ರಾಜ್ ಕುಂದ್ರಾ ಅವರ ‘ಪಾರ್ನ್’ ಚಿತ್ರ ನಿರ್ಮಿತಿಯ ಹಿಂದಿನ ರಹಸ್ಯ ಬಿಚ್ಚಿಟ್ಟ ಪೂನಂ ಪಾಂಡೆ!
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರಿಗೆ ನ್ಯಾಯಾಲಯವು ಜುಲೈ 23 ರ ವರೆಗೆ ಪೊಲೀಸ್ ರಿಮಾಂಡ್ ಗೆ ಆದೇಶ ನೀಡಿದೆ. ಏತನ್ಮಧ್ಯೆ ರಾಜ್ ಅವರ ಮೇಲೆ ಅನೇಕರು ಅನೇಕ ರೀತಿಯ ಆರೋಪಗಳನ್ನು ಮಾಡಿದ್ದಾರೆ. ರಾಜ್ ಅವರ ಜೊತೆಗಿನ ಕೆಲವು ಅನುಭವಗಳನ್ನು ಶರ್ಲಿನ್ ಚೋಪ್ರಾ ಮತ್ತು ಪೂನಂ ಪಾಂಡೆ ಇಬ್ಬರು ಶೇರ್ ಮಾಡಿದ್ದಾರೆ. ಈ ಆರೋಪಗಳಿಂದ ರಾಜ್ ಕುಂದ್ರಾ ಅವರು ಮತ್ತಷ್ಟು ಇಕ್ಕಟ್ಟಿಗೆ ಸಿಕ್ಕಿ ಬೀಳುವಂತಾಗಿದೆ. ರಾಜ್ ಅವರ ಜೊತೆಗೆ ಅವರ ಮಿತ್ರರಾದ ರಯಾನ್ ಥಾಫರ್ ಇವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಪೂನಂ ಪಾಂಡೆಯವರ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಹೀಗಾಗಿ ಪೂನಂ ಮತ್ತೆ ಚರ್ಚೆಯಲ್ಲಿದ್ದಾರೆ.
ಪೂನಂ ಹೇಳಿದಳು, ನನ್ನ ವಕೀಲರು ನನಗೆ ಮಾತನಾಡಲು ನಿರ್ಬಂಧಿಸಿದ್ದಾರೆ.
ಆದರೂ ಸಹ ಕೆಲವು ವಿಷಯಗಳನ್ನು ನಾನು ನಿಮ್ಮ ಮುಂದೆ ಹೇಳಲು ಬಯಸಿ ಈ ವಿಡಿಯೋವನ್ನು ಮಾಡುತ್ತಿದ್ದೇನೆ. ಒಂದು ವೇಳೆ ರಾಜ್ ನನ್ನ ಜೊತೆಗೆ ಈ ರೀತಿಯಾಗಿ ವರ್ತಿಸುತ್ತಿದ್ದಾರೆ ಎಂದರೆ ಬೇರೆಯವರ ಪರಿಸ್ಥಿತಿ ಏನಾಗಬೇಡ? ಎಂಬ ಪ್ರಶ್ನೆ ನನಗೆ ಸತಾಯಿಸುತ್ತಿದೆ. ಆತನ ಬಗ್ಗೆ ಏನು ಮಾತನಾಡಬೇಕೆಂಬುದೇ ತಿಳಿಯುತ್ತಿಲ್ಲ. ನಾನು ಹುಡುಗಿಯರಿಗೆ ಒಂದು ಸಲಹೆ ಕೊಡಬೇಕೆನ್ನುವೆ ಅದೇನೆಂದರೆ, ಈ ಎಲ್ಲ ವಿಷಯಗಳಿಂದ ದೂರವಿರಬೇಕೆಂದೇ ಹೇಳುತ್ತೇನೆ. ಕಾರಣ ಇವರೆಲ್ಲರೂ ಕೂಡಿ ನಿಮ್ಮನ್ನು ಬೇರೆ ದಾರಿಗೆ ಎಳೆದುಕೊಂಡು ಹೋಗುತ್ತಾರೆ. ಒಂದು ವೇಳೆ ನಿಮ್ಮ ಮೇಲೆ ಅನ್ಯಾಯವಾಗಿದ್ದರೆ ಅದರ ವಿರುದ್ಧ ಮಾತ್ರ ನೀವು ಧ್ವನಿ ಎತ್ತಲೇಬೇಕು.
ರಾಜ್ ನನಗೆ ಕಾಂಟ್ರ್ಯಾಕ್ಟ್ ಸೈನ್ ಮಾಡಲು ಹೇಳಿದ್ದರು. ಆ ಕಾಂಟ್ರಾಕ್ಟ್ ಸೈನ್ ಮಾಡಲು ನಾನು ಸ್ಪಷ್ಟವಾಗಿ ನಿರಾಕರಿಸಿದಾಗ ನನಗೆ ಹೆದರಿಸಲು ಸಹ ಪ್ರಯತ್ನ ಮಾಡಿದ್ದಾಗಿದೆ. ಏನೇ ಆಗಲಿ ನಿನಗೆ ಕಾಂಟ್ರಾಕ್ಟ್ ಸೈನ್ ಮಾಡಲೇಬೇಕಾಗುತ್ತದೆ ಎಂದು ಹೆದರಿಸಿದ್ದರು. ನಾನು ಹೇಳಿದ ಹಾಗೆ ಶೂಟ್ ಆಗಲೇಬೇಕು. ಆತ ನನ್ನ ಫೋನ್ ನಂಬರ್ ನಿಂದ ಒಂದು ಮೆಸೇಜ್ ಸಹ ಲೀಕ್ ಮಾಡಿದ್ದನು. ಆ ಮೆಸೇಜ್ ತುಂಬಾ ಅಶ್ಲೀಲವಾಗಿತ್ತು. ಅದೇ ಸಮಯದಲ್ಲಿ ಇನ್ನೂ ಅನೇಕ ಕಡೆಗಳಿಂದ ನನಗೆ ಫೋನ್ ಗಳು ಬರುತ್ತಿದ್ದವು. ಆ ಸಮಯ ನನ್ನ ಜೀವನದಲ್ಲಿ ತುಂಬಾ ಸಂಘರ್ಷದಿಂದ ಕೂಡಿತ್ತು.
ನನಗೆ ಶಿಲ್ಪಾ ಶೆಟ್ಟಿ ಹಾಗೂ ಅವರ ಮಗನ ಬಗ್ಗೆ ತುಂಬಾ ಕನಿಕರ ಮೂಡುತ್ತಿದೆ. ಅವರಿಬ್ಬರು ಸದ್ಯ ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಎಂಬುದು ವಿಚಾರಮಾಡಿದರೆ ತುಂಬಾ ಕಡುಕೆನಿಸುತ್ತದೆ. ಇಂಥ ಅವಕಾಶಗಳ ಲಾಭ ಪಡೆದು ನನ್ನ ಭಾವನೆಗಳನ್ನು ವ್ಯಕ್ತ ಮಾಡುವುದು ಸರಿಯಲ್ಲ. ರಾಜ್ ವಿರುದ್ಧ 2019ರಲ್ಲಿ ನಾನು ಮೋಸ ಮತ್ತು ಕಳ್ಳತನದ ಆರೋಪ ಮಾಡಿದ್ದೆ. ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಕೇಸ್ ಸಹ ದಾಖಲು ಮಾಡಿದ್ದೇನೆ.