ರಾಜ್ ಕುಂದ್ರಾರ ಹಾಟ್ ಶಾಟ್ಸ್ (Hot Shots) ಆ್ಯಪ್ ಬಗ್ಗೆ ಗೊತ್ತೆ? ಭಾರತದಲ್ಲಿ ಶೂಟ್ ಮಾಡಿದ ವೀಡಿಯೋಗಳನ್ನು ಇಲ್ಲಿ ಅಪ್ಲೋಡ್ ಹೇಗೆ ಮಾಡುತ್ತಾರೆ ನೋಡಿ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಸಿನಿಮಾಗಳ ನಿರ್ಮಾಣ ಹಾಗೂ ಪ್ರಸಾರದ ಆ ರೋ ಪದಲ್ಲಿ ಬಂ ಧಿ ಸಲಾಗಿದೆ.
ರಾಜ್ ಕುಂದ್ರಾ ಅವರ ಮೇಲೆ ಕೆಲವು ತಿಂಗಳುಗಳ ಹಿಂದೆಯಷ್ಟೇ ಮಾಡೆಲ್ ಒಬ್ಬರು, ನ ಗ್ನ ವಾಗಿ ಆಡಿಶನ್ ನೀಡಲು ಕೇಳಿದ್ದರು ಎನ್ನುವ ಒಂದು ಆರೋಪವನ್ನು ಮಾಡಿದ್ದರು. ಇದಾದ ನಂತರ ಈ ವಿಷಯವಾಗಿ ತನಿಖೆ ಆರಂಭವಾಗಿತ್ತು. ತನಿಖೆ ಮುಂದುವರೆದಂತೆ ಅದರಲ್ಲಿ ಕ್ಯಾನರೀನ್ ಹೆಸರಿನ ಕಂಪನಿ, ವಿ ಟ್ರಾನ್ಸ್ಫರ್ ಪ್ಲಾಟ್ಫಾರ್ಮ್ ಮತ್ತು ಹಾಟ್ ಶಾಟ್ ಎನ್ನುವಂತಹ ಒಂದು ಆ್ಯಪ್ ಹೆಸರುಗಳು ಕೇಳಿ ಬಂದಿವೆ. ಮುಂಬೈನ ಕ್ರೈಂ ಬ್ರಾಂಚ್ ಪೊಲೀಸರ ಪ್ರಕಾರ ರಾಜ್ ಕುಂದ್ರಾ ಅಶ್ಲೀಲ ಸಿನಿಮಾಗಳ ಇಂಡಸ್ಟ್ರಿಯಲ್ಲಿ ಸುಮಾರು ಎಂಟರಿಂದ ಹತ್ತು ಕೋಟಿಗಳ ರೂಪಾಯಿ ಬಂಡವಾಳವನ್ನು ಹೂಡಿದ್ದಾರೆ ಎನ್ನಲಾಗಿದೆ.
ರಾಜ್ ಕುಂದ್ರಾ ಬ್ರಿಟನ್ ನಲ್ಲಿ ಇರುವ ತಮ್ಮ ಸಹೋದರ ಜೊತೆ ಸೇರಿ ಕ್ಯಾನರೀನ್ ಎನ್ನುವ ಕಂಪನಿಯನ್ನು ಸ್ಥಾಪಿಸಿದ್ದಾರೆ ಎಂದಿದ್ದು, ಈ ಕಂಪನಿಯ ರಿಜಿಸ್ಟ್ರೇಷನ್ ನನ್ನು ಭಾರತೀಯ ಸೈಬರ್ ಕಾನೂನಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ವಿದೇಶದಲ್ಲಿ ಮಾಡಿಸಿದ್ದಾರೆ. ಚಿತ್ರಗಳ ಚಿತ್ರೀಕರಣವನ್ನು ಭಾರತದಲ್ಲಿ ಮಾಡಿ ಅನಂತರ ವಿ ಟ್ರಾನ್ಸ್ಫರ್ ನ ಮೂಲಕ ಕ್ಯಾನರೀನ್ ಕಂಪನಿಗೆ ಕಳುಹಿಸಿದ್ದಾರೆ. ಈ ವಿಡಿಯೋಗಳನ್ನು ಹಾಟ್ ಶಾಟ್ ಮತ್ತು ಇನ್ನಿತರೆ ಆ್ಯಪ್ ಗಳಲ್ಲಿ ಸಬ್ಸ್ಕ್ರಿಪ್ಷನ್ ಮೂಲಕ ಮಾರಾಟ ಮಾಡಲಾಗಿದೆ. ಅಲ್ಲದೇ ಅಶ್ಲೀಲ ಸಿನಿಮಾಗಳ ವಿಚಾರದಲ್ಲಿ ಕೇಳಿಬಂದಿರುವ ಹಾಟ್ ಶಾಟ್ ಆ್ಯಪ್ ನ ಪೂರ್ತಿ ಹೆಸರು ಹಾಟ್ ಶಾಟ್ ಡಿಜಿಟಲ್ ಎಂಟರ್ಟೈನ್ಮೆಂಟ್ ಎನ್ನಲಾಗಿದೆ.

ಈ ಅಪ್ಲಿಕೇಷನ್ ಅನ್ನು ಕೆನ್ರಿನ್ ಲಿಮಿಟೆಡ್ ಅಭಿವೃದ್ಧಿ ಪಡಿಸಿದೆ. ಈ ಆ್ಯಪ್ ಅನ್ನು ತಯಾರಿಸಿರುವ ಕಂಪನಿಯು ಬ್ರಿಟನ್ ನಲ್ಲಿ ವಾಸಿಸುವ ರಾಜ್ ಕುಂದ್ರಾ ಅವರ ಸಹೋದರ ಕಂಪನಿಯಾಗಿದೆ. ಈ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯ ಇಲ್ಲ. ಆದರೆ ಇದನ್ನು APK ಫೈಲ್ ನ ಸಹಾಯದಿಂದ ಇನ್ಸ್ಟಾಲ್ ಮಾಡಬಹುದಾಗಿದ್ದು, ಇದರ ಸರಾಸರಿ ಗಾತ್ರವು 42 ಎಂಬಿ ಗಳಾಗಿದೆ. ಇನ್ನು ಈ ಆ್ಯಪ್ ನ ಬಗ್ಗೆ ಹೇಳುವುದಾದರೆ ಇದರಲ್ಲಿ ಅಶ್ಲೀಲ ಸಿನಿಮಾಗಳಿಂದ ಹಿಡಿದು ವೆಬ್ ಸಿರೀಸ್ ವರೆಗೂ ಎಲ್ಲಾ ಕಂಟೆಂಟ್ ಗಳನ್ನು ತೋರಿಸಲಾಗುವುದು.
ಅದರಲ್ಲಿ ವಿಶೇಷ ವಿಷಯಗಳು, ಲೈವ್ ಪ್ರದರ್ಶನಗಳು, ಹಾಟ್ ಶಾಟ್‌ಗಳ ಲೈವ್‌ನಂತಹ ಹಲವು ವೈಶಿಷ್ಟ್ಯಗಳನ್ನು ಈ ಅಪ್ಲಿಕೇಶನ್‌ನಲ್ಲಿ ನೀಡಲಾಗಿದೆ.

ಈ ಅಪ್ಲಿಕೇಶನ್‌ನಲ್ಲಿ ಭಾರತದ 1 ಮಿಲಿಯನ್
(10 ಲಕ್ಷ) ಕ್ಕೂ ಹೆಚ್ಚು ಬಳಕೆದಾರರು ಇದ್ದಾರೆ. ರಾಜ್ ಕುಂದ್ರಾ ಅವರು ಭಾರತದಲ್ಲಿ ಚಿತ್ರೀಕರಿಸಿದ ಅ ಶ್ಲೀ ಲ ವಿಡಿಯೋಗಳನ್ನು ಈ ಆ್ಯಪ್ ಸಹಾಯದಿಂದ ಜನರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಒಟ್ಟಾರೆ ರಾಜ್ ಕುಂದ್ರ ಅವರ ಈ ಅ ಶ್ಲೀ ಲ ಸಿನಿಮಾಗಳು ಹಾಗೂ ಅವುಗಳ ಅಪ್ಲೋಡ್ ವಿಚಾರವಾಗಿ ತಮ್ಮ ಬಳಿ ಸಾಕಷ್ಟು ಮಾಹತಿಗಳು, ಸಾಕ್ಷ್ಯ ಗಳು ಇವೆ ಎಂದು ಮುಂಬೈ ಕ್ರೈಂ ಬ್ರಾಂಚ್ ನ ಪೋಲಿಸರು ತಿಳಿಸಿದ್ದಾರೆ. ಅಲ್ಲದೇ ರಾಜ್ ಕುಂದ್ರಾ ಅವರ ಕ ಸ್ಟ ಡಿ ದಿನಾಂಕವನ್ನು ಸಹಾ ಕೆಲವು ದಿನಗಳವರೆಗೆ ವಿಚಾರಣೆಯ ಉದ್ದೇಶದಿಂದ ವಿಸ್ತರಿಸಲಾಗಿದೆ ಎಂದು ತಿಳಿದು ಬಂದಿದೆ.