವನ್ನು ನೀಡಲಿಲ್ಲ ಎಂದು ಹೇಳಿದ್ದಾರೆ. ಅಮೀರ್ ಖಾನ್ ತನ್ನ ಸಿನಿಮಾದ ಸ್ಕ್ರಿಪ್ಟ್ ಕೂಡಾ ಕೇಳಲಿಲ್ಲ ಎಂದಿದ್ದಾರೆ ಫೈಜಲ್ ಖಾನ್.

ಸಿನಿಮಾ ರಂಗದಿಂದ ದೂರವಿದ್ದ ಫೈಜಲ್ ಖಾನ್ ಅವರು ಇದೀಗ ತಮ್ಮ ಮೊದಲ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ, ಬಾಲಿವುಡ್ ಗೆ ಭರ್ಜರಿ ಕಮ್ ಬ್ಯಾಕ್ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಫೈಜಲ್ ಖಾನ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನಾನು ಅಮೀರ್ ಖಾನ್ ಅವರಿಂದ ಯಾವುದೇ ಸಹಾಯವನ್ನು ಪಡೆಯಲಿಲ್ಲ. ಅವರು ನನ್ನ ಸಿನಿಮಾದ ಸ್ಕ್ರಿಪ್ಟ್ ಕೂಡಾ ಓದಲಿಲ್ಲ, ಅವರ ಸಹಾಯವೂ ನನಗೆ ಬೇಕಾಗಿಲ್ಲ ಎಂದು ಹೇಳುತ್ತಾ, ನಾನು ಚಿತ್ರರಂಗಕ್ಕೆ ಸಹಾಯಕ ನಿರ್ದೇಶಕನಾಗಿ ಬಂದೆ. ನನ್ನ ಅನುಭದಿಂದ ಇಲ್ಲಿವರೆಗೆ ಬಂದಿದ್ದೇನೆ.
ಹಲವು ಸಿನಿಮಾಗಳಲ್ಲಿ ನಾನು ಅಸಿಸ್ಟೆಂಟ್ ಆಗಿ ಕೆಲಸವನ್ನು ಮಾಡಿದ್ದೇನೆ. ಟಿವಿ ಮತ್ತು ಥಿಯೇಟರ್ ಗಳಲ್ಲಿ ಕೆಲಸವನ್ನು ಮಾಡಿ ಅನುಭವವನ್ನು ಪಡೆದುಕೊಂಡಿದ್ದೇನೆ. ನಾನು ಅಮೀರ್ ಖಾನ್ ಅವರ ಪ್ರೊಡಕ್ಷನ್ ನಲ್ಲಿ ಸಹಾ ಕೆಲಸ ಮಾಡಿದ್ದು, ಅಲ್ಲಿ ನಾನು ಬಹಳಷ್ಟು ಸ್ಕ್ರಿಪ್ಟ್ ಗಳನ್ನು ಓದುತ್ತಿದ್ದೆ. ಈ ಎಲ್ಲಾ ಅನುಭವಗಳನ್ನು ಈ ಹೊಸ ಸಿನಿಮಾದಲ್ಲಿ ಇರಿಸುತ್ತಿದ್ದೇನೆ ಎಂದು ಹೇಳಿದ್ದಾರೆ ಫೈಜಲ್ ಖಾನ್. ಫೈಜಲ್ ಖಾನ್ ಅವರು ನಾನು ನನ್ನ ವಿಚಾರದಲ್ಲಿ ಅನ್ಯರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶಗಳನ್ನು ನೀಡಲಿಲ್ಲ, ಏಕೆಂದರೆ ನಿರ್ದೇಶಕರಾಗಿ ನಮ್ಮ ನಿರ್ಧಾರಗಳನ್ನು ನಾವು ಮಾಡದೇ ಹೋದರೆ ನಮ್ಮ ಹೆಸರು ಹೇಗೆ ಮಾಡಲು ಸಾಧ್ಯ? ಎನ್ನುತ್ತಾರೆ.

ನನ್ನದೇ ಆದ ಕೆಲವು ಹೋರಾಟಗಳಿವೆ ಎನ್ನುವ ಫೈಜಲ್ ಖಾನ್ ಅವರನ್ನು ನೀವು ಅಮೀರ್ ಖಾನ್ ನೆರಳಿನಿಂದ ಯಾವಾಗ ಹೊರ ಬರುವಿರಿ? ಎಂದಾಗ ಎಂದು ಫೈಜಲ್ ಖಾನ್ ಸಹೋದರ ಅಮೀರ್ ಖಾನ್ ಎಂದು ಮಾದ್ಯಮಗಳಲ್ಲಿ ಬಂದಾಗ ಎನ್ನುವ ಅವರು ಈ ಸಿಸ್ಟಂ ಬದಲಾಗಬೇಕಿದೆ ಎನ್ನುತ್ತಾರೆ. ಈ ಮೊದಲು ಸಹಾ ಫೈಜಲ್ ಖಾನ್ ಅವರು ತಮ್ಮ ಕುಟುಂಬದವರು ತನ್ನನ್ನು ಗೃಹ ಬಂಧನದಲ್ಲಿ ಇರಿಸಿದ್ದಾರೆ ಹಾಗೂ ಅವರು ನನಗೆ ಬಲವಂತವಾಗಿ ಔಷಧಗಳನ್ನು ತೆಗೆದುಕೊಳ್ಳುವಂತೆ ಒತ್ತಾಯ ಹೇರುತ್ತಿದ್ದಾರೆ ಎನ್ನುವ ಆ ರೋ ಪಗಳನ್ನು ಸಹಾ ಮಾಡಿ ಸುದ್ದಿಯಾಗಿದ್ದರು.