ತಂದೆ ಬಸ್ ಕಂಡಕ್ಟರ್, ಸಾಮಾನ್ಯ ಕುಟುಂಬದಿಂದ ಬಂದ ರಾಜ ಕುಂದ್ರಾ 2800 ಕೋಟಿ ರೂಪಾಯಿಗಳ ಒಡೆಯನಾಗಿದ್ದು ಹೇಗೆ?
ಮನರಂಜನೆಯ ಕ್ಷೇತ್ರದಲ್ಲಿ ಯಾವಾಗ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಯಾಕೆಂದರೆ ಇಲ್ಲಿ ಎಲ್ಲವೂ ಆಕಸ್ಮಿಕವಾಗಿ ಘಟಿಸುತ್ತಿರುತ್ತವೆ. ಸದ್ಯ ಶಿಲ್ಪ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರ ಜೀವನದಲ್ಲಿ ಇದೇ ನಡೆಯುತ್ತಿದೆ. ಮುಂಬೈ ಪೊಲೀಸರು ರಾಜ್ ಕುಂದ್ರಾ ಅವರನ್ನು ಅರೆಸ್ಟ್ ಮಾಡಿದಾಗಿನಿಂದ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅವರದೇ ಚರ್ಚೆಯಾಗುತ್ತಿದೆ.
ಅಶ್ಲೀಲ ಚಿತ್ರಗಳ ನಿರ್ಮಿತಿಗೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅವರನ್ನು ಅರೆಸ್ಟ್ ಮಾಡಿದಾಗಿನಿಂದ ಇವರ ಜೀವನದ ಒಂದೊಂದು ಮುಖಗಳು ಈಗ ನಮ್ಮ ಮುಂದೆ ಬರುತ್ತಿವೆ.
ಅನೇಕ ಜನಸಾಮಾನ್ಯರಿಗೆ ಈ ರಾಜ್ ಕುಂದ್ರಾ ಯಾರು? ಎಂಬ ಪ್ರಶ್ನೆ ಬಿದ್ದಿರಬಹುದು. ಇಂದಿನ ಈ ಲೇಖನದಲ್ಲಿ ಶಿಲ್ಪಾಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರ ಬಗ್ಗೆ ತಿಳಿದುಕೊಳ್ಳುವ. ಇವರ ಬಗ್ಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿದಾಗ ನಿಜಕ್ಕೂ ಶಾಕ್ ನೀಡುತ್ತವೆ.
ಶಿಲ್ಪಾ ಶೆಟ್ಟಿ ಅವರ ಪತಿ ಆಗುವವರೆಗೆ ರಾಜ್ ಕುಂದ್ರಾ ಅವರು ಯಾರು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಸುಪ್ರಸಿದ್ಧ ವ್ಯಕ್ತಿಯ ಸಂಪರ್ಕದಲ್ಲಿ ಬಂದಾಗ ಎಲ್ಲರೂ ಪ್ರಸಿದ್ಧರಾಗುತ್ತಾರೆ. ಆದರೆ ಈಗ ರಾಜ್ ತುಂಬಾ ಚರ್ಚೆಯಲ್ಲಿದ್ದಾರೆ.
ರಾಜ್ ಕುಂದ್ರಾ ಅವರು ಒಬ್ಬ ಬ್ರಿಟಿಷ್ ನಾಗರಿಕರಾಗಿದ್ದಾರೆ. ಇವರು ಇಂಡಿಯನ್ ಅಲ್ಲ. ಇವರ ತಂದೆ ಪಂಜಾಬ್ ನ ಲುಧಿಯಾನ ದವರು. ಮುಂದೆ ಅವರು ಇಂಗ್ಲೆಂಡಿನಲ್ಲಿ ನೆಲೆಯೂರಿದರು. ರಾಜ್ ಅವರ ಜನ್ಮ ಇಂಗ್ಲೆಂಡಿನಲ್ಲಿಯೇ ಆಯ್ತು. ಮೊದಲಿನಿಂದಲೂ ಇವರು ಅಷ್ಟೇನೂ ಶ್ರೀಮಂತರಾಗಿರಲಿಲ್ಲ. ತಂದೆ ಬಸ್ ಕಂಡಕ್ಟರ್ ಹಾಗೂ ತಾಯಿ ಹೌಸ್ ವೈಫ್. ಮುಂದೆ ರಾಜ್ ಕುಂದ್ರಾ ಅವರ ತಂದೆ ಒಂದು ಚಿಕ್ಕ ಉದ್ಯೋಗವನ್ನು ಪ್ರಾರಂಭಿಸಿದರು.

ಇವರ ಶಿಕ್ಷಣ ಬರೀ ಪಿಯುಸಿ ವರೆಗೆ ಮಾತ್ರ. ಅದನ್ನು ಸಹ ಅರ್ಧದಲ್ಲಿಯೇ ಬಿಟ್ಟವರು. ಇವರಿಗೆ ಬ್ರಿಟನ್ ದೇಶ ಶ್ರೀಮಂತ ವ್ಯಕ್ತಿಯೆಂದು 2014ರಲ್ಲಿ ಗೌರವಿಸಿತು. ಇವರು ಶ್ರೀಮಂತರಲ್ಲಿ 1198 ನೇ ನಂಬರ್ ಮೇಲಿದ್ದರು.
ರಾಜ್ ಹೇಳುವ ಪ್ರಕಾರ, ನೇಪಾಳ ಭೇಟಿಯ ಇವರ ಅದೃಷ್ಟ ನಂತರ ತುಂಬಾನೇ ಬದಲಾಯಿತು ಎನ್ನುತ್ತಾರೆ. ನೇಪಾಳನಲ್ಲಿಯ ಸುಪ್ರಸಿದ್ಧ ಪಶ್ಮೀನಾ ಶಾಲುಗಳನ್ನು ಖರೀದಿಸಿ ಅವುಗಳನ್ನು ಯುನೈಟೆಡ್ ಕಿಂಗ್ಡಮ್ ನಲ್ಲಿ ಮಾರಾಟ ಮಾಡುತ್ತಿದ್ದರು. ಇಲ್ಲಿಂದಲೇ ಅವರ ಅದೃಷ್ಟ ಬದಲಾಗಿ ನಂತರ ದೊಡ್ಡ ಉದ್ಯಮಿಯಾಗಿ ಹೆಸರುಗಳಿಸಿದರು.
ರಾಜ್ ಕುಂದ್ರಾ ಅವರು ಮೊದಲು ಕವಿತಾ ಹೆಸರಿನ ಹುಡುಗಿಯ ಜೊತೆಗೆ ಮದುವೆಯಾಗಿದ್ದರು. 2009ರಲ್ಲಿ ಈಕೆಗೆ ವಿಚ್ಛೇದನೆಯನ್ನು ನೀಡಿದರು. ನಂತರ ಶಿಲ್ಪ ಅವರ ಜೊತೆ ಮದುವೆಯಾದರು. ಶಿಲ್ಪ ಶೆಟ್ಟಿ ರಾಜ್ ಅವರ ಎರಡನೆಯ ಪತ್ನಿಯಾಗಿದ್ದಾಳೆ.
ರಾಜ್-ಕವಿತಾ ಜೋಡಿಗೆ ಡಿಲಿನಾ ಹೆಸರಿನ ಒಂದು ಹುಡುಗಿ ಇದೆ. ಶಿಲ್ಪ ಶೆಟ್ಟಿ ಅವರೇ ಇವರಿಬ್ಬರ ವಿಚ್ಛೇದನಕ್ಕೆ ಕಾರಣವಾಗಿದ್ದಾರೆ ಎಂದು ಇಂಡಸ್ಟ್ರಿಯಲ್ಲಿ ಮಾತನಾಡುತ್ತಾರೆ. ಈಗ ಶಿಲ್ಪ ಮತ್ತು ರಾಜ್ ಮದುವೆಯಾಗಿ ಇವರಿಬ್ಬರಿಗೂ ಒಂದು ಹುಡುಗ ಮತ್ತು ಒಂದು ಹುಡುಗಿ ಹೀಗೆ ಎರಡು ಮಕ್ಕಳಿವೆ. ಇವರಿಬ್ಬರ ವೈವಾಹಿಕ ಜೀವನವು ತುಂಬಾ ಸುಂದರವಾಗಿ ನಡೆದಿತ್ತು. ಆದರೆ ಮಧ್ಯದಲ್ಲಿ ಈಗ ರಾಜ್ ಕುಂದ್ರಾ ಅವರು ಅಶ್ಲೀಲ ಚಿತ್ರಗಳ ನಿರ್ಮಿತಿಯ ಆರೋಪಕ್ಕಾಗಿ ಮುಂಬೈ ಪೊಲೀಸರಿಂದ ಅರೆಸ್ಟ್ ಆಗಿದ್ದಾರೆ.