ಗೆಳತಿ ಮಲೈಕಾಗಾಗಿ ಬರೋಬ್ಬರಿ 23 ಕೋಟಿ ಖರ್ಚು ಮಾಡಿದ ಅರ್ಜುನ್ ಕಪೂರ್: ಯಾವುದಕ್ಕಾಗಿ ಇಷ್ಟು ಹಣ ಖರ್ಚಾಯ್ತು ತಿಳಿದರೆ ಅಚ್ಚರಿ ಪಡುವಿರಿ!
ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತು ನಟಿ ಮಲೈಕಾ ಅರೋರಾ ಅವರ ನಡುವಿನ ಪ್ರೇಮ ಸಂಬಂಧದ ವಿಷಯ ಈಗ ರಹಸ್ಯವಾಗಿಗೇನೂ ಉಳಿದಿಲ್ಲ, ಬದಲಾಗಿ ಅದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಆಗಾಗ ಮಲೈಕಾ ಹಾಗೂ ಅರ್ಜುನ್ ಕಪೂರ್ ಜೊತೆ ಜೊತೆಯಲ್ಲಿ ಕಾಣಿಸಿಕೊಂಡು ಮಾದ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಬ್ಬರು ಜೊತೆಯಾಗಿಯೇ ವೆಕೆಷನ್ ಗಳಿಗೆ ಸಹಾ ಹೋಗುವುದುಂಟು. ಆಗಾಗ ಕುಟುಂಬದ ಜೊತೆಗೆ ಕಾಣಿಸಿಕೊಳ್ಳುವ ಇವರು, ಸೋಶಿಯಲ್ ಮೀಡಿಯಾಗಳಲ್ಲಿ ಒಬ್ಬರು ಮತ್ತೊಬ್ಬರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುವುದು ಉಂಟು. ಅವರ ಅಭಿಮಾನಿಗಳು ಈ ಜೋಡಿಯ ಮದುವೆ ಯಾವಾಗ? ಎಂದು ಬಹಳ ಕಾತರತೆಯಿಂದ ಕಾಯುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದಲೂ ಮತ್ತೊಮ್ಮೆ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಇಬ್ಬರೂ ಸಹಾ ಸುದ್ದಿಯಲ್ಲಿದ್ದಾರೆ. ದೇಶದ ಒಂದು ಪ್ರಮುಖ ಮಾಧ್ಯಮದ ವರದಿಯ ಪ್ರಕಾರ ಅರ್ಜುನ್ ಕಪೂರ್ ಮುಂಬೈನ ಬಾಂದ್ರಾ ದಲ್ಲಿ ಒಂದು 4 ಬಿ ಹೆಚ್ ಕೆ ಸೀ ಫೇಸ್ಡ್ ( ಸಮುದ್ರದ ಕಡೆ ಮುಖ ಮಾಡಿರುವ )ಆಸ್ತಿಯೊಂದನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಾಪರ್ಟಿ ಬೆಲೆ ಬರೋಬ್ಬರಿ 20 ರಿಂದ 23 ಕೋಟಿ ರೂಪಾಯಿಗಳು ಎನ್ನಲಾಗಿದೆ. ಅರ್ಜುನ್ ಕಪೂರ್ ಅವರ ಈ ಹೊಸ ವಿಲ್ಲಾ 26 ನೇ ಅಂತಸ್ತಿನಲ್ಲಿ ಇದ್ದು, ತಮ್ಮ ಗೆಳತಿ ಮಲೈಕಾ ಅವರಿಗೆ ನಿಕಟವಾಗಿರಬೇಕು ಎನ್ನುವ ಕಾರಣಕ್ಕೆ ಮಲೈಕಾ ಮನೆಯ ಮುಂದೆ ಈ ವಿಲ್ಲಾ ಖರೀದಿ ಮಾಡಿದ್ದಾರೆ.

ಅರ್ಜುನ್ ಮಲೈಕಾರನ್ನು ಭೇಟಿ ಮಾಡಲು ಆಗಾಗ ಅವರ ಮನೆಗೆ ಹೋಗುವುದುಂಟು. ಆದರೆ ಇದೀಗ ಅವರು ಖರೀದಿ ಮಾಡಿರುವ ಹೊಸ ಮನೆಗೆ ಶಿಫ್ಟ್ ಆದರೆ ಆಗ ಗೆಳತಿ ಮಲೈಕ ಅವರನ್ನು ಭೇಟಿ ಮಾಡಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಇಬ್ಬರೂ ಇನ್ನೂ ಹೆಚ್ಚು ಕ್ವಾಲಿಟಿ ಸಮಯವನ್ನು ಜೊತೆಗೆ ಕಳೆಯಲು ಇದರಿಂದ ಸಾಧ್ಯವಾಗಲಿದೆ. ಇನ್ನು ಈ ಇಬ್ಬರೂ ಸಹಾ ತಮ್ಮ ನಡುವಿನ ಸಂಬಂಧದ ಬಗ್ಗೆ ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಮಾದ್ಯಮಗಳ ಸಂದರ್ಶನಗಳಲ್ಲಿ ಸಹಾ ಒಬ್ಬರು ಇನ್ನೊಬ್ಬರ ಬಗ್ಗೆ ಸಾಕಷ್ಟು ವಿಷಯಗಳನ್ನು ಸಹಾ ಹಂಚಿಕೊಂಡಿದ್ದಾರೆ.
ಒಂದು ಸಂದರ್ಶನದಲ್ಲಿ ಅರ್ಜುನ್ ಕಪೂರ್ ಮಲೈಕಾ ಅರೋರ ಅವರ ಹಿಂದಿನ ಜೀವನ, ಮಲೈಕಾ ಹಾಗೂ ಅರ್ಬಾಜ್ ಖಾನ್ ಅವರ ಮಗನ ಕುರಿತಾಗಿ ಮಾತನಾಡುತ್ತಾ, ನನಗೆ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡಲು ನನಗೆ ಇಷ್ಟವಿಲ್ಲ, ಏಕೆಂದರೆ ನಿಮ್ಮ ಸಂಗಾತಿಯ ಹಿಂದಿನ ಜೀವನದ ಕುರಿತಾದ ವಿಚಾರಗಳನ್ನು ನಾವು ಗೌರವಿಸಬೇಕು ಎಂದು ನಾನು ಭಾವಿಸುತ್ತೇನೆ. ಹಲವು ಬಾರಿ ವೈಯಕ್ತಿಕ ವಿಷಯವು ಸಾರ್ವಜನಿಕವಾಗಿ ಬಹಿರಂಗವಾಗುವುದನ್ನು ನಾನು ನೋಡಿದ್ದೇನೆ ಮತ್ತು ಅದು ಮಕ್ಕಳಿಗೆ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ.

ನಾವು ನಮ್ಮ ಹೆತ್ತವರನ್ನು ಮತ್ತು ಸಂಬಂಧವನ್ನು ಗೌರವಿಸಬೇಕು ಎಂದು ನಾನು ಭಾವಿಸುತ್ತೇನೆ. ಅಗತ್ಯವಿದ್ದಾಗ ಮಾತ್ರ ನಾನು ಆ ವಿಷಯದ ಬಗ್ಗೆ ಮಾತನಾಡಲು ಇದೇ ಕಾರಣವಾಗಿದೆ ಎಂದು ಹೇಳಿದ್ದಾರೆ. ಒಮ್ಮೆ ಅವರನ್ನು ಮದುವೆ ಯಾವಾಗ? ಎಂದು ಕೇಳಿದಾಗ, ಅರ್ಜುನ್ ಕಪೂರ್ ಅವರು ಪ್ರಸ್ತುತ ನಾನು ಮತ್ತು ಮಲೈಕಾ ನಮ್ಮ ಈಗಿನ ಸಂಬಂಧದಲ್ಲಿ ಖುಷಿಯಾಗಿದ್ದೇವೆ. ಕೋವಿಡ್ ನ ಈ ಕಾಲದಲ್ಲಿ ಮದುವೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ ನಾನು ಮದುವೆ ಆಗುವಾಗ ಎಲ್ಲರಿಗೂ ತಿಳಿಸಿಯೇ ಆಗುತ್ತೇನೆ ಹೊರತು ರಹಸ್ಯವಾಗಿ ಮದುವೆ ಆಗೋದಿಲ್ಲ ಎಂದಿದ್ದಾರೆ.